Asianet Suvarna News Asianet Suvarna News

ವಿಶ್ವದ ದುಬಾರಿ 'ಎಣ್ಣೆ' ಇದು: ಇದರ ಬೆಲೆಗೆ ದೊಡ್ಡ ಬಂಗ್ಲೇನೆ ಕಟ್ಬಹುದು..!

ಮದ್ಯ ಪ್ರಿಯರೆನಿಸಿದ ಬಹುತೇಕರು ವೋಡ್ಕಾ ಹೆಸರು ಪಕ್ಕಾ ಕೇಳಿರುತ್ತಾರೆ. ಕೆಲವರ ಅಚ್ಚುಮೆಚ್ಚಿನ ಬ್ರಾಂಡ್ ಕೂಡ ಇದು. ಇದೇ ಬ್ರಾಂಡ್‌ನಲ್ಲಿ ಹಲವರು ವೆರೈಟಿಗಳಿದ್ದು, ಒಂದೊಂದರ ಬೆಲೆ ಒಂದೊಂದು ರೀತಿ ಇರುತ್ತದೆ. ಅದೇ ರೀತಿ ವೋಡ್ಕಾ ಬ್ರಾಂಡ್‌ನ ಬಿಲಿಯನೇರ್ ವೋಡ್ಕಾ ಎಂಬ ಬ್ರಾಂಡ್‌ ಬೆಲೆ ಕೇಳಿದ್ರೆ ತಲೆ ತಿರುಗಿ ಬೀಳೋದಂತು ಪಕ್ಕಾ.

This is the world's most expensive vodka in its price you can buy a big bungalow akb
Author
First Published Jun 29, 2023, 8:00 PM IST

ನೀವು ಎಣ್ಣೆ ಪ್ರಿಯರಾ? ಎಷ್ಟು ಮೌಲ್ಯದ ಮದ್ಯವನ್ನು ಇದುವರೆಗೆ ಕುಡಿದಿದ್ದೀರಿ? ಒಂದು ಸಲಕ್ಕೆ ಒಂದು ಸಾವಿರ ಅಷ್ಟೇ? ಆದ್ರೆ ಇದುವರೆಗೆ ಎಣ್ಣೆಗೆ ವೆಚ್ಚ ಮಾಡಿದ ಹಣ ಎಲ್ಲಾ ಸೇರಿಸಿದ್ರೆ ಮನೆ ಕಟ್ಬಹುದು ಆಸ್ತಿ ಖರೀದಿಸ್ಬಹುದಿತ್ತು ಅಂತ ಹೇಳ್ಬಹುದೇನೋ, ಲೋಕಲ್ ಆಗಿ ಕಡಿಮೆ ಹಣಕ್ಕೆ ಸಿಗುವ ಕೈಗೆಟುವ  ಮದ್ಯ ಸಾಮಾನ್ಯವಾಗಿ ಬಹುತೇಕ ಜನರ ಅಚ್ಚುಮೆಚ್ಚು, ಇದರ ಜೊತೆ ಸೈನಿಕರಿಗೆ, ಮಾಜಿ ಯೋಧರಿಗೆ ಸೇನಾ ಕ್ಯಾಂಟೀನ್‌ಗಳಲ್ಲಿ ದುಬಾರಿ ಮೌಲ್ಯದ ಒಳ್ಳೆ ಬ್ರಾಂಡ್‌ನ ವಿದೇಶಿ ಮದ್ಯ ಕಡಿಮೆ ದರಕ್ಕೆ ಸಿಗುತ್ತದೆ. ಆದರೆ ಜಸ್ಟ್ ಒಂದು ಪೆಗ್‌ಗೆ ಕೋಟ್ಯಾಂತರ ರೂಪಾಯಿ ಬೆಲೆ ಇರುವ ಮದ್ಯವೂ ಚಾಲ್ತಿಯಲ್ಲಿದೆ ಎಂಬುದು ನಿಮಗೆ ಗೊತ್ತಾ? 

ಮದ್ಯ ಪ್ರಿಯರೆನಿಸಿದ ಬಹುತೇಕರು ವೋಡ್ಕಾ ಹೆಸರು ಪಕ್ಕಾ ಕೇಳಿರುತ್ತಾರೆ. ಕೆಲವರ ಅಚ್ಚುಮೆಚ್ಚಿನ ಬ್ರಾಂಡ್ ಕೂಡ ಇದು. ಇದೇ ಬ್ರಾಂಡ್‌ನಲ್ಲಿ ಹಲವರು ವೆರೈಟಿಗಳಿದ್ದು, ಒಂದೊಂದರ ಬೆಲೆ ಒಂದೊಂದು ರೀತಿ ಇರುತ್ತದೆ. ಅದೇ ರೀತಿ ವೋಡ್ಕಾ ಬ್ರಾಂಡ್‌ನ ಬಿಲಿಯನೇರ್ ವೋಡ್ಕಾ ಎಂಬ ಬ್ರಾಂಡ್‌ ಬೆಲೆ ಕೇಳಿದ್ರೆ ತಲೆ ತಿರುಗಿ ಬೀಳೋದಂತು ಪಕ್ಕಾ. ಇದರ ಬೆಲೆ ಬಿಲಿಯನೇರ್ ಬ್ರಾಂಡ್ ಎಂಬ ಹೆಸರಿಗೆ ತಕ್ಕಂತೆ 30 ಕೋಟಿ..!

ಹೊಸ ಬ್ಯುಸಿನೆಸ್ ಆರಂಭಿಸಿದ ಆರ್ಯನ್ ಖಾನ್; ಐಷಾರಾಮಿ ವೋಡ್ಕಾ ಬ್ರಾಂಡ್ ಲಾಂಚ್ ಮಾಡಿದ ಶಾರುಖ್ ಪುತ್ರ

ಲಿಯಾನ್ ವೆರೆಸ್ (Leon Verres) ಅವರ ಶ್ರೇಷ್ಠವಾದ ಸೃಷ್ಟಿಯಾದ ಈ, ಬಿಲಿಯನೇರ್ ವೋಡ್ಕಾ, ಪ್ರಪಂಚದಲ್ಲೇ ಖರೀದಿಸಲು ಲಭ್ಯವಿರುದ ಮದ್ಯದಲ್ಲೇ ಅತ್ಯಂತ ದುಬಾರಿ ಮದ್ಯ ಎನಿಸಿದೆ. ಇದರ ಬೆಲರ 3.7 ಮಿಲಿಯನ್ ಡಾಲರ್ ಅಂದರೆ ಸುಮಾರು 30 ಕೋಟಿ, ಆದರೆ ಇದರ ಆಮದಿನ ಸಮಯದಲ್ಲಿ ಕಸ್ಟಮ್ಸ್ ಇಲಾಖೆ ಈ ಅಮೂಲ್ಯ ಎಣ್ಣೆಗೆ ಯಾವುದೇ ಸುಂಕ ವಿಧಿಸುವುದಿಲ್ಲ ಎಂಬುದಷ್ಟೇ ಸಮಾಧಾನದ ಸಂಗತಿ, ಒಂದು ವೇಳೆ ಸುಂಕ ವಿಧಿಸಿದಲ್ಲಿ ಇದರ ಬೆಲೆ ಮತ್ತಷ್ಟು ಹೆಚ್ಚಲಿದೆ.

ಸರ್ಜರಿ ಮಾಡಿದ ವೈದ್ಯರಿಗೆ ಅಚ್ಚರಿ, ಹೊಟ್ಟೆಯೊಳಗಿತ್ತು ವೋಡ್ಕಾ ಮದ್ಯದ ಬಾಟಲಿ!

ಅಭೂತಪೂರ್ವವಾಗಿ ಅಲಂಕರಿಸಲ್ಪಟ್ಟ ಈ ವೋಡ್ಕಾ ಬಾಟಲಿಯೂ 3000 ವಜ್ರಗಳಿಂದ ಅಲಂಕರಿಸಲ್ಪಟಿದೆಯಂತೆ. ಈ ಮದ್ಯ ತುಂಬಿರು ಬಾಟಲಿಯನ್ನು  ಆಕರ್ಷಕವಾದ ನೇರಳೆ-ವರ್ಣದ ಭಾರೀ ಗಾಜಿನಿಂದ ರಚಿಸಲಾಗಿದ್ದು, ಸುತ್ತಲೂ ವಿಶೇಷ ಕೋಟ್‌ ಅಳವಡಿಸಲಾಗಿದೆ. ಇದರ ಜೊತೆಗೆ ವಿಶಿಷ್ಟವೆನಿಸುವ ಕಲಾ ಕುಸೂರಿಯೂ ಇದರಲ್ಲಿದೆ.  ಒಳಗಿರುವ ಮದ್ಯಕ್ಕಿಂತ ಹೆಚ್ಚು ಇದರ ಬಾಟಲಿಯೇ ದುಬಾರಿಯಾಗಿದ್ದು, ಇದರಲ್ಲಿ ಇದು ಪ್ಲಾಟಿನಮ್ ಮತ್ತು ರೋಢಿಯಮ್ ಸಂಯೋಜನೆ ಇದೆ, ಸ್ಫಟಿಕದ ಮೇಲ್ಮೈಗೆ ವಿರುದ್ಧವಾಗಿ ವಜ್ರಗಳಿಂದ ಅಲಂಕರಿಸಲಾಗಿದೆ.  ಇದರ ಜೊತೆಗೆ ಚಿನ್ನದ ಲೇಬಲ್‌ ಇದೆ. ಇಷ್ಟೊಂದು ದುಬಾರಿ ವಜ್ರಾಭರಣದೊಂದಿಗೆ ಅಲಂಕರಿಸಲ್ಪಟ್ಟ ಈ ವೋಡ್ಕಾ ಬಾಟಲ್ ಒಳಗೆ ಈ ವಿಶ್ವದ ಅತ್ಯಂತ ದುಬಾರಿ ಮದ್ಯವಿದೆ. 

Follow Us:
Download App:
  • android
  • ios