ಇಂಧನ ಖರೀದಿಗೆ ಭಾರತದಿಂದ 500 ಮಿಲಿಯನ್ ಡಾಲರ್ ಸಾಲ ಕೇಳಿದ ಶ್ರೀಲಂಕಾ!

  • ಶ್ರೀಲಂಕಾದಲ್ಲಿ ತೀವ್ರಗೊಂಡ ಆರ್ಥಿಕ ಬಿಕ್ಕಟ್ಟು
  • ಇಂದನ ಖರೀದಿಗೆ ಭಾರತಿಂದ ಸಾಲ ಕೇಳಿದ ಶ್ರೀಲಂಕಾ
  • 500 ಮಿಲಿಯನ್ ಡಾಲರ್ ಸಾಲ ಕೇಳಿದ ಶ್ರೀಲಂಕಾ
Foreign exchange crisis Sri Lanka ask USD 500 million credit line from India to pay crude oil purchases ckm

ಕೊಲೊಂಬೊ(ಅ.17): ಭಾರತದಲ್ಲಿ(India) ಪೆಟ್ರೋಲ್ ಡೀಸೆಲ್(Petrol, Diesel) ಬೆಲೆ ಗಗನಕ್ಕೇರಿದೆ. ಬೆಲೆ ನಿಯಂತ್ರಣಕ್ಕಾಗಿ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ಭಾರತದಲ್ಲಿ ಇಂಧನ ಬೆಲೆ ದುಬಾರಿಯಾಗಿರುವುದು ಸಮಸ್ಯೆಯಾಗಿದ್ದರೆ, ನೆರೆಯ ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ(Srilanka) ಪೆಟ್ರೋಲ್, ಡೀಸೆಲ್ ಖರೀದಿಗೆ ಸರ್ಕಾರದ ಬೊಕ್ಕಸ ಬರಿದಾಗಿದೆ. ವಿದೇಶಿ ವಿನಿಮಯ ಬಿಕ್ಕಟ್ಟಿನಲ್ಲಿ ಒದ್ದಾಡುತ್ತಿರುವ ಶ್ರೀಲಂಕಾ ಇದೀಗ ಇಂಧನ ಖರೀದಿಗೆ ಭಾರತದಿಂದ ಸಾಲ ಕೇಳಿದೆ.

ಶ್ರೀಲಂಕಾದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ, ಆಹಾರ ಬಿಕ್ಕಟ್ಟಿಗೆ ಕಾರಣವೇನು.?

ತೀವ್ರ ವಿದೇಶಿ ವಿನಿಮಯ ಬಿಕ್ಕಟ್ಟಿನ ಮಧ್ಯೆ ಶ್ರೀಲಂಕಾ ಕಚ್ಚಾ ತೈಲ(crude oil) ಖರೀದಿಸಲು ಭಾರತದಿಂದ ಬರೋಬ್ಬರಿ 500 ಮಿಲಿಯನ್ ಅಮೆರಿಕನ್ ಡಾಲರ್ ಸಾಲವನ್ನು ಕೇಳಿದೆ. ಭಾರತದಿಂದ ಶ್ರೀಲಂಕಾ ಸದ್ಯ 3,751 ಕೋಟಿ ರೂಪಾಯಿ ಸಾಲ ಕೇಳಿದೆ. ಶ್ರೀಲಂಕಾ ಇಂಧನ ಸಚಿವ ಉದಯ ಗಮ್ಮನಪಿಲಾ, ತೈಲ ಸಂಗ್ರಹಣೆ ಕುರಿತು ಮಾಹಿತಿ ಬಿಚ್ಚಿಟ್ಟ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ವಿವಾದಿತ ಕೊಲಂಬೋ ಬಂದರು ನಗರಿ ಸ್ಥಾಪನೆಗೆ ಲಂಕಾ ಅಸ್ತು, ಭಾರತಕ್ಕೆ ಆತಂಕ ಏಕೆ..?

ಸದ್ಯ ಶ್ರೀಲಂಕಾದಲ್ಲಿರುವ ತೈಲ ಸಂಗ್ರಹಣೆ ಇನ್ನೆರಡು ತಿಂಗಳಲ್ಲಿ ಮುಗಿದು ಹೋಗಲಿದೆ. ಜನವರಿಗೆ ವೇಳೆ ಶ್ರೀಲಂಕಾದಲ್ಲಿ ಇಂಧನ ಕೊರತೆ ತೀವ್ರವಾಗಿ ಕಾಡಲಿದೆ ಎಂದು ಉದಯ ಗಮ್ಮನಪಿಲಾ ಹೇಳಿದ್ದರು. ಈ ಹೇಳಿಕೆ ಬೆನ್ನಲ್ಲೇ ಲಂಕಾ ಸರ್ಕಾರ ತೈಲ ಆಮದಿಗೆ ಮುಂದಾಗಿದೆ. ಆದರೆ ಈಗಾಗಲೇ ಸಾಲದ ಹೊರೆಯಲ್ಲಿರುವ ಶ್ರೀಲಂಕಾಗೆ ಬ್ಯಾಂಕ್ ಸಾಲ ಅವಕಾಶವಿಲ್ಲ. 

ಶ್ರೀಲಂಕಾದ ಸಿಲೋನ್ ಪೆಟ್ರೋಲಿಯಂ ಕಾರ್ಪೋರೇಶನ್ ಸಂಸ್ಥೆ ಈಗಾಗಲೇ ಬ್ಯಾಂಕ್ ಆಫ್ ಸಿಲೋನ್ ಹಾಗೂ ಪೀಪಲ್ಸ್ ಬ್ಯಾಂಕ್‌ನಲ್ಲಿ ಈಗಾಗಲೇ 24,761 ಕೋಟಿ ರೂಪಾಯಿ ಸಾಲ ಉಳಿಸಿಕೊಂಡಿದೆ. ಕಚ್ಚಾ ತೈಲ ಖರೀದಿ ಹಾಗೂ ಆಮದಿಗೆ ಈ ಸಾಲ ಪಡೆದಿತ್ತು. ಇದೀಗ ಈ ಸಾಲ ಹಿಂತಿರುಗಿಸಿದ ಕಾರಣ ಲಂಕಾ ಸರ್ಕಾರಕ್ಕೆ ಮತ್ತೆ ತೈಲ ಖರೀದಿಗೆ ಸಾಲದ ಅವಕಾಶವಿಲ್ಲ. ಹೀಗಾಗಿ ಭಾರತ ಹಾಗೂ ಶ್ರೀಲಂಕಾ ಆರ್ಥಿಕ ಸಹಕಾರದಡಿ ಸಾಲ ಕೇಳಿದೆ.

ಲಂಕಾ ಸರ್ಕಾರದ ಮಹತ್ವದ ನಿರ್ಧಾರ; ISIS ಸೇರಿ 11 ಉಗ್ರ ಸಂಘಟನೆಗೆ ನಿಷೇಧ!

ಭಾರತದ ಹೈಕಮಿಷನ್ ಜೊತೆ ನಿರಂತರ ಸಂಪರ್ಕದಲ್ಲಿರುವ ಶ್ರೀಲಂಕಾ, ಸಾಲ ಪಡೆಯುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ. ಭಾರತದಿಂದ 500 ಮಿಲಿಯನ್ ಅಮೆರಿಕನ್ ಡಾಲರ್ ಸಾಲ ದೊರೆತರೆ ಈ ಹಣವನ್ನು ಕಚ್ಚಾ ತೈಲ ಖರೀದಿಗೆ ಬಳಸಿಕೊಳ್ಳಲಾಗುವುದು ಎಂದು ಶ್ರೀಲಂಕಾ ಹೇಳಿದೆ.

ಭಾರತದ ಹೈಕಮಿಶನ್ ಜೊತೆ ಮಾತುಕತೆ ನಡೆಸಿರುವ ಶ್ರೀಲಂಕಾ, ಶೀಘ್ರದಲ್ಲೇ ಉಭಯ ದೇಶದ ಇಂಧನ ಕಾರ್ಯದರ್ಶಿಗಳು ಸಾಲ ಒಪ್ಪಂದಕ್ಕೆ ಸಹಿ ಹಾಕುವ ವಿಶ್ವಾಸವಿದೆ ಎಂದು ಲಂಕಾ ಹೇಳಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗುತ್ತಿರುವ ಕಾರಣ ಶ್ರೀಲಂಕಾ ಸರ್ಕಾರ ಕಚ್ಚಾ ತೈಲ ಆಮದಿಗೆ ಇನ್ನಿಲ್ಲದ ಕಸರತ್ತು ನಡೆಸಿದೆ. ಹೆಚ್ಚಿಣ ಹಣ ವ್ಯಯಿಸಿದೆ. ವಿದೇಶಿ ವಿನಿಮಯ ಬಿಕ್ಕಟ್ಟೂ ಕೂಡ ಲಂಕಾ ಸರ್ಕಾರಕ್ಕೆ ತೀವ್ರ ಹಿನ್ನಡೆ ತಂದಿದೆ. ಹೀಗಾಗಿ ಭಾರತದ ನೆರವು ಕೇಳಿದೆ. 

Latest Videos
Follow Us:
Download App:
  • android
  • ios