ಸರ್ಜರಿ ಮಾಡಿದ ವೈದ್ಯರಿಗೆ ಅಚ್ಚರಿ, ಹೊಟ್ಟೆಯೊಳಗಿತ್ತು ವೋಡ್ಕಾ ಮದ್ಯದ ಬಾಟಲಿ!
ಎಣ್ಣೆ ಕುಡಿಯುವಾಗ ಮೊದಲೆರೆಡು ಪೆಗ್ ಡೀಸೆಂಟ್. ಸೈಡ್ಸ್, ಸ್ನಾಕ್ಸ್ ಎಲ್ಲವೂ ಬೇಕು. ನಶೆ ಏರುತ್ತಿದ್ದಂತೆ ಇನ್ಯಾವುದು ಬೇಕಿಲ್ಲ, ಎಣ್ಣೆ ಒಂದಿದ್ದರೆ ಸಾಕು. ಉತ್ತುಂಗಕ್ಕೆ ಏರಿದಾಗ ಏನ್ ಕುಡಿತಾ ಇದ್ದೀವಿ ಅನ್ನೋದು ಗೊತ್ತಾಗಲ್ಲ ಅಂತಾರೆ ಅನುಭವಸ್ಥರು. ಹೀಗೆ ಇಲ್ಲೊಬ್ಬ ಎಣ್ಣೆ ಕುಡಿದಿದ್ದಾನೆ. ಬಳಿಕ ಏನಾಗಿದೆ ಅನ್ನೋದೆ ಗೊತ್ತಿಲ್ಲ. ಆದರೆ ಈತನ ಸರ್ಜರಿ ಮಾಡಿದ ವೈದ್ಯರಿಗೆ ಅಚ್ಚರಿಯಾಗಿದೆ. ಕಾರಣ ಈತನ ಹೊಟ್ಟೆಯಲ್ಲಿತ್ತು ವೋಡ್ಕಾ ಬಾಟಲ್.
ಕಾಠ್ಮಂಡು(ಮಾ.10); ಫುಲ್ ಟೈಟು, ಮತ್ತೆ ಏನಾದರೂ ಗೊತ್ತಾಗಲ್ಲ. ಮಾತು ಹಿಡಿದಲ್ಲಿರಲ್ಲ, ದೇಹ ನಿಯಂತ್ರಣಕ್ಕೆ ಸಿಗಲ್ಲ. ನೆಟ್ಟಗೆ ಮನೆ ಸೇರಲ್ಲ. ಹೀಗಾದಾಗಲೇ ಎಡವಟ್ಟುಗಳಾಗೋದು. ಇಲ್ಲೊಂದು ಎಡವಟ್ಟಿನ ಇಂಟ್ರೆಸ್ಟಿಂಗ್ ಕತೆ ಇದೆ. ಗೆಳೆಯರ ಜೊತೆ ಸೇರಿ ಪಾರ್ಟಿ ಮಾಡಿದ್ದಾನೆ. ಮರುದಿನದಿಂದ ಹೊಟ್ಟೆ ನೋವು. ಒಂದೆರೆಡು ದಿನದಲ್ಲಿ ಮುಖ, ಹೊಟ್ಟೆ ಊದಿಕೊಳ್ಳಲು ಆರಂಭಿಸಿದೆ. ಅನಿವಾರ್ಯವಾಗಿ ಆಸ್ಪತ್ರೆ ದಾಖಲಾದ. ಈತನ ತಪಾಸಣೆ ಮಾಡಿ ಶಸ್ತ್ರಚಿಕಿತ್ಸೆ ಮಾಡಲು ವೈದ್ಯರ ತಂಡ ಮುಂದಾಯಿತು. ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರಿಗೆ ಅಚ್ಚರಿ ಕಾದಿತ್ತು. ಕಾರಣ ಈತನ ಹೊಟ್ಟೆಯಲ್ಲಿ ವೋಡ್ಕಾ ಮದ್ಯದ ಬಾಟಲಿ ಪತ್ತೆಯಾಗಿತ್ತು. ಇದು ನೇಪಾಳದ ರೌಹತಾಹತ್ ಜಿಲ್ಲೆಯ ಗುಜಾರ ಮುನ್ಸಿಪಾಲಿಟಿ ವಲಯದಲ್ಲಿ ನಡೆದಿದೆ.
26 ವರ್ಷದ ನುರ್ಸಾದ್ ಮನ್ಸೂರಿ ತನ್ನ ಗೆಳೆಯರಾದ ಶೇಕ್ ಸಮೀಮ್ ಸೇರಿದಂತೆ ಹಲವರ ಜೊತೆ ಪಾರ್ಟಿ ಮಾಡಿದ್ದಾನೆ. ಕಂಠಪೂರ್ತಿ ಕುಡಿದ್ದಾನೆ. ಈತ ಕುಡಿದಿದ್ದಾನೆ ಅನ್ನೋದಕ್ಕಿಂತ ಹೆಚ್ಚಾಗಿ ಗೆಳೆಯರು ಸೇರಿ ಈತನಿಗೆ ವಿಪರೀತ ಕುಡಿಸಿದ್ದಾರೆ. ಒಂದೆರೆಡು ಬ್ರ್ಯಾಂಡ್ ಮಿಕ್ಸ್ ಮಾಡಿ ಕೊಟ್ಟಿದ್ದಾರೆ. ನಶೆಯಲ್ಲಿ ಈತನಿಗೆ ಮಾತು ಬರುತ್ತಿಲ್ಲ, ನಿಲ್ಲಲು ಆಗುತ್ತಿಲ್ಲ. ಈ ಸಂಕಷ್ಟದ ಸಂದರ್ಭದಲ್ಲಿ ಈತನ ಗೆಳೆಯರು ಮಜಾ ತಗೊಂಡಿದ್ದಾರೆ.
ಅಬ್ಬಾ..ಹೀಗೂ ಮಾಡ್ತಾರಾ..ಕೋಪದಲ್ಲಿ ಕಾಂಡೋಮ್‌ನಲ್ಲಿ ಸುತ್ತಿದ್ದ ಬಾಳೆಹಣ್ಣು ತಿಂದ!
ಮರದಿನವೇ ನುರ್ಸಾದ್ ಅಸ್ವಸ್ಥನಾಗಿದ್ದಾನೆ. ತೀವ್ರ ಹೊಟ್ಟೆನೋವಿನಿಂದ ಬಳಲಿದ್ದಾನೆ. ಹೀಗಾಗಿ ಆಸ್ಪತ್ರೆ ದಾಖಲಿಸಲಾಗಿತ್ತು. 5 ದಿನಗಳ ಹಿಂದೆ ಆಸ್ಪತ್ರೆ ದಾಖಲಾದ ನುರ್ಸಾದ್ ಪರಿಶೀಲಿಸಿದ ವೈದ್ಯರಿಗೆ ಹೊಟ್ಟೆಯ ಕೆಲಭಾಗದಲ್ಲಿ ವಸ್ತು ಸೇರಿಕೊಂಡಿರುವುದು ಪತ್ತೆ ಹಚ್ಚಿದ್ದಾರೆ. ಬಳಿಕ ನುರಿತ ವೈದ್ಯರ ತಂಡ ಸತತ ಎರಡೂವರೆ ಗಂಟೆಗಳ ಕಾಲ ಶಸ್ತ್ರಚಿಕ್ತಿತ್ಸೆ ಮಾಡಿದ್ದಾರೆ. ಹೊಟ್ಟೆಯ ಕೆಳಭಾಗದಲ್ಲಿ ಸೇರಿಕೊಂಡಿದ್ದ ವೋಡ್ಕಾ ಮದ್ಯದ ಬಾಟಲಿಯನ್ನು ತೆಗೆದಿದ್ದಾರೆ. ಸದ್ಯ ನುರ್ಸಾದ್ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ. ಇಲ್ಲಿಗೆ ಈ ಪ್ರಕರಣ ಮುಗಿದಿಲ್ಲ.
ಈ ಬಾಟಲಿ ಹೊಟ್ಟೆಯೊಳಗೆ ಸೇರಿದ್ದು ಹೇಗೆ ಅನ್ನೋ ಪ್ರಶ್ನೆಗೆ ವೈದ್ಯರು ಉತ್ತರಿಸಿದ್ದಾರೆ. ನುರ್ಸಾದ್ ಮನ್ಸೂರಿಗೆ ಕಂಠಪೂರ್ತಿ ಕುಡಿಸಿದ ಗೆಳೆಯರು, ವೋಡ್ಕಾ ಬಾಟಲಿಯನ್ನು ಗುದದ್ವಾರದ ಮೂಲಕ ತುರುಕಿದ್ದಾರೆ. ಬಾಯಿಯಿಂದ ಬಾಟಲಿ ಹೊಟ್ಟೆ ಸೇರಿಲ್ಲ ಎಂದು ವೈದ್ಯರು ಖಚಿತಪಡಿಸಿದ್ದಾರೆ. ಕುಡಿದ ಅಮಲಿನಲ್ಲಿ ನುರ್ಸಾದ್‌ಗೆ ಯಾವುದು ಗೊತ್ತೆ ಆಗಿಲ್ಲ. ಆದರೆ ಮದ್ಯದ ಬಾಟಲಿ ತುರುಕಿದ ಘಟನೆಯಿಂದ ಯಾವುದೇ ಗಾಯಗಳಾಗಿಲ್ಲ. ಹೀಗಾಗಿ ನುರ್ಸಾದ್ ಬದುಕುಳಿದಿದ್ದಾನೆ. ನುರ್ಸಾದ್ ಆಸ್ಪತ್ರೆ ದಾಖಲಾಗುವುದು ವಿಳಂಬವಾದರೂ ಜೀವಕ್ಕೆ ಅಪಾಯವಿತ್ತು ಎಂದು ವೈದ್ಯರು ಹೇಳಿದ್ದಾರೆ.
ಅಯ್ಯೋ ದೇವ್ರೇ..ಎಡಗಾಲಿನಲ್ಲಿ ನೋವಿದ್ದ ಮಹಿಳೆಯ ಬಲಗಾಲಿಗೆ ಶಸ್ತ್ರಚಿಕಿತ್ಸೆ ಮಾಡಿದ ಡಾಕ್ಟರ್ಸ್!
ವೈದ್ಯರು ಈ ಹೇಳಿಕೆ ನೀಡುತ್ತಿದ್ದಂತೆ ನೇಪಾಳ ಪೊಲೀಸರು ಅಲರ್ಟ್ ಅಗಿದ್ದಾರೆ. ನುರ್ಸಾದ್ ಗೆಳೆಯ ಶೇಕ್ ಸಮೀಮ್ ಸೇರಿದಂತೆ ಮತ್ತಿಬ್ಬರನ್ನು ಬಂಧಿಸಿದ್ದಾರೆ. ಇಷ್ಟೇ ಅಲ್ಲ ಮತ್ತಷ್ಟು ಗೆಳೆಯರಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ನುರ್ಸಾದ್ ದೊಡ್ಡ ಗೆಳೆಯರ ಬಳಗ ಹೊಂದಿದ್ದಾನೆ. ಹೀಗಾಗಿ ಪ್ರತಿಯೊಬ್ಬರನ್ನು ವಿಚಾರಣೆಗೆ ಒಳಡಿಸಬೇಕಿದೆ ಎಂದು ಪೊಲೀಸರು ಹೇಳಿದ್ದಾರೆ.