Asianet Suvarna News Asianet Suvarna News

Prime Minister's vision for 2023 : ಈ ವರ್ಷ 1 ಲಕ್ಷ ಕೋಟಿ ರು. ಮೊಬೈಲ್‌ ರಫ್ತು ಗುರಿ: ರಾಜೀವ್ ಚಂದ್ರಶೇಖರ್

ಕಳೆದ ವರ್ಷ 45 ಸಾವಿರ ಕೋಟಿ ರು.ನಷ್ಟಿದ್ದ ದೇಶದ ಮೊಬೈಲ್‌ ಫೋನ್‌ ರಫ್ತು ಪ್ರಮಾಣವನ್ನು 2023ರಲ್ಲಿ 1 ಲಕ್ಷ ಕೋಟಿ ರು.ಗೆ ಹೆಚ್ಚಿಸುವ ಮತ್ತು ದೇಶದ ಟಾಪ್‌ 10 ರಫ್ತು ವಸ್ತುಗಳಲ್ಲಿ ಮೊಬೈಲ್‌ ಸ್ಥಾನ ಪಡೆಯುವಂತಾಗುವುದು ಪ್ರಧಾನಿ ನರೇಂದ್ರ ಮೋದಿ ಗುರಿ’ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌ ಹೇಳಿದ್ದಾರೆ.

1 lakh crore this year Mobile Export Target Rajeev Chandrasekhar rav
Author
First Published Jan 2, 2023, 7:43 AM IST

ನವದೆಹಲಿ (ಜ.2): ‘ಕಳೆದ ವರ್ಷ 45 ಸಾವಿರ ಕೋಟಿ ರು.ನಷ್ಟಿದ್ದ ದೇಶದ ಮೊಬೈಲ್‌ ಫೋನ್‌ ರಫ್ತು ಪ್ರಮಾಣವನ್ನು 2023ರಲ್ಲಿ 1 ಲಕ್ಷ ಕೋಟಿ ರು.ಗೆ ಹೆಚ್ಚಿಸುವ ಮತ್ತು ದೇಶದ ಟಾಪ್‌ 10 ರಫ್ತು ವಸ್ತುಗಳಲ್ಲಿ ಮೊಬೈಲ್‌ ಸ್ಥಾನ ಪಡೆಯುವಂತಾಗುವುದು ಪ್ರಧಾನಿ ನರೇಂದ್ರ ಮೋದಿ ಗುರಿ’ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌ ಹೇಳಿದ್ದಾರೆ.

ಈ ಕುರಿತು ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ‘ದೇಶದಲ್ಲಿ ಎಲೆಕ್ಟ್ರಾನಿಕ್ಸ್‌ ಉತ್ಪಾದನಾ ವಲಯ ಹೆಚ್ಚಿಸಲು ಅಗತ್ಯವಾದ ಎಲ್ಲಾ ಕ್ರಮಗಳನ್ನು ಸರ್ಕಾರ ಕೈಗೊಳ್ಳಲಿದೆ ಮತ್ತು 2023ರಲ್ಲಿ ನಾವು ನಮ್ಮ ಉತ್ಪಾದನಾ ವಲಯವನ್ನು ಮೊಬೈಲ್‌ನಿಂದಾಚೆಗೂ ವಿಸ್ತರಿಸಲು ಉದ್ದೇಶಿಸಿದ್ದೇವೆ’ ಎಂದು ಹೇಳಿದರು.

ಸುವರ್ಣ ಕಾಲಘಟ್ಟದಲ್ಲಿ ಭಾರತ, ಯುವ ಸಮೂಹದ ಜೊತೆ ರಾಜೀವ್ ಚಂದ್ರಶೇಖರ್ ಸಂವಾದ!

‘ಮೊಬೈಲ್‌ ಉತ್ಪಾದನಾ ವಲಯದಲ್ಲಿನ ನಮ್ಮ ಯಶಸ್ಸನ್ನು ನಾವು ಇನ್ನಷ್ಟುವಿಸ್ತರಣೆಗೊಳಿಸುವ ಮತ್ತು ಇಡೀ ವಲಯವನ್ನು ಇನ್ನಷ್ಟುಆಳವಾಗಿ ಬೇರೂರುವಂತೆ ಮಾಡಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಿದ್ದೇವೆ. ಸೆಮಿಕಂಡಕ್ಟರ್‌ ವಲಯವನ್ನು ಇನ್ನಷ್ಟುಬೆಳೆಸಲು ನಾವು ಕಾರ್ಯತಂತ್ರ ರೂಪಿಸಿದ್ದೇವೆ. ನಮ್ಮ ಬಿಡಿಭಾಗ ಉತ್ಪಾದನಾ ವಲಯವನ್ನು ವಿಸ್ತರಿಸುವ ಬಗ್ಗೆ ನಾವು ಖಚಿತ ನಿಲುವು ಹೊಂದಿದ್ದೇವೆ. ಮೊಬೈಲ್‌ ಫೋನ್‌ ವಲಯದಲ್ಲಿ ನಾವು ಇನ್ನಷ್ಟುಬೆಳವಣಿಗೆ ಹೊಂದುತ್ತಿರುವ ನಡುವೆಯೇ ಐಟಿ ಸರ್ವರ್‌, ಹಾರ್ಡ್‌ವೇರ್‌, ವಿಯರಬಲ್‌ (ಧರಿಸಬಹುದಾದ ಉಪಕರಣ) ಮತ್ತು ಹಿಯರಬಲ್‌ (ಶ್ರವಣ) ಉಪಕರಣಗಳ ವಲಯದಲ್ಲೂ ಉತ್ಪಾದನೆ ವಿಸ್ತರಣೆಯ ಉದ್ದೇಶ ಹೊಂದಿದ್ದೇವೆ’ ಎಂದರು.

‘ಎಲೆಕ್ಟ್ರಾನಿಕ್ಸ್‌ ಬಿಡಿಭಾಗಗಳ ಉತ್ಪಾದಕರ ಸಂಘಟನೆಯಾದ ‘ಇಎಲ್‌ಸಿಐಎನ್‌ಎ’ ಅನ್ವಯ 5.8 ಲಕ್ಷ ಕೋಟಿ ರು. ಮೌಲ್ಯದ ಎಲೆಕ್ಟ್ರಾನಿಕ್ಸ್‌ ಉದ್ಯಮದಲ್ಲಿ 2021ರಲ್ಲಿ ಎಲೆಕ್ಟ್ರಾನಿಕ್ಸ್‌ ಬಿಡಿಭಾಗಗಳ ಬೇಡಿಕೆ 2.65 ಲಕ್ಷ ಕೋಟಿ ರು.ನಷ್ಟಿತ್ತು. ಈ ಪೈಕಿ 82000 ಕೋಟಿ ರು.ಮೌಲ್ಯದ ಉತ್ಪನ್ನಗಳನ್ನು ಮಾತ್ರವೇ ಸ್ಥಳೀಯವಾಗಿ ಉತ್ಪಾದಿಸಲಾಗಿದೆ, ಅದು ಕೂಡಾ ಬಹುತೇಕ ಆಮದು ಮಾಡಿಕೊಂಡ ಕಚ್ಚಾವಸ್ತುಗಳನ್ನು ಬಳಸಿಕೊಂಡು ಉತ್ಪಾದಿಸಿದ್ದು’ ಎಂದರು.

BTS2022:ತಂತ್ರಜ್ಞಾನದ ಕ್ಷೇತ್ರದಲ್ಲಿ ಭಾರತದ ಪಾತ್ರದ ಬಗ್ಗೆ ಹೆಮ್ಮೆ ಪಡಬೇಕಿದೆ:ರಾಜೀವ್ ಚಂದ್ರಶೇಖರ್

ಮೊಬೈಲ್‌ ಉದ್ಯಮದಿಂದಾಚೆಗೆ ಉದ್ಯಮ ವಿಸ್ತರಣೆಗಾಗಿ ಜಾರಿ ಮಾಡಲಿರುವ ನಿರ್ದಿಷ್ಟಯೋಜನೆ ಕುರಿತು ರಾಜೀವ್‌ ವಿಸ್ತೃತ ಮಾಹಿತಿ ನೀಡಲಿಲ್ಲ. ಆದರೆ ‘ಧರಿಸಬಹುದಾದ ಮತ್ತು ಶ್ರವಣ ಸಾಧನಗಳ ಉಪಕರಣಗಳ ಉತ್ಪಾದನೆಯನ್ನು ಉತ್ಪಾದಕತೆ ಆಧರಿತ ಪ್ರೋತ್ಸಾಹಕ ಯೋಜನೆ (ಪಿಎಲ್‌ಐ) ವ್ಯಾಪ್ತಿಗೆ ತರುವ ಮೂಲಕ ಸ್ಥಳೀಯವಾಗಿಯೇ ಇಂಥ ವಸ್ತುಗಳ ಉತ್ಪಾದನೆ ಹೆಚ್ಚಿಸಲು ಸರ್ಕಾರ ಯೋಜಿಸಿದೆ’ ಎಂದು ಅಧಿಕೃತ ಮೂಲಗಳು ಹೇಳಿವೆ.

ಮೊಬೈಲ್‌ನಿಂದಾಚೆ ಉತ್ಪಾದನೆ ವಿಸ್ತರಣೆ

ದೇಶದಲ್ಲಿ ಎಲೆಕ್ಟ್ರಾನಿಕ್ಸ್‌ ಉತ್ಪಾದನಾ ವಲಯವನ್ನು ಬಲಪಡಿಸಲು ಅಗತ್ಯವಾದ ಎಲ್ಲಾ ಕ್ರಮಗಳನ್ನು ಸರ್ಕಾರ ಕೈಗೊಳ್ಳಲಿದೆ. 2023ರಲ್ಲಿ ನಮ್ಮ ಉತ್ಪಾದನಾ ವಲಯವನ್ನು ಮೊಬೈಲ್‌ನಿಂದಾಚೆಗೂ ವಿಸ್ತರಿಸಲು ಉದ್ದೇಶಿಸಿದ್ದೇವೆ.

- ರಾಜೀವ್‌ ಚಂದ್ರಶೇಖರ್‌ ಕೇಂದ್ರ ಎಲೆಕ್ಟ್ರಾನಿಕ್ಸ್‌ ಮತ್ತು ಐಟಿ ಖಾತೆ ಸಚಿವ

Follow Us:
Download App:
  • android
  • ios