Asianet Suvarna News Asianet Suvarna News

IT Return 2021: ಈ 5 ಮಾಹಿತಿಗಳನ್ನು ಉಲ್ಲೇಖಿಸದಿದ್ರೆ ತೊಂದರೆ ಗ್ಯಾರಂಟಿ!

*2020-21ನೇ ಸಾಲಿನ ಆದಾಯ ತರಿಗೆ  ರಿಟರ್ನ್ಸ್ ಸಲ್ಲಿಕೆಗೆ ಡಿಸೆಂಬರ್ 31 ಕೊನೆಯ ದಿನಾಂಕ
*ದೊಡ್ಡ ಮೊತ್ತದ ನಗದು ವ್ಯವಹಾರಗಳ ಮಾಹಿತಿ ಬಚ್ಚಿಟ್ಟರೆ ಪಜೀತಿ
*ತೆರಿಗೆದಾರರ ನಗದು ವ್ಯವಹಾರಗಳ ಮೇಲೆ ಹದ್ದಿನ ಕಣ್ಣಿಟ್ಟಿರೋ ಆದಾಯ ತೆರಿಗೆ ಇಲಾಖೆ 
 

IT return 2021 do not forget to mention 5 cash transactions that may trouble you anu
Author
Bangalore, First Published Dec 27, 2021, 4:16 PM IST
  • Facebook
  • Twitter
  • Whatsapp

Business Desk: 2020-21ನೇ ಸಾಲಿನ ಆದಾಯ ತರಿಗೆ  ರಿಟರ್ನ್ಸ್ (Income Tax Returns) ಸಲ್ಲಿಕೆಗೆ ಡಿಸೆಂಬರ್ 31 ಕೊನೆಯ ದಿನವಾಗಿದೆ.  ಆದಾಯ ತೆರಿಗೆ ಇಲಾಖೆ (Income Tax Department)ಇಂದು (ಡಿ.27) ನೀಡಿರೋ ಮಾಹಿತಿ ಪ್ರಕಾರ ಈ ತನಕ 4.50ಕೋಟಿಗೂ ಅಧಿಕ ಜನರು ಐಟಿ ರಿಟರ್ನ್ಸ್ ಸಲ್ಲಿಕೆ ಮಾಡಿದ್ದಾರೆ. ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡೋವಾಗ ಕೆಲವೊಂದು ವಿಷಯಗಳ ಬಗ್ಗೆ ಎಚ್ಚರ ವಹಿಸೋದು ಅಗತ್ಯ, ಅದ್ರಲ್ಲೂ ಬೃಹತ್ ಮೊತ್ತದ ನಗದು ವ್ಯವಹಾರಗಳ ಮಾಹಿತಿಯನ್ನುಯಾವುದೇ ಕಾರಣಕ್ಕೂ ಮುಚ್ಚಿಡಬಾರದು. 

ಕಳೆದ ಕೆಲವು ವರ್ಷಗಳಿಂದ ಆದಾಯ ತೆರಿಗೆ ಇಲಾಖೆ (Income Tax Department) ನಗದು ವ್ಯವಹಾರಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ. ಪ್ರಸ್ತುತ ಭಾರತೀಯ ಬ್ಯಾಂಕುಗಳು ಹಾಗೂ ಇತರ ಸಂಸ್ಥೆಗಳು ಕೂಡ ನಗದು ವ್ಯವಹಾರಗಳ ಮೇಲೆ ನಿರ್ದಿಷ್ಟ ಮಿತಿ ವಿಧಿಸಿವೆ.  ಹೀಗಾಗಿ ಅಧಿಕ ಮೊತ್ತದ ನಗದು ವ್ಯವಹಾರಗಳ ಬಗ್ಗೆ ತೆರಿಗೆದಾರರು(Taxpayers) ತಮ್ಮ ಆದಾಯ ತೆರಿಗೆ ರಿಟರ್ನ್ಸ್ ನಲ್ಲಿ ಪ್ರಸ್ತಾಪಿಸೋದು ಅತೀಅಗತ್ಯ ಎಂಬ ಸಲಹೆಯನ್ನು ಹಣಕಾಸು ತಜ್ಞರು ನೀಡಿದ್ದಾರೆ. ಒಂದು ವೇಳೆ ಭಾರೀ ಮೊತ್ತದ ನಗದು ವ್ಯವಹಾರಗಳ ಬಗ್ಗೆ ಮುಚ್ಚಿಟ್ಟರೆ ಮುಂದೆ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಕೂಡ ಎಚ್ಚರಿಸಿದ್ದಾರೆ.

IT Returns Deadline: ಡಿ.31 ಅಂತಿಮ ಗಡುವು, ಇ-ಫೈಲಿಂಗ್ ಪೋರ್ಟಲ್ ಮೂಲಕ ಐಟಿ ರಿಟರ್ನ್ಸ್ ಸಲ್ಲಿಕೆಗೆ ಒತ್ತಾಯ

ಬೃಹತ್ ಮೊತ್ತದ ವಹಿವಾಟುಗಳನ್ನು ನಡೆಸೋ ಪ್ರತಿ ತೆರಿಗೆದಾರನ ಹಣಕಾಸು ದಾಖಲೆಗಳನ್ನು(financial records)ಪಡೆದುಕೊಳ್ಳಲು ಆದಾಯ ತೆರಿಗೆ ಇಲಾಖೆ  ವಿವಿಧ ಸಂಸ್ಥೆಗಳ ಜೊತೆ ಒಪ್ಪಂದ ಮಾಡಿಕೊಂಡಿದೆ. ಅಷ್ಟೇ ಅಲ್ಲದೆ, ಬೃಹತ್ ಮೊತ್ತದ ಹಣಕಾಸು ವ್ಯವಹಾರಗಳ ಮಾಹಿತಿ ಸಂಗ್ರಹಕ್ಕೆ ಪ್ರತ್ಯೇಕ ವಾರ್ಷಿಕ ಮಾಹಿತಿ ರಿಟರ್ನ್ಸ್ (AIR) ಸೃಷ್ಟಿಸಿದೆ ಕೂಡ. ಹೀಗಾಗಿ ಯಾವೆಲ್ಲ ನಗದು ವ್ಯವಹಾರಗಳು ನಿಮ್ಮನ್ನು ತೊಂದರೆಗೆ ಸಿಲುಕಿಸಲಿವೆ ಎಂಬ ಮಾಹಿತಿ ಹೊಂದಿರೋದು ಅಗತ್ಯ.

ಈ ಐದು ವ್ಯವಹಾರಗಳ ಮಾಹಿತಿಯನ್ನು ಐಟಿಆರ್ ನಲ್ಲಿ ತಪ್ಪದೇ ನಮೂದಿಸಿ
1.ರಿಯಲ್ ಎಸ್ಟೇಟ್ ಆಸ್ತಿಗಳು(Real Estate Property)
30ಲಕ್ಷಕ್ಕೂ ಅಧಿಕ ಮೌಲ್ಯದ ಯಾವುದೇ ರಿಯಲ್ ಎಸ್ಟೇಟ್ ಆಸ್ತಿ ಅಂದ್ರೆ ಜಮೀನು ಅಥವಾ ಮನೆ ಮುಂತಾದವನ್ನು ಮಾರಾಟ ಅಥವಾ ಖರೀದಿ ಮಾಡಿದ್ರೆ ಅದನ್ನು ಆದಾಯ ತೆರಿಗೆ ರಿಟರ್ನ್ಸ್ ನಲ್ಲಿ ತಪ್ಪದೇ ನಮೂದಿಸಬೇಕು. ಈ ಮಾಹಿತಿಯನ್ನು ಆಸ್ತಿ ನೋಂದಣಿ ಅಧಿಕಾರಿ ಬಹಿರಂಗಪಡಿಸೋ ಸಾಧ್ಯತೆಯಿರೋ ಕಾರಣ ತೆರಿಗೆದಾರರು ಈ ಮಾಹಿತಿಯನ್ನು ಅರ್ಜಿ ನಮೂನೆ 26AS ಉಲ್ಲೇಖಿಸೋದು ಅಗತ್ಯ.

ಷೇರು ಮಾರುಕಟ್ಟೆಯಲ್ಲಿನ ಹೂಡಿಕೆ(Investment In Stock Markets)
ನೀವು ಷೇರು ಮಾರುಕಟ್ಟೆಯಲ್ಲಿ ಯಾವುದೇ ವ್ಯವಹಾರ ನಡೆಸಿದ್ರೆ ಅಂದ್ರೆ ಷೇರುಗಳು, ಡಿಬೆಂಚರ್ಸ್ ಹಾಗೂ ಬಾಂಡ್ ಗಳ ಖರೀದಿ ಅಥವಾ ಮಾರಾಟ ಮಾಡಿದ್ರೆ ಅದ್ನು ಐಟಿಆರ್ ನಲ್ಲಿ ಉಲ್ಲೇಕಿಸೋದು ಅಗತ್ಯ. ಆದ್ರೆ ಈ ನಗದು ವ್ಯವಹಾರ ವಾರ್ಷಿಕ 10ಲಕ್ಷ ರೂ. ಮೀರಿದ್ರೆ ಮಾತ್ರ ಐಟಿಆರ್ ನಲ್ಲಿ ನಮೂದಿಸಿದ್ರೆ ಸಾಕು.

ಸ್ಥಿರ ಠೇವಣೆಯಲ್ಲಿ (FD) ಹೂಡಿಕೆ
10ಲಕ್ಷ ರೂ.ಗಿಂತಲೂ ಅಧಿಕ ಮೊತ್ತದ ಸ್ಥಿರ ಠೇವಣಿಗಳ(fixed deposits) ಬಗ್ಗೆ ವರದಿ ನೀಡುವಂತೆ ಕೇಂದ್ರ ನೇರ ತೆರಿಗೆಗಳ ಮಂಡಳಿ (CBDT) ಬ್ಯಾಂಕುಗಳಿಗೆ ಸೂಚಿಸಿದೆ. ಹೀಗಾಗಿ ಒಂದು ಅಥವಾ ಅದಕ್ಕಿಂತ ಹೆಚ್ಚಿನ ಖಾತೆಗಳಲ್ಲಿ ವಾರ್ಷಿಕ 10ಲಕ್ಷ ರೂ.ಗಿಂತಲೂ ಅಧಿಕ ಸ್ಥಿರ ಠೇವಣಿ ಹೊಂದಿರೋರು ಈ ಮಾಹಿತಿಯನ್ನು ತಪ್ಪದೇ ಐಟಿಆರ್ ನಲ್ಲಿ ದಾಖಲಿಸಬೇಕು. 

e-filling Portal:ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡೋದು ಹೇಗೆ? ಇಲ್ಲಿದೆ ಮಾಹಿತಿ

ಕ್ರೆಡಿಟ್ ಕಾರ್ಡ್ ಪಾವತಿ
ನೀವು ಕ್ರೆಡಿಟ್ ಕಾರ್ಡ್ ಬಳಕೆದಾರರಾಗಿದ್ದಾರೆ, ಈ ವಿಷಯದ ಬಗ್ಗೆ ತಿಳಿದಿರೋದು ಅತ್ಯಗತ್ಯ. ಅದೇನೆಂದ್ರೆ ನೀವು ಕ್ರೆಡಿಟ್ ಕಾರ್ಡ್ ಬಳಸಿ ಯಾವುದೇ ಒಂದು ಬಿಲ್ ಗೆ  ಒಂದು ಲಕ್ಷ ರೂ.ಗಿಂತಲೂ ಅಧಿಕ ನಗದು ಪಾವತಿ ಮಾಡಿದ್ರೆ ಆ ಮಾಹಿತಿಯನ್ನು ಐಟಿ ರಿಟರ್ನ್ಸ್ ನಲ್ಲಿ ಉಲ್ಲೇಖಿಸೋದು ಅಗತ್ಯ. ಆದ್ರೆ ಕ್ರೆಡಿಟ್ ಕಾರ್ಡ್ ಬಳಸಿ ನೀವು ಪಾವತಿಸಿದ ಯಾವುದೇ ಒಂದು ಬಿಲ್ ಮೊತ್ತ  10ಲಕ್ಷ ರೂ. ಮೀರಿದ್ರೆ ಐಟಿ ರಿಟರ್ನ್ಸ್ ಜೊತೆ ಬಿಲ್  ಕೂಡ ಆದಾಯ ತೆರಿಗೆ ಇಲಾಖೆಗೆ ಸಲ್ಲಿಕೆ ಮಾಡೋದು ಅಗತ್ಯ.

ಉಳಿತಾಯ(Saving) ಹಾಗೂ ಚಾಲ್ತಿ (Current) ಖಾತೆ
ಉಳಿತಾಯ ಖಾತೆಯಲ್ಲಿ ವಾರ್ಷಿಕ 10ಲಕ್ಷ ರೂ.ಗಿಂತಲೂ ಅಧಿಕ ವಹಿವಾಟು ನಡೆಸಿದ್ರೆ ಆ ಮಾಹಿತಿಯನ್ನು ಆದಾಯ ತೆರಿಗೆ ರಿಟರ್ನ್ಸ್ ನಲ್ಲಿ ಉಲ್ಲೇಖೀಸೋದು ಅಗತ್ಯ. ಚಾಲ್ತಿ ಖಾತೆಗೆ ಈ ಮಿತಿ 50ಲಕ್ಷ ರೂ. ತನಕವಿದೆ. 
 

Follow Us:
Download App:
  • android
  • ios