Top Cars of 2021: ಇಲ್ಲಿದೆ ಈ ವರ್ಷದ ಟಾಪ್ ಕಾರುಗಳ ಪಟ್ಟಿ: ನಿಮ್ಮ ಆಯ್ಕೆ ಯಾವುದು?

  • 2021ರಲ್ಲಿ ಚೇತರಿಸಿಕೊಂಡ ಆಟೊಮೊಬೈಲ್‌ ವಲಯ
  • ಹ್ಯಾಚ್‌ಬ್ಯಾಕ್‌,ಎಸ್‌ಯುವಿ ಹಾಗೂ ಇವಿ ಕಾರುಗಳ ಬಿಡುಗಡೆ
  • ಎಲ್ಲಾ ವಲಯಗಳಲ್ಲೂ ಹೊಸ ಕಾರುಗಳು ಮಾರುಕಟ್ಟೆಗೆ
Maruti Celerio Tata Tigor EV Renault Kigor among  among  top cars in India 2021

Auto Desk: 2020ನೇ ಕೋವಿಡ್ ಪೀಡಿತ ವರ್ಷಕ್ಕೆ ಹೋಲಿಸಿದರೆ, ಪ್ರಸಕ್ತ ವರ್ಷ ಆಟೊಮೊಬೈಲ್‌ ವಲಯಕ್ಕೆ ಬಹುಪಾಲು ಚೇತರಿಕೆಯ ವರ್ಷವಾಗಿತ್ತು. ಜಾಗತಿಕ ಮಟ್ಟದ ಚಿಪ್‌ ಕೊರತೆ ಕೂಡ ಭಾರತದಲ್ಲಿ ಕಾರುಗಳ ಮಾರಾಟದ ಭರಾಟೆ ಮೇಲೆ ಪರಿಣಾಮ ಬೀರಿಲ್ಲ. 2021ರಲ್ಲಿ ಹಲವು ಪ್ರಮುಖ ಕಾರುಗಳು ಬಿಡುಗಡೆಯಾಗಿವೆ. ಅವುಗಳ ಬಗ್ಗೆ ಇಲ್ಲಿದೆ ವಿವರಗಳು:

ಮಾರುತಿ ಸೆಲೆರಿಯೋ (Maruti Celerio):  

2021ರ ಆರಂಭದಲ್ಲಿ ಮಾರುತಿ ಸ್ವಲ್ಪ ತಡವಾಗಿಯೇ ಹೊಸ ಕಾರುಗಳನ್ನು ಪರಿಚಯಿಸಿತು. ಇದರಲ್ಲಿ ಪ್ರಮುಖವಾದುದು 2021 ಸೆಲೆರಿಯೊ. ಹೊಸ ಪೀಳಿಗೆಯ ಸೆಲೆರಿಯೊ, ಹಿಂದಿಗಿಂತಲೂ ವಿಭಿನ್ನವಾಗಿದ್ದು, ಭಾರತದ ಅತ್ಯಂತ ಇಂಧನ-ಸಮರ್ಥ ಪೆಟ್ರೋಲ್ ಕಾರು ಎಂದು ಪ್ರಮಾಣೀಕರಿಸಲ್ಪಟ್ಟಿದೆ. ಇದು ಪ್ರತಿ ಲೀಟರ್‌ಗೆ 26.68 ಕಿಮೀ ಮೈಲೇಜ್‌ ನೀಡುತ್ತದೆ. ಪೆಟ್ರೋಲ್‌ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನರಿಗೆ ಈ ಕಾರು ವರದಾನವಾಗಿದೆ. ಭಾರತದಲ್ಲಿ ಮಾರಾಟವಾಗುತ್ತಿರುವ ಟಾಪ್ 10 ಇಂಧನ-ಸಮರ್ಥ ಪೆಟ್ರೋಲ್ ಕಾರುಗಳಲ್ಲಿ, ಮಾರುತಿ ಸುಜುಕಿಯ 8 ಕಾರುಗಳು ಸ್ಥಾನ ಪಡೆದುಕೊಂಡಿವೆ.

ಟಾಟಾ ಟಿಗೋರ್ ಇವಿ (Tata Tigor EV)

ಇದು ದೇಶದಲ್ಲಿ ಲಭ್ಯವಿರುವ ಅತ್ಯಂತ ಕಡಿಮೆ ಬೆಲೆಯ ಎಲೆಕ್ಟ್ರಿಕ್‌ ಕಾರು. ಜನರು ಎಲೆಕ್ಟ್ರಿಕ್‌ ಕಾರುಗಳ ಹೆಚ್ಚಿನ ಬೆಲೆಯ ಕಾರಣದಿಂದ ಅದನ್ನು ಅಳವಡಿಸಿಕೊಳ್ಳುತ್ತಿರುವ ಸಮಯದಲ್ಲಿ ಈ ಕಾರು ಮಾರುಕಟ್ಟೆಗೆ ಬಂದಿತ್ತು. ಸದ್ಯ ಟಾಟಾ ಭಾರತದಲ್ಲಿ ಅತಿ ಹೆಚ್ಚು ಇವಿ ವಾಹನಗಳನ್ನು ಹೊಂದಿರುವ ಕಾರು ತಯಾರಕ ಕಂಪನಿಯಾಗಿದೆ. ಟಾಟಾ ಟಿಗೋರ್ ಇವಿ, 11.99 ಲಕ್ಷ ರೂ.( ಶೋರೂಂ ದರ) ಆರಂಭಿಕ ಬೆಲೆಯಲ್ಲಿ ಬಿಡುಗಡೆಯಾಗಿದೆ, ಇದೀಗ ಅಧಿಕೃತವಾಗಿ ಭಾರತದ ಅತ್ಯಂತ ಕೈಗೆಟುಕುವ ದರದ ವಿದ್ಯುತ್ ಕಾರಾಗಿದೆ

ರೆನಾಲ್ಟ್‌ ಕೈಗರ್ (Renault Kigor):

ಭಾರತದಲ್ಲಿನ ಸಬ್-ಕಾಂಪ್ಯಾಕ್ಟ್ ಎಸ್‌ಯುವಿಗೆ ಬೇಡಿಕೆ ಹೆಚ್ಚಿದಂತೆಲ್ಲಾ ಪೈಪೋಟಿಯೂ ಹೆಚ್ಚುತ್ತಿದೆ. ಬಹುತೇಕ ಪ್ರತಿ ಕಾರು ತಯಾರಕರು ಸಬ್-ಕಾಂಪ್ಯಾಕ್ಟ್ SUV ಜಾಗದಲ್ಲಿ ಕನಿಷ್ಠ ಒಂದು ಮಾದರಿಯನ್ನು  ಬಿಡುಗಡೆಗೊಳಿಸಿದ್ದಾರೆ. ರೆನಾಲ್ಟ್  ಕಿಗರ್ ಎಸ್‌ಯುವಿ ಇತ್ತೀಚಿನ ಪ್ರವೇಶವಾಗಿದೆ. 2021 ರ ಕಿಗರ್ SUV 5.45 ಲಕ್ಷ ರೂ. (ಶೋರೂಮ್ ದರ) ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದ್ದು, ಇದು ಈ ವರ್ಗದ ಅತ್ಯಂತ ಅಗ್ಗದ ವಾಃನವಾಘಿದೆ.

ಹ್ಯುಂಡೈ ಅಲ್ಕಜಾರ್‌ (Hyundai Alcazar):

ಭಾರತದ ಎರಡನೇ ಅತಿ ದೊಡ್ಡ ಕಾರು ತಯಾರಕ ಸಂಸ್ಥೆ ಹ್ಯುಂಡೈ ಮೋಟಾರ್, ತನ್ನ ಹ್ಯಾಚ್‌ಬ್ಯಾಕ್ ಮತ್ತು ಎಸ್‌ಯುವಿ (SUV)ಗಳಿಗೆ ಗುರುತಿಸಿಕೊಂಡಿದೆ. ಈ ಎರಡು ವಿಭಾಗಗಳಲ್ಲೇ ಹ್ಯುಂಡೈನ ಶೇ.70ಕ್ಕಿಂತ ಹೆಚ್ಚಿನ ಮಾರಾಟ ವ್ಯವಹಾರ ನಡೆಯುತ್ತದೆ. ಆದರೆ, ಕೊರಿಯಾ ಮೂಲದ ಈ ಕಂಪನಿ, ಈ ವರ್ಷ ಮೊದಲ ಬಾರಿಗೆ ಏಳು ಸೀಟಿನ ಕಾರು ಬಿಡುಗಡೆಯ ಸಾಹಸ ಮಾಡಿದೆ. 2021ರ ಹ್ಯುಂಡೈ ಅಲ್ಕಾಜರ್, ಉತ್ತಮ ಡ್ರೈವ್ ಡೈನಾಮಿಕ್ಸ್‌ನೊಂದಿಗೆ ಐಷಾರಾಮಿ ಮತ್ತು ಸ್ಥಳಾವಕಾಶ ಒದಗಿಸುತ್ತಿದೆ.

ಟಾಟಾ ಪಂಚ್‌ (Tata Punch):

ಈ ವರ್ಷ ಟಾಟಾ ಮೋಟಾರ್ಸ್, ಟಾಟಾ ಪಂಚ್ ಎಸ್‌ಯುವಿಯನ್ನು ಬಿಡುಗಡೆಗೊಳಿಸಿದೆ. ದೇಶದ ಮೊದಲ ಮೈಕ್ರೋ ಎಸ್‌ಯುವಿಯಾಗಿದೆ  ಇದು ಕಾಂಪ್ಯಾಕ್ಟ್ ಎಸ್‌ಯುವಿಯಾಗಿದ್ದು, ದೈನಂದಿನ ನಗರ ಪ್ರಯಾಣ ಮತ್ತು ಕಚ್ಚಾ ರಸ್ತೆಗಳು, ಕಾಡಿನ ರಸ್ತೆಯಲ್ಲಿ ಕೂಡ ಆಫ್‌ರೋಡ್‌ ಅನುಭವಕ್ಕೆ ಸೂಕ್ತ ಕಾರಾಗಿದೆ. ಇದರ ಆರಂಭಿಕ ಬೆಲೆ  5.48 ಲಕ್ಷ  ರೂ.(ಶೋರೂಂ ದರ).

ಎಂಜಿ ಆಸ್ಟರ್‌ (MG Astor):

2021 ಆಸ್ಟರ್ SUV ಯ ಪರಿಚಯದೊಂದಿಗೆ ಎಂಜಿ (MG) ಮೋಟಾರ್ ಆಟೊಮೊಬೈಲ್‌ ವಲಯಕ್ಕೆ ಕೃತಕ ಬುದ್ಧಿಮತ್ತೆಯನ್ನು ಪರಿಚಯಿಸಿದೆ. ಆಸ್ಟರ್ ದೇಶದ ಮೊದಲ ಎಐ (AI)-ಚಾಲಿತ ವಾಹನವಾಗಿದೆ ಮತ್ತು ಚಾಲಕ-ಸಹಾಯ ಮತ್ತು ಸುರಕ್ಷತಾ ವೈಶಿಷ್ಟ್ಯಗಳ ದೀರ್ಘ ಪಟ್ಟಿಯನ್ನು ಹೊಂದಿದೆ. ಇತರ ಕಾರು ತಯಾರಕರಲ್ಲಿ, ಮಹೀಂದ್ರಾ XUV700 ಇದೇ ರೀತಿಯ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಮರ್ಸಿಡೀಸ್‌ ಎಸ್‌-ಕ್ಲಾಸ್‌ (Mercedez S-Class):

ಐಷಾರಾಮಿ ಮರ್ಸಿಡಿಸ್ ಬೆಂಜ್‌ ಕಂಪನಿಯ 2021ರ ಎಸ್-ಕ್ಲಾಸ್ (Mercedes S -Class )ಅನ್ನು ವಿಶ್ವದ ಅತ್ಯುತ್ತಮ ಕಾರು ಎಂದು ಪರಿಗಣಿಸಲಾಗಿದೆ. ಇದು ಹಿಂದಿನ ಯಾವುದೇ ಕಾರುಗಳಲ್ಲಿಲ್ಲದ ಐಷಾರಾಮಿ ಸೌಲಭ್ಯಗಳನ್ನು ನೀಡುತ್ತದೆ. 31-ಸ್ಪೀಕರ್ 3ಡಿ (3D) ಬರ್ಮೆಸ್ಟರ್ ಸೌಂಡ್ ಸಿಸ್ಟಂ ಸೆಟಪ್, ಆರಾಮದಾಯಕ ಹಿಂಬದಿಯ ಆಸನಗಳು, ಎಲ್‌ಇಡಿ (LED) ಲೈಟ್ ಕಲರ್‌ಗಳು ನೃತ್ಯ ಮಾಡುವಂತಹ ಹೋಮ್ ಥಿಯೇಟರ್‌ನಿಂದ ಹಿಡಿದು - ಹೊಸ ಎಸ್-ಕ್ಲಾಸ್ ಪ್ರಥಮ ದರ್ಜೆ ಕ್ಯಾಬಿನ್ ಅನುಭವವನ್ನು ನೀಡುತ್ತದೆ. ಇದರ ಶೋರೂಂ ದರ ಬೆಲೆ 1.57 ಕೋಟಿ ರೂ.ಗಳಷ್ಟಿದೆ.

ಹುಂಡೈ i20 ಎನ್‌  ಲೈನ್ (Hyundai i20 N line)

ರೇಸಿಂಗ್ ಕಾರುಗಳಿಂದ ಸ್ಫೂರ್ತಿ ಪಡೆದ ಹ್ಯುಂಡೈ ಐ20 ಎನ್ ಮಾದರಿಗಳನ್ನು ದೇಶದಲ್ಲಿ ಪರಿಚಯಿಸಿತು.ಇದರ ಆರಂಭಿಕ ಶೋರೂಂ ದರ 9.84 ಲಕ್ಷ ರೂ.ಗಳಷ್ಟಿದೆ.

ಇದನ್ನೂ ಓದಿ:

1) BMTC Electric Bus: ರಾಜಧಾನಿಯಲ್ಲಿ ಎಲೆಕ್ಟ್ರಿಕ್ ಬಸ್ ಶುರು: ಒಮ್ಮೆ ಚಾರ್ಜ್ ಮಾಡಿದರೆ 120km ಸಂಚಾರ!

2) Mahindra Electric Vehicles ಹೊಸ ವರ್ಷಕ್ಕೆ ಮಹೀಂದ್ರ ಬಂಪರ್ ಗಿಫ್ಟ್, 6 ಹೊಸ ಎಲೆಕ್ಟ್ರಿಕ್ ವಾಹನ ಬಿಡುಗಡೆಗೆ ತಯಾರಿ!

3) Anand Mahindra Offer ಕೈ-ಕಾಲಿಲ್ಲದ ಪರಿಶ್ರಮಿಗೆ ಆನಂದ್ ಮಹೀಂದ್ರ ಉದ್ಯೋಗ ಆಫರ್, ಮುಗ್ದ ಸಾಧಕನ ಹಿಂದಿಂದೆ ನೋವಿನ ಕತೆ!

Latest Videos
Follow Us:
Download App:
  • android
  • ios