RBIಗೆ ಪುಣ್ಯ ಬರಲಿ: ಚಿನ್ನ, ಬೆಳ್ಳಿ ದರ ಇಳಿದಿದ್ದು ನಿಮಗೆ ಗೊತ್ತಿರಲಿ!
ಮತ್ತೆ ಇಳಿಕೆಯತ್ತ ಮುಖ ಮಾಡಿದ ಚಿನ್ನ, ಬೆಳ್ಳಿ ದರ| ಆರ್‌ಬಿಐ ರೆಪೋದರಲ್ಲಿ ಕಡಿತ ಮಾಡಿದ ಪರಿಣಾಮ ಮುಂಬೈ ಷೇರು ಮಾರುಕಟ್ಟೆ ಚುರುಕು| ರೆಪೋ ದರವನ್ನು ಶೇ.5.15ರಷ್ಟು ಕಡಿತಗೊಳಿಸಿದ ಆರ್‌ಬಿಐ| ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ದರದಲ್ಲಿ ಶೇ.0.14ರಷ್ಟು ಇಳಿಕೆ| ಮಲ್ಟಿ ಕಮೋಡಿಟಿ ಎಕ್ಸಚೇಂಜ್'ನಲ್ಲಿ ಬೆಳ್ಳಿ ಬೆಲೆಯಲ್ಲಿ ಶೇ.0.44ರಷ್ಟು ಇಳಿಕೆ|
ನವದೆಹಲಿ(ಅ.04): ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಇಳಿಕೆಯತ್ತ ಮುಖ ಮಾಡಿರುವ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಇಂದೂ ಕೂಡ ಕೊಂಚ ಇಳಿಕೆ ಕಂಡು ಬಂದಿದೆ.
ಪ್ರಮುಖವಾಗಿ ಆರ್‌ಬಿಐ ತನ್ನ ರೆಪೋ ದರವನ್ನು ಇಳಿಸಿದ್ದು, ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರ ಇಳಿಕೆಯಾಗಲು ಕಾರಣ ಎನ್ನಲಾಗಿದೆ.
ಆರ್‌ಬಿಐ ತನ್ನ ರೆಪೋ ದರವನ್ನು ಶೇ.5.15ರಷ್ಟು ಕಡಿತಗೊಳಿಸಿದ್ದು, ಇದು 2010ರ ನಂತರದ ಗಣನೀಯ ಕಡಿತ ಇದಾಗಿದೆ. ರೆಪೋ ದರ ಇಳಿದ ಹಿನ್ನೆಲೆಯಲ್ಲಿ ಮುಂಬೈ ಷೇರು ಮಾರುಕಟ್ಟೆ ಚೇತರಿಕೆ ಕಂಡಿದೆ.
ಅದರಂತೆ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ದರದಲ್ಲಿ ಶೇ.0.14ರಷ್ಟು ಇಳಿಕೆ ಕಂಡಿದ್ದು, 10 ಗ್ರಾಂ ಚಿನ್ನದ ದರ 38,350 ರೂ. ಆಗಿದೆ.
ಇನ್ನು ಮಲ್ಟಿ ಕಮೋಡಿಟಿ ಎಕ್ಸಚೇಂಜ್'ನಲ್ಲಿ ಬೆಳ್ಳಿ ಬೆಲೆಯಲ್ಲಿ ಶೇ.0.44ರಷ್ಟು ಇಳಿಕೆಯಾಗಿದ್ದು, ಒಂದು ಕೆಜಿ ಬೆಳ್ಳಿ ಬೆಲೆ 45,400 ರೂ. ಆಗಿದೆ.