Asianet Suvarna News Asianet Suvarna News

ನಾಲ್ಕೈದು ಸಿನಿಮಾ ಹಿಟ್ ಆಗಿದ್ದಕ್ಕೆ ಸೌತ್‌ ಸಿನಿರಂಗ ಮಾದರಿ ಎನ್ನಲು ಸಾಧ್ಯವಿಲ್ಲ; ಆರ್ ಮಾಧವನ್

ಬಾಲಿವುಡ್ ಸಿನಿಮಾಗಳ ಹೀನಾಯ ಸೋಲಿನ ಬಗ್ಗೆ ರಾಕೆಟ್ರಿ ಸ್ಟಾರ್ ಆರ್ ಮಾಧವನ್ ಪ್ರತಿಕ್ರಿಯೆ ನೀಡಿದ್ದಾರೆ. ಬಾಲಿವುಡ್ ಮತ್ತು ಸೌತ್ ಸಿನಿಮಾರಂಗವನ್ನು ಹೋಲಿಕೆ ಮಾಡುವ ಬಗ್ಗೆಯು ಮಾತನಾಡಿದ್ದಾರೆ. 
 

R Madhavan talks about the reason behind hindi films and Laal Singh Chaddhas box office failure sgk
Author
Bengaluru, First Published Aug 18, 2022, 1:12 PM IST

ಬಾಲಿವುಡ್ ಸಿನಿಮಾರಂಗ ಸೋಲಿನ ಸುಳಿಯಲ್ಲಿ ಸಿಲುಕಿದೆ. ಬಾಲಿವುಡ್‌ನಲ್ಲಿ ಸರಣಿ ಸೋಲು ಮುಂದುವರೆದಿದೆ. ದೊಡ್ಡ ಸಿನಿಮಾಗಳು, ಸ್ಟಾರ್ ನಟರ ಚಿತ್ರಗಳು, ಭಾರಿ ನಿರೀಕ್ಷೆ ಹುಟ್ಟುಹಾಕಿದ ಸಿನಿಮಾಗಳು ಹೀನಾಯ ಸೋಲು ಕಂಡಿವೆ. ಇತ್ತೀಚಿಗಷ್ಟೆ ರಿಲೀಸ್ ಆಗಿರುವ ಆಮೀರ್ ಖಾನ್ ಲಾಲ್ ಸಿಂಗ್ ಚಡ್ಡಾ ಮತ್ತು ಅಕ್ಷಯ್ ಕುಮಾರ್ ಅವರ ರಕ್ಷಾಬಂಧನ್ ಸಿನಿಮಾಗಳು ಪ್ರೇಕ್ಷಕರ ನಿರೀಕ್ಷೆ ಮಟ್ಟ ಮುಟ್ಟುವಲ್ಲಿ ವಿಫಲವಾಗಿವೆ. ಬಕ್ಸ್ ಆಫೀಸ್‌ನಲ್ಲೂ ಈ ಸಿನಿಮಾಗಳು ಕಮಾಯಿ ಮಾಡಿಲ್ಲ. ಈ ನಡುವೆ ಬಾಲಿವುಡ್ ಬಾಯ್ಕಟ್ ಸಮಸ್ಯೆನ್ನು ಎದುರಿಸುತ್ತಿವೆ. ಅನೇಕ ಹಿಂದಿ ಸಿನಿಮಾಗಳಿಗೆ ಬಯ್ಕಟ್ ಸಮಸ್ಯೆ ಎದುರಾಗಿವೆ. ಇತ್ತೀಚಿಗೆ ರಿಲೀಸ್ ಆದ ಲಾಲ್ ಸಿಂಗ್ ಚಡ್ಡಾ ಸಿನಿಮಾ ಕೂಡ ಬಾಯ್ಕಟ್ ಸಮಸ್ಯೆ ಎದುರಿಸಿತ್ತು. ಈ ಸಿನಿಮಾ ರಿಲೀಸ್ ಆಗಿ 6ದಿನಗಳ ನಂತರ 50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಆಮೀರ್ ಖಾನ್ ಬಹುತೇಕ ನಿಮಾಗಳು ರಿಲೀಸ್ ಆದ ದಿನವೇ 50ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡುತ್ತಿದ್ದವು. ಆದರೆ ಲಾಲ್ ಸಿಂಗ್ ಚಡ್ಡಾ ಸಿನಿಮಾದ ಹೀನಾಯ ಸೋಲು ಬಾಲಿವುಡ್‌ಗೆ ಅಚ್ಚರಿ ಮೂಡಿಸಿದ್ದಲ್ಲದೆ ಭಯ ಕೂಡ ಹುಟ್ಟುಹಾಕಿದೆ. 

ಬಾಲಿವುಡ್ ಸಿನಿಮಾಗಳ ಹೀನಾಯ ಸೋಲಿನ ಬಗ್ಗೆ ರಾಕೆಟ್ರಿ ಸ್ಟಾರ್ ಆರ್ ಮಾಧವನ್ ಪ್ರತಿಕ್ರಿಯೆ ನೀಡಿದ್ದಾರೆ. ಬಾಲಿವುಡ್ ಮತ್ತು ಸೌತ್ ಸಿನಿಮಾರಂಗವನ್ನು ಹೋಲಿಕೆ ಮಾಡುವ ಮಾಡುವ ಬಗ್ಗೆಯು ಪ್ರತಿಕ್ರಿಯೆ ನೀಡಿದ್ದಾರೆ. 'ಸೌತ್ ಸಿನಿಮಾರಂಗದಿಂದ ಬಂದ ಆರ್‌ಆರ್‌ಆರ್, ಕೆಜಿಎಫ್: ಅಧ್ಯಾಯ 2, ವಿಕ್ರಮ್ ಮತ್ತು ವಿಕ್ರಾಂತ್ ರೋನಾ ಮುಂತಾದ ಸಿನಿಮಾಗಳು ಒಂದೇ ಅವಧಿಯಲ್ಲಿ ಕೋಟಿ ಕೋಟಿ ಹಣ ಬಾಚಿಕೊಂಡಿವೆ. ಈ ಸಿನಿಮಾಗಳು ಹಿಂದಿ ಚಿತ್ರಗಳ ಕಲೆಕ್ಷನ್ ಮೀರಿಸಿವೆ. ಈ ಬಗ್ಗೆ ಮಾಧವನ್ ಅವರಿಗೆ ಪ್ರಶ್ನೆ ಎದುರಾಗಿದೆ. ಇತ್ತೀಚಿಗಷ್ಟೆ ದೋಖ ಸಿನಿಮಾದ ಟ್ರೈಲರ್ ರಿಲೀಸ್‌ಗೆ ಆಗಮಿಸಿದ್ದ ಮಾಧವನ್ ಈ ಬಗ್ಗೆ ಮಾತನಾಡಿದ್ದಾರೆ. 'ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ವರ್ಕೌಟ್ ಆಗಿಲ್ಲ ಎಂದು ನಮಗೆ ತಿಳಿದಿದ್ದರೆ, ನಾವೆಲ್ಲರೂ ಹಿಟ್ ಚಿತ್ರಗಳನ್ನು ಮಾತ್ರ ಮಾಡುತ್ತಿದ್ದೆವು. ನಾವು ಫ್ಲಾಪ್ ಚಿತ್ರ ಮಾಡುತ್ತಿದ್ದೇವೆ ಎಂದು ಯಾರಿಗೂ ಗೊತ್ತಿರಲ್ಲ. ಎಲ್ಲಾ ಸಿನಿಮಾಗೆಲನ್ನು ಒಳ್ಳೆಯ ಸಿನಿಮಾ ಎಂದೆ ಮಾಡಿ ಕೆಲಸ ಮಾಡುತ್ತೇವೆ' ಎಂದು ಮಾಧವನ್ ಹೇಳಿದರು.

ಲಾಲ್ ಸಿಂಗ್ ಚಡ್ಡಾ ಹೀನಾಯ ಸೋಲು; 13 ವರ್ಷಗಳಲ್ಲೇ ಇಂಥ ಸೋಲು ಕಂಡಿರಲಿಲ್ಲ ಆಮೀರ್ ಖಾನ್

ಇದೇ ವೇಳೆ ದಕ್ಷಿಣ ಭಾರತದ ಸಿನಿಮಾಗಳು ಬಾಲಿವುಡ್ ಸಿನಿಮಾಗಳನ್ನು ಮೀರಿಸುತ್ತವೆ ಎನ್ನುವ ಗ್ರಹಿಕೆ ತಪ್ಪು ಎಂದು ಹೇಳಿದರು. 'ದಕ್ಷಿಣದಿಂದ ಬಂದ ಬಾಹುಬಲಿ 1, ಬಾಹುಬಲಿ 2, RRR, ಪುಷ್ಪ, ಕೆಜಿಎಫ್: ಅಧ್ಯಾಯ 1 ಮತ್ತು ಕೆಜಿಎಫ್: ಅಧ್ಯಾಯ 2 ಮಾತ್ರ ಹಿಂದಿ ಚಲನಚಿತ್ರ ನಟರ ಚಲನಚಿತ್ರಗಳಿಗಿಂತ ಉತ್ತಮವಾಗಿದ್ದು ಸೂಪರ್ ಹಿಟ್ ಆಗಿವೆ. ಬರೀ ಐದಾರು ಚಿತ್ರಗಳು ಹಿಟ್ ಆಗಿದ್ದಕ್ಕೆ ಸೌತ್ ಸಿನಿರಂಗ ಮಾದರಿ ಅಂತ ಹೇಳಲು ಸಾಧ್ಯವಿಲ್ಲ. ಒಳ್ಳೆಯ ಚಿತ್ರಗಳು ಬಂದರೆ ಬಾಲಿವುಡ್ ಸಿನಿಮಾಗಳು ಹಿಟ್ ಆಗುತ್ತವೆ' ಎಂದು ಹೇಳಿದರು. 

ಬಾಲಿವುಡ್ ಖಾನ್‌ಗಳು ಲೆಜೆಂಡ್; ಬಾಯ್ಕಟ್ ಟ್ರೆಂಡ್‌ಗೆ ಏಕ್ತಾ ಕಪೂರ್ ರಿಯಾಕ್ಷನ್

'ಪ್ರೇಕ್ಷಕರಿಗೆ ಉತ್ತಮ ಕಂಕೆಂಟ್ ಇರುವ ಸಿನಿಮಾ ನೀಡಿದರೆ, ಭಾಷೆಯ ಹೊರತಾಗಿಯೂ ಚಿತ್ರಮಂದಿರಗಳಿಗೆ ಹೋಗಿ ಸಿನಿಮಾ ವೀಕ್ಷಿಸುತ್ತಾರೆ' ಎಂದು ನಟ ಹೇಳಿದರು. ಕೊರೊನಾ ಬಳಿಕ ಪ್ರೇಕ್ಷಕರ ಆಧ್ಯತೆ ಬದಲಾಗಿದೆ, ಹಿಂದಿ ಸಿನಿಮಾಗಳ ಸೋಲಿಗೆ ಇದೇ ಕಾರಣ' ಎಂದು ಮಾಧವನ್ ಹೇಳಿದರು. ಆರ್ ಣಾದವನ್ ಕೊನೆಯದಾಗಿ ರಾಕೆಟ್ರಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸದ್ಯ ದೋಖ್ಲಾ ಸಿನಿಮಾದ ರಿಲೀಸ್‌ಗೆ ಎದುರು ನಡುತ್ತಿದ್ದಾರೆ.  

Follow Us:
Download App:
  • android
  • ios