*ಕೇಂದ್ರದ ವಿರುದ್ಧ ಜನರ ಹಿಡಿ ಶಾಪ, ಮತ್ತೆ ತೈಲ ಬೆಲೆ ಏರಿಕೆ*ಸತತ 5ನೇ ದಿನ ಮತ್ತೆ ಏರಿಕೆ ಕಂಡ ಪೆಟ್ರೋಲ್, ಡೀಸೆಲ್ ದರ*ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 111.34 ರೂಪಾಯಿ

ನವದೆಹಲಿ(ಅ. 24) : ದೇಶಾದ್ಯಂತ ಇಂಧನ ಬೆಲೆ ಏರಿಕೆ ನಾಗಾಲೋಟ ರವಿವಾರವೂ ಮುಂದುವರಿದಿದೆ. ಸತತ ಐದನೇ ದಿನ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಏರಿಕೆಯಾಗಿದ್ದು, ಪ್ರತಿ ಲೀ.ಗೆ ತಲಾ 35 ಪೈಸೆ ದುಬಾರಿಯಾಗಿದೆ. ದೆಹಲಿಯಲ್ಲಿ ಪೆಟ್ರೋಲ್‌ ಬೆಲೆ ಸದ್ಯ 107.59 ರೂ. ಆಗಿದ್ದು, ಡೀಸೆಲ್‌ ಬೆಲೆ 96.32 ರೂ.ಗೆ ಏರಿಕೆಯಾಗಿದೆ. ಎಲ್ಲಾ ಪ್ರಮುಖ ನಗರಗಳಲ್ಲಿ ಈಗಾಗಲೇ ಪೆಟ್ರೋಲ್‌ ಬೆಲೆ ಶತಕ ದಾಟಿದ್ದು, ಅರ್ಧದಷ್ಟುರಾಜ್ಯಗಳಲ್ಲಿ ಡೀಸೆಲ್‌ ಬೆಲೆಯೂ 100ರ ಗಡಿ ದಾಟಿದೆ.

Add Asianetnews Kannada as a Preferred SourcegooglePreferred

ಹೆಣ್ಣುಮಗು ಜನಿಸಿದ ಸಂಭ್ರಮದಲ್ಲಿ ಉಚಿತ Petrol ಹಂಚಿದ ಬಂಕ್‌ ಮಾಲೀಕ!

ಬೆಂಗಳೂರಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ ಎರಡರ ಬೆಲೆಯೂ ಇಂದು(ಅ. 24) 37 ಪೈಸೆ ಏರಿಕೆಯಾಗಿದೆ. ಇದರೊಂದಿಗೆ ಬೆಂಗಳೂರಿಲ್ಲಿ ಪೆಟ್ರೋಲ್ (Petrol) ಬೆಲೆ ಲೀಟರ್‌ಗೆ 111.34 ರೂಪಾಯಿ ಆಗಿದೆ. ಇತ್ತ ಡೀಸೆಲ್ ಬೆಲೆ 102.23 ಪೈಸೆ ಆಗಿದೆ. ಕರ್ನಾಟಕದ ಎಲ್ಲಾ ಕಡೆ ಪೆಟ್ರೋಲ್ ಹಾಗೂ ಹಾಗೂ ಡೀಸೆಲ್ ಶತಕ ದಾಟಿ ಇದೀಗ ದ್ವಿಶತಕದತ್ತ ಮುನ್ನಗ್ಗುತ್ತಿದೆ. ಭಾರತದ ಹಣಕಾಸು ಕೇಂದ್ರವಾದ ಮುಂಬೈನಲ್ಲಿ, ಪೆಟ್ರೋಲ್ ಪ್ರತಿ ಲೀಟರ್‌ಗೆ 113.46 ರೂ. ಹಾಗೂ ಡೀಸೆಲ್ (Diesel) ಪ್ರತಿ ಲೀಟರ್‌ಗೆ 104.38 ರೂ.ಗೆ ಏರಿಕೆಯಾಗಿದೆ.

ಉಚಿತ ಕೋವಿಡ್‌ ಲಸಿಕೆ ಕೊಟ್ಟಿದ್ದರಿಂದ ಪೆಟ್ರೋಲ್‌ ದರ ಹೆಚ್ಚಳ: ಕೇಂದ್ರ ಸಚಿವ

ಕೊಲ್ಕತ್ತಾದಲ್ಲಿ (Kolkata) ಪೆಟ್ರೋಲ್ ಬೆಲೆ 108.11 ರೂಪಾಯಿ ಆಗಿದ್ದರೆ, ಡೀಸೆಲ್ ಬೆಲೆ 99.43 ರೂಪಾಯಿ ಆಗಿದೆ. ಇನ್ನು ಚೆನ್ನೈನಲ್ಲಿ (Chennai) ಪೆಟ್ರೋಲ್ ಬೆಲೆ 104.52 ರೂಪಾಯಿ ಆಗಿದ್ದರೆ, ಡೀಸೆಲ್ ಬೆಲೆ 100.59 ರೂಪಾಯಿ ಆಗಿದೆ. ಹೈದರಾಬಾದ್‌ನಲ್ಲಿ (Hyderabad) ಟ್ರೋಲ್ ಬೆಲೆ 111.91 ರೂಪಾಯಿ ಆಗಿದ್ದರೆ, ಡೀಸೆಲ್ ಬೆಲೆ 105.08 ರೂಪಾಯಿ ಆಗಿದೆ. ಈಗಾಗಲೇ ಎಲ್ಲಾ ದಾಖಲೆಗಳನ್ನು ಮುರಿದು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿದೆ. ಪ್ರತಿಭಟನೆ, ಟೀಕೆಗಳು ವ್ಯಕ್ತವಾದರೂ ಬೆಲೆ ನಿಯಂತ್ರಣ ಮಾಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನದ ಸರಾಸರಿ ಬೆಲೆ ಹಾಗೂ ವಿದೇಶಿ ವಿನಿಮಯ ದರಗಳ ಆಧಾರದ ಮೇಲೆ OMC ಪ್ರತಿ ದಿನ ಪೆಟ್ರೋಲ್ ಹಾಗೂ ಡೀಸೆಲ್ ದರಗಳನ್ನು ಪರಿಷ್ಕರಿಸುತ್ತದೆ. ಇದರಿಂದ ಪ್ರತಿ ದಿನ ಡೀಸೆಲ್ ಹಾಗೂ ಪೆಟ್ರೋಲ್ ಬೆಲೆ ಏರಿಕೆಯಾಗುತ್ತಲೇ ಇದೆ. ಇತ್ತ ಕೇಂದ್ರ ಹಾಗೂ ರಾಜ್ಯ ಸರ್ಕಾರದ ತೆರಿಗೆ ಜನರನ್ನು ಮತ್ತಷ್ಟು ಹೈರಾಣಾಗಿಸಿದೆ.

ಇಂಧನ ಖರೀದಿಗೆ ಭಾರತದಿಂದ 500 ಮಿಲಿಯನ್ ಡಾಲರ್ ಸಾಲ ಕೇಳಿದ ಶ್ರೀಲಂಕಾ!

ಕೇಂದ್ರದ ವಿರುದ್ಧ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಸತತ ಹೋರಾಟ, ಪ್ರತಿಭಟನೆ ಮಾಡುತ್ತಿದೆ. ಬಿಜೆಪಿ ಸರ್ಕಾರದ ಆಡಳಿತ ಅಂತ್ಯಗೊಳಿಸಲು ಇಂಧನ ಬೆಲೆ ಏರಿಕೆಯನ್ನೇ ಅಸ್ತ್ರವಾಗಿ ಬಳಸಿಕೊಂಡಿದೆ. ಆದರೆ ಕೇಂದ್ರ ಸರ್ಕಾರ ಏನೂ ಮಾಡಲಾಗದೇ ಕೈಕಟ್ಟಿ ಕುಳಿತಿದೆ. 

ಕರ್ನಾಟಕದಲ್ಲೂ ಕಾಂಗ್ರೆಸ್ ಎತ್ತಿನ ಗಾಡಿ, ಸೈಕಲ್ ಜಾಥಾ ಸೇರಿದಂತೆ ಹಲವು ರೂಪದಲ್ಲಿ ಪ್ರತಿಭಟನೆ ಮಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದೆ. ಆದರೆ ಬೆಲೆ ಇಳಿಕೆ ಬದಲು ಪ್ರತಿ ದಿನ ಏರಿಕೆಯಾಗುತ್ತಲೇ ಇದೆ. ಇತ್ತ ಎಲ್ಲಾ ಅಗತ್ಯವಸ್ತುಗಳ ಬೆಲೆ ಕೂಡ ಏರಿಕೆಯಾಗಿದೆ. ಇದರಿಂದ ಜನರು ಬದುಕು ದುಸ್ತರವಾಗಿದೆ.