ನಾನು ಏಕಲವ್ಯ, ರಜನಿಕಾಂತ್ ದ್ರೋಣಾಚಾರ್ಯ: ಯೋಗಿಯಂತಹ ವ್ಯಕ್ತಿ ಜತೆ ನಟಿಸೋ ಭಾಗ್ಯ ಸಿಕ್ಕಿದೆ ಎಂದ ಉಪೇಂದ್ರ
ಲೋಕೇಶ್ ಕನಗರಾಜ್ ನಿರ್ದೇಶನದ, ರಜನಿಕಾಂತ್ ನಟನೆಯ ಬಹುನಿರೀಕ್ಷಿತ ಕೂಲಿ ಚಿತ್ರದಲ್ಲಿ ಉಪೇಂದ್ರ ನಟಿಸುತ್ತಿದ್ದಾರೆ. ಆ ಖುಷಿಯಲ್ಲಿರುವ ಉಪೇಂದ್ರ ಜೊತೆ ಮಾತುಕತೆ.
ಆರ್. ಕೇಶವಮೂರ್ತಿ
• ಬ್ಯುಸಿಯಾಗಿದ್ದರೂ ಮತ್ತೊಂದು ದೊಡ್ಡ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದೀರಲ್ಲಾ?
ರಜನಿಕಾಂತ್ ಸಿನಿಮಾದಲ್ಲಿ ನಟಿಸುವ ಅವಕಾಶ ಎಂದಾಗ ಮಿಸ್ ಮಾಡಿಕೊಳ್ಳಕ್ಕಾಗಲ್ಲ. ತುಂಬಾ ಎಕ್ಸೆಟ್‌ಮೆಂಟ್‌ನಿಂದ ಒಪ್ಪಿಕೊಂಡಿದ್ದೇನೆ. ಅವರ ಜತೆಗೆ ಸ್ಟೀನ್ ಶೇರ್ ಮಾಡಿಕೊಳ್ಳುವ ಅವಕಾಶ ಸಿಗುತ್ತಿದೆ ಎಂಬುದೇ ನಾನು ಈ ಚಿತ್ರದಲ್ಲಿ ನಟಿಸಲು ಮೊದಲ ಕಾರಣ.
• 'ಕೂಲಿ' ಚಿತ್ರದ ಆಫರ್ ಬಂದಾಗ ಏನನಿಸಿತು?
ಯೋಗಿಯಂತಹ ವ್ಯಕ್ತಿ ಜತೆಗೆ ನಟಿಸುವ ಅವಕಾಶ ಬಂದಿದೆ. ರಜನಿಕಾಂತ್ ಅವರ ನಡೆ, ನುಡಿ, ಅವರ ಒಳ್ಳೆಯತನ ನೋಡಿದರೆ ಅವರನ್ನು ಯೋಗಿ ಅಂತಲೇ ಕರೆಯಬೇಕು ಅನಿಸುತ್ತದೆ. ಅಂಥವರ ಜತೆಗೆ ತೆರೆ ಹಂಚಿಕೊಳ್ಳುವ ಅವಕಾಶ ಸಿಕ್ಕಿರುವುದು ನನ್ನ ಭಾಗ್ಯ.
UI ಸೌಂಡ್ ಟ್ರ್ಯಾಕ್‌ನಲ್ಲೂ ತಲೆಗೆ ಹುಳ ಬಿಟ್ಟ 'ಬುದ್ಧಿವಂತ': ಹೇಗಿದೆ ಉಪೇಂದ್ರ ಮೂವಿ ಹವಾ!
• ನಿಮ್ಮ ಪಾತ್ರ ಏನು?
ತುಂಬಾ ಮಹತ್ವದ ರೋಲ್ ಮಾಡುತ್ತಿದ್ದೇನೆ. ಅಕ್ಟೋಬರ್‌ನಿಂದ ನನ್ನ ಪಾತ್ರದ ಚಿತ್ರೀಕರಣ ನಡೆಯಲಿದೆ. ಆ ಹೊತ್ತಿಗೆ ನನ್ನ ನಿರ್ದೇಶನ, ನಟನೆಯ 'ಯು' ಚಿತ್ರ ಬಿಡುಗಡೆ ಆಗಿರುತ್ತದೆ.
• ರಜನಿಕಾಂತ್ ಅವರ ಬಗ್ಗೆ ನಿಮ್ಮ ಅಭಿಪ್ರಾಯ?
ನಾನು ಏಕಲವ್ಯ, ರಜನಿಕಾಂತ್ ಅವರು ದ್ರೋಣಾಚಾರ್ಯ. ಅವರನ್ನು ನೋಡಿ ಕಲಿತಿರುವ ಮತ್ತು ಕಲಿಯುತ್ತಿರುವವರಲ್ಲಿ ನಾನೂ ಒಬ್ಬ. ರಿಷಬ್ ಶೆಟ್ಟಿ ಆಗಾಗ ಹೇಳುತ್ತಿರುತ್ತಾರಲ್ಲ, 'ಉಪೇಂದ್ರ ಅವರು ನನಗೆ ಗುರು' ಅಂತ. ಹಾಗೆ ನನಗೂ ಒಬ್ಬರು ಗುರು, ಸ್ಫೂರ್ತಿ ಇದ್ದಾರೆ ಅಂದರೆ ಅದು ರಜನಿಕಾಂತ್ ಅವರು. ಅವರು ನನ್ನ 'ಸೂಪರ್' ಚಿತ್ರ ನೋಡಲು ಬೆಂಗಳೂರಿಗೆ ಬಂದಿದ್ದರು. ನಾನು ಎಲ್ಲೇ ಸಿಕ್ಕರೂ ತುಂಬಾ ಚೆನ್ನಾಗಿ ಮಾತನಾಡಿಸುತ್ತಾರೆ. ನನಗೆ ಅವರ ಎಲ್ಲಾ ಚಿತ್ರಗಳು ಇಷ್ಟ. ಅದರಲ್ಲೂ 'ಶಿವಾಜಿ', 'ರೋಬೋ', 'ಅಣ್ಣಾಮಲೈ' ಚಿತ್ರಗಳಲ್ಲಿ ಅವರು ಮಾಡಿದ ಪಾತ್ರಗಳು ತುಂಬಾ ಇಷ್ಟ.
• ನಿಮ್ಮ 'UI' ಬಗ್ಗೆ ಹೇಳಿ?
ಚಿತ್ರೀಕರಣ ಮುಗಿದಿದೆ. ಪೋಸ್ಟ್ ಪ್ರೊಡಕ್ಷನ್ ಕೂಡ ಅಂತಿಮ ಹಂತದಲ್ಲಿದೆ. ಅಕ್ಟೋಬರ್‌ನಲ್ಲಿ ತೆರೆಗೆ ಬರಲಿದೆ. ನನ್ನ ಚಿತ್ರ ನೋಡಿ ಜನ ಏನು ಹೇಳುತ್ತಾರೋ ಎನ್ನುವ ಕುತೂಹಲದಲ್ಲಿ ಕಾಯುತ್ತಿದ್ದೇನೆ.
ಹೆದರಿಸೋರು ಇರುತ್ತಾರೆ ಹೆದರಬಾರದು: ಯಶ್ ಮಾತುಗಳನ್ನ ನೆನಪಿಸಿಕೊಂಡ ಸಪ್ತಮಿ ಗೌಡ
• ರಜನಿಕಾಂತ್ ಅವರಿಂದ ನೀವು ಏನು ಕಲಿಯುತ್ತೀರಿ?
ಅವರು ಅಲ್ಲಲ್ಲಿ ಮಾತನಾಡುವಾಗ ಕೆಲವು ಕತೆಗಳನ್ನು ಹೇಳುತ್ತಾರೆ. ಅದು ಬರೆದಿಟ್ಟುಕೊಳ್ಳಬೇಕಾದ ಸತ್ಯಗಳು. ತುಂಬಾ ಪಾಸಿಟಿವ್ ಕತೆಗಳು, ಸ್ಫೂರ್ತಿ ತುಂಬುತ್ತವೆ. ಅಂಥಾ ಕತೆಗಳು ನಮ್ಮ ಕಲಿಕೆಯ ಪಾಠಗಳು. ಅವರು ಹೇಳಿದ ಒಂದು ಕತೆ ಇದು ಒಂದು ಬೆಟ್ಟದ ಬುಡದಲ್ಲಿ ನೂರಾರು ಕಪ್ಪೆಗಳನ್ನು ರೇಸಿಗೆ ಬಿಟ್ಟಿದ್ದರಂತೆ. ಕಪ್ಪೆಗಳ ರೇಸು ಶುರುವಾದ ಕೂಡಲೇ ಸುತ್ತ ನಿಂತಿದ್ದ ಜನ ಆ ಕಡೆ ಕಲ್ಲು, ಮುಳ್ಳು, ಈ ಕಡೆ ಬೆಂಕಿ ಇದೆ. ಹೋಗಬೇಡಿ ಬಿದ್ದು ಹೋಗುತ್ತೀರಿ' ಎಂದು ಕೂಗುತ್ತಿರುತ್ತಾರೆ. ಜನರ ಈ ಕಿರುಚಾಟದಿಂದ ಕಪ್ಪೆಗಳು ಬೆಟ್ಟ ಹತ್ತಲು ಆಗದೆ ಭಯಕ್ಕೆ ಬಿದ್ದು ಹೋಗುತ್ತಿದ್ದವು. ಆದರೆ, ಒಂದೇ ಒಂದು ಕಪ್ಪೆ ಮಾತ್ರ ಯಾರ ಮಾತಿಗೂ ಕಿವಿ ಕೊಡದೆ ರೇಸಿನಲ್ಲಿ ಓಡಿ ಬೆಟ್ಟದ ತುದಿಗೆ ಹೋಗಿ ನಿಂತುಕೊಂಡಿತಂತೆ. ಯಾಕೆ ಅದು ಜನರ ಮಾತು ಕೇಳಲಿಲ್ಲ ಅಂದರೆ ಅದಕ್ಕೆ ಕಿವಿ ಕೇಳಿಸಲ್ಲ, ಆ ಕಿವಿ ಕೇಳಿಸದೆ ಬೆಟ್ಟ ಹತ್ತಿ ಗೆದ್ದ ಕಪ್ಪೆಯೇ ನಾನು ಎನ್ನುತ್ತಾರೆ ರಜನಿಕಾಂತ್. ಈ ಕತೆಯಲ್ಲಿ ಎಷ್ಟು ಅರ್ಥ, ಸ್ಫೂರ್ತಿ ಇದೆ ನೋಡಿ! ರಜನಿಕಾಂತ್ ಅವರ ಇಂಥ ಮಾತುಗಳಿಂದ ಕಲಿಯೋದು ತುಂಬಾ ಇದೆ.