ಚಳಿಯಲ್ಲಿ ಬಿಸಿ ಬಿಸಿಯಾಗಿ ಖಾರ ಖಾರವಾಗಿ ಏನಾದರು ತಿನ್ಬೇಕು ಅನ್ನೋದು ಅನೇಕ ಆಹಾರಪ್ರಿಯರ ಅಭಿಪ್ರಾಯ. ಜನರ ಈ ಆಸೆಯನ್ನೇ ಮುಂದಿಟ್ಟುಕೊಂಡು  ಮ್ಯಾಗಿ ಮಾರಿದ ಯುವಕನೋರ್ವ ಒಂದೇ ದಿನ ಮ್ಯಾಗಿ ಮಾರಿ ಗಳಿಸಿದ ಹಣ ಎಷ್ಟು ಎಂದು ಕೇಳಿದ್ರೆ ನೀವು ನಿಜಕ್ಕೂ ಅಚ್ಚರಿ ಪಡ್ತೀರಾ..!

ಚಳಿಗಾಲದ ಮೈ ಕೊರೆಯುವ ಚಳಿಗೆ ಬಿಸಿಬಿಸಿಯಾಗಿ ಏನಾದರು ತಿನ್ಬೇಕು ಅನ್ನೋದು ಬಹುತೇಕರ ಮನದ ಬಯಕೆ. ಚಳಿಗಾಲದ ಆ ಚಳಿಯಲ್ಲಿ ಬಿಸಿ ಬಿಸಿಯಾಗಿ ಖಾರ ಖಾರವಾಗಿ ಏನಾದರು ತಿಂದು ಟೀನೋ ಕಾಫಿ ನೋ ಕುಡಿದರೆ ಮನಸ್ಸು ದೇಹ ಎರಡು ಹಗುರಾಗುತ್ತದೆ ಅನ್ನೋದು ಅನೇಕ ಆಹಾರಪ್ರಿಯರ ಅಭಿಪ್ರಾಯ. ಜನರ ಈ ಆಸೆಯನ್ನೇ ಮುಂದಿಟ್ಟುಕೊಂಡು ಬೆಟ್ಟ ಪ್ರದೇಶದಲ್ಲಿ ಮ್ಯಾಗಿ ಮಾಡಿದ ಯುವಕನೋರ್ವ ಒಂದೇ ದಿನ ಮ್ಯಾಗಿ ಮಾರಿ ಗಳಿಸಿದ ಹಣ ಎಷ್ಟು ಎಂದು ಕೇಳಿದ್ರೆ ನೀವು ನಿಜಕ್ಕೂ ಅಚ್ಚರಿ ಪಡ್ತೀರಾ..!

ಮ್ಯಾಗಿ ಮಾರಿ ಒಂದೇ ದಿನ 21,000 ಗಳಿಸಿದ ಯುವಕ

ಹೌದು ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಹಾಗೂ ಕಂಟೆಂಟ್ ಕ್ರಿಯೇಟರ್ ಆಗಿರುವ ಬಾದಲ್ ಎಂಬ ಯುವಕ ತಾವು ಪ್ರವಾಸಿ ತಾಣವಾದ ಪರ್ವತ ಪ್ರದೇಶವೊಂದಲ್ಲಿ ಮ್ಯಾಗಿ ಮಾರಿ ದುಡಿದ ಹಣದ ಬಗ್ಗೆ ಹೇಳಿಕೊಂಡಿದ್ದು, ವೀಡಿಯೋ ಭಾರಿ ವೈರಲ್ ಆಗಿದೆ. ವೀಡಿಯೋದಲ್ಲಿ ಅವರು ಮ್ಯಾಗಿ ಮಾರಿ ಕೇವಲ ಒಂದು ದಿನದಲ್ಲಿ 21,000 ರೂಪಾಯಿ ಗಳಿಸಿದ್ದಾಗಿ ಹೇಳಿದ್ದಾರೆ.

ತಾವು ಮ್ಯಾಗಿ ಮಾರಿದ ಪ್ರದೇಶದ ಬಗ್ಗೆ ಅವರು ಮಾಹಿತಿ ನೀಡಿಲ್ಲ, ಆದರೆ ಅದೊಂದು ಪ್ರವಾಸಿ ತಾಣವಾಗಿದ್ದು, ಅಲ್ಲಿ ನೂರಾರು ಪ್ರವಾಸಿಗರ ಇರುವುದನ್ನು ಕಾಣಬಹುದು. ಇಲ್ಲಿ ಅವರು ಎಲ್‌ಪಿಜಿ ಸಿಲಿಂಡರ್ ಇಟ್ಟುಕೊಂಡು ಸಣ್ಣದೊಂದು ಟೇಬಲ್ ಹಾಕಿ ಮ್ಯಾಗಿ ತಯಾರಿಸಿ ಮಾರಾ ಮಾಡಿದ್ದು, ಮಾಮೂಲಿ ಮ್ಯಾಗಿಗೆ ಪ್ಲೇಟ್‌ಗೆ 70 ರೂಪಾಯಿಯಂತೆ ಮಾರಾಟ ಮಾಡಿದ್ದಾರೆ. ಚೀಸ್ ಮಿಸ್ರಿತ ಮ್ಯಾಗಿಯನ್ನು ಪ್ಲೇಟ್‌ಗೆ 100 ರೂಪಾಯಿಯಂತೆ ಮಾರಾಟ ಮಾಡಿದ್ದಾರೆ. ಹೀಗೆ ಕೇವಲ ಒಂದು ದಿನದಲ್ಲಿ ಅವರು 300ರಿಂದ 350 ಪ್ಲೇಟ್ ಮ್ಯಾಗಿಯನ್ನು ಇಲ್ಲಿ ಮಾರಾಟ ಮಾಡಿದ್ದು, ಈ ವ್ಯವಹಾರದಿಂದ ಅವರು ಕೇವಲ ಒಂದೇ ದಿನ 21,000 ರೂಪಾಯಿ ಗಳಿಕೆ ಮಾಡಿದ್ದಾರೆ.

ಪರ್ವತ ಪ್ರದೇಶದಲ್ಲಿ ಒಂದು ದಿನ ಮ್ಯಾಗಿ ಮಾರಾಟ ಎಂದು ಶೀರ್ಷಿಕೆ ನೀಡಿ ಅವರು ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದು4 ಮಿಲಿಯನ್‌ಗೂ ಹೆಚ್ಚು ಜನ , ಈ ವೀಡಿಯೋವನ್ನು ವೀಕ್ಷಿಸಿದ್ದಾರೆ. ಇದು ಪರ್ವತ ಪ್ರದೇಶಗಳಿರುವ ಪ್ರವಾಸಿ ತಾಣಗಳಲ್ಲಿ ಮ್ಯಾಗಿಯ ಜನಪ್ರಿಯತೆಯನ್ನು ಸೂಚಿಸುವ ಜೊತೆಗೆ ಚುಮು ಚುಮು ಚಳಿಗೆ ಇದು ಬೆಸ್ಟ್ ಆಹಾರ ಎನಿಸುವಂತೆ ಮಾಡಿದೆ.

ಕಂಟೆಂಟ್ ಕ್ರಿಯೇಟರ್ ಬಾದಲ್ ಅವರು ಹೀಗೆ ವೀಡಿಯೋ ಪೋಸ್ಟ್ ಮಾಡುತ್ತಿದ್ದಂತೆ ನೆಟ್ಟಿಗರು ಹಾಗಾದರೆ ಪ್ರತಿದಿನ ಇಲ್ಲಿ ಮ್ಯಾಗಿ ಮಾರಾಟ ಮಾಡಿದರೆ ಬರುವ ತಿಂಗಳ ಆದಾಯ ಎಷ್ಟು ಎಂಬ ಬಗ್ಗೆ ಲೆಕ್ಕಾಚಾರ ಮಾಡುತ್ತಿದ್ದಾರೆ. ಇಲ್ಲಿ ವ್ಯಾಪಾರಿ ಪ್ರತಿ ತಿಂಗಳು 6 ಲಕ್ಷ ರೂಗಳಿಗಿಂತ ಹೆಚ್ಚು ಆದಾಯ ಗಳಿಸಬಹುದು ಎಂಬುದನ್ನು ತಿಳಿದು ಅನೇಕರು ಅಚ್ಚರಿಪಟ್ಟಿದ್ದಾರೆ. ನಾನು ನನ್ನ ಉದ್ಯೋಗ ಬಿಡಲೇ ಎಂದು ಒಬ್ಬರು ಈ ವೀಡಿಯೋ ನೋಡಿದ ನಂತರ ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಜಮ್ಮುಕಾಶ್ಮೀರದಲ್ಲಿ ತೀವ್ರ ಹಿಮಪಾತ: ತುರ್ತು ಚಿಕಿತ್ಸೆ ನೀಡಲು ಜೇಸಿಬಿ ಬಳಸಿ ಆಸ್ಪತ್ರೆ ತಲುಪಿದ ವೈದ್ಯರು

ಆದರೆ, 21,000 ರೂ.ಗಳ ಅಂಕಿ ಅಂಶವು ಆತ ಗಳಿಸಿದ ಒಟ್ಟು ಆದಾಯವಾಗಿದ್ದು, ಇದರಲ್ಲಿ ಮ್ಯಾಗಿ ಪ್ಯಾಕೆಟ್‌ಗಳಿಗೆ ತಗುಲಿದ ವೆಚ್ಚ, ಎಲ್‌ಪಿಜಿ ಸಿಲಿಂಡರ್ ವೆಚ್ಚ, ಬಿಸಾಡಬಹುದಾದ ಪೇಪರ್ ಪ್ಲೇಟ್‌ಗಳ ವೆಚ್ಚ ಮತ್ತು ಇತರ ವೆಚ್ಚಗಳನ್ನು ಲೆಕ್ಕ ಮಾಡಿಲ್ಲ ಎಂಬುದನ್ನು ಇಲ್ಲಿ ಗಮನಿಸಬೇಕು. ಅವೆಲ್ಲದರ ವೆಚ್ಚ ಲೆಕ್ಕ ಹಾಕಿದರೂ ಈ ವ್ಯವಹಾರದಲ್ಲಿ ನಷ್ಟವೇನು ಇಲ್ಲ ಎಂಬುದು ಗಳಿಕೆಯಲ್ಲೇ ಗೊತ್ತಾಗುತ್ತಿದೆ.

ಇದನ್ನೂ ಓದಿ: ಶ್ರೀಮಂತಿಕೆ ಇದ್ದರೂ ಮುಕೇಶ್ ಅಂಬಾನಿ ವಿನಯತೆಗೆ ನೆಟ್ಟಿಗರು ಫಿದಾ: ಹಳೇ ವೀಡಿಯೋ ಮತ್ತೆ ವೈರಲ್

ಈ ವೀಡಿಯೋ ನೋಡಿದ ನಂತರ ನಾನು ಕೂಡ ಫಿಟ್‌ನೆಟ್ ಕಂಟೆಂಟ್ ಮಾಡೋದು ಬಿಟ್ಟು ಮ್ಯಾಗಿ ಮಾರಾಟ ಮಾಡೋದು ಬೆಸ್ಟ್ ಎಂದೆನಿಸುತ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಮತ್ತೊಬ್ಬರು ವೆಚ್ಚವೆಲ್ಲವನ್ನು ಕಳೆದು ಲೆಕ್ಕಾಚಾರ ಹಾಕಿದ್ದು, ಹೀಗೆ ಬರೆದಿದ್ದಾರೆ. ಅದು 21 ಸಾವಿರ ಆದಾಯ ಅಲ್ಲ, 300 ಪ್ಯಾಕೆಟ್‌ಗಳ ಮ್ಯಾಗಿಯ ಒಟ್ಟು ಆದಾಯ 21000 ರೂಪಾಯಿ. 20 ರೂಪಾಯಿಯ 300 ಪ್ಯಾಕೆಟ್‌ಗಳ ಒಟ್ಟು ಬೆಲೆ 6000 ಆಗಿದ್ದರೆ, ಗ್ಯಾಸ್ 500, ನಂತರ ಕಚ್ಚಾ ಮ್ಯಾಗಿಯ ಸಾಗಣೆ ವೆಚ್ಚ 5000, ಆದ್ದರಿಂದ ಒಟ್ಟು ವೆಚ್ಚ 9500, ನಂತರ ನೀವು ದಿನಕ್ಕೆ 1000 ರೂಪಾಯಿ ನೀಡಿಒಬ್ಬ ಸಹಾಯಕನನ್ನು ನೇಮಿಸಿಕೊಳ್ಳಬೇಕು. ಆದ್ದರಿಂದ ಕೊನೆಯಲ್ಲಿ ಒಟ್ಟು ಲಾಭ 8000 ರೂಪಾಯಿ ಆಗಿರುತ್ತದೆ. ಆದರೂ ಇದು ಇತರ ಹಲವು ಡಿಗ್ರಿಗಳಿಗಿಂತ ಉತ್ತಮವಾಗಿದೆ, ಆದರೆ ಮೈನಸ್ 10 ಡಿಗ್ರಿ ತಾಪಮಾನದಲ್ಲಿ ಪ್ರತಿದಿನ ಹೋರಾಡುವುದು ಕಷ್ಟ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

View post on Instagram