Asianet Suvarna News Asianet Suvarna News

ಕಾಟೇರ ನಿರ್ದೇಶಕ ತರುಣ್ ಸುಧೀರ್ ಭವಿಷ್ಯ ಹೇಳಿದ ಜಗಪತಿ ಬಾಬು; ದರ್ಶನ್ ಬಗ್ಗೆ ಏನು ಹೇಳಿದ್ರು ನೋಡಿ!

ನಟ ಜಗಪತಿ ಬಾಬು ಅವರು ದರ್ಶನ್ ನಾಯಕತ್ವ ಹಾಗು ತರುಣ್ ಸುಧೀರ್ ನಿರ್ದೇಶನದ 'ಕಾಟೇರ' ಚಿತ್ರದ ಬಗ್ಗೆ ಮಾತನಾಡುತ್ತಿದ್ದಾರೆ. 'ಕಾಟೇರ ಚಿತ್ರದಲ್ಲಿ ನಾನು 'ದೇವರಾಯ' ಹೆಸರಿನ ವಿಲನ್ ರೋಲ್‌ನಲ್ಲಿ ನಟಿಸಿದ್ದೇನೆ. 

Tharun Sudhir will shine after release of Kaatera movie says actor Jagapathi Babu srb
Author
First Published Dec 22, 2023, 6:09 PM IST

ತೆಲುಗು ಮೂಲದ ನಟ ಜಗಪತಿ ಬಾಬು ಇಂದು ಭಾರತದ ಅಂದರೆ ಪ್ಯಾನ್ ಇಂಡಿಯಾ ಕಲಾವಿದರಾಗಿ ಬೆಳೆದಿದ್ದಾರೆ. ಅವರು ಈಗ ಬಹುಭಾಷಾ ನಟ ಎಂಬುದನ್ನು ಸಾಕ್ಷಿ ಸಮೇತ ಹೇಳಬಹುದು. ಜಗಪತಿ ಬಾಬು ತೆಲುಗಿನಲ್ಲಿ ಹೀರೋ ಆಗಿ ನಟಿಸುತ್ತಿದ್ದ ಕಾಲದಲ್ಲಿ ಅವರು ತೆಲುಗಿಗೆ ಮಾತ್ರ ಸೀಮಿತ ಆಗಿದ್ದರು. ಆದರೆ ಈಗ, ಅವರ ಕೆರಿಯರ್‌ನ ಸೆಕೆಂಡ್‌ ಇನ್ನಿಂಗ್ಸ್‌ನಲ್ಲಿ ನಟ ಜಗಪತಿ ಬಾಬು ಅವರು ಬಹಳಷ್ಟು ಭಾಷೆಯ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆದರೆ, ಅವರಿಗೆ ಸಿಗುತ್ತಿರುವ ಹೆಚ್ಚಿನ ಪಾತ್ರಗಳು ವಿಲನ್‌ ರೋಲ್‌ಗಳೇ ಆಗಿವೆ. 

ಸದ್ಯ ನಟ Jagapathi Babu ಅವರು ದರ್ಶನ್ ನಾಯಕತ್ವ ಹಾಗು Tharun Sudhir ನಿರ್ದೇಶನದ Kaatera ಚಿತ್ರದ ಬಗ್ಗೆ ಮಾತನಾಡುತ್ತಿದ್ದಾರೆ. 'ಕಾಟೇರ ಚಿತ್ರದಲ್ಲಿ ನಾನು 'ದೇವರಾಯ' ಹೆಸರಿನ ವಿಲನ್ ರೋಲ್‌ನಲ್ಲಿ ನಟಿಸಿದ್ದೇನೆ. ಈ ಚಿತ್ರವು ಹಳ್ಳಿಯ ಸೊಗಡಿನ ಕಥೆ ಹೊಂದಿದೆ. ಆದರೆ, ವಾಸ್ತವಿಕ ಸಂಗತಿಗಳ ಮೇಲೆ ಕಾಟೇರ ಕಥೆಯಲ್ಲಿ ಬೆಳಕು ಚೆಲ್ಲಲಾಗಿದೆ. ಈ ಚಿತ್ರದ ಕಥೆಯನ್ನು ನಾನು ರಿವೀಲ್ ಮಾಡಲಾಗದು, ಆದರೆ ಕಥೆ ಅದ್ಭುತವಾಗಿದೆ. ಈ ಸಿನಿಮಾ ಬಿಡುಗಡೆ ಬಳಿಕ ತರುಣ್ ಸುಧೀರ್ ಇನ್ನೂ ಎತ್ತರಕ್ಕೆ ಏರಲಿದ್ದಾರೆ' ಎಂದಿದ್ದಾರೆ ನಟ ಜಗಪತಿ ಬಾಬು. 

ಕರೀನಾ ಕಪೂರ್ ಡಯೆಟ್ ಪ್ಲಾನ್ ನೋಡಿದ್ರೆ ತಲೆ ಸುತ್ತಿ ಬೀಳ್ತೀರಾ; ಯಾಕೆ ಬೇಕು ಉಸಾಬರಿ!

ನಟ ಜಗಪತಿ ಬಾಬು ಈ ಮೊದಲು ಕನ್ನಡದಲ್ಲಿ 'ಬಚ್ಚನ್' ಹಾಗು 'ರಾಬರ್ಟ್‌' ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ಈಗ ಕಾಟೇರದಲ್ಲಿ ನಟಿಸುವ ಮೂಲಕ ಕನ್ನಡದಲ್ಲಿ ಹ್ಯಾಟ್ರಿಕ್ ಸಾಧಿಸಿದಂತಾಗಿದೆ. ಹಿಂದಿಯಲ್ಲಿ, ತಮಿಳಿನಲ್ಲಿ, ತೆಲುಗಿನಲ್ಲಿ ಹೀಗೆ ಸಾಕಷ್ಟು ಭಾಷೆಯ ಚಿತ್ರಗಳಲ್ಲಿ ಜಗಪತಿ ಬಾಬು ನಟಿಸುತ್ತಿದ್ದಾರೆ. ಜಗಪತಿ ಬಾಬು ನಟನೆಯ ಕಾಟೇರ ಚಿತ್ರವು ಇದೇ ತಿಂಗಳು 29ರಂದು (29 ಡಿಸೆಂಬರ್ 2023) ಬಿಡುಗಡೆ ಆಗಲಿದೆ. 

ಫ್ಯಾನ್ ಕ್ಷಮೆ ಕೇಳಿ ಎಂದು ಬಾಲಿವುಡ್ ನಟ ಗೋವಿಂದಾಗೆ ಸುಪ್ರಿಂ ಕೋರ್ಟ್‌ ಆದೇಶ!

'ಕನ್ನಡದ ಪ್ರೇಕ್ಷಕರು ಸಿನಿಮಾಗಳನ್ನು ಸಿನಿಮಾದಂತೆ ಹಾಗೂ ಕಲಾವಿದರನ್ನು ಕಲಾವಿದರಂತೆ ನೋಡುತ್ತಾರೆ. ಇದು ಇಲ್ಲಿನ ಜನರ ವೈಶಿಷ್ಟ್ಯ ಎಂದು ಹೇಳಲು ಇಷ್ಟಪಡುತ್ತೇನೆ' ಎಂದಿದ್ದಾರೆ ನಟ ಜಗಪತಿ ಬಾಬು. ಕಾಟೇರ ಚಿತ್ರದ ಬಗ್ಗೆ ನಟ ಜಗಪತಿ ಬಾಬು ಅವರಾಡಿರುವ ಮಾತುಗಳು ಸಖತ್ ವೈರಲ್ ಆಗುತ್ತಿದ್ದು,  ಖಂಡಿತವಾಗಿಯೂ ಇದು ಕಾಟೇರ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗುವುದರಲ್ಲಿ ಸಂಶಯವಿಲ್ಲ. 

Follow Us:
Download App:
  • android
  • ios