Asianet Suvarna News Asianet Suvarna News

2 ಸಾವಿರ ರೂ. ಇಳಿದ ಬಂಗಾರ: 10 ಗ್ರಾಂ ಗೆ ಟೊಟಲ್ ಬೆಲೆ ಎಷ್ಟಂದ್ರ?

ನಿರಂತರ ಇಳಿಕೆಯತ್ತ ಮುಖ ಮಾಡಿದ ಚಿನ್ನದ ದರ| ಅಕ್ಟೋಬರ್ ಆರಂಭದಿಂದ ಇಳಿಯುತ್ತಲೇ ಇರುವ ಚಿನ್ನದ ಬೆಲೆ| ಮಲ್ಟಿ ಕಮೋಡಿಟಿ ಎಕ್ಸಚೇಂಜ್'ನಲ್ಲಿ 10 ಗ್ರಾಂ ಚಿನ್ನಕ್ಕೆ 38,072 ರೂ.| ಮಲ್ಟಿ ಕಮೋಡಿಟಿ ಎಕ್ಸಚೇಂಜ್'ನಲ್ಲಿ ಒಂದು ಕೆ.ಜಿ ಬೆಳ್ಳಿಗೆ 45,266 ರೂ.| ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನದ ದರದಲ್ಲಿ ಗಮನಾರ್ಹ ಇಳಿಕೆ|

Gold prices fall today down Rs Two thousand From Last Month Highs
Author
Bengaluru, First Published Oct 11, 2019, 5:47 PM IST

ನವದೆಹಲಿ(ಅ.11): ನಿರಂತರವಾಗಿ ಇಳಿಕೆಯತ್ತ ಮುಖ ಮಾಡಿರುವ ಚಿನ್ನದ ಬೆಲೆಯಲ್ಲಿ ಇಂದೂ ಕೂಡ ಗಮನಾರ್ಹ ಇಳಿಕೆ ಕಂಡು ಬಂದಿದ್ದು, ಆಭರಣ ಪ್ರೀಯರಲ್ಲಿ ಸಂತಸ ಮೂಡಿಸಿದೆ.

ಅಕ್ಟೋಬರ್ ಆರಂಭದಿಂದಲೇ ನಿರಂತರವಾಗಿ ಇಳಿಯುತ್ತಿರುವ ಚಿನ್ನದ ದರ, ಇಂದು ಮತ್ತಷ್ಟು ಇಳಿಕೆ ಕಂಡಿದೆ. ಚಿನ್ನದ ದರದಲ್ಲಿ ಒಟ್ಟು ಶೇ.0.23ರಷ್ಟು ಇಳಿದಿದ್ದು, ಮಲ್ಟಿ ಕಮೋಡಿಟಿ ಎಕ್ಸಚೇಂಜ್'ನಲ್ಲಿ 10 ಗ್ರಾಂ ಚಿನ್ನಕ್ಕೆ 38,072 ರೂ. ಆಗಿದೆ.

ಅದರಂತೆ ಬೆಳ್ಳಿ ಬೆಲೆಯಲ್ಲೂ ಇಳಿಕೆಯಾಗಿದ್ದು, ಖರೀದಿಯ ಭರಾಟೆ ಜೋರಾಗಿದೆ. ಬೆಳ್ಳಿ ದರದಲ್ಲಿ ಒಟ್ಟು ಶೇ.0.34ರಷ್ಟು ಇಳಿದಿದ್ದು, ಮಲ್ಟಿ ಕಮೋಡಿಟಿ ಎಕ್ಸಚೇಂಜ್'ನಲ್ಲಿ ಒಂದು ಕೆ.ಜಿ ಬೆಳ್ಳಿಗೆ 45,266 ರೂ. ಆಗಿದೆ.

ಕಳೆದ ತಿಂಗಳಿಗೆ ಹೋಲಿಸಿದರೆ ಪ್ರಸಕ್ತ ತಿಂಗಳಲ್ಲಿ ಚಿನ್ನದ ಬೆಲೆಯಲ್ಲಿ ಒಟ್ಟು 2,000 ರೂ. ನಷ್ಟು ಇಳಿಕೆ ಕಂಡಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಇಳಿಕೆ ಕಾಣುವ ನಿರೀಕ್ಷೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನದ ದರದಲ್ಲಿ ಗಮನಾರ್ಹ ಇಳಿಕೆ ಕಂಡಿದ್ದು, ಚಿನ್ನದ ದರದಲ್ಲಿ ಒಟ್ಟು ಶೇ.0.02ರಷ್ಟು ಇಳಿಕೆ ಕಂಡ ಪರಿಣಾಮ ಪ್ರತಿ ಔನ್ಸ್'ಗೆ 1,491..12 ಡಾಲರ್ ಆಗಿದೆ.

Follow Us:
Download App:
  • android
  • ios