ನವದೆಹಲಿ(ಫೆ.05): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಜನಪ್ರಿಯ ಮಧ್ಯಂತರ ಬಜೆಟ್ ನ್ನು ಮಂಡಿಸಿದೆ. ಚುನಾವಣೆ ಹೊಸ್ತಿಲಲ್ಲಿ ಬಜೆಟ್ ಮಂಡನೆ ಮೂಲಕ ಜನಸಾಮಾನ್ಯರ ಮನ ಗೆಲ್ಲುವಲ್ಲಿ ಕೇಂದ್ರ ಸರ್ಕಾರ ಕೊನೆಗೂ ಯಶಸ್ವಿಯಾಗಿದೆ.

ಈ ಮಧ್ಯೆ ಮೋದಿ ಸರ್ಕಾರದ ಮಧ್ಯಂತರ ಬಜೆಟ್ ನಲ್ಲಿ ಉದ್ಯೋಗ ಸೃಷ್ಟಿಯ ಕುರಿತು ಸೊಲ್ಲೆತ್ತದಿರುವುದು ಮೋದಿ ವಿರೋಧಿಗಳಿಗೆ ಚುನಾವಣೆ ಸಂದರ್ಭದಲ್ಲಿ ಹೊಸ ಅಸ್ತ್ರವೊಂದನ್ನು ನೀಡಿದಂತಾಗಿದೆ.

ಹೌದು, ಮಧ್ಯಂತರ ಬಜೆಟ್ ನಲ್ಲಿ ಉದ್ಯೋಗ ಸೃಷ್ಟಿಯ ದಾಖಲೆಗಳನ್ನು ಸೇರಿಸದೇ ಕೇವಲ ಬಾಯಿ ಮಾತಿನಲ್ಲಿ ಉದ್ಯೋಗ ಸೃಷ್ಟಿಯ ಕುರಿತು ಮಾಹಿತಿ ನೀಡಲಾಗಿದೆ. ಕೇಂದ್ರ ಸರ್ಕಾರದ ಇಲಾಖೆಯೇ ನೀಡಿದ ಅಂಕಿ ಅಂಶಗಳನ್ನು ಬಜೆಟ್ ನಲ್ಲಿ ಸೇರಿಸದೇ ಇರುವುದು ಎಷ್ಟು ನ್ಯಾಯ ಎಂಬ ಕೂಗು ಇದೀಗ ಕೆಳಿ ಬರುತ್ತಿದೆ.

ಅಂಕಿ ಅಂಶಗಳ ಪ್ರಕಾರ ಸದ್ಯ ಭಾರತದ ನಿರುದ್ಯೋಗದ ಪ್ರಮಾಣ ಶೇ.6.1ರಷ್ಟಿದ್ದು, ಇದು ಕಳೆದ ನಾಲ್ಕು ದಶಕಗಳಲ್ಲೇ ಅತ್ಯಧಿಕ ಎಂದು ಹೇಳಲಾಗಿದೆ. ಈ ಅಂಕಿ ಅಂಶಗಳು ಬಜೆಟ್ ಗೂ ಮುನ್ನವೇ ಹೊರ ಬಿದ್ದಿದ್ದು, ಅದಾಗ್ಯೂ ಹಣಕಾಸು ಸಚಿವರು ಬಜೆಟ್ ಮಂಡನೆ ಸಂದರ್ಭದಲ್ಲಿ ಉದ್ಯೋಗ ಸೃಷ್ಟಿಸುವಲ್ಲಿ ಎನ್‌ಡಿಎ ಸರ್ಕಾರ ಯಶಸ್ವಿಯಾಗಿದೆ ಎಂದು ಉಲ್ಲೇಖಿಸಿದ್ದರು.

ಇನ್ನು 2014ರ ಲೋಕಸಭೆ ಚುನಾವಣೆಗೂ ಮುನ್ನ ಉದ್ಯೋಗ ಸೃಷ್ಟಿಯ ಭರವಸೆ ನೀಡಿದ್ದ ಪ್ರಧಾನಿ ಮೋದಿ, ಉದ್ಯೋಗ ಸೃಷ್ಟಿಸುವಲ್ಲಿ ವಿಫಲರಾಗಿದ್ದಾರೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಲೇ ಇವೆ.

ಈ ಮಧ್ಯೆ ಕೇಂದ್ರದ ಈ ಅಂಕಿ ಅಂಶಗಳು ಪ್ರತಿಪಕ್ಷಗಳಿಗೆ ಅಸ್ತ್ರವೊಂದನ್ನು ನೀಡಿದಂತಾಗಿದ್ದು, 2019ರ ಲೋಕಸಭೆ ಚುನಾವಣೆಯಲ್ಲಿ ಇದನ್ನು ಭರ್ಜರಿಯಾಗಿ ಬಳಸಿಕೊಳ್ಳಲು ಮುಂದಾಗಿವೆ.

ಬಯಲಾಯ್ತು ಮೋದಿ ಬಜೆಟ್ ನಂಬರ್ ಗೇಮ್: ಅಸಲಿ ಕಹಾನಿ!

ಚತುರ ಮೋದಿಯ 38 ಕೋಟಿ ಲೆಕ್ಕಾಚಾರ: ಪ್ರತಿಪಕ್ಷಗಳಲ್ಲಿ ಹಾಹಾಕಾರ!

ಸಬ್ ಕಾ ಸಾಥ್ ಸಬ್ ಕಾ ವಿಕಾಸ್: ಮೋದಿ ಬಜೆಟ್ ಫಸ್ಟ್‌ಕ್ಲಾಸ್!

ರೈತರ ಖಾತೆಗೆ 6000 ರು: ಮೊದಲ ಕಂತು ವಿತರಣೆಗೆ ದಿನಾಂಕ ಫಿಕ್ಸ್!