ಜಮ್ಮು ಕಾಶ್ಮೀರದಲ್ಲಿನ ತೀವ್ರ ಹಿಮಪಾತದಿಂದ ರಸ್ತೆಗಳು ಬಂದ್ ಆಗಿದ್ದವು. ಈ ಸಂದರ್ಭದಲ್ಲಿ, ಶೋಪಿಯಾನ್ ಜಿಲ್ಲಾ ಆಸ್ಪತ್ರೆಯ ವೈದ್ಯರಾದ ಬಶರತ್ ಪಂಡಿತ್ ಅವರು, ತುರ್ತು ಶಸ್ತ್ರಚಿಕಿತ್ಸೆಗಾಗಿ 3 ಕಿಲೋ ಮೀಟ‌ರ್ ನಡೆದು, ನಂತರ ಜೆಸಿಬಿ ಮೂಲಕ ಆಸ್ಪತ್ರೆ ತಲುಪಿ ತಮ್ಮ ಕರ್ತವ್ಯ ಮೆರೆದಿದ್ದಾರೆ.

ರೋಗಿಗೆ ತುರ್ತು ಚಿಕಿತ್ಸೆ ನೀಡಲು ಜೇಸಿಬಿಯಲ್ಲಿ ಬಂದ ವೈದ್ಯ:

ಜಮ್ಮು ಕಾಶ್ಮೀರ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ತೀವ್ರ ಹಿಮಪಾತವಾಗುತ್ತಿದೆ. ಹಿಮಾಚಲ ಪ್ರದೇಶದಲ್ಲಿ ಹಿಮಪಾತಕ್ಕೆ ಸಿಲುಕಿ ಇಬ್ಬರು ಚಾರಣಿಗರು ಸಾವನ್ನಪ್ಪಿದ ಘಟನೆ ನಡೆದಿದೆ. ಹಲವೆಡೆ ಹಿಮಪಾತದಿಂದ ರಸ್ತೆಗಳು ಬಂದ್ ಆಗಿವೆ. ಹೀಗಾಗಿ ಜಮ್ಮು ಕಾಶ್ಮೀರದಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಹಿಮಪಾತದಿಂದ ರಸ್ತೆಗಳು ಆವೃತವಾಗಿರುವುದರಿಂದ ಸುಗಮ ಸಂಚಾರಕ್ಕೆ ಅಡಚಣೆಯಾಗಿದೆ. ಹೀಗಿರುವಾಗ ಜಮ್ಮು ಕಾಶ್ಮೀರದಲ್ಲಿ ವೈದ್ಯರೊಬ್ಬರು ರೋಗಿಗೆ ತುರ್ತು ಚಿಕಿತ್ಸೆ ನೀಡುವುದಕ್ಕಾಗಿ ಮಣ್ಣು ತೆಗೆಯುವುದಕ್ಕೆ ಬಳಸುವ ಜೇಸಿಬಿಯಲ್ಲಿ(ಬುಲ್ಡೋಜರ್‌)ನಲ್ಲಿ ಆಗಮಿಸಿದ ಘಟನೆ ನಡೆದಿದೆ.

ತಾವು ಸಾಗುವ ದಾರಿಯಲ್ಲಿ ಹಿಮಪಾತವಾಗಿದ್ದರಿಂದ ವೈದ್ಯ ಬಶರತ್ ಪಂಡಿತ್ ಅವರು ಆಸ್ಪತ್ರೆಗೆ ಹೋಗುವುದು ಕಷ್ಟಕರವಾಗಿತ್ತು, ಅವರು ಸಾಗುವ ರಸ್ತೆಗಳು ಹಿಮಪಾತದಿಂದ ಬಂದ್ ಆಗಿದ್ದವು. ಹೀಗಾಗಿ ಅವರು ಅಸ್ಪತ್ರೆಗೆ ತುರ್ತಾಗಿ ಹೋಗುವುದಕ್ಕೆ ಜೇಸಿಬಿಯನ್ನು ಬಳಸಬೇಕಾಯ್ತು. ದಕ್ಷಿಣ ಕಾಶ್ಮೀರದ ಪುಲ್ವಾಮಾ ನಿವಾಸಿಯಾದ ಅವರು ಪ್ರಸ್ತುತ ಶ್ರೀನಗರದಲ್ಲಿ ನೆಲೆಸಿದ್ದು, ಶೋಪಿಯಾನ್‌ನ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯರಾಗಿ ಕೆಲಸ ಸ್ತ್ರೀ ರೋಗ ತಜ್ಞರಾಗಿ ಕೆಲಸ ಮಾಡುತ್ತಿದ್ದಾರೆ.

ಇದನ್ನು ಓದಿ: ಶ್ರೀಮಂತಿಕೆ ಇದ್ದರೂ ಮುಕೇಶ್ ಅಂಬಾನಿ ವಿನಯತೆಗೆ ನೆಟ್ಟಿಗರು ಫಿದಾ: ಹಳೇ ವೀಡಿಯೋ ಮತ್ತೆ ವೈರಲ್

ಮಂಗಳವಾರ ಅವರು ಬೆಳಗ್ಗೆ 7.30ರ ಸುಮಾರಿಗೆ ತುರ್ತು ಕರೆಯ ಹಿನ್ನೆಲೆ ತಮ್ಮ ಕರ್ತವ್ಯಕ್ಕೆ ಹೋಗುವುದಕ್ಕಾಗಿ ಮನೆಯಿಂದ ಹೊರಗೆ ಬಂದಿದ್ದಾರೆ. 55 ಕಿಲೋ ಮೀಟರ್ ಪಯಣಿಸುವುದಕ್ಕೆ ಅವರು ತಮ್ಮ ಕಾರನ್ನು ಬಳಸಿದ್ದಾರೆ. ಆದರೆ ಅವರು ವಾಸವಿದ್ದ ಶ್ರೀನಗರದಲ್ಲಿ ಹಿಮಪಾತ ಕಡಿಮೆ ಇದ್ದರೆ. ಮುಂದೆ ಸಾಗುತ್ತಿದ್ದಂತೆ ಪರಿಸ್ಥಿತಿ ಬಹಳ ಹದಗೆಟ್ಟಿತ್ತು. ಶೋಪಿಯನ್‌ನಲ್ಲಿ 3ರಿಂದ 4 ಅಡಿ ಹೊಸದಾಗಿ ಹಿಮಪಾತವಾಗಿ ರಸ್ತೆಯಲ್ಲಿ ಮಂಜು ಬಿದ್ದಿದ್ದರಿಂದ ಅವರು ಶೋಪಿಯಾನ್ ತಲುಪುತ್ತಿದ್ದಂತೆ ಮಾರ್ಗಮಧ್ಯೆಯೇ ಅವರ ಕಾರು ಸ್ಥಗಿತಗೊಂಡಿತ್ತು.

ಹೀಗಾಗಿ ಕಾರನ್ನು ಪಕ್ಕಕ್ಕೆ ಹಾಕಿದ ಅವರು ಮೊದಲಿಗೆ ಸುಮಾರು 3 ಕಿಲೋ ಮೀಟರ್ ನಡೆದಿದ್ದಾರೆ. ನಂತರ ಅವರಿಗೆ ಜೇಸಿಬಿ ಸಿಕ್ಕಿದ್ದು, ಜೇಸಿಬಿ ಮೂಲಕ ಆಸ್ಪತ್ರೆಯನ್ನು ತಲುಪಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಅದು ಮುಂಜಾನೆಯಾಗಿದ್ದು, ರಸ್ತೆಗಳು ಸಂಚಾರಕ್ಕೆ ತೆರೆದುಕೊಂಡಿರಲಿಲ್ಲ. ನಾನು ವಾಕ್ ಮಾಡುವುದಕ್ಕೆ ಆರಂಭಿಸಿದೆ. ಆದರೆ ನಂತರ ಜೇಸಿಬಿ ಬಂತು ನಾನು ಅದನ್ನೇರಿ ಆಸ್ಪತ್ರೆಗೆ ಬಂದೇ ಎಂದು ಅವರು ಸುದ್ದಿಸಂಸ್ಥೆ ಪಿಟಿಐಗೆ ಹೇಳಿದ್ದಾರೆ.

ಇದನ್ನು ಓದಿ: ವಿಧಾನಸಭೆಯಲ್ಲಿ ಬಿಗ್ಬಾಸ್ ಗೆದ್ದಿದ್ದು ಗಿಲ್ಲಿ ಅಲ್ಲ ನಿರ್ಮಲಾ ಸೀತಾರಾಮನ್ ಎಂದ ಪ್ರದೀಪ್ ಈಶ್ವರ್

ಜೇಸಿಬಿ(excavator) ಬಳಸಿದ್ದರಿಂದ ಸುಮಾರು 10.30ಕ್ಕೆ ಆಸ್ಪತ್ರೆಗ ತಲುಪಿದೆ. ನನ್ನದು ಜವಾಬ್ದಾರಿಯುತ ಕೆಲಸವಾಗಿದೆ. ಇದು ನನ್ನ ರೋಗಿಗಳ ಕಡೆಗೆ, ವಿಶೇಷವಾಗಿ ಗರ್ಭಿಣಿ ಮಹಿಳೆಯರ ಕಡೆಗೆ ಕರ್ತವ್ಯ ಪ್ರಜ್ಞೆಯಾಗಿತ್ತು, ಇಲ್ಲದಿದ್ದರೆ ಅವರು ಸಮಸ್ಯೆಗಳನ್ನು ಎದುರಿಸುತ್ತಿದ್ದರು ಎಂದು ಅವರು ಹೇಳಿದರು.

ಗರ್ಭಿಣಿ ಮಹಿಳೆಗೆ ಶಸ್ತ್ರಚಿಕಿತ್ಸೆ ಅಗತ್ಯವಿತ್ತು. ಹೀಗಾಗಿ ಹೇಗಾದರೂ ಸರಿ ಆಸ್ಪತ್ರೆಗೆ ತಲುಪಲೇಬೇಕು ಎಂದು ನಿರ್ಧರಿಸಿದೆ ಎಂದು ಪಂಡಿತ್ ಹೇಳಿದರು. ಅನೇಕ ರೋಗಿಗಳು ಶಸ್ತ್ರಚಿಕಿತ್ಸೆಗಾಗಿ ಸಾಲುಗಟ್ಟಿ ನಿಂತಿದ್ದರು ಮತ್ತು ಕೆಲವು ತುರ್ತು ಪರಿಸ್ಥಿತಿಗಳೂ ಇದ್ದವು. ಈ ಭಾರೀ ಹಿಮಪಾತದಲ್ಲಿ ರೋಗಿಗಳನ್ನು ಇತರ ಆಸ್ಪತ್ರೆಗಳಿಗೆ ರೆಫರ್ ಮಾಡುವುದಕ್ಕೂ ತೊಂದರೆಯಾಗುತ್ತಿದೆ. ತಮ್ಮ ವಿಭಾಗವು ಹಗಲಿನಲ್ಲಿ 10 ಶಸ್ತ್ರಚಿಕಿತ್ಸೆಗಳನ್ನು ಮಾಡಿದೆ ಮತ್ತು ಎಲ್ಲಾ ರೋಗಿಗಳ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದರು.