ನವದೆಹಲಿ(ಸೆ.28): ನಿರಂತರವಾಗಿ ಏರಿಕೆ ಕಂಡಿದ್ದ ಚಿನ್ನದ ದರದಲ್ಲಿ ಕೊಂಚ ಇಳಿಕೆ ಕಂಡು ಬಂದಿದ್ದು, ಆಭರಣ ಪ್ರಿಯರು ಮತ್ತಷ್ಟು ಇಳಿಕೆಯ ನಿರೀಕ್ಷೆಯಲ್ಲಿದ್ದಾರೆ. 

ರೂಪಾಯಿ ಪ್ರಾಬಲ್ಯ ಹಾಗೂ  ದುರ್ಬಲ ಅಂತರರಾಷ್ಟ್ರೀಯ ವಹಿವಾಟಿನ ಕಾರಣದಿಂದಾಗಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ.

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಇಂದು 121 ರೂ. ಇಳಿಕೆಯಾಗಿದ್ದು,  10 ಗ್ರಾಂ ಚಿನ್ನದ ಬೆಲೆ 38,564 ರೂ. ಆಗಿದೆ. ಅದರಂತೆ ಬೆಳ್ಳಿ ಬೆಲೆ ಬರೋಬ್ಬರಿ 851 ರೂ. ಇಳಿಕೆ ಕಂಡು ಬಂದಿದ್ದು,  ಒಂದು ಕೆಜಿಗೆ  46,384 ರೂ. ಆಗಿದೆ. 

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ  ಪ್ರತಿ ಔನ್ಸ್’ಗೆ 1,497 ಯುಎಸ್ ಡಾಲರ್ ಆಗಿದ್ದು, ಮತ್ತಷ್ಟು ಕುಸಿತದ ನಿರೀಕ್ಷೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.