ಹೆಣ್ಣುಮಗು ಜನಿಸಿದ ಸಂಭ್ರಮದಲ್ಲಿ ಉಚಿತ Petrol ಹಂಚಿದ ಬಂಕ್‌ ಮಾಲೀಕ!

-ಉಚಿತ ಪೆಟ್ರೋಲ್‌ ನೀಡಿ ಹೆಣ್ಣು ಮಗುವಿನ ಜನನ ಸಂಭ್ರಮಿಸಿದ ಬಂಕ್‌ ಮಾಲೀಕ

-ದಸರಾ ಹಬ್ಬದ ಕೊನೆಯ ಮೂರು ದಿನ ಗ್ರಾಹಕರಿಗೆ ಶೇ 5-10 ರಷ್ಟು ಉಚಿತ ಪೆಟ್ರೋಲ್‌

-ತನ್ನ ವಿಶೇಷ ಚೇತನ ತಂಗಿಗೆ ಹೆಣ್ಣು ಮಗು ಜನಿಸಿದ್ದರಿಂದ‌, ಈ ಉಡುಗೊರೆ ಎಂದ ದೀಪಕ್

MP man gives away free petrol to celebrate birth of girl child

ಮಧ್ಯಪ್ರದೇಶ (ಅ. 16) : ತನ್ನ ಮನೆಯಲ್ಲಿ ಹೆಣ್ಣು ಮಗು ಜನಿಸಿದ ಸಂಭ್ರಮದಲ್ಲಿ, ಮಧ್ಯಪ್ರದೇಶದ ಬೆಟುಲ್ (Betul)ಜಿಲ್ಲೆಯ ವ್ಯಕ್ತಿಯೊಬ್ಬ ಉಚಿತ ಪೆಟ್ರೋಲ್‌ (Petrol) ಹಂಚಿದ್ದಾನೆ.  ಪೆಟ್ರೋಲ್‌ ಬಂಕ್ ಮಾಲೀಕ ದೀಪಕ್‌ ಸೈನಾನಿ (Deepak Sainani) ತಂಗಿ ಸಿಖಾ ಪೋರವಾಲ್‌, (Sikha Porwal)ಅಕ್ಟೋಬರ್‌ 9 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಹೆಣ್ಣು  ಮಗು ಜನಿಸಿದ ಸಂದರ್ಭದಲ್ಲಿ ವಿಶೇಷವಾಗಿ ಏನಾದರೂ ಮಾಡಬೇಕು ಎಂದು ದೀಪಕ್‌ ಸೈನಾನಿ ನಿರ್ಧರಿಸಿದ್ದಾರೆ. ʼಈ ವರ್ಷದ ಮಾರ್ಚ್‌ ತಿಂಗಳಿನಲ್ಲಿ ಹೊಸದಾಗಿ  ಪೆಟ್ರೋಲ್‌ ಬಂಕ್ ಆರಂಭವಾದಾಗಿನಿಂದ, ನಮ್ಮ ಗ್ರಾಹಕರಿಗಾಗಿ (Customers) ಏನಾದರೂ ಕೊಡುಗೆಯನ್ನು ನೀಡಬೇಕೆಂದಿದ್ದೆ, ನವರಾತ್ರಿಯ ಶುಭ ಸಂದರ್ಭದಲ್ಲಿ ನಮ್ಮ ಮನೆಯಲ್ಲಿ ಹೆಣ್ಣು ಮಗುವಿನ ಜನನವಾಗಿರುವುದರಿಂದ ಈಗ ಈ ಕೆಲಸ ಮಾಡಲು ಕಾಲ ಕೂಡಿ ಬಂದಿದೆʼ ಎಂದು ದೀಪಕ್‌ ಹೇಳಿದ್ದಾರೆ.

ಉಚಿತ ಪೆಟ್ರೋಲ್‌ ನೀಡಿ ತನ್ನ ಪೆಟ್ರೋಲ್‌ ಬಂಕ್‌ನ  ಮಾರ್ಕೆಟಿಂಗ್‌ (Marketing) ಮಾಡುತ್ತಿದ್ದೇನೆ ಎಂದು ಯಾರಿಗೂ ಅನ್ನಿಸಬಾರದು ಎಂದು ಈ ಕೆಲಸ ಮಾಡಲು ದೀಪಕ್‌ ಹಿಂಜರಿಯುತ್ತಿದ್ದರು. ಆದರೆ ಬಹಳ ಯೋಚಿಸಿದ ಬಳಿಕ ದೀಪಕ್‌ ಉಚಿತ ಪೆಟ್ರೋಲ್ ನೀಡುವ ನಿರ್ಧಾರ ತೆಗೆದುಕೊಂಡಿದ್ದಾರೆ. ʼ ಇದನ್ನು ಜನರು ಚೀಪ್‌ ಪಬ್ಲಿಸಿಟಿ ಸ್ಟಂಟ್‌ (Cheap Publicity Stunt) ಅಂದುಕೊಳ್ಳಬಾರದು ಎಂದು ನಾನು ಕೆಲವು ದಿನಗಳ ಕಾಲ ಈ ಯೋಜನೆಯಿಂದ ಹಿಂದೆ ಸರಿದಿದ್ದೆ, ಆದರೆ ಈಗ ಮತ್ತೆ ಮನಸ್ಸು ಮಾಡಿ ಮುಂದುವರೆಯುತ್ತಿದ್ದೆನೆʼ ಎಂದು ದೀಪಕ್‌ ಹೇಳಿದ್ದಾರೆ. 

Dear Gentlemen... ಕೇಳಿ ನಿಮ್ಮಲ್ಲಿರೋ ಈ ಗುಣಾನೇ ಹುಡುಗೀರಿಗೆ ಇಷ್ಟ ಆಗಲ್ಲ...

ನವರಾತ್ರಿ (Navaratri) ಹಬ್ಬದ  ಅಷ್ಟಮಿ, ನವಮಿ ಮತ್ತು ದಸರೆಯ ದಿನಗಳಂದು (ಅಕ್ಟೋಬರ್‌ 13,14 ಮತ್ತು 15)ಉಚಿತ ಪೆಟ್ರೋಲ್‌ ನೀಡಲು ಸೈನಾನಿ ನಿರ್ಧರಿಸಿದ್ದರು. ಇದರ ಸಲುವಾಗಿ ತನ್ನ ಪೆಟ್ರೋಲ್ ಬಂಕ್‌ ನಲ್ಲಿ ಪೋಸ್ಟರ್‌ವೊಂದನ್ನು (Poster) ಅಂಟಿಸಿ , ತನ್ನ ಸೋದರಿಗೆ ಹೆಣ್ಣು ಮಗು ಜನಿಸಿದ್ದರಿಂದ ಶೇ 5 ರಿಂ ಶೇ 10 ರಷ್ಟು ಹೆಚ್ಚಿನ ಪೆಟ್ರೋಲ್‌ ಉಚಿತವಾಗಿ (Free) ನೀಡುತ್ತಿರುವುದಾಗಿ ದೀಪಕ್‌  ಗ್ರಾಹಕರಿಗೆ ತಿಳಿಸಿದ್ದಾರೆ. 

ತನ್ನ ಪೇಟ್ರೋಲ್‌ ಬಂಕ್‌ಗೆ ಹೆಚ್ಚಿನ ಗ್ರಾಹಕರು ಬರುವ ಸಮಯವನ್ನು ಗುರುತಿಸಿ ಅದೇ ಸಮಯದಲ್ಲಿ ಉಚಿತ ಪೇಟ್ರೋಲ್ ನೀಡಲು ನಿರ್ಧರಿಸಿದರು ದೀಪಕ್.‌ ʼಬೆಳಿಗ್ಗ 9 ರಿಂದ 11 ಮತ್ತು ಸಂಜೆ  5 ರಿಂದ 7 ಕ್ಕೆ ಹೆಚ್ಚು ಗ್ರಾಹಕರು ಬರುವುದರಿಂದ ಇದೇ ಸಮಯಕ್ಕೆ ಉಚಿತ ಪೆಟ್ರೋಲ್‌ ನೀಡಲು ನಿರ್ಧರಿಸಿದೆ. 100 ರೂಪಾಯಿ ಪೆಟ್ರೋಲ್‌ ಖರೀದಿಸುವವರಿಗೆ ಶೇ 5 ಮತ್ತು 200-500 ರೂಪಾಯಿ ಪೆಟ್ರೋಲ್‌ ಖರೀದಿಸುವವರಿಗೆ ಶೇ 10 ರಷ್ಟು ಪೆಟ್ರೋಲ್‌ ಉಚಿತವಾಗಿ ನೀಡಲಾಗಿದೆ. 

ಹಾಲಿನೊಂದಿಗೆ ಈ ವಸ್ತು ಹಾಕಿ ಸೇವಿಸಿ: ಮೂರೇ ದಿನದಲ್ಲಿ ಆರೋಗ್ಯ ಸಮಸ್ಯೆಗಳು ದೂರ

ನಿಮ್ಮ ಈ ಕಾರ್ಯಕ್ಕೆ  ಗ್ರಾಹಕರ ಪ್ರತಿಕ್ರಿಯೆ ಹೇಗಿತ್ತು ಎಂದು ಕೇಳಿದಾಗ, ಸಂತಸವನ್ನು (Happiness) ಹಂಚಿಕೊಳ್ಳುವುದು ನನ್ನ ಉದ್ದೇಶವಾಗಿತ್ತು ಹಾಗಾಗಿ  ನಾನು ಗ್ರಾಹಕರ ಪ್ರತಿಕ್ರಿಯೆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ ಎಂದು ದೀಪಕ್‌ ಪ್ರತಿಕ್ರಿಯೆ ನೀಡಿದ್ದಾರೆ.  ಹೆರಿಗೆಗಾಗಿ ಮನೆಗ ಬಂದಿದ್ದ ತನ್ನ ವಿಶೇಷ ಚೇತನ ತಂಗಿಗೆ  ಇದನ್ನು ಉಡುಗೊರೆಯಾಗಿ ನೀಡಿದ್ದಾರೆ. ʼಗಂಡು ಮಗುವಿನ ಜನನವನ್ನು ಹೇಗೆ ಸಂಭ್ರಮಿಸುತ್ತಾರೋ ಹೆಣ್ಣು ಮಗು ಜನಿಸಿದಾಗ ಕೂಡ ಅಷ್ಟೇ ಸಂಭ್ರಮ ಪಡಬೇಕು‌, ಇಲ್ಲಿ ಯಾವುದೇ ವ್ಯತ್ಯಾಸವಿರಬಾರದುʼಎಂದು ದೀಪಕ್‌ರ ಅಂಕಲ್‌ ರಾಜು ಸೈನಾನಿ ಹೇಳಿದ್ದಾರೆ.  ಪೆಟ್ರೋಲ್ ಬೆಲೆ ಗಗನಕ್ಕೇರಿರುವ‌ ಈ ಸಂದರ್ಭದಲ್ಲಿ ಉಚಿತ ಪೆಟ್ರೋಲ್‌ ನೀಡಿರುವ ದೀಪಕ್‌ರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದು ಸಾಮಾಜಿಕ ಜಾಲತಾಣದಲ್ಲಿ(Social Media)ಇದು ವೈರಲ್‌ (Viral) ಆಗಿದೆ. 

Latest Videos
Follow Us:
Download App:
  • android
  • ios