ಹೊಸ ಬ್ಯುಸಿನೆಸ್ ಆರಂಭಿಸಿದ ಆರ್ಯನ್ ಖಾನ್; ಐಷಾರಾಮಿ ವೋಡ್ಕಾ ಬ್ರಾಂಡ್ ಲಾಂಚ್ ಮಾಡಿದ ಶಾರುಖ್ ಪುತ್ರ

ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಹೊಸ ಬ್ಯುಸಿನೆಸ್ ಆರಂಭಿಸಿದ್ದಾರೆ. ಐಷಾರಾಮಿ ವೋಡ್ಕಾ ಬ್ರಾಂಡ್ ಲಾಂಚ್ ಮಾಡಿದ್ದಾರೆ. 

Aryan Khan launches his own Vodka brand sgk

ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಇತ್ತೀಚಿಗಷ್ಟೆ ಸಿನಿಮಾರಂಗಕ್ಕೆ ಎಂಟ್ರಿ ಕೊಡುವ ಬಗ್ಗೆ ಬಹಿರಂಗ ಪಡಿಸಿದ್ದರು. ನಿರ್ದೇಶಕನಾಗಿ ಆರ್ಯನ್ ಖಾನ್ ಬಾಲಿವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಆರ್ಯನ್ ಖಾನ್ ಅವರನ್ನು ನಿರ್ದೇಶಕನಾಗಿ ನೋಡುವ ಮೊದಲು ಅಭಿಮಾನಿಗಳು ಬ್ಯುಸಿನೆಸ್ ಮ್ಯಾನ್ ಆಗಿ ನೋಡಲಿದ್ದಾರೆ. ಹೌದು ಆರ್ಯನ್ ಖಾನ್ ಹೊಸ ಬ್ಯುಸಿನೆಸ್ ಆರಂಭಿಸಿದ್ದಾರೆ. 25 ವರ್ಷದ ನಟ ಆರ್ಯನ್ ಖಾನ್ ಭಾರತದಲ್ಲಿ ಐಷಾರಾಮಿ ವೋಡ್ಕಾ ಬ್ರಾಂಡ್ ಪ್ರಾರಂಭಿಸಲು ಸಿದ್ಧರಾಗಿದ್ದಾರೆ. ಮದ್ಯದ ದೈತ್ಯ ಎಂದೇ ಖ್ಯಾತಿಗಳಿಸಿರುವ ಎಬಿ ಇನ್ ಬೆವ್ ಜೊತೆಗೆ ಪಾಲುದಾರಿಕೆ ಮಾಡಿಕೊಂಡಿರುವ ಆರ್ಯನ್ ಖಾನ್ ಐಷಾರಾಮಿ ವೋಡ್ಕಾ ಬ್ರಾಂಡ್ ಹೊರತರುತ್ತಿದ್ದಾರೆ. 

ಆರ್ಯನ್ ಖಾನ್ ಜೊತೆಗೆ ಬಂಟಿ ಸಿಂಗ್ ಮತ್ತು ಲೆಟಿ ಬ್ಲಾಗೋವಾ ಕೈ ಜೋಡಿಸಿದ್ದು ಮೂವರು ಸೇರಿ ಸ್ಲ್ಯಾಬ್ ವೆಂಚರ್ಸ್ ಎಂಬ ಕಂಪನಿಯನ್ನು ರಚಿಸಿದ್ದಾರೆ. ಇವರು ಬಡ್‌ವೈಸರ್ ಮತ್ತು ಕರೋನಾ ಬಿಯರ್‌ಗೆ ಹೆಸರುವಾಸಿಯಾದ ಜನಪ್ರಿಯ ಮದ್ಯದ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಬಗ್ಗೆ ಮಾತನಾಡಿರುವ ಆರ್ಯನ್ ಖಾನ್ ಈ ಬ್ರಾಂಡ್ ಹೊರತರಲು ಸತತ 5 ವರ್ಷಗಳಿಂದ ಪ್ರಯತ್ನಿಸುತ್ತಿರುವುದಾಗಿ ಹೇಳಿದ್ದಾರೆ. ಬಂಟಿ ಸಿಂಗ್ ಮತ್ತು ಬ್ಲಾಗೋವಾ ಖಾನ್ ಇಬ್ಬರೂ ಶಾರುಖ್ ಫ್ಯಾಮಿಲಿ ಸ್ನೇಹಿತರು ಹಾಗೂ ಬ್ಯುಸಿನೆಸ್ ಪಾರ್ಟ್ನರ್ಸ್ ಆಗಿದ್ದಾರೆ. ಅಂದಹಾಗೆ ಆರ್ಯನ್ ಖಾನ್ ಹೊಸ ವೋಡ್ಕಾ ಬ್ರಾಂಡ್‌ಗೆ  'D'YAVOL ವೋಡ್ಕಾ' ಕರೆಯಲಾಗುತ್ತೆ. 

ಆರ್ಯನ್ ಖಾನ್ ಅವರ 'D'YAVOL ವೋಡ್ಕಾ' ಬ್ರಾಂಡ್ ಗ್ರೇ ಗೂಸ್, ಬೆಲ್ವೆಡೆರೆ ಸೇರಿದಂತೆ ಮುಂತಾದ ಬ್ರಾಂಡ್‌ಗಳ ಜೊತೆ ಪೈಪೋಟಿ ನಡೆಸಲಿದೆ. ಅಂದಹಾಗೆ ಇದರ ಬೆಲೆ 5 ಸಾವಿರ ರೂಪಾಯಿಂದ 6.5 ಸಾವಿರ ರೂಪಾಯಿ ಇದೆ. ಪೋಲೆಂಡ್‌ ಮೂಲದ್ದಾಗಿದ್ದು ಸದ್ಯ ಮಹಾರಾಷ್ಟ್ರದಲ್ಲಿ 5 ಸಾವಿರ, ಗೋವಾದಲ್ಲಿ 4 ಸಾವಿರ ಮತ್ತು ಕರ್ನಾಟಕದಲ್ಲಿ 6.5 ಸಾವಿರ ರೂಪಾಯಿಗೆ ಲಭ್ಯವಿದೆ. ಈ ಬ್ರಾಂಡ್ ಮುಂದಿನ ದಿನಗಳಲ್ಲಿ ಎಲ್ಲಾ ಮೆಟ್ರೋ ನಗರಗಳಲ್ಲಿ ಲಭ್ಯವಾಗಲಿದೆ ಎನ್ನಲಾಗಿದೆ.   

ನನಗೆ ಬೆಳಗ್ಗೆ ಶಿಫ್ಟ್ ಬೇಡ; ಪುತ್ರ ಆರ್ಯನ್ ಖಾನ್ ಮೊದಲ ಸಿನಿಮಾಗೆ ಶಾರುಖ್ ರಿಯಾಕ್ಷನ್ ವೈರಲ್

ಅಂದಹಾಗೆ ಆರ್ಯನ್ ಖಾನ್ ವೋಡ್ಕಾ ಬ್ರಾಂಡ್ ಮಾತ್ರವಲ್ಲದೆ ಬೇರೆ ಬೇರೆ ಉದ್ಯಮ ಪ್ರಾರಂಭಿಸಲು ಪ್ಲಾನ್ ಮಾಡಿರುವುದಾಗಿ ಹೇಳಿದ್ದಾರೆ. ಪಾನೀಯ ಜೊತೆಗೆ ಬಟ್ಟೆ ಬ್ಯುಸಿನೆಸ್‌ಗೂ ಇಳಿಯುವ ಸೂಚನೆ ನೀಡಿದ್ದಾರೆ. ಸದ್ಯ ಹೊಸ ವೋಡ್ಕಾ ಬ್ರಾಂಡ್ ಮೂಲಕ ಎಂಟ್ರಿ ಕೊಟ್ಟಿರುವ ಆರ್ಯನ್ ಖಾನ್ ದೊಡ್ಡ ಬ್ಯುಸಿನೆಸ್ ಮ್ಯಾನ್ ಆಗಿ ಗುರುತಿಸಿಕೊಳ್ಳುವ ಕನಸು ಕಂಡಿದ್ದಾರೆ.

 
 
 
 
 
 
 
 
 
 
 
 
 
 
 

A post shared by Aryan Khan (@___aryan___)

ನಾನು ಮಕ್ಕಳನ್ನು ಬೆಳೆಸಿದ ರೀತಿ ನೋಡಿದ್ರೆ ನನ್ನ ಅಪ್ಪ-ಅಮ್ಮ ತುಂಬಾ ಹೆಮ್ಮೆ ಪಡುತ್ತಿದ್ರು; ಶಾರುಖ್ ಖಾನ್

ಆರ್ಯನ್ ಖಾನ್ ಸಿನಿಮಾ ಎಂಟ್ರಿ 

ಆರ್ಯನ್ ಖಾನ್ ನಿರ್ದೇಶಕನಾಗಿ ಸಿನಿಮಾರಂಗಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಈಗಾಗಲೇ ಸ್ಕ್ರಿಪ್ಟ್ ಕೆಲಸ ಮುಗಿಸಿರುವ ಆರ್ಯನ್ ಖಾನ್ ಆಕ್ಷನ್ ಕಟ್ ಹೇಳಲು ರೆಡಿಯಾಗಿದ್ದಾರೆ. ಈ ಬಗ್ಗೆ ಇತ್ತೀಚಿಗಷ್ಟೆ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದರು.  'ಸ್ಟ್ರಿಪ್ಟ್ ಬರೆದು ಮುಗಿತು. ಆಕ್ಷನ್‌ಗಾಗಿ ಕಾಯುತ್ತಿದ್ದೀನಿ' ಎಂದು ಹೇಳುವ ಮೂಲಕ ಕ್ಯಾಮರಾ ಇಮೋಜಿ ಶೇರ್ ಮಾಡಿ ಸಿನಿಮಾ ಎಂಟ್ರಿ ಬಗ್ಗೆ ಅಧಿಕೃತಗೊಳಿಸಿದ್ದರು. ಅಂದಹಾಗೆ ಆರ್ಯನ್ ಖಾನ್ ತಮ್ಮದೇ ಆದ ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ಬ್ಯಾನರ್ ನಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಸದ್ಯ ಸ್ಕ್ರಿಪ್ಟ್ ಕೆಲಸ ಮುಗಿಸಿರುವ ಆರ್ಯನ್ ಯಾವಾಗ ಆಕ್ಷನ್ ಕಟ್ ಹೇಳಲಿದ್ದಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. 

Latest Videos
Follow Us:
Download App:
  • android
  • ios