ಮಂಡ್ಯ ಹಳ್ಳಿಗಾಡಿನ ಕತೆಯ ಮಾಸ್ ಸಿನಿಮಾ: ನಿರಂಜನ್ ಸುಧೀಂದ್ರ
ಉಪೇಂದ್ರ ಕುಟುಂಬದ ಕುಡಿ ನಿರಂಜನ್ ಸುಧೀಂದ್ರ ಮೊದಲ ಸಿನಿಮಾ ಬಿಡುಗಡೆ ಸಂಭ್ರಮದಲ್ಲಿದ್ದಾರೆ. ಹೆಚ್ ಬಿ ಸಿದ್ದು ನಿರ್ದೇಶನದ ಈ ಸಿನಿಮಾ ಇಂದು (ಜು.8) ತೆರೆಗೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ನಿರಂಜನ್ ಇಲ್ಲಿ ಮಾತನಾಡಿದ್ದಾರೆ.
ಆರ್ ಕೇಶವಮೂರ್ತಿ
ಮೊದಲ ಸಿನಿಮಾ ಬಿಡುಗಡೆಯ ಸಂಭ್ರಮ ಹೇಗಿದೆ?
ತುಂಬಾ ಸೈಲೆಂಟ್ ಆಗಿದ್ದೇನೆ. ಯೋಚನೆ ಜಾಸ್ತಿ ಮಾಡಿದಷ್ಟುನರ್ವಸ್ ಆಗುತ್ತದೆ. ಆದರೆ, ನಾನು ಮಾಡಿರುವ ಪಾತ್ರದ ಮೇಲೆ ನನಗೆ ವಿಶ್ವಾಸ ಇದೆ. ಜನ ನನ್ನ ಪಾತ್ರ ಮತ್ತು ಕತೆಗೆ ಕನೆಕ್ಟ್ ಆಗುತ್ತಾರೆಂಬ ನಂಬಿಕೆಯಂತೂ ಇದೆ.
ನಮ್ಮ ಹುಡುಗರು ಚಿತ್ರದಲ್ಲಿ ಅಂಥ ಕತೆ ಏನಿದೆ?
ಮಂಡ್ಯದ ನಾಲ್ಕು ಜನ ಸ್ನೇಹಿತರ ನಡುವೆ ನಡೆಯುವ ಕತೆ. ನಿರ್ದೇಶಕ ಹೆಚ್ ಬಿ ಸಿದ್ದು ತುಂಬಾ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ತುಂಬಾ ಚೆನ್ನಾಗಿರುವ ಸ್ನೇಹಿತರ ಮಧ್ಯೆ ಬಿರುಕು, ಅನುಮಾನ, ತಪ್ಪು ಕಲ್ಪನೆಗಳು ಬಂದರೆ ಏನಾಗುತ್ತದೆ ಎಂಬುದನ್ನು ಆಪ್ತವಾಗಿಯೇ ಹೇಳಿದ್ದಾರೆ.
ಉಪ್ಪಿ ಅಣ್ಣನ ಮಗನ ಚಿತ್ರ ರಿಲೀಸ್‌ಗೆ ರೆಡಿ; ಅದ್ದೂರಿ ಸೆಟ್ ನಲ್ಲಿ ಬ್ರಹ್ಮರಾಕ್ಷಸ ಸಾಂಗ್ ಶೂಟ್
ಚಿತ್ರದ ಹೈಲೈಟ್ಸ್‌ಗಳೇನು?
ಫ್ಯಾಮಿಲಿ ಸೆಂಟಿಮೆಂಟ್, ಪ್ರೀತಿ ಮತ್ತು ಕಾಮಿಡಿ. ಇದನ್ನು ಸ್ನೇಹಿತರ ಮೂಲಕ ಹೇಳಿದ್ದಾರೆ.
ಈ ಸಿನಿಮಾ ಒಪ್ಪುವುದಕ್ಕೆ ಇದ್ದ ಮಹತ್ವ ಕಾರಣ ಏನು?
ಕಂಟೆಂಟ್ ನೋಡಿ ನಾನು ಸಿನಿಮಾ ಒಪ್ಪಿಕೊಂಡೆ. ಕತೆಯ ಹೊರತಾಗಿ ಆ್ಯಕ್ಷನ್, ನಾಯಕನ ವೈಭವೀಕರಣ ಇಲ್ಲ. ತುಂಬಾ ಸಾಫ್‌್ಟಆಗಿಯೇ ಇಡೀ ಪಾತ್ರ ಸಾಗುತ್ತದೆ.
ಮೊದಲ ಚಿತ್ರಕ್ಕೆ ಯಾಕೆ ಈ ರೀತಿಯ ಪಾತ್ರ ಬೇಕು ಅನಿಸಿದ್ದು?
ನಾಲ್ಕುವರೆ ವರ್ಷಗಳ ಹಿಂದೆ ಶುರುವಾದ ಸಿನಿಮಾ. ನನ್ನ ನಿಜ ಜೀವನಕ್ಕೂ ಹತ್ತಿರವಾಗುವಂತಹ ಮುಗ್ಧ ಮತ್ತು ಒಳ್ಳೆಯ ಹುಡುಗನ ಪಾತ್ರ ಬೇಕಿತ್ತು.
Niranjan Sudhindra ಈಗ 'ಹಂಟರ್': ಶುಭ ಹರಸಿದ ಪ್ರಿಯಾಂಕ, ಉಪೇಂದ್ರ
ನಿಮ್ಮ ಕುಟುಂಬದವರು ಸಿನಿಮಾ ನೋಡಿದ್ದಾರೆಯೇ?
ಫ್ಯಾಮಿಲಿ, ಸ್ನೇಹಿತರು ಕೂಡ ಚಿತ್ರ ನೋಡಿ ಮೆಚ್ಚಿಕೊಂಡಿದ್ದಾರೆ. ಸಲಹೆ ಹೇಳಿದ್ದಾರೆ.
ಉಪೇಂದ್ರ ಸಿನಿಮಾ ನೋಡುವಾಗ ಹೇಗಿತ್ತು?
ಚಿಕ್ಕಪ್ಪ ಅವರ ಸ್ನೇಹಿತರ ಜತೆಗೆ ಬಂದಿದ್ದರು. ನಾನು ನನ್ನ ಸ್ನೇಹಿತರ ಜತೆಗೆ ಸಿನಿಮಾ ನೋಡಿದೆ. ಒಂದು ರೀತಿಯಲ್ಲಿ ಒಟ್ಟಿಗೆ ಎರಡು ಜನರೇಷನ್ ಕೂತು ಸಿನಿಮಾ ನೋಡಿದ ಕ್ಷಣ ಮರೆಯಕ್ಕೆ ಆಗಲ್ಲ.
ವಸಿಷ್ಠ ಸಿಂಹ ಪಾತ್ರ ಏನು?
ಅದು ಕತೆಯಲ್ಲಿ ಬರುವ ಸಪ್ರೈರ್‍ಸ್ ಪಾತ್ರ. ಆ ಬಗ್ಗೆ ನಾನು ಹೇಳಲ್ಲ. ನೀವು ತೆರೆ ಮೇಲೆ ನೋಡಬೇಕು. ಆದರೆ, ಅವರು ಬಂದ ಮೇಲೆ ನಮ್ಮ ಚಿತ್ರಕ್ಕೆ ಒಂದು ತಿರುವು ಸಿಗುತ್ತದೆ.