Asianet Suvarna News Asianet Suvarna News

ಐಟಿ ಆಯ್ತು, ಹಾರ್ಡ್‌ವೇರ್‌ನತ್ತ ಹೊರಳೋಣ; ಪ್ರೊ.ಇ.ಬಾಲಗುರುಸಾಮಿ

ಭಾರತದ ಖ್ಯಾತ ಎಂಜಿನಿಯರ್‌, ಅಣ್ಣಾ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಇ.ಬಾಲಗುರುಸಾಮಿ ಅವರು ಕನ್ನಡಪ್ರಭದ ಸೋದರ ಸಂಸ್ಥೆ ಏಷಿಯಾನೆಟ್‌ ನ್ಯೂಸ್‌ನ ಸಂವಾದ ಕ್ಯಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ಈ ವೇಳೆ ಅವರು ಭಾರತದ ಎಂಜಿನಿಯರಿಂಗ್‌ ಶಿಕ್ಷಣ, ಪ್ರತಿಭಾ ಪಲಾಯನ ಮುಂತಾದವುಗಳ ಕುರಿತು ಬೆಳಕು ಚೆಲ್ಲಿದ್ದಾರೆ.

suvarna news interview with with former anna university vice chancellorebalagurusamy  rav
Author
First Published Jan 2, 2023, 12:08 PM IST

ಸಂವಾದ1

ಪ್ರೊ.ಇ.ಬಾಲಗುರುಸಾಮಿ

ಮಾಜಿ ಕುಲಪತಿ, ಅಣ್ಣಾ ವಿಶ್ವವಿದ್ಯಾಲಯ

ನೀವು ಗಮನಿಸಿರುವಂತೆ ಕೇರಳದಲ್ಲಾಗಿರುವ ಆರ್ಥಿಕ, ಶೈಕ್ಷಣಿಕ ಮತ್ತು ಔದ್ಯೋಗಿಕ ಬದಲಾವಣೆಗಳೇನು?

ಕಳೆದ ಕೆಲವು ದಶಕಗಳಲ್ಲಿ ರಾಜ್ಯದಲ್ಲಿ ಶೈಕ್ಷಣಿಕವಾಗಿ, ಆರ್ಥಿಕವಾಗಿ ಮತ್ತು ಔದ್ಯೋಗಿಕವಾಗಿ ಹಲವು ಬದಲಾವಣೆಗಳಾಗಿವೆ. ಸಾಮಾಜಿಕವಾಗಿಯೂ ಭಾರತದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳಾಗಿವೆ. ಕೇರಳ ಸಹ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ದಕ್ಷಿಣದ ರಾಜ್ಯಗಳಾದ ತಮಿಳುನಾಡು ಮತ್ತು ಕೇರಳಗಳು ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಬಹಳಷ್ಟುಮುನ್ನಡೆ ಸಾಧಿಸಿವೆ. ನಾನು ದಶಕಗಳ ಹಿಂದೆ ಭೇಟಿ ನೀಡಿದಾಗಿನಿಂದ ಈಗಿನವರೆಗೆ ಕೇರಳದಲ್ಲಾಗಿರುವ ರಸ್ತೆ ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ಧಿಯನ್ನು ನೋಡಲು ಸಂತೋಷವಾಗುತ್ತಿದೆ.

ನಿಮ್ಮ ಕ್ಷೇತ್ರವಾದ ಕಂಪ್ಯೂಟರ್‌ ಸೈನ್ಸ್‌ ಸಾಕ್ಷರತೆಯಲ್ಲಿ ಕೇರಳದ ಸಾಧನೆ ಬಗ್ಗೆ ನಿಮ್ಮ ಅಭಿಪ್ರಾಯವೇನು?

1986ರಲ್ಲಿ ನಾನು ಆಂಧ್ರಪ್ರದೇಶ ಸರ್ಕಾರ(Andhrapradesh government)ಕ್ಕೆ ಸಲಹೆಗಾರನಾಗಿದ್ದೆ. ಆಗಿನ ಮುಖ್ಯಮಂತ್ರಿ ಎನ್‌.ಟಿ.ರಾಮರಾವ್‌(NT ramarao) ಎಲ್ಲಾ ರಾಜ್ಯಗಳಿಗೂ ಭೇಟಿ ನೀಡಿ ಅಲ್ಲಿ ಐಟಿ ಮತ್ತು ಕಂಪ್ಯೂಟರ್‌(IT and computer)ಗೆ ಸಂಬಂಧಿಸಿದಂತೆ ಆಗಿರುವ ಅಭಿವೃದ್ಧಿಯನ್ನು ಅಧ್ಯಯನ ಮಾಡುವಂತೆ ತಿಳಿಸಿದ್ದರು. ಕೇರಳ(Kerala)ಕ್ಕೆ ಭೇಟಿ ನೀಡಿದ್ದಾಗ ಐಟಿ ಕ್ಷೇತ್ರದಲ್ಲಿ ಏನೂ ಆಗಿರಲಿಲ್ಲ. ಕೇವಲ ದತ್ತಾಂಶ ನಮೂದಿಸುವ ಕಂಪ್ಯೂಟರ್‌ಗಳು ಮಾತ್ರ ಇದ್ದವು. ನಾನು ಕೆಲವು ಅಧಿಕಾರಿಗಳನ್ನು ಭೇಟಿ ಮಾಡಿ ಮಾತನಾಡಿದೆ. ಅವರು ನಾವೆಲ್ಲಾ ಐಟಿಗೆ ವಿರುದ್ಧವಾಗಿರುವುದಾಗಿ ಹೇಳಿದರು. ಆದರೆ ಈಗ ಇ-ಗವರ್ನೆನ್ಸ್‌ನಲ್ಲಿ ಕೇರಳ ಮುಂಚೂಣಿ ರಾಜ್ಯವಾಗಿದೆ. ಎಲ್ಲಾ ಕ್ಷೇತ್ರಗಳಲ್ಲೂ ಕಂಪ್ಯೂಟರ್‌ ಬಳಕೆಯಾಗುತ್ತಿದೆ. ಒಂದು ಕಾಲದಲ್ಲಿ ಐಟಿ ಮತ್ತು ಗ್ಯಾಜೆಟ್‌ಗಳಿಗೆ ವಿರೋಧ ವ್ಯಕ್ತಪಡಿಸಿದವರು ಸಹ ಈಗ ಅದನ್ನು ಬಳಕೆ ಮಾಡುತ್ತಿದ್ದಾರೆ. ಇನ್ನು ಐಟಿಯಲ್ಲಿ ಬಳಕೆಯಾಗುವ ಅಪ್ಲಿಕೇಶನ್‌ಗಳ ಗುಣಮಟ್ಟವನ್ನು ಹೆಚ್ಚು ಮಾಡಿದರೆ ಸಾಕು.

ಅಭಿವೃದ್ಧಿಯ ಹರಿಕಾರ ನರೇಂದ್ರ ಮೋದಿ: ಬಿಜೆಪಿ ಆಡಳಿತದಲ್ಲಿ ಬದಲಾಯ್ತು ಭಾರತದ ಚಿತ್ರಣ

ಐಟಿ ಕ್ಷೇತ್ರದ ಅಭಿವೃದ್ಧಿಯಲ್ಲಿ ಭಾರತ ಇನ್ನೂ ಸಹ ಹಿಂದೆ ಇದೆ ಎಂದು ನಿಮಗನ್ನಿಸುತ್ತಾ?

ನಾವು ಇಡೀ ವಿಶ್ವದಲ್ಲಿ ಅತಿ ಹೆಚ್ಚು ಸಾಫ್‌್ಟವೇರ್‌(Software) ಎಂಜಿನಿಯರ್‌(engineers)ಗಳನ್ನು ಉತ್ಪಾದನೆ ಮಾಡುತ್ತಿದ್ದೇವೆ. ಆದರೆ ವ್ಯಾಪಾರ, ಶಿಕ್ಷಣ, ಕೈಗಾರಿಕೆ, ಆಡಳಿತ ಮುಂತಾದವುಗಳಿಗೆ ಸಂಬಂಧಿಸಿದ ಐಟಿ ಅಪ್ಲಿಕೇಶನ್‌ಗಳ ಅಭಿವೃದ್ಧಿಯಲ್ಲಿ ನಾವು ಬಹಳಷ್ಟನ್ನು ಸಾಧಿಸಬೇಕಿದೆ. ಭಾರತದಲ್ಲಿ ಭ್ರಷ್ಟಾಚಾರ ಹೆಚ್ಚಾಗಲು ಪ್ರಮುಖ ಕಾರಣ ಪಾರದರ್ಶಕತೆ ಕಡಿಮೆ ಇರುವುದು. ಆದರೆ ಐಟಿಯ ಬಳಕೆಯಿಂದ ಇದನ್ನು ಕಡಿಮೆ ಮಾಡಬಹುದು. ಸಮರ್ಪಕವಾಗಿ ಐಟಿಯನ್ನು ಬಳಕೆ ಮಾಡಿಕೊಂಡರೆ, ಇದನ್ನು ಇ-ಆಡಳಿತದಲ್ಲಿ ಅಳವಡಿಸಿಕೊಂಡರೆ, ಭ್ರಷ್ಟಾಚಾರ ತಾನಾಗಿಯೇ ಕಡಿಮೆಯಾಗಲಿದೆ. ಇನ್ನೂ ಸಹ ವಿಶ್ವವಿದ್ಯಾಲಯಗಳು ಸಂಪೂರ್ಣವಾಗಿ ಕಂಪ್ಯೂಟರ್‌ ಬಳಕೆ ಮಾಡುತ್ತಿಲ್ಲ. ಐಟಿಯನ್ನು ಬಳಸಿಕೊಂಡರೆ ಶೈಕ್ಷಣಿಕ ಗುಣಮಟ್ಟವನ್ನು ಸುಧಾರಣೆ ಮಾಡಬಹುದು. ಇದರಿಂದ ವಿಶ್ವವಿದ್ಯಾಲಯಗಳು ಅಂಕಪಟ್ಟಿಗಳನ್ನು, ಪ್ರಮಾಣಪತ್ರಗಳನ್ನು ನೇರವಾಗಿ ವಿದ್ಯಾರ್ಥಿಗಳ ಅಥವಾ ಪೋಷಕರ ಮೊಬೈಲ್‌ಗೆ ಕಳುಹಿಸಬಹುದು, ಇದರಿಂದ ವಿದ್ಯಾರ್ಥಿಗಳು ಅಂಕಪಟ್ಟಿವಿಷಯದಲ್ಲಿ ಮೋಸ ಮಾಡುವುದನ್ನು ತಪ್ಪಿಸಿ ಅವರು ಶಿಕ್ಷಣದತ್ತ ಗಮನ ಹರಿಸುವಂತೆ ಮಾಡಬಹುದು.

ಈಗಲೂ ಸಹ ಐಟಿ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ಹೆಚ್ಚಿವೆ ಎಂದು ನಿಮಗೆ ಅನ್ನಿಸುತ್ತಾ?

ಹೌದು! ಈಗಲೂ ಸಹ ಐಟಿ ಕ್ಷೇತ್ರದಲ್ಲಿ ಬಹಳಷ್ಟುಉದ್ಯೋಗಾವಕಾಶಗಳಿವೆ. ಬಹಳಷ್ಟುದೇಶಗಳಿಗೆ ನಾವು ಐಟಿ ಪ್ರತಿಭೆಗಳನ್ನು ನೀಡುತ್ತಿದ್ದೇವೆ. ಆದರೆ ನಮ್ಮ ದೇಶದ ಕಂಪನಿಗಳು ಅವರನ್ನು ಉದ್ಯೋಗಕ್ಕೆ ತೆಗೆದುಕೊಳ್ಳಲು ಹಿಂಜರಿಯುತ್ತಿವೆ. ಇನ್ನೂ ಸಹ ನಾವು ಉತ್ಪಾದನಾ ವಲಯದಲ್ಲಿ ಐಟಿಯನ್ನು ಸಮರ್ಪಕವಾಗಿ ಬಳಸಿಕೊಂಡಿಲ್ಲ. ಐಟಿ ಕೈಗಾರಿಕೆಗಳು ಕೇವಲ ಸಾಫ್‌್ಟವೇರ್‌ಗಳ ಬಗ್ಗೆ ಚಿಂತೆ ಮಾಡುತ್ತಿವೆ. ಇದನ್ನು ಬಳಕೆ ಮಾಡಲು ಬೇಕಿರುವ ಗುಣಮಟ್ಟದ ಹಾರ್ಡ್‌ವೇರ್‌ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಹಾಗಾಗಿಯೇ ನಾನು ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಕೊಯಮತ್ತೂರಿಗೆ ಬಂದಿದ್ದಾಗ ಹಾರ್ಡ್‌ವೇರ್‌ ಬಗ್ಗೆ ಹೆಚ್ಚು ಗಮನ ನೀಡುವಂತೆ ಸಲಹೆ ನೀಡಿದ್ದೆ. ಕೇವಲ ಸಾಫ್‌್ಟವೇರ್‌ ಪ್ರೋಗ್ರಾಮರ್‌ಗಳನ್ನು ಉತ್ಪಾದನೆ ಮಾಡುತ್ತಿದ್ದೇವೆ. ವಿವಿಧ ಕ್ಷೇತ್ರಗಳಲ್ಲಿ ಓದಿದವರು ಈಗ ಪ್ರೋಗ್ರಾಮರ್‌ಗಳಾಗುತ್ತಿದ್ದಾರೆ. ಇದು ಸರಿಯಲ್ಲ. ಇದಕ್ಕಾಗಿಯೇ ಶಿಕ್ಷಣ ಪಡೆದ ಎಂಜಿನಿಯರ್‌ಗಳನ್ನು ನಾವು ಪ್ರೋಗ್ರಾಮರ್‌ಗಳಾಗುವಂತೆ ಮಾಡಬೇಕು. ನಾವು ಭಾರತಕ್ಕೆ ಎಲ್ಲಾ ಹಾರ್ಡ್‌ವೇರ್‌ಗಳನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ಮೋದಿ ಪ್ರಧಾನಿಯಾದ ಬಳಿಕ ಒಂದಷ್ಟುಕಾರ್ಯಕ್ರಮಗಳು ಆರಂಭವಾಗಿದೆ. ಇದಿನ್ನೂ ಶೈಶವಾವಸ್ಥೆಯಲ್ಲಿದೆ. ಹಾಗಾಗಿ ಈ ಕ್ಷೇತ್ರದಲ್ಲಿ ಉದ್ಯೋಗವಕಾಶಗಳು ಹೆಚ್ಚಿವೆ. ನಮ್ಮ ದೇಶ ಕೇವಲ ಎಂಜಿನಿಯರಿಂಗ್‌ ಪಧವೀದರರನ್ನು ಉತ್ಪಾದಿಸುತ್ತಿದೆಯೇ ಹೊರತು ಎಂಜಿನಿಯರ್‌ಗಳನ್ನಲ್ಲ.

ದೇಶದಲ್ಲಿ ಪ್ರತಿಭಾ ಪಲಾಯನ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದೆ. ಇದಕ್ಕೆ ಪ್ರಮುಖ ಕಾರಣವೇನು?

ಹೌದು ಇದರಿಂದಾಗಿ ದೇಶ ತೊಂದರೆಗೆ ಸಿಲುಕಿಕೊಳ್ಳುತ್ತಿದೆ. ವಿಶ್ವದ ಪ್ರಮುಖ ಸಂಸ್ಥೆಗಳನ್ನು ಭಾರತೀಯರು ಮುನ್ನಡೆಸುತ್ತಿದ್ದಾರೆ ಎಂಬುದನ್ನು ಕೇಳಿದಾಗ ನನಗೆ ಸಂತೋಷಕ್ಕಿಂತ ಹೆಚ್ಚು ದುಃಖವಾಗುತ್ತದೆ. ಅವರು ಇಲ್ಲೇ ಇದ್ದು ನಮ್ಮ ದೇಶಕ್ಕೆ ಸೇವೆ ಸಲ್ಲಿಸಬೇಕಾಗಿತ್ತು. ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಸಹ ನಾವು ಈ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ನಮ್ಮಲ್ಲಿರುವಷ್ಟುನೈಸರ್ಗಿಕ ಸಂಪನ್ಮೂಲಗಳು ಬೇರೆ ಯಾವ ದೇಶದಲ್ಲೂ ಇಲ್ಲ. ಆದರೂ ನಾವು ಅಭಿವೃದ್ಧಿಶೀಲ ರಾಷ್ಟ್ರವಾಗಿಯೇ ಗುರುತಿಸಿಕೊಳ್ಳುತ್ತೇವೆ. ಇದಕ್ಕೆ ಪ್ರಮುಖ ಕಾರಣ ಇದನ್ನು ನಮ್ಮ ಜನರ ಜೊತೆ ಸಮರ್ಪಕವಾಗಿ ಇವುಗಳನ್ನು ಬಳಕೆ ಮಾಡಿಕೊಳ್ಳದಿರುವುದೇ ಆಗಿದೆ. ನಮ್ಮ ವಿದ್ಯಾರ್ಥಿಗಳಲ್ಲಿ ದೇಶಪ್ರೇಮವನ್ನು ಬೆಳೆಸಬೇಕಾಗಿದೆ. ನಮ್ಮ ದೇಶದಲ್ಲಿ ಬಹಳಷ್ಟುಶಿಕ್ಷಣ ಸಂಸ್ಥೆ, ಉದ್ಯೋಗವಕಾಶಗಳಿದ್ದರೂ ಇವರನ್ನು ಬಳಕೆ ಮಾಡಿಕೊಳ್ಳುವುದಲ್ಲಿ ಸೋಲುತ್ತಿದ್ದೇವೆ. ವಿದ್ಯಾರ್ಥಿಗಳಲ್ಲಿ ದೇಶಪ್ರೇಮವನ್ನು ಬೆಳೆಸಬೇಕಿದೆ. ಎಲ್ಲಕ್ಕೂ ಹಣವೊಂದೇ ಕಾರಣವಾಗಬಾರದು.

ನೀವು ರಾಷ್ಟ್ರೀಯ ಶಿಕ್ಷಣ ನೀತಿ ಪರವಾಗಿದ್ದೀರಿ. ಆದರೆ ಕೇರಳ, ತಮಿಳುನಾಡು ಹೊರಗುಳಿಯಲು ನಿರ್ಧರಿಸಲು ಕಾರಣವೇನು?

ಇದೊಂದು ಸಂಪೂರ್ಣವಾಗಿ ರಾಜಕೀಯ ಪ್ರೇರಿತವಾಗಿದೆ. ಶಿಕ್ಷಣದಲ್ಲಿ ಯಾವುದೇ ತಾತ್ವಿಕ ವಿವಾದಾಂಶಗಳಿರುವುದಿಲ್ಲ. ಇದು ಕೇವಲ ಶಿಕ್ಷಣಕ್ಕಾಗಿ ಮಾಡಿರುವ ನೀತಿ. ಹಾಗಾಗಿ ಇದನ್ನು ತಾತ್ವಿಕ ಭಿನ್ನಾಭಿಪ್ರಾಯಗಳನ್ನಿಟ್ಟುಕೊಂಡು ವಿರೋಧಿಸುವುದು ಸರಿಯಲ್ಲ. ರಾಷ್ಟ್ರೀಯ ಶಿಕ್ಷಣ ನೀತಿ ಒಂದು ರೋಡ್‌ಮ್ಯಾಪ್‌ ಇದ್ದಂತೆ. ಶಾಲಾ ಶಿಕ್ಷಣ, ಉನ್ನತ ಶಿಕ್ಷಣವನ್ನು ನಿಗದಿತ ಕಾಲದಲ್ಲಿ ಪಡೆದುಕೊಳ್ಳಲು ಮಾರ್ಗದರ್ಶನ ನೀಡಲು ಇದನ್ನು ತಯಾರಿಸಲಾಗಿದೆ. ಇತ್ತೀಚೆಗೆ ನಿರುದ್ಯೋಗ ದೇಶದಲ್ಲಿ ಹೆಚ್ಚಾಗಿದೆ. ಭಾರತದಲ್ಲಿ ಸಂಶೋಧನಾ ಔಟ್‌ಪುಟ್‌ಗಳು ಕಡಿಮೆ ಇದೆ. ಹೊಸ ಶೋಧನೆಗಳು ಬಹಳ ಕಡಿಮೆ ಇವುಗಳು ಸಹ ಒಂದು ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಈ ಕ್ಷೇತ್ರಗಳಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಯುವಕರನ್ನು ಸ್ಫರ್ಧೆಗಳಿಗೆ ತಯಾರು ಮಾಡಲು, ಸಂಶೋಧನೆಗಳನ್ನು ನಡೆಸಲು ಇದು ಸಹಾಯ ಮಾಡುತ್ತದೆ. ಅಲ್ಲದೇ ರಾಜ್ಯಪಾಲರನ್ನು ವಿಶ್ವವಿದ್ಯಾಲಯಗಳ ಕುಲಾಧಿಪತಿ ಹುದ್ದೆಯಿಂದ ತೆಗೆದು, ಸರ್ಕಾರಗಳು ನೇಮಕ ಮಾಡಿದರೆ ನಿಜಕ್ಕೂ ಶಿಕ್ಷಣ ವ್ಯವಸ್ಥೆ ಹಾಳಾಗಲಿದೆ.

ನಿಮ್ಮನ್ನು ರಾಜ್ಯಪಾಲರನ್ನಾಗಿ ಮಾಡಲು 25 ಕೋಟಿ ಲಂಚ ಕೇಳಿದ್ದ ಪ್ರಕರಣದ ಬಗ್ಗೆ ವಿವರವನ್ನು ಹಂಚಿಕೊಳ್ಳಬಹುದೇ?

ನಾನು ಯುಪಿಎಸ್ಸಿಯ ಸದಸ್ಯನಾಗಿದ್ದ ಸಮಯದಲ್ಲಿ ನಡೆದ ಘಟನೆ. ಯಾರನ್ನು ರಾಜ್ಯಪಾಲ, ಉಪರಾಜ್ಯಪಾಲ ಮಾಡಬೇಕು ಎಂಬುದರ ಕುರಿತಾಗಿ ಪ್ರಧಾನ ಮಂತ್ರಿ ಕಾರ್ಯಾಲಯ ಒಂದು ಪಟ್ಟಿಯನ್ನು ಸಿದ್ಧಮಾಡಿಟ್ಟುಕೊಂಡಿರುತ್ತದೆ. ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದಾಗ, ಮನಮೋಹನ್‌ ಸಿಂಗ್‌ ಪ್ರಧಾನಿಯಾಗಿದ್ದಾಗ ನನಗೆ ಈ ಆಫರ್‌ ಬಂದಿತ್ತು. ರಾಜ್ಯಪಾಲದ ನೇಮಕ ಕುರಿತಾಗಿ ನಿರ್ವಹಣಾ ಕಾರ‍್ಯಗಳನ್ನು ನಡೆಸುವ ತಂಡದ ಒಬ್ಬ ಸದಸ್ಯ ನನ್ನನ್ನು ಭೇಟಿ ಮಾಡಿ, ರಾಜ್ಯಪಾಲರ ಪಟ್ಟಿಯಲ್ಲಿ ನಿಮ್ಮ ಹೆಸರಿದೆ. ಅಂಡಮಾನ್‌ ನಿಕೋಬಾರ್‌ ದ್ವೀಪದ ಉಪರಾಜ್ಯಪಾಲರಾಗಿ ನೇಮಕವಾಗಲು ನೀವು 25 ಕೋಟಿ ರು. ಅಥವಾ ಗೋವಾ ರಾಜ್ಯಪಾಲರಾಗಲು 10 ಕೋಟಿ ರು. ಲಂಚ ಕೊಡಬೇಕು ಎಂದು ಹೇಳಿದರು. ನಾನು ಮನಮೋಹನ್‌ ಸಿಂಗ್‌ ಅವರಿಗೆ ಚೆನ್ನಾಗಿ ಗೊತ್ತಿದ್ದರಿಂದ, ನಾನು ಸೂಕ್ತ ಎನಿಸಿದರೆ ಅವರೇ ಆಯ್ಕೆ ಮಾಡುತ್ತಾರೆ ಎಂದು ಹೇಳಿದೆ. ನಿಮಗೆ ಪ್ರಧಾನಿಗಳು ಗೊತ್ತಿರಬಹುದು, ಆದರೆ ಇದೆಲ್ಲಾ ಹೈಕಮಾಂಡ್‌ ತೆಗೆದುಕೊಳ್ಳುವ ನಿರ್ಧಾರವಾಗಿದೆ. ನಿಮ್ಮ ಬಳಿ ಹಣ ಇಲ್ಲದಿದ್ದರೂ ಪರವಾಗಿಲ್ಲ. ನೀವು ಒಪ್ಪಿಕೊಂಡರೆ ನಿಮ್ಮ ಪರವಾಗಿ ಹಣ ನೀಡಲು ಜನ ಸಿದ್ಧರಾಗಿದ್ದಾರೆ. ಆಯ್ಕೆಯಾದ ಬಳಿಕ ಅವರಿಗೆ ಕೆಲಸ ಮಾಡಿಕೊಟ್ಟರೆ ಸಾಕು ಎಂದು ಹೇಳಿದರು. ನನ್ನನ್ನು ಭೇಟಿ ಮಾಡಿದ ವ್ಯಕ್ತಿ ಆ ಸಮಯದಲ್ಲಿ ಎಡಿಎಂಕೆಯಲ್ಲಿದ್ದರು.

Prime Minister's vision for 2023 : ಈ ವರ್ಷ 1 ಲಕ್ಷ ಕೋಟಿ ರು. ಮೊಬೈಲ್‌ ರಫ್ತು ಗುರಿ: ರಾಜೀವ್ ಚಂದ್ರಶೇಖರ್

ನೀವು ಯಾವಾಗಲೂ ರಾಜೀನಾಮೆ ಪತ್ರವನ್ನು ಜೇಬಿನಲ್ಲೇ ಇಟ್ಟುಕೊಂಡಿರುತ್ತೀರಂತೆ. ಹೌದೆ?

ಇದಕ್ಕೆ ಕಾರಣ ಏನೆಂದರೆ ನಾನು ಮಾಡಿಲ್ಲದ ತಪ್ಪನ್ನು ನನ್ನ ಮೇಲೆ ಹಾಕದರೆ ನಾನು ಅದನ್ನು ಸಹಿಸುವುದಿಲ್ಲ. ಇಂತಹ ಸಮಯಲ್ಲಿ ಅಂತಹವರಿಂದಲೇ ದೂರವಾಗಲು ಬಯಸುತ್ತೇನೆ. ನನ್ನ ಕೆಲಸಗಳಿಂದ ನನ್ನ ಮೇಲಿರುವವರು ಸಂತೋಷಗೊಳ್ಳುತ್ತಿಲ್ಲ ಎಂದಾದರೆ, ಆ ಸ್ಥಾನವನ್ನು ಬಿಡುವುದು ಸೂಕ್ತ ಎಂಬುದು ನನ್ನ ಭಾವನೆ. ಹಾಗಾಗಿ ನಾನು ರಾಜೀನಾಮೆ ಪತ್ರ ಜೇಬಿನಲ್ಲಿಟ್ಟುಕೊಂಡಿರುತ್ತೇನೆ ಎಂದು ನನ್ನ ಸ್ನೇಹಿತರು ಯಾವಾಗಲೂ ಹೇಳುತ್ತಿರುತ್ತಾರೆ.

Follow Us:
Download App:
  • android
  • ios