Asianet Suvarna News Asianet Suvarna News

ನಿರಂತರವಾಗಿ ಇಳಿಯುತ್ತಲೇ ಇದೆ ಚಿನ್ನ: ಅಳೆದು ತೂಗಿ ಕೊಂಡರೆ ಚೆನ್ನ!

ಚಿನ್ನ-ಬೆಳ್ಳಿ ದರದಲ್ಲಿ ಗಣನೀಯ ಇಳಿಕೆ| ಅಕ್ಟೋಬರ್ ತಿಂಗಳಲ್ಲಿ ನಿರಂತರ ಇಳಿಕೆ ಕಾಣುತ್ತಿರುವ ಚಿನ್ನದ ಬೆಲೆ| ಮಲ್ಟಿ ಕಮೋಡಿಟಿ ಎಕ್ಸಚೇಂಜ್’ನಲ್ಲಿ ಚಿನ್ನದ ಬೆಲೆ ಶೇ.0.28ರಷ್ಟು ಇಳಿಕೆ| ಮಲ್ಟಿ ಕಮೋಡಿಟಿ ಎಕ್ಸಚೇಂಜ್’ನಲ್ಲಿ ಬೆಳ್ಳಿ ಬೆಲೆಯಲ್ಲಿ ಶೇ.0.01ರಷ್ಟು ಇಳಿಕೆ| ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ

Gold prices fall Silver Prices Too Gets Low In Market
Author
Bengaluru, First Published Oct 20, 2019, 4:53 PM IST

ನವದೆಹಲಿ(ಅ.20): ಅಕ್ಟೋಬರ್ ತಿಂಗಳಲ್ಲಿ ನಿರಂತರವಾಗಿ ಇಳಿಕೆಯಾಗುತ್ತಿರುವ ಚಿನ್ನದ ದರ, ದೇಶೀಯ ಮಾರುಕಟ್ಟೆಯಲ್ಲಿ ಮತ್ತಷ್ಟು ಇಳಿಕೆ ಕಾಣುವ ಮೂಲಕ ಆಭರಣ ಪ್ರೀಯರಲ್ಲಿ ಸಂತಸ ಮೂಡಿಸಿದೆ. 

ಒಂದು ತಿಂಗಳಲ್ಲಿ ಒಟ್ಟು 1,800 ರೂ. ಇಳಿದ ಬಂಗಾರದ ಬೆಲೆ!

ಮಲ್ಟಿ ಕಮೋಡಿಟಿ ಎಕ್ಸಚೇಂಜ್’ನಲ್ಲಿ ಚಿನ್ನದ ಬೆಲೆ ಶೇ.0.28ರಷ್ಟು ಇಳಿಕೆಯಾಗಿದ್ದು, 10 ಗ್ರಾಂ ಚಿನ್ನದ ಬೆಲೆ 38,090 ರೂ. ಆಗಿದೆ.

2 ಸಾವಿರ ರೂ. ಇಳಿದ ಬಂಗಾರ: 10 ಗ್ರಾಂ ಗೆ ಟೊಟಲ್ ಬೆಲೆ ಎಷ್ಟಂದ್ರ?

10 ಗ್ರಾಂ ಚಿನ್ನದ ಬೆಲೆಯಲ್ಲಿ ಒಟ್ಟು 106 ರೂ. ಇಳಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಇಳಿಕೆ ಕಾಣುವ ಸಂಭವವಿದೆ.

3 ದಿನ ಆಯ್ತು ಬಂಗಾರದ ಬೆಲೆ ಇಳಿದು: ಖರೀದಿ ಮಾಡಲ್ವಾ ತಿಳಿದೂ ತಿಳಿದು!

ಅದರಂತೆ ಬೆಳ್ಳಿ ಬೆಲೆಯಲ್ಲೂ ಗಮನಾರ್ಹ ಇಳಿಕೆ ಕಂಡಿದ್ದು, ಶೇ.0.01ರಷ್ಟು ದರದಲ್ಲಿ ಇಳಿಕೆಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 45,500 ರೂ. ಆಗಿದೆ.

RBIಗೆ ಪುಣ್ಯ ಬರಲಿ: ಚಿನ್ನ, ಬೆಳ್ಳಿ ದರ ಇಳಿದಿದ್ದು ನಿಮಗೆ ಗೊತ್ತಿರಲಿ!

ಇನ್ನುಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದ್ದು, ಶೇ.0.32 ರಷ್ಟು ಇಳಿಕೆಯಾಗಿದೆ. ಚಿನ್ನದ ದರ ಒಂದು ಔನ್ಸ್’ಗೆ 1,493 ಡಾಲರ್ ಆಗಿದೆ.

ಹೊಸ ತಿಂಗಳ ಭರ್ಜರಿ ಶುಭಾರಂಭ: ಇಳಿದ ಚಿನ್ನ, ಬೆಳ್ಳಿ ಬೆಲೆ!

ಅಲ್ಲದೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲದಲಿ ಬೆಳ್ಳಿ ಬೆಲೆಯಲ್ಲೂ ಇಳಿಕೆಯಾಗಿದ್ದು, ಶೇ.0.24ರಷ್ಟು ಇಳಿಕೆ ಕಂಡಿದೆ. ಒಂದು ಔನ್ಸ್ ಬೆಳ್ಳಿ ಬೆಲೆ 17.57 ಡಾಲರ್ ಆಗಿದೆ.

ಚಿನ್ನದ ಬೆಲೆಯಲ್ಲಿ ಇಳಿಕೆ: ಕನಸಲ್ಲೂ ಖರೀದಿಯ ಕನವರಿಕೆ!

ಕಳೆದ ಒಂದು ತಿಂಗಳಲ್ಲಿ ಬಂಗಾರದ ಬೆಲೆಯಲ್ಲಿ ಬರೋಬ್ಬರಿ 1,900 ರೂ. ಇಳಿಕೆಯಾಗಿದ್ದು, ಈ ನಿರಂತರ ಇಳಿಕೆ ಆಭರಣ ಪ್ರೀಯರಲ್ಲಿ ಸಂತಸ ಮೂಡಿಸಿದ್ದಲ್ಲದೇ, ದೇಶೀಯ ಮಾರುಕಟ್ಟೆಯ ಚೈತನ್ಯಕ್ಕೂ ಕಾರಣವಾಗಿದೆ.

2,400 ರೂ. ಇಳಿದ ಚಿನ್ನದ ಬೆಲೆ: ಸಮಯಕ್ಕೆ ಖರೀದಿಯೂ ಒಂದು ಕಲೆ!

Follow Us:
Download App:
  • android
  • ios