EV Charging : ಸ್ವಂತ ಉದ್ಯೋಗ ಶುರು ಮಾಡುವ ಪ್ಲಾನ್‌ನಲ್ಲಿದ್ದರೆ ಇಲ್ಲಿದೆ ದಿ ಬೆಸ್ಟ್ ಬ್ಯುಸಿನೆಸ್!
ಕೊರೊನಾ ನಂತರ ಭಾರತ ಬದಲಾಗ್ತಿದೆ. ಕಂಪನಿಯಲ್ಲಿ ಕೆಲಸ ಮಾಡುವವರಿಗಿಂತ ಸ್ವಂತ ಉದ್ಯೋಗಕ್ಕೆ ಆಸಕ್ತಿ ತೋರಿಸುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಹೊಸ ವ್ಯವಹಾರ ಆರಂಭಿಸುವ ಪ್ಲಾನ್ ನಲ್ಲಿದ್ದರೆ ಭವಿಷ್ಯ ಗಟ್ಟಿಗೊಳಿಸುವ ಐಡಿಯಾ ಇಲ್ಲಿದೆ.
Business Desk: ಪೆಟ್ರೋಲ್ (Patrol )-ಡೀಸೆಲ್ (Design )ಬೆಲೆಗಳು ಗಗನಕ್ಕೇರುತ್ತಿರುವ ಮಧ್ಯೆಯೇ ಜನರು ಬದಲಾವಣೆ ಬಯಸುತ್ತಿದ್ದಾರೆ. ಬೆಲೆ ಏರಿಕೆ ಹಾಗೂ ಪರಿಸರ ರಕ್ಷಣೆಗಾಗಿ ಎಲೆಕ್ಟ್ರಿಕ್ ವಾಹನದ (Electric vehicle) ಕ್ರೇಜ್ ಹೆಚ್ಚಾಗಿದೆ. ಈ ಮಧ್ಯೆ 2030 ರ ವೇಳೆಗೆ ಎಲ್ಲಾ ವಾಹನಗಳನ್ನು ಎಲೆಕ್ಟ್ರಿಕ್ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ. ಅಂದ್ರೆ 2030ರ ಸುಮಾರಿಗೆ ರಸ್ತೆಗಿಳಿಯುವ ವಾಹನಗಳು ಪೆಟ್ರೋಲ್-ಡಿಸೇಲ್ ಬದಲು ವಿದ್ಯುತ್ (Electricity) ಅಥವಾ ಬ್ಯಾಟರಿಯಿಂದ ಚಲಿಸಲಿವೆ. ಈ ಬಗ್ಗೆ ಸರ್ಕಾರ ಗಂಭೀರವಾಗಿದೆ. ಈಗಾಗಲೇ ದೇಶದಲ್ಲಿ 10 ಲಕ್ಷಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳು ಓಡುತ್ತಿವೆ. ಎಲೆಕ್ಟ್ರಿಕ್ ವಾಹನ ಖರೀದಿಗೆ ಜನರು ಹಿಂದೇಟು ಹಾಕಲು ಚಾರ್ಜಿಂಗ್ ದೊಡ್ಡ ಸಮಸ್ಯೆಯಾಗಿದೆ. ಪೆಟ್ರೋಲ್-ಡಿಸೇಲ್ ಗಳಂತೆ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಪಾಯಿಂಟ್ ಇಲ್ಲ. ಎಲೆಕ್ಟ್ರಿಕ್ ವಾಹನಗಳ ಸಂಚಾರ ಹೆಚ್ಚಾದಂತೆ ಚಾರ್ಜಿಂಗ್ ಸ್ಟೇಷನ್ ಒಂದೊಂದಾಗಿ ತಲೆ ಎತ್ತಲಿದೆ. ಹೊಸ ವ್ಯವಹಾರ (Business)ದ ಆಲೋಚನೆಯಲ್ಲಿದ್ದರೆ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್ ಶುರು ಮಾಡಬಹುದು. ಮುಂದಿನ ದಿನಗಳಲ್ಲಿ ಈ ಚಾರ್ಜಿಂಗ್ ಸ್ಟೇಷನ್ ಗಳಿಂದ ಹೆಚ್ಚು ಲಾಭ ಗಳಿಸಬಹುದು.
ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್ ಮಾಡಲು ಸಾಕಷ್ಟು ವೆಚ್ಚವಾಗುತ್ತದೆ ಮತ್ತು ನಿರ್ವಹಣೆ ಕಷ್ಟ ಎಂಬ ಆಲೋಚನೆಯಲ್ಲಿದ್ದರೆ ನಿಮ್ಮ ಆಲೋಚನೆ ತಪ್ಪು.ಕಡಿಮೆ ವೆಚ್ಚದಲ್ಲಿಯೇ ಚಾರ್ಜಿಂಗ್ ಪಾಯಿಂಟ್ (Charging point) ಶುರು ಮಾಡಬಹುದು. ಅಂತಹ ಚಾರ್ಜಿಂಗ್ ಕೇಂದ್ರಗಳನ್ನು ಕಡಿಮೆ ವೆಚ್ಚದ ಎಸಿ ಚಾರ್ಜಿಂಗ್ ಸ್ಟೇಷನ್‌ಗಳು ಅಥವಾ ಎಲ್ ಎಸಿ ಎಂದು ಕರೆಯಲಾಗುತ್ತದೆ. ಇಂತಹ ಚಾರ್ಜಿಂಗ್ ಸ್ಟೇಷನ್‌ಗಳನ್ನು ನಿರ್ಮಿಸಲು ಸರ್ಕಾರ ಸಹಾಯಧನ ನೀಡುತ್ತದೆ.
ಜಿಎಸ್ಟಿ (GST)ಇಳಿಕೆ :
ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಸ್ಟೇಷನ್ ಜಿಎಸ್‌ಟಿಗೆ ಸಂಬಂಧಿಸಿದಂತೆ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಈ ಹಿಂದೆ, ಇವಿ ಚಾರ್ಜಿಂಗ್ (EV Charging )ಸ್ಟೇಷನ್‌ಗಳಿಗೆ ಶೇಕಡಾ 18ರಷ್ಟು ಜಿಎಸ್‌ಟಿಯನ್ನು ವಿಧಿಸಲಾಗುತ್ತಿತ್ತು. ಅದನ್ನು ಈಗ ಶೇಕಡಾ 5 ಕ್ಕೆ ಇಳಿಸಲಾಗಿದೆ. ಚಾರ್ಜಿಂಗ್ ಸ್ಟೇಷನ್ ಗೆ ಪ್ರತ್ಯೇಕ ಪ್ಲಾಟ್ ತೆಗೆದುಕೊಂಡು ಅದರ ಮೇಲೆ ಸ್ಟೇಷನ್ ಗಳನ್ನು ನಿರ್ಮಿಸಬೇಕು ಎಂಬುದು ಮೊದಲ ನಿಯಮ. ಈಗ ಈ ನಿಯಮವನ್ನು ರದ್ದುಪಡಿಸಲಾಗಿದೆ. ಯಾವುದೇ ವಾಣಿಜ್ಯ ಅಥವಾ ಖಾಸಗಿ ಭೂಮಿಯಲ್ಲಿ ನೀವು ಚಾರ್ಜಿಂಗ್ ಸ್ಟೇಷನ್ ನಿರ್ಮಿಸಬಹುದು.
ಚಾರ್ಜಿಂಗ್ ಸ್ಟೇಷನ್ ತೆರೆಯುವುದು ಹೇಗೆ :
ದ್ವಿಚಕ್ರ ವಾಹನಗಳು, ತ್ರಿಚಕ್ರ ವಾಹನಗಳು, ವಾಣಿಜ್ಯ, ಖಾಸಗಿ, ಟ್ರಕ್‌ಗಳು ಅಥವಾ ವಿದ್ಯುತ್‌ನಿಂದ ಚಲಿಸುವ ಬಸ್‌ಗಳಿಗೆ ಚಾರ್ಜಿಂಗ್ ಸ್ಟೇಷನ್ ತೆರೆಯಬಹುದು. ಚಾರ್ಜಿಂಗ್ ಸ್ಟೇಷನ್ ತೆರೆಯಲು ವಿದ್ಯುತ್ ಸಂಪರ್ಕವನ್ನು ಪಡೆಯಬೇಕಾಗುತ್ತದೆ. ಒಂದು ಟ್ರಾನ್ಸ್ಫರ್ ಅಗತ್ಯವಿರುತ್ತದೆ. ನಿಮ್ಮದೆ ಸ್ವಂತ ಜಾಗವಿದ್ದರೆ ಸ್ಟೇಷನ್ ಶುರು ಮಾಡುವುದು ಸುಲಭ. ಇದಲ್ಲದೆ ಶೆಡ್, ಪಾರ್ಕಿಂಗ್ ಪ್ರದೇಶ ಇತ್ಯಾದಿಗಳ ಅಗತ್ಯವಿರುತ್ತದೆ.
ಚಾರ್ಜರ್‌ಗಳಲ್ಲಿ ಎಷ್ಟು ವಿಧಗಳಿವೆ?
ಚಾರ್ಜಿಂಗ್ ಟವರ್‌ಗಳಲ್ಲಿ ಎರಡು ವಿಧಗಳಿವೆ. ಎಸಿ ಮತ್ತು ಡಿಸಿ. ಡಿಸಿ ಚಾರ್ಜರ್ ವೇಗದ ಚಾರ್ಜಿಂಗ್‌ಗಾಗಿ ಮತ್ತು ಅದರ ವೆಚ್ಚ ಎಸಿ ಚಾರ್ಜರ್‌ಗಿಂತ ಹೆಚ್ಚು. ಡಿಸಿ,ಸಿಸಿಎಸ್ 50 ಕೆಡಬ್ಲ್ಯು ಚಾರ್ಜರ್ ಸುಮಾರು 15 ಲಕ್ಷಕ್ಕೆ ಬರುತ್ತದೆ. ಎಸಿ ಚಾರ್ಜರ್ ಅತ್ಯಂತ ಅಗ್ಗವಾಗಿದ್ದು ಇದರಲ್ಲಿ ಟೈಪ್-2 22 ಕೆಡಬ್ಲ್ಯುಚಾರ್ಜರ್ ಸುಮಾರು 1.25 ಲಕ್ಷ ರೂಪಾಯಿಯಾಗಿದೆ.
ಯಾವ ಚಾರ್ಜರ್ ಉತ್ತಮ :
ಮೇಲಿನ ಎರಡಕ್ಕಿಂತ ವಿಭಿನ್ನವಾದ ಇನ್ನೊಂದು ವರ್ಗವಿದೆ. ಭಾರತ್ ಡಿಸಿ 001 15 ಕಿಲೋವ್ಯಾಟ್ ಚಾರ್ಜರ್ ಆಗಿದ್ದು, ಅದರ ಬೆಲೆ 2.5 ಲಕ್ಷ ರೂಪಾಯಿ. ಭಾರತ್ ಎಸಿ 001 10 ಕೆಡಬ್ಲ್ಯು ಚಾರ್ಜರ್ ಬೆಲೆ 70 ಸಾವಿರ ರೂಪಾಯಿಯಾಗಿದೆ. ಪ್ರಸ್ತುತ ಭಾರತದಲ್ಲಿ ಮಾರಾಟವಾಗುತ್ತಿರುವ ಎಲೆಕ್ಟ್ರಿಕ್ ಕಾರುಗಳಿಗೆ ಭಾರತ್ ಡಿಸಿ ಮತ್ತು ಭಾರತ್ ಎಸಿ ಚಾರ್ಜರ್‌ಗಳನ್ನು ಸಕ್ರಿಯಗೊಳಿಸಲಾಗಿದೆ. ಅಂದರೆ 70 ಸಾವಿರದಿಂದ 2.5 ಲಕ್ಷ ರೂಪಾಯಿ ವೆಚ್ಚದಲ್ಲಿ ಚಾರ್ಜಿಂಗ್ ಸ್ಟೇಷನ್ ಗಳನ್ನು ನಿರ್ಮಿಸಬಹುದು. ಮುಂದಿನ ದಿನಗಳಲ್ಲಿ ಬಸ್ ಹಾಗೂ ಟ್ರಕ್ ಚಾರ್ಜಿಂಗ್ ಬಯಸಿದ್ರೆ ಸಿಸಿಎಸ್ ಚಾರ್ಜರ್ ಬಳಸಬಹುದು.
50 ಕೆಡ್ಬ್ಲು ಗಿಂತ ಹೆಚ್ಚಿನ ಬ್ಯಾಟರಿಯ ಎಲೆಕ್ಟ್ರಿಕ್ ವಾಹನಗಳು ಭಾರತದಲ್ಲಿ ಇನ್ನೂ ಉತ್ಪಾದನೆಯನ್ನು ಪ್ರಾರಂಭಿಸಿಲ್ಲ. ಅದಕ್ಕಾಗಿಯೇ ಈಗ ಭಾರೀ ಚಾರ್ಜಿಂಗ್ ಸ್ಟೇಷನ್ ಅಗತ್ಯವಿಲ್ಲ. ಈಗ ದುಬಾರಿ ಎನ್ನಿಸಿದ್ರೂ ಭವಿಷ್ಯದಲ್ಲಿ ಇದು ದೊಡ್ಡ ಲಾಭ ತಂದುಕೊಡಲಿದೆ.
ಇದನ್ನೂ ಓದಿ:
1) Top Cars of 2021: ಇಲ್ಲಿದೆ ಈ ವರ್ಷದ ಟಾಪ್ ಕಾರುಗಳ ಪಟ್ಟಿ: ನಿಮ್ಮ ಆಯ್ಕೆ ಯಾವುದು?
2) BMTC Electric Bus: ರಾಜಧಾನಿಯಲ್ಲಿ ಎಲೆಕ್ಟ್ರಿಕ್ ಬಸ್ ಶುರು: ಒಮ್ಮೆ ಚಾರ್ಜ್ ಮಾಡಿದರೆ 120km ಸಂಚಾರ!
3) Credit Card : ಉಚಿತವಾಗಿರಲ್ಲ ಕ್ರೆಡಿಟ್ ಕಾರ್ಡ್! ಗ್ರಾಹಕರಿಗೆ ಗೊತ್ತಿಲ್ಲದೆ ವಸೂಲಿ ಮಾಡಲಾಗುತ್ತೆ ಈ ಶುಲ್ಕ