ಸದ್ಯ ಸ್ಯಾಂಡಲ್‌ವುಡ್‌ನ ಬ್ಯುಸಿ ನವತಾರೆಗಳ ಪಟ್ಟಿಮಾಡಿದರೆ ಅದರಲ್ಲಿ ಮೊದಲ ಹೆಸರು ನಿರಂಜನ್‌ ಸುಧೀಂದ್ರ. ನಮ್‌ ಹುಡುಗ್ರು, ಸೂಪರ್‌ಸ್ಟಾರ್‌, ಹಂಟರ್‌ ಹಾಗೂ ಕ್ಯೂ ಚಿತ್ರಗಳು ನಿರಂಜನ್‌ ಕೈಯಲ್ಲಿವೆ. ಇನ್ನೂ ಯಾವ ಚಿತ್ರವೂ ತೆರೆಕಂಡಿಲ್ಲ. ಈಗ ಹಂಟರ್‌ ಚಿತ್ರದ ಫಸ್ಟ್‌ಲುಕ್‌ ಟೀಸರ್‌ ಬಿಡುಗಡೆ ಜತೆಗೆ ಚಿತ್ರಕ್ಕೆ ಮುಹೂರ್ತ ಸಮಾರಂಭ ನಡೆದಿದೆ.

ಸದ್ಯ ಸ್ಯಾಂಡಲ್‌ವುಡ್‌ನ (Sandalwood) ಬ್ಯುಸಿ ನವತಾರೆಗಳ ಪಟ್ಟಿಮಾಡಿದರೆ ಅದರಲ್ಲಿ ಮೊದಲ ಹೆಸರು ನಿರಂಜನ್‌ ಸುಧೀಂದ್ರ (Niranjan Sudhindra). ನಮ್‌ ಹುಡುಗ್ರು, ಸೂಪರ್‌ಸ್ಟಾರ್‌, ಹಂಟರ್‌ ಹಾಗೂ ಕ್ಯೂ ಚಿತ್ರಗಳು ನಿರಂಜನ್‌ ಕೈಯಲ್ಲಿವೆ. ಇನ್ನೂ ಯಾವ ಚಿತ್ರವೂ ತೆರೆಕಂಡಿಲ್ಲ. ಈಗ 'ಹಂಟರ್‌' (Hunter) ಚಿತ್ರದ ಫಸ್ಟ್‌ಲುಕ್‌ ಟೀಸರ್‌ (Firstlook Teaser) ಬಿಡುಗಡೆ ಜತೆಗೆ ಚಿತ್ರಕ್ಕೆ ಮುಹೂರ್ತ ಸಮಾರಂಭ ನಡೆದಿದೆ. ಉಪೇಂದ್ರ (Upendra) ಹಾಗೂ ಪ್ರಿಯಾಂಕ ಉಪೇಂದ್ರ (Priyanka Upendra) ದಂಪತಿ ಆಗಮಿಸಿ ಚಿತ್ರದ ಫಸ್ಟ್‌ ಲುಕ್‌ ಟೀಸರ್‌ ಬಿಡುಗಡೆ ಮಾಡಿದರು. ವಿನಯ್‌ ಕೃಷ್ಣ (Vinay Krishna) ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಮಲಯಾಳಿ ಬೆಡಗಿ ಸೌಮ್ಯ ಮೆನನ್‌ (Sowmya Menon) ಚಿತ್ರದ ನಾಯಕಿ.

ಕಾರ್ಯಕ್ರಮದಲ್ಲಿ ಮಾತನಾಡಿದ ಉಪೇಂದ್ರ, ‘ನಮ್ಮ ಕುಟುಂಬದ ಲಕ್ಕಿ ಕಿಡ್‌ ನಿರಂಜನ್‌. ಪ್ರತಿ ಚಿತ್ರಕ್ಕೂ ಹೊಸ ಹೊಸ ರೀತಿಯಲ್ಲಿ ಪ್ರಯತ್ನಿಸುತ್ತಿದ್ದಾನೆ. ಆತನಿಗಾಗಿ ಕತೆಗಳು ಹುಟ್ಟಿಕೊಳ್ಳುತ್ತಿವೆ. ಆತನಿಗೆ ಸಿನಿಮಾ ಮಾಡುವವರ ಉತ್ಸಾಹ ನೋಡಿದರೆ ಖುಷಿ ಆಗುತ್ತದೆ. ನಿರಂಜನ್‌ಗೆ ಒಳ್ಳೆಯದಾಗಲಿ’ ಎಂದರು. ‘ನಾನು ನಾಯಕನಾಗಿ ನಟಿಸಿರುವ ಯಾವುದೇ ಚಿತ್ರ ತೆರೆಕಂಡಿಲ್ಲ. ಆದರೂ ನನ್ನ ಮೇಲೆ ನಂಬಿಕೆ ಇಟ್ಟು ಅವಕಾಶ ನೀಡುತ್ತಿರುವ ಈ ತಂಡ ಸೇರಿದಂತೆ ಪ್ರತಿಯೊಬ್ಬರಿಗೂ ಧನ್ಯವಾದ’ ಹಾಗೂ ಚಿತ್ರದ ಟೈಟಲ್‌ (Title) ಹೇಳುವಂತೆ ಖಳನಟರನ್ನು ಬೇಟೆಯಾಡುವ ಬೇಟೆಗಾರನ ಕಥೆ ಇದು. ಕಾಲೇಜು ಸ್ವಲ್ಪ ಬಂದು ಹೋಗುತ್ತದೆ ಎಂದರು ನಿರಂಜನ್‌ ಸುಧೀಂದ್ರ.

Q Movie: ನಿರಂಜನ್‌ ಸುಧೀಂದ್ರ ನಟನೆಯ ಪ್ಯಾನ್‌ ಇಂಡಿಯಾ ಚಿತ್ರಕ್ಕೆ ನಾಗಶೇಖರ್‌ ಆಕ್ಷನ್ ಕಟ್!

‘ಈಗಾಗಲೇ ಐದಾರು ಕಥೆ ಕೇಳಿದ್ದೇನೆ. ಅವುಗಳಲ್ಲಿ ಬೆಸ್ಟ್‌ ಎನಿಸಿದ ಎರಡು ಸಿನಿಮಾಗಳು ಈಗ ಅನೌನ್ಸ್‌ ಆಗಿವೆ. ಕಥೆ ಮತ್ತು ಒಳ್ಳೆ ತಂಡವನ್ನು ನಾನು ನಿರೀಕ್ಷೆ ಮಾಡುತ್ತೇನೆ. ಚಿಕ್ಕಪ್ಪ (ಉಪೇಂದ್ರ) ನನ್ನ ಸಿನಿಮಾದ ಕಥೆಯ ಒನ್‌ಲೈನ್‌ ಕೇಳಿ ಚೆನ್ನಾಗಿದ್ದರೆ ಮಾಡು ಎಂದು ಸಲಹೆ ನೀಡುತ್ತಾರೆ. ಜತೆಗೆ ನಾಲ್ಕೈದು ಸಿನಿಮಾಗಳನ್ನು ಬೇರೆ ಬೇರೆ ಜಾನರ್‌ಗಳಲ್ಲಿ ಮಾಡಿ ಪ್ರಯೋಗ ಮಾಡು. ಆಗ ಜನರಿಗೂ ಈತ ಒಬ್ಬ ವರ್ಸಟೈಲ್‌ ನಟ ಎಂಬುದು ತಿಳಿಯುತ್ತದೆ, ಆಗ ನಿನ್ನನ್ನು ಅವರು ಒಪ್ಪಿಕೊಳ್ಳುತ್ತಾರೆ ಎಂದು ಚಿಕ್ಕಪ್ಪ ಹೇಳಿದ್ದಾರೆ. ಮಾತ್ರವಲ್ಲದೇ ಈ ಚಿತ್ರ ಆ್ಯಕ್ಷನ್‌ ಥ್ರಿಲ್ಲರ್‌ ಸಿನಿಮಾವಾಗಿದ್ದು, ಇದು ಹೆಚ್ಚಾಗಿ ಪೊಲೀಸ್‌ ಠಾಣೆಯಲ್ಲಿ ನಡೆಯುವ ಕಥೆ. ನಾಲ್ಕೈದು ಖಡಕ್‌ ವಿಲನ್‌ಗಳು ಈ ಸಿನಿಮಾದಲ್ಲಿರುತ್ತಾರೆ ಎಂದು ನಿರಂಜನ್‌ ಸುಧೀಂದ್ರ ತಿಳಿಸಿದ್ದಾರೆ.



‘ಇದು ನನ್ನ ಎರಡನೇ ಸಿನಿಮಾ. ಮೊದಲ ಚಿತ್ರ ನಿರ್ಮಿಸಿದವರೇ ಎರಡನೇ ಚಿತ್ರ ನಿರ್ಮಿಸುತ್ತಿರುವುದು ನನ್ನ ಪುಣ್ಯ. ಕಳೆದ ಆರು ತಿಂಗಳಿಂದ ಈ ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ಪ್ರೇಕ್ಷಕರನ್ನು ಕುರ್ಚಿಯ ತುದಿಯಲ್ಲಿ ಕೂರುವಂತೆ ಮಾಡುತ್ತದೆ’ ಎಂದರು ಚಿತ್ರದ ನಿರ್ದೇಶಕ ವಿನಯ್‌ ಕೃಷ್ಣ. 'ತ್ರಿವಿಕ್ರಮ್‌ ಪ್ರೊಡಕ್ಷನ್ಸ್‌' ಬ್ಯಾನರ್‌ನಲ್ಲಿ ನಿರ್ಮಾಪಕ ತ್ರಿವಿಕ್ರಮ್‌ ಸಾಫ‌ಲ್ಯ 'ಹಂಟರ್‌' ಚಿತ್ರವನ್ನು ನಿರ್ಮಿಸುತ್ತಿದ್ದು, ಪ್ರಕಾಶ್‌ ರೈ, ನಾಜರ್‌, ಸುಮನ್‌, ಸಾಧುಲೋಕಿಲ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ . ಚಂದನ್‌ ಶೆಟ್ಟಿ ಸಂಗೀತ ಸಂಯೋಜನೆ, ಮಹೇಶ್‌ ಛಾಯಾಗ್ರಹಣ ಚಿತ್ರಕ್ಕಿದೆ.

ಚಿತ್ರರಂಗದಲ್ಲಿ ನೆಲೆ ನಿಲ್ಲಲು ಬ್ಯಾಕ್‌ಗ್ರೌಂಡ್‌ ಇದ್ದರೆ ಸಾಲದು: ನಿರಂಜನ್‌ ಸುಧೀಂದ್ರ

ಇನ್ನು ನಿರಂಜನ್‌ ಸುಧೀಂದ್ರ (Niranjan Sudhindra) ‘ಕ್ಯೂ’ (Q) ಎಂಬ ಪ್ಯಾನ್‌ ಇಂಡಿಯಾ (Pan India) ಸಿನಿಮಾದಲ್ಲಿ ನಟಿಸುತ್ತಿದ್ದು, ಇತ್ತೀಚೆಗಷ್ಟೇ ಚಿತ್ರದ ಫಸ್ಟ್‌ ಲುಕ್‌ (Firstlook) ಹಾಗೂ ಮೇಕಿಂಗ್‌ ವಿಡಿಯೋ (Making Video) ಬಿಡುಗಡೆ ಮಾಡಲಾಗಿದೆ. ನಟಿ ಭಾಗ್ಯಶ್ರೀ (Bhagyashree) ಪುತ್ರಿ ಅವಂತಿಕ ದಸ್ಸಾನಿ (Avantika Dasani) ಈ ಚಿತ್ರದ ಮೂಲಕ ನಾಯಕಿಯಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಖ್ಯಾತ ನಿರ್ದೇಶಕ ನಾಗಶೇಖರ್‌ (Nagashekar) ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ವಿಜಯ್ ಸವಣೂರು ನಿರ್ಮಾಣ ಸಂಸ್ಥೆಯ ಸಹಕಾರದೊಂದಿಗೆ ನಾಗಶೇಖರ್‌ ಅವರೇ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ತೆಲುಗು ನಟ ಸತ್ಯದೇವ ಚಿತ್ರದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.