Asianet Suvarna News Asianet Suvarna News

2,400 ರೂ. ಇಳಿದ ಚಿನ್ನದ ಬೆಲೆ: ಸಮಯಕ್ಕೆ ಖರೀದಿಯೂ ಒಂದು ಕಲೆ!

ಮತ್ತೆ ಚಿನ್ನ-ಬೆಳ್ಳಿ ದರದಲ್ಲಿ ಭಾರೀ ಇಳಿಕೆ| 10 ಗ್ರಾಂ ಚಿನ್ನದ ದರದಲ್ಲಿ ಗಮನಾರ್ಹ ಇಳಿಕೆ| ಈ ತಿಂಗಳಲ್ಲಿ ಒಟ್ಟು 2,400 ರೂ. ಇಳಿಕೆ ಕಂಡ ಚಿನ್ನದ ದರ| ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ ಪರಿಣಾಮ| ಗಮನಾರ್ಹ ಇಳಿಕೆ ಕಂಡ ಬೆಳ್ಳಿ ಬೆಲೆ| ಈ ತಿಂಗಳಲ್ಲಿ ಒಟ್ಟು 5,100 ರೂ. ಇಳಿಕೆ ಕಂಡ ಬೆಳ್ಳಿ ಬೆಲೆ| 

Gold Prices Fall For Fourth Day And Silver Further Down
Author
Bengaluru, First Published Sep 21, 2019, 5:29 PM IST

ಬೆಂಗಳೂರು(ಸೆ.21): ಬಹುತೇಕ ಗಗನ ತಲುಪಿದ್ದ ಚಿನ್ನದ ಬೆಲೆಯಲ್ಲಿ ಮಂದಗತಿಯ ಇಳಿಕೆ ಕಂಡು ಬರುತ್ತಿದ್ದು, ಆಭರಣ ಪ್ರಿಯರ ಮೊಗದಲ್ಲಿ ಮಂದಹಾಸ ಮೂಡುತ್ತಿದೆ.

40 ಸಾವಿರ ರೂ. ಗಡಿ ದಾಟಿದ್ದ ಚಿನ್ನದ ದರ ಇದೀಗ 37 ಸಾವಿರ ರೂ. ಆಸುಪಾಸಿನಲ್ಲಿ ವಹಿವಾಟು ನಡೆಸಿದ್ದು, ಈ ತಿಂಗಳಲ್ಲಿ ಒಟ್ಟಾರೆ  2,400 ರೂ. ವರೆಗೆ ಇಳಿಕೆ ಕಂಡಿದೆ.

ಮಲ್ಟಿ ಕಮೋಡಿಟಿ ಎಕ್ಸಚೇಂಜ್ ಮಾರುಕಟ್ಟೆಯಲ್ಲಿ ಇಂದು ಚಿನ್ನದ ಬೆಲೆಯಲ್ಲಿ ಶೇ.0.50ರಷ್ಟು ಇಳಿಕೆ ಕಂಡು ಬಂದಿದ್ದು, 10 ಗ್ರಾಂ ಚಿನ್ನದ ಬೆಲೆ 37,503 ರೂ. ಆಗಿದೆ.

ಅದರಂತೆ ಬೆಳ್ಳಿ ಬೆಲೆಯಲ್ಲೂ ಗಮನಾರ್ಹ ಇಳಿಕೆ ಕಂಡು ಬಂದಿದ್ದು, ಮಲ್ಟಿ ಕಮೋಡಿಟಿ ಎಕ್ಸಚೇಂಜ್ ಮಾರುಕಟ್ಟೆಯಲ್ಲಿ ಶೇ.0.50ರಷ್ಟು ಇಳಿಕೆ ಕಾಣುವ ಮೂಲಕ 46,370 ರೂ. ಆಗಿದೆ.

ಬೆಳ್ಳಿಯ ಬೆಲೆಯಲ್ಲಿ ಈ ತಿಂಗಳಲ್ಲಿ ಒಟ್ಟು 5,100 ರೂ. ಇಳಿಕೆ ಕಂಡು ಬಂದಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಇಳಿಕೆಯಾಗುವ ಮೂನ್ಸುಚನೆ ನೀಡಿದೆ.

Follow Us:
Download App:
  • android
  • ios