ಬಾಲಿವುಡ್ ಖಾನ್‌ಗಳು ಲೆಜೆಂಡ್; ಬಾಯ್ಕಟ್ ಟ್ರೆಂಡ್‌ಗೆ ಏಕ್ತಾ ಕಪೂರ್ ರಿಯಾಕ್ಷನ್

ಬಾಯ್ಕಟ್ ಟ್ರೆಂಡ್ ಬಗ್ಗೆ ಬಾಲಿವುಡ್ ಖ್ಯಾತ ನಿರ್ಮಾಪಕಿ ಏಕ್ತಾ ಕಪೂರ್ ಪ್ರತಿಕ್ರಿಯೆ ನೀಡಿದ್ದಾರೆ. ಬಾಲಿವುಡ್‌ನ ಎಲ್ಲಾ ಖಾನ್‌ಗಳು ಅದರಲ್ಲೂ ಆಮೀರ್ ಖಾನ್ ಲೆಜೆಂಡ್ ಎಂದು ಹೇಳಿದ್ದಾರೆ. 

Ekta Kapoor reacts to boycott Laal Singh Chaddha trend sgk

ಬಾಲಿವುಡ್‌ನಲ್ಲಿ ಅನೇಕ ಸಿನಿಮಾಗಳು ಬಾಯ್ಕಟ್ ಸಮಸ್ಯೆ ಎದುರಿಸುತ್ತಿವೆ. ಅದರಲ್ಲೂ ಆಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾದ ವಿರುದ್ಧ ಅನೇಕರು ಆಕ್ರೋಶ ಹೊರಹಾಕಿದ್ದರು. ಲಾಲ್ ಸಿಂಗ್ ಚಡ್ಡಾ ಬಹಿಷ್ಕರಿಸುವಂತೆ ಒತ್ತಾಯಿಸಿ     ಟ್ವಿಟ್ಟರ್‌ನಲ್ಲಿ ಟ್ರೆಂಡ್ ಮಾಡಿದ್ದರು. ಬಾಯ್ಕಟ್ ಪರಿಣಾಮನಾ ಅಥವಾ ಸಿನಿಮಾ ಅಭಿಮಾನಿಗಳ ನಿರೀಕ್ಷೆ ಮಟ್ಟ ಮುಟ್ಟಿಲ್ಲವೋ ಬಾಕ್ಸ್ ಆಫೀಸ್ ನಲ್ಲಿ ಲಾಲ್ ಸಿಂಗ್ ಚಡ್ಡಾ ಹೀನಾಯ ಸೋಲು ಕಂಡಿದೆ. ಇದೀಗ ಬಾಯ್ಕಟ್ ಟ್ರೆಂಡ್ ಬಗ್ಗೆ ಬಾಲಿವುಡ್ ಖ್ಯಾತ ನಿರ್ಮಾಪಕಿ ಏಕ್ತಾ ಕಪೂರ್ ಪ್ರತಿಕ್ರಿಯೆ ನೀಡಿದ್ದಾರೆ. ಬಾಲಿವುಡ್‌ನ ಎಲ್ಲಾ ಖಾನ್‌ಗಳು ಅದರಲ್ಲೂ ಆಮೀರ್ ಖಾನ್ ಲೆಜೆಂಡ್ ಎಂದು ಹೇಳಿದ್ದಾರೆ. ನವಭಾರತ್ ಟೈಮ್ಸ್ ಜೊತೆ ಮಾತನಾಡಿದ ಏಕ್ತಾ ಕಪೂರ್ ಸಾಫ್ಟ್ ಅಂಬಾಸಿಡರ್ ಎಂದು ಹೇಳಿದ್ದಾರೆ. 

'ಇಂಡಸ್ಟ್ರಿಯಲ್ಲಿ ಅತ್ಯುತ್ತಮ ಬ್ಯುಸಿನೆಸ್ ನೀಡಿದ ಜನರನ್ನು ನಾವು ಬಹಿಷ್ಕರಿಸುತ್ತಿರುವುದು ತುಂಬಾ ವಿಚಿತ್ರವಾಗಿದೆ. ಉದ್ಯಮದಲ್ಲಿರುವ ಎಲ್ಲಾ ಖಾನ್‌ಗಳು (ಶಾರುಖ್ ಖಾನ್, ಸಲ್ಮಾನ್ ಖಾನ್) ಮತ್ತು ವಿಶೇಷವಾಗಿ ಅಮೀರ್ ಖಾನ್ ಲೆಜೆಂಡ್‌ಗಳು. ನಾವು ಅವರನ್ನು ಬಹಿಷ್ಕರಿಸಲು ಸಾಧ್ಯವಿಲ್ಲ, ಅಮೀರ್ ಖಾನ್ ಅವರನ್ನು ಎಂದಿಗೂ ಬಹಿಷ್ಕರಿಸಲಾಗುವುದಿಲ್ಲ, ಅವರು ಸಾಫ್ಟ್ ರಾಯಭಾರಿ, ಅಮೀರ್ ಖಾನ್ ಅವರನ್ನು ಬಹಿಷ್ಕರಿಸಲು ಸಾಧ್ಯವಿಲ್ಲ' ಎಂದು ಹೇಳಿದರು. 

ಲಾಲ್ ಸಿಂಗ್ ಚಡ್ಡಾಗೆ ಬಾಯ್ಕಟ್ ಸಮಸ್ಯೆ ಮಾತ್ರವಲ್ಲ ಸಿನಿಮಾ ರಿಲೀಸ್ ಆದ ಬಳಿಕ ಚಿತ್ರದಲ್ಲಿ ಭಾರತೀಯ ಸೈನ್ಯಕ್ಕೆ ಅಗೌರವ ಸಲ್ಲಿಸಲಾಗಿದೆ ಎನ್ನುವ ಆರೋಪ ಕೇಳಿಬಂದಿದ್ದು, ಚಿತ್ರದ ವಿರುದ್ಧ ದೂರು ಸಹ ದಾಖಲಾಗಿದೆ. 

ಲಾಲ್ ಸಿಂಗ್ ಚಡ್ಡಾ ಹೀನಾಯ ಸೋಲು; 13 ವರ್ಷಗಳಲ್ಲೇ ಇಂಥ ಸೋಲು ಕಂಡಿರಲಿಲ್ಲ ಆಮೀರ್ ಖಾನ್

ಲಾಲ್ ಸಿಂಗ್ ಚಡ್ಡಾ ಸಿನಿಮಾದ ಬಗ್ಗೆ ಹೇಳುವುದಾದರೆ ಅದ್ವೈತ್ ಚಂದನ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾದಲ್ಲಿಆಮೀರ್ ಖಾನ್ ಜೊತೆ ನಾಯಕಿಯಾಗಿ ಕರೀನಾ ಕಪೂರ್ ಕಾಣಿಸಿಕೊಂಡಿದ್ದಾರೆ. ಇನ್ನು ಆಮೀರ್ ಖಾನ್ ತಾಯಿಯ ಪಾತ್ರದಲ್ಲಿ ಮೋನಾ ಸಿಂಗ್ ಮತ್ತು ವಿಶೇಷ ಪಾತ್ರದಲ್ಲಿ ಟಾಲಿವುಡ್ ಸ್ಟಾರ್ ನಾಗಚೈತನ್ಯ ನಟಿಸಿದ್ದಾರೆ. ಲಾಲ್ ಸಿಂಗ್ ಚಡ್ಡಾ ಹಾಲಿವುಡ್ ನ ಫಾರೆಸ್ಟ್ ಗಂಪ್ ಸಿನಿಮಾದ ರಿಮೇಕ್ ಆಗಿದೆ. ಈ ಸಿನಿಮಾ 1994ರಲ್ಲಿ ರಿಲೀಸ್ ಆಗಿದ್ದು ಅನೇಕ ಆಸ್ಕರ್ ಗಳನ್ನು ಗೆದ್ದು ಬಿಗ್ತಿತ್ತು. 

ಕಳೆದ 13 ವರ್ಷಗಳಲ್ಲೇ ಆಮೀರ್ ಖಾನ್ ಸಿನಿಮಾ ಇಷ್ಟು ಹೀನಾಯ ಸೋತಿರಲಿಲ್ಲ. ಬಾಕ್ಸ್ ಆಫೀಸ್ ನಲ್ಲೂ ಸಿನಿಮಾ ಉತ್ತಮ ಕಮಾಯಿ ಮಾಡಿಲ್ಲ. ಸಿನಿಮಾ ರಿಲೀಸ್ ಆಗಿ 5 ದಿನಗಳಾಗಿದ್ದರೂ 50 ಕೋಟಿ ರೂಪಾಯಿ ಕಲೆಕ್ಷನ್ ದಾಟಿರಲಿಲ್ಲ. 5 ದಿನಕ್ಕೆ 46 ಕೋಟಿ ರೂ. ಕಲೆಕ್ಷನ್ ಮಾಡಿತ್ತು.

ಸೋಲಿನ ಸುಳಿಯಲ್ಲಿ ಬಾಲಿವುಡ್; ಚಿತ್ರಮಂದಿರಗಳು ಖಾಲಿ, ಲಾಲ್ ಸಿಂಗ್ ಚಡ್ಡಾ1300, ರಕ್ಷಾ ಬಂಧನ್ 1000 ಶೋಗಳು ರದ್ದು

 ಇನ್ನು ಇತ್ತೀಚಿಗಷ್ಟೆ ಬಾಯ್ಕಟ್ ಟ್ರೆಂಡ್ ಬಗ್ಗೆ ಮಾತನಾಡಿದ್ದ ಆಮೀರ್ ಖಾನ್, 'ಯಾರಿಗಾದರೂ ಯಾವುದೇ ರೀತಿಯಲ್ಲಿ ನೋವುಂಟುಮಾಡಿದ್ದರೆ ವಿಷಾದಿಸುತ್ತೇನೆ ಮತ್ತು ಯಾರಾದರೂ ಚಿತ್ರವನ್ನು ವೀಕ್ಷಿಸಲು ಬಯಸದಿದ್ದರೆ ಅವರ ಭಾವನೆಗಳನ್ನು ಗೌರವಿಸುತ್ತೇನೆ. ಆದರೆ, ಚಿತ್ರಕ್ಕಾಗಿ ಸಾಕಷ್ಟು ಮಂದಿ ಶ್ರಮಿಸಿದ್ದಾರೆ ಹಾಗಾಗಿ ಜನರು ಸಿನಿಮಾ ನೋಡಿ ಇಷ್ಟಪಟ್ಟರೆ ತನಗೆ ಇಷ್ಟವಾಗುತ್ತದೆ'  ಎಂದು ಆಮೀರ್ ಖಾನ್ ಹೇಳಿದರು. 

Latest Videos
Follow Us:
Download App:
  • android
  • ios