MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • World News
  • ಅಬುಧಾಬಿಯಲ್ಲಿ ಫ್ರಾನ್ಸ್‌ನ ನೌಕಾನೆಲೆ ಮೇಲೆ ಇರಾನ್ ಡ್ರೋನ್ ದಾಳಿ: ಇರಾನ್ ಆಕ್ರಮಣದ ವಿರುದ್ಧ ಒಟ್ಟಾದ ಗಲ್ಫ್‌ ರಾಷ್ಟ್ರಗಳು

ಅಬುಧಾಬಿಯಲ್ಲಿ ಫ್ರಾನ್ಸ್‌ನ ನೌಕಾನೆಲೆ ಮೇಲೆ ಇರಾನ್ ಡ್ರೋನ್ ದಾಳಿ: ಇರಾನ್ ಆಕ್ರಮಣದ ವಿರುದ್ಧ ಒಟ್ಟಾದ ಗಲ್ಫ್‌ ರಾಷ್ಟ್ರಗಳು

ಇಸ್ರೇಲ್-ಯುಎಸ್ ದಾಳಿಗೆ ಪ್ರತೀಕಾರವಾಗಿ ಇರಾನ್, ಯುಎಇಯ ಅಬುಧಾಬಿಯಲ್ಲಿರುವ ಫ್ರೆಂಚ್ ನೌಕಾನೆಲೆ ಮತ್ತು ಅಮೆಜಾನ್ ಡೇಟಾ ಸೆಂಟರ್ ಮೇಲೆ ಡ್ರೋನ್ ದಾಳಿ ನಡೆಸಿದೆ. ಈ ಸರಣಿ ದಾಳಿಗಳ ಹಿನ್ನೆಲೆಯಲ್ಲಿ, ಗಲ್ಫ್ ಸಹಕಾರ ಮಂಡಳಿಯ (GCC) ರಾಷ್ಟ್ರಗಳು ತುರ್ತು ಸಭೆ ನಡೆಸಿ, ಇರಾನ್‌ನ ಆಕ್ರಮಣವನ್ನು ಖಂಡಿಸಿವೆ.

2 Min read
Author : Anusha Kb
Published : Mar 02 2026, 01:36 PM IST
Share this Photo Gallery
  • FB
  • TW
  • Linkdin
  • Whatsapp
16
ಅಬುಧಾಬಿಯಲ್ಲಿರುವ ನೌಕಾನೆಲೆ ಮೇಲೆ ದಾಳಿ
Image Credit : Getty

ಅಬುಧಾಬಿಯಲ್ಲಿರುವ ನೌಕಾನೆಲೆ ಮೇಲೆ ದಾಳಿ

ನವದೆಹಲಿ: ತನ್ನ ಮೇಲೆ ಇಸ್ರೇಲ್ ಯುಎಸ್ ನಡೆಸುತ್ತಿರುವ ಸರಣಿ ದಾಳಿಗೆ ಪ್ರತೀಕಾರದ ಪಣ ತೊಟ್ಟಿರುವ ಇರಾನ್ ಸುತ್ತಮುತ್ತಲಿನ ಸೌದಿ ರಾಷ್ಟ್ರಗಳ ಮೇಲೆ ತನ್ನ ದಾಳಿ ಮುಂದುವರೆಸಿದೆ. ಈಗಾಗಲೇ ಬಹ್ರೈನ್, ದುಬೈ, ದೋಹಾ, ಕುವೈತ್ ಮೇಲೆ ಹೊಸ ದಾಳಿ ನಡೆಸಿರುವ ಇರಾನ್ ಈ ಅಬುಧಾಬಿಯಲ್ಲಿರು ಫ್ರಾನ್ಸ್‌ನ ನೌಕಾನೆಲೆ ಮೇಲೆ ದಾಳಿ ನಡೆಸಿದೆ ಎಂದು ವರದಿಯಾಗಿದೆ.

26
 ಅಬುಧಾಬಿಯಲ್ಲಿರುವ ಅಲ್ ಸಲಾಮ್ ನೌಕಾ ನೆಲೆ ಮೇಲೆ ದಾಳಿ
Image Credit : Getty

ಅಬುಧಾಬಿಯಲ್ಲಿರುವ ಅಲ್ ಸಲಾಮ್ ನೌಕಾ ನೆಲೆ ಮೇಲೆ ದಾಳಿ

ಅಬುಧಾಬಿಯಲ್ಲಿರುವ ಪೀಸ್ ಕ್ಯಾಂಪ್ (ಕ್ಯಾಂಪ್ ಡೆ ಲಾ ಪೈಕ್ಸ್) ಎಂದೂ ಕರೆಯಲ್ಪಡುವ ಅಲ್ ಸಲಾಮ್ ನೌಕಾ ನೆಲೆಯ ಮೇಲೆ ಎರಡು ಇರಾನಿನ ಡ್ರೋನ್‌ಗಳು ದಾಳಿ ಮಾಡಿವೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಈ ನೆಲೆಯು ಎಮಿರಾಟಿ ನೌಕಾ ಸೌಲಭ್ಯವಾಗಿದ್ದು, ಇದು ಶಾಶ್ವತ ಫ್ರೆಂಚ್ ಮಿಲಿಟರಿ ತುಕಡಿಯನ್ನು ಸಹ ಹೊಂದಿದೆ. ದಾಳಿಯಲ್ಲಿ ಹ್ಯಾಂಗರ್‌ಗೆ ಹಾನಿಯಾಗಿದೆ ಎಂದು ಫ್ರೆಂಚ್ ರಕ್ಷಣಾ ಸಚಿವೆ ಕ್ಯಾಥರೀನ್ ವೌಟ್ರಿನ್ ಹೇಳಿದ್ದಾರೆ ಆದರೆ ಒಟ್ಟಾರೆ ಪರಿಣಾಮ ಸೀಮಿತವಾಗಿದ್ದು, ಇಲ್ಲಿಯವರೆಗೆ ಯಾವುದೇ ಸಾವು ನೋವುಗಳು ವರದಿಯಾಗಿಲ್ಲ.

Related Articles

Related image1
ಅಮೆರಿಕಾದ ಎಫ್‌-15 ಫೈಟರ್ ಜೆಟ್ ಹೊಡೆದುರುಳಿಸಿದಾಗಿ ಹೇಳಿದ ಇರಾನ್: ಪೈಲಟ್ ಹೊರಗೆ ಹಾರಿದ ದೃಶ್ಯ ವೀಡಿಯೋದಲ್ಲಿ ಸೆರೆ
Related image2
ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿ; ಭಾರತದಲ್ಲಿ ಕೋಮುಗಲಭೆ ಸಾಧ್ಯತೆ, ರಾಜ್ಯಗಳಿಗೆ MHA ಹೈ ಅಲರ್ಟ್!
36
ಅಮೆಜಾನ್‌ನ ಕ್ಲೌಡ್ ಘಟಕಕ್ಕೆ ಹಾನಿ
Image Credit : Google

ಅಮೆಜಾನ್‌ನ ಕ್ಲೌಡ್ ಘಟಕಕ್ಕೆ ಹಾನಿ

ಮತ್ತೊಂದೆಡೆ ಇರಾನ್ ಯುಎಇ ಮೇಲೆ ನಡೆಸಿದ ದಾಳಿಯಲ್ಲಿ ಅಮೆಜಾನ್‌ನ ಕ್ಲೌಡ್ ಘಟಕವಾದ ಅಮೆಜಾನ್ ವೆಬ್ ಸೇವೆಗಳು(AWS)ಇದ್ದ ಕಟ್ಟಡದ ಮೇಲೂ ದಾಳಿಯಾಗಿದೆ., ಹೀಗಾಗಿ ತನ್ನ ಡೇಟಾ ಕೇಂದ್ರಗಳಲ್ಲಿ ಒಂದಕ್ಕೆ ನೀಡುತ್ತಿದ್ದ ವಿದ್ಯುತ್ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ದಾಳಿ ವೇಳೆ ಬೆಂಕಿ ಏನೋ ವಸ್ತುಗಳು ತಾಗಿ ಬೆಂಕಿ ಕಾಣಿಸಿಕೊಂಡ ನಂತರ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಸೇವೆ ಸ್ಥಗಿತಗೊಳಿಸಲಾಗಿದ್ದು, ಸಂಪರ್ಕ ಪುನಃ ಆರಂಭಿಸಲು ಹಲವು ಗಂಟೆಗಳು ಬೇಕಾಗುತ್ತವೆ ಎಂದು ವರದಿಯಾಗಿದೆ. ಆದರೆ ಯುಎಇಯಲ್ಲಿನ ಇತರ ಡೇಟಾ ಕೇಂದ್ರಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ವರದಿಯಾಗಿದೆ. ಈ ಘಟನೆಯು ಇತ್ತೀಚೆಗೆ ಈ ಪ್ರದೇಶದಲ್ಲಿ ನಡೆದ ಇರಾನಿನ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳಿಗೆ ಸಂಬಂಧಿಸಿ ನಡೆದಿದ್ದೆ ಎಂಬುದನ್ನು ಕಂಪನಿ ದೃಢಪಡಿಸಿಲ್ಲ.

46
ಅಮೆರಿಕ ಮತ್ತು ಇಸ್ರೇಲಿ ದಾಳಿಗೆ ಯುಎಇ ಮೇಲೆ ಇರಾನ್ ಪ್ರತೀಕಾರ
Image Credit : Getty

ಅಮೆರಿಕ ಮತ್ತು ಇಸ್ರೇಲಿ ದಾಳಿಗೆ ಯುಎಇ ಮೇಲೆ ಇರಾನ್ ಪ್ರತೀಕಾರ

ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲಿ ದಾಳಿಗಳ ನಂತರ ಇರಾನ್ ಪ್ರತೀಕಾರವಾಗಿ ಯುಎಇಯನ್ನು ಗುರಿಯಾಗಿಸಿಕೊಂಡಿದೆ. ಕ್ಷಿಪಣಿಗಳು ಮತ್ತು ಡ್ರೋನ್‌ಗಳು ವಿಮಾನ ನಿಲ್ದಾಣಗಳು, ಬಂದರುಗಳು ಮತ್ತು ವಸತಿ ಪ್ರದೇಶಗಳನ್ನು ಗುರಿಯಾಗಿಸಿ ದಾಳಿ ಮಾಡಿದ್ದು, ಹಲವರು ಸಾವು ನೋವು ಹಾಗೂ ಗಾಯಗಳಿಗೆ ಕಾರಣವಾಗಿದೆ. ದುಬೈನಲ್ಲಿ ಪಂಚತಾರಾ ರೆಸಾರ್ಟ್‌ಗಳ ಮೇಲೂ ದಾಳಿ ನಡೆದಿದ್ದವು. ವಿಶ್ವದ ಅತಿ ಎತ್ತರದ ಕಟ್ಟಡ ಸೇರಿದಂತೆ ನಗರದ ಸ್ಕೈಲೈನ್‌ಗೆ ದಾಳಿ ಬೆದರಿಕೆ ಹಾಕಲಾಗಿದೆ. ಅಬುಧಾಬಿಯ ವಿಮಾನ ನಿಲ್ದಾಣದ ಮೇಲೆ ನಡೆದ ದಾಳಿಯಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿ ಏಳು ಮಂದಿ ಗಾಯಗೊಂಡಿದ್ದಾರೆ.

56
ಇರಾನ್ ಆಕ್ರಮಣದ ವಿರುದ್ಧ ಒಂದಾದ ಗಲ್ಫ್ ರಾಷ್ಟ್ರಗಳು
Image Credit : Getty

ಇರಾನ್ ಆಕ್ರಮಣದ ವಿರುದ್ಧ ಒಂದಾದ ಗಲ್ಫ್ ರಾಷ್ಟ್ರಗಳು

ಇರಾನಿನ ಆಕ್ರಮಣದ ವಿರುದ್ಧ ಗಲ್ಫ್ ರಾಷ್ಟ್ರಗಳು ಒಂದಾಗಿದ್ದು,ದಾಳಿಗೆ ಪ್ರತಿಕ್ರಿಯೆಯಾಗಿ, ಗಲ್ಫ್ ಸಹಕಾರ ಮಂಡಳಿಯ (ಜಿಸಿಸಿ) ಆರು ಸದಸ್ಯ ರಾಷ್ಟ್ರಗಳಾದ ಯುಎಇ, ಬಹ್ರೇನ್, ಸೌದಿ ಅರೇಬಿಯಾ, ಓಮನ್, ಕತಾರ್ ಮತ್ತು ಕುವೈತ್ ಭಾನುವಾರ ತುರ್ತು ವೀಡಿಯೊ ಸಭೆ ನಡೆಸಿದರು. ದೇಶದ ಭದ್ರತೆಯನ್ನು ರಕ್ಷಿಸಲು, ನಾಗರಿಕರನ್ನು ರಕ್ಷಿಸಲು ಮತ್ತು ಪ್ರದೇಶಗಳನ್ನು ರಕ್ಷಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಮಂಡಳಿ ಹೇಳಿದೆ. ಅಗತ್ಯವಿದ್ದರೆ ಆಕ್ರಮಣಕ್ಕೆ ಪ್ರತಿಕ್ರಿಯಿಸುವ ಆಯ್ಕೆಯು ತಮ್ಮ ಮೇಜಿನ ಮೇಲಿದೆ ಮತ್ತು ಇರಾನಿನ ದಾಳಿಯನ್ನು ತಕ್ಷಣ ನಿಲ್ಲಿಸುವಂತೆ ಅದು ಕರೆ ನೀಡಿದೆ. ಜಾಗತಿಕ ಆರ್ಥಿಕ ಭದ್ರತೆಗೆ ಗಲ್ಫ್‌ನಲ್ಲಿ ಸ್ಥಿರತೆ ಅತ್ಯಗತ್ಯ ಎಂದು ಜಿಸಿಸಿ ಹೇಳಿದೆ.

66
ಇರಾನ್ ವಿರುದ್ಧ ಯುಎಇ ಅಧ್ಯಕ್ಷರ ಆಕ್ರೋಶ
Image Credit : Getty

ಇರಾನ್ ವಿರುದ್ಧ ಯುಎಇ ಅಧ್ಯಕ್ಷರ ಆಕ್ರೋಶ

ಯುಎಇ ಅಧ್ಯಕ್ಷ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಇರಾನ್ ಯುಎಇಯನ್ನು ಗುರಿಯಾಗಿಸಿಕೊಂಡಿರುವುದಕ್ಕೆ ತೀವ್ರವಾಗಿ ಟೀಕಿಸಿದ್ದಾರೆ. ಇರಾನ್ ದೇಶವು ಬುದ್ಧಿವಂತಿಕೆಯಿಂದ ವರ್ತಿಸುವಂತೆ ಒತ್ತಾಯಿಸಿದೆ. ಯುಎಇ ಅಧ್ಯಕ್ಷರ ರಾಜತಾಂತ್ರಿಕ ಸಲಹೆಗಾರ ಅನ್ವರ್ ಗರ್ಗಶ್ ಅವರು ಇರಾನ್ ಯುಎಇ ಮೇಲೆ ನಡೆಸಿದ ದಾಳಿಗಳು ಸರಿಯಲ್ಲ, ಇದು ನಿರ್ಣಾಯಕ ಸಮಯದಲ್ಲಿ ಇರಾನ್ ಅನ್ನು ಒಂಟಿ ಮಾಡಿದೆ. ನಿಮ್ಮ ಯುದ್ಧವು ನಿಮ್ಮ ನೆರೆಹೊರೆಯವರೊಂದಿಗೆ ಅಲ್ಲ,ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಳ್ಳುವ ಮೊದಲು ಇರಾನ್ ತರ್ಕಬದ್ಧವಾಗಿ ಮರಳಲು ಮತ್ತು ಹತ್ತಿರದ ದೇಶಗಳೊಂದಿಗೆ ಜವಾಬ್ದಾರಿಯುತವಾಗಿ ವ್ಯವಹರಿಸಲು ಅವರು ಕರೆ ನೀಡಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

AK
Anusha Kb
Anusha KB ಸುದ್ದಿಲೋಕದಲ್ಲಿ 13 ವರ್ಷಗಳ ಅನುಭವ, ರಾಜಕೀಯ, ಸಿನಿಮಾ, ದೇಶ, ವಿದೇಶ ಸುದ್ದಿಗಳಲ್ಲಿ ಆಸಕ್ತಿ. ಸುವರ್ಣ ಡಿಜಿಟಲ್‌ನಲ್ಲೀಗ ಸೀನಿಯರ್ ಸಬ್ ಎಡಿಟರ್.
ಇರಾನ್
ಕೊಲ್ಲಿ ಯುದ್ಧ

Latest Videos
Recommended Stories
Recommended image1
Now Playing
War: ಇರಾನ್‌ ದಾಳಿಗೆ ಅಮೆರಿಕಾದ ಮೂವರು ಸೈನಿಕರು ಸಾವು; ಡೊನಾಲ್ಡ್ ಟ್ರಂಪ್ ಪ್ರತಿಜ್ಞೆ
Recommended image2
Now Playing
ಅಮೆರಿಕಾದ ಶಸ್ತ್ರಾಸ್ತ್ರ ಗೋದಾಮು ಧ್ವಂಸ, ಸಿಡಿಮದ್ದು ಫ್ಯಾಕ್ಟರಿ ಉಡೀಸ್!
Recommended image3
ಅಮೆರಿಕಾದ ಎಫ್‌-15 ಫೈಟರ್ ಜೆಟ್ ಹೊಡೆದುರುಳಿಸಿದಾಗಿ ಹೇಳಿದ ಇರಾನ್: ಪೈಲಟ್ ಹೊರಗೆ ಹಾರಿದ ದೃಶ್ಯ ವೀಡಿಯೋದಲ್ಲಿ ಸೆರೆ
Related Stories
Recommended image1
ಅಮೆರಿಕಾದ ಎಫ್‌-15 ಫೈಟರ್ ಜೆಟ್ ಹೊಡೆದುರುಳಿಸಿದಾಗಿ ಹೇಳಿದ ಇರಾನ್: ಪೈಲಟ್ ಹೊರಗೆ ಹಾರಿದ ದೃಶ್ಯ ವೀಡಿಯೋದಲ್ಲಿ ಸೆರೆ
Recommended image2
ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿ; ಭಾರತದಲ್ಲಿ ಕೋಮುಗಲಭೆ ಸಾಧ್ಯತೆ, ರಾಜ್ಯಗಳಿಗೆ MHA ಹೈ ಅಲರ್ಟ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved