Credit Card : ಉಚಿತವಾಗಿರಲ್ಲ ಕ್ರೆಡಿಟ್ ಕಾರ್ಡ್! ಗ್ರಾಹಕರಿಗೆ ಗೊತ್ತಿಲ್ಲದೆ ವಸೂಲಿ ಮಾಡಲಾಗುತ್ತೆ ಈ ಶುಲ್ಕ
ಹಣಕಾಸಿನ ವ್ಯವಹಾರ ಮಾಡುವಾಗ ಅನೇಕ ಸಂಗತಿಯನ್ನು ತಿಳಿದಿರಬೇಕು. ಒತ್ತಾಯಕ್ಕೆ ಅಥವಾ ಕೆಲಸ ಸುಲಭವಾಗುತ್ತೆ ಎಂಬ ಕಾರಣಕ್ಕೆ ಯಾವುದೇ ವ್ಯವಹಾರ ನಡೆಸಬಾರದು. ಅದ್ರಲ್ಲಿ ಕ್ರೆಡಿಟ್ ಕಾರ್ಡ್ ಕೂಡ ಒಂದು. ಒಂದಾದ್ಮೇಲೆ ಒಂದರಂತೆ ಬ್ಯಾಂಕ್ ಗಳಿಂದ ಬರುವ ಕರೆಗೆ ಬೇಸತ್ತು ಕ್ರೆಡಿಟ್ ಕಾರ್ಡ್ ಪಡೆಯಲು ಮುಂದಾಗಿದ್ದರೆ ಅದ್ರ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ.
Business Desk: ಕ್ರೆಡಿಟ್ ಕಾರ್ಡ್ (Credit Card) ಬಳಸುವುದು ಸುಲಭ. ಎಲ್ಲ ಬ್ಯಾಂಕ್ (Bank )ಗಳು ಕ್ರೆಡಿಟ್ ಕಾರ್ಡ್ ನೀಡುತ್ತವೆ. ಹಾಗಾಗಿ ಕ್ರೆಡಿಟ್ ಕಾರ್ಡ್ ಪಡೆಯುವುದೂ ಕಷ್ಟವಲ್ಲ.ಆದ್ರೆ ಕ್ರೆಡಿಟ್ ಕಾರ್ಡ್ ಪಡೆಯುವ ಮೊದಲು ಹಾಗೆ ಬಳಸುವ ಮೊದಲು ಅನೇಕ ಸಂಗತಿಗಳನ್ನು ತಿಳಿದಿರಬೇಕಾಗುತ್ತದೆ. ಕ್ರೆಡಿಟ್ ಕಾರ್ಟ್ ಸಂಪೂರ್ಣ ಉಚಿತ,ಯಾವುದೇ ಶುಲ್ಕವಿಲ್ಲ (Fee) ಎಂದು ಯಾರಾದರೂ ಹೇಳಿದ್ರೆ ಅದನ್ನು ನಂಬಬೇಡಿ. ಕ್ರೆಡಿಟ್ ಕಾರ್ಡ್ ಮೂಲಕ ಕೆಲ ರಿಯಾಯ್ತಿ ರಿವಾರ್ಡ್ ಸಿಗುತ್ತದೆ. ಆದ್ರೆ ಕ್ರೆಡಿಟ್ ಕಾರ್ಡ್‌ನಿಂದ ಅನೇಕ ಅನುಕೂಲಗಳು ಮತ್ತು ಅನಾನುಕೂಲಗಳಿವ. ಕ್ರೆಡಿಟ್ ಕಾರ್ಡ್ ಬಳಸುವ ವೇಳೆ ನಿಮಗೆ ಗೊತ್ತಿಲ್ಲದೆ ನೀವು ಕೆಲ ಶುಲ್ಕ ಪಾವತಿ ಮಾಡಿರುತ್ತೀರಿ. ಅದನ್ನು ನೀವು ತಿಳಿಬೇಕಾದ ಅಗತ್ಯವಿದೆ. ಕ್ರೆಡಿಟ್ ಕಾರ್ಡ್ ಶುಲ್ಕಗಳ ಬಗ್ಗೆ ನಿಮಗೆ ತಿಳಿದಿಲ್ಲದಿದ್ದರೆ ಅಗ್ಗದ ವಸ್ತುಗಳನ್ನು ನೀಡುವ ಕ್ರೆಡಿಟ್ ಕಾರ್ಡ್ ನಿಂದ ನಿಮಗೆ ನಷ್ಟವಾಗಬಹುದು. ಪ್ರತಿ ಕಾರ್ಡ್‌ಗೆ ಕೆಲವು ಶುಲ್ಕಗಳನ್ನು ವಿಧಿಸಲಾಗುತ್ತದೆ. ನಿಮಗೆ ತಿಳಿಯದೇ ಕಟ್ ಆಗುವ ಶುಲ್ಕಗಳ ವಿವರ ಇಲ್ಲಿದೆ.
ವಾರ್ಷಿಕ ಶುಲ್ಕ(Annual fee)
ವಾರ್ಷಿಕ ಶುಲ್ಕ ವಿವಿಧ ಬ್ಯಾಂಕ್ ಗಳಲ್ಲಿ ಬೇರೆ ಬೇರೆ ಯಾಗಿದೆ. ಕೆಲ ಬ್ಯಾಂಕ್ ವಾರ್ಷಿಕ ಶುಲ್ಕ ವಿಧಿಸಿದ್ರೆ ಮತ್ತೆ ಕೆಲ ಬ್ಯಾಂಕ್ ಶುಲ್ಕ ವಿಧಿಸುವುದಿಲ್ಲ. ಹಾಗಾಗಿ ನೀವು ಕ್ರೆಡಿಟ್ ಕಾರ್ಡ್ ತೆಗೆದುಕೊಂಡರೆ, ಮೊದಲು ಬ್ಯಾಂಕ್ ವಾರ್ಷಿಕವಾಗಿ ಶುಲ್ಕ ವಿಧಿಸುತ್ತಿಲ್ಲವೇ ಎಂದು ಪರಿಶೀಲಿಸಿ. ಬ್ಯಾಂಕ್ ವಾರ್ಷಿಕ ಶುಲ್ಕವನ್ನು ವಿಧಿಸುತ್ತಿದ್ದರೆ, ಅತ್ಯಗತ್ಯ ಎನ್ನುವ ಸಂದರ್ಭದಲ್ಲಿ ಮಾತ್ರ ಕ್ರೆಡಿಟ್ ಕಾರ್ಡ್ ಪಡೆಯಿರಿ.
Credit Card : ಪರ್ಸ್ ನಲ್ಲಿ ಕ್ರೆಡಿಟ್ ಕಾರ್ಡಿದೆ ಅಂತಾ ಮೈಮರೆತೀರಿ, ಜೋಕೆ!
ಕ್ರೆಡಿಟ್ ಕಾರ್ಡ್ ಬಾಕಿಗಳ ಮೇಲೆ ಬಡ್ಡಿ (Interest)
ಈ ಶುಲ್ಕವನ್ನು ಪ್ರತಿ ಬ್ಯಾಂಕ್‌ನಿಂದ ವಿಧಿಸಲಾಗಿದ್ದರೂ, ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಸಕಾಲಕ್ಕೆ ಪಾವತಿಸದವರಿಗೆ ಇದನ್ನು ವಿಧಿಸಲಾಗುತ್ತದೆ. ಅಂದರೆ, ನಿಗದಿತ ದಿನಾಂಕದೊಳಗೆ ಹಣವನ್ನು ಪಾವತಿಸಬೇಕು. ಇಲ್ಲವಾದ್ರೆ ನೀವು ಬಡ್ಡಿ ಪಾವತಿ ಮಾಡಬೇಕಾಗುತ್ತದೆ. ಕನಿಷ್ಠ ಬಾಕಿಯನ್ನು ಪಾವತಿಸಿದರೆ ದೊಡ್ಡ ಬಡ್ಡಿಯಿಂದ ರಕ್ಷಣೆ ಪಡೆಯುತ್ತೀರಿ. ಯಾವಾಗಲೂ ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ನಿಗದಿತ ದಿನಾಂಕದೊಳಗೆ ಪಾವತಿ.
ತಡವಾದ ಪಾವತಿಯ ಮೇಲೆ ತಡವಾದ ಶುಲ್ಕ
ನಿಗದಿತ ದಿನಾಂಕದ ನಂತರ ನೀವು ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಪಾವತಿಸಿದರೆ, ನೀವು ಬಾಕಿ ಉಳಿದಿರುವ ಮೊತ್ತಕ್ಕೆ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಜೊತೆಗೆ ನಿರ್ದಿಷ್ಟ ವಿಳಂಬ ಶುಲ್ಕವನ್ನು ಸಹ ಪಾವತಿಸಬೇಕಾಗುತ್ತದೆ. ಈ ತಡವಾದ ಶುಲ್ಕವು ನಿಮ್ಮ ಕಾರ್ಡ್‌ನಲ್ಲಿ ಬಾಕಿ ಉಳಿದಿರುವ ಮೊತ್ತವನ್ನು ಅವಲಂಬಿಸಿರುತ್ತದೆ. ಹೆಚ್ಚಿನ ಬಾಕಿಯಿದ್ದರೆ ತಡವಾದ ಶುಲ್ಕವೂ ಹೆಚ್ಚಾಗಬಹುದು.
ಹಣ (Money) ಹಿಂಪಡೆದರೆ ಶುಲ್ಕ
ಕ್ರೆಡಿಟ್ ಕಾರ್ಡ್ ಬಳಸುವ ಮೊದಲು, ಕ್ರೆಡಿಟ್ ಕಾರ್ಡ್‌ನಲ್ಲಿ ಖರ್ಚು ಮಾಡುವ ಪ್ರತಿಯೊಂದು ರೂಪಾಯಿಯೂ ಒಂದು ರೀತಿಯ ಸಾಲ ಎಂದು ಅರ್ಥಮಾಡಿಕೊಳ್ಳಿ. ಅಂತಹ ಪರಿಸ್ಥಿತಿಯಲ್ಲಿ, ನೀವು ಕ್ರೆಡಿಟ್ ಕಾರ್ಡ್‌ನಿಂದ ಹಣವನ್ನು ಹಿಂಪಡೆದರೆ, ನಗದು ಹಿಂಪಡೆಯುವಿಕೆಯ ದಿನದಿಂದ ಅದರ ಮೇಲೆ ಶುಲ್ಕಗಳು ಪ್ರಾರಂಭವಾಗುತ್ತವೆ. ನೀವು ಕಾರ್ಡ್‌ನೊಂದಿಗೆ ಶಾಪಿಂಗ್ ಮಾಡಿದರೆ, ನೀವು ನಿಗದಿತ ದಿನಾಂಕದವರೆಗೆ ಯಾವುದೇ ಬಡ್ಡಿಯಿಲ್ಲದೆ ಹಣವನ್ನು ಪಾವತಿಸಬೇಕಾಗುತ್ತದೆ. ಆದರೆ ನೀವು ಹಣವನ್ನು ಹಿಂಪಡೆದರೆ, ಹಿಂಪಡೆಯುವ ದಿನದಿಂದ ಪಾವತಿಯ ದಿನದವರೆಗೆ ಅದರ ಮೇಲೆ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.
IT Return 2021: ಈ 5 ಮಾಹಿತಿಗಳನ್ನು ಉಲ್ಲೇಖಿಸದಿದ್ರೆ ತೊಂದರೆ ಗ್ಯಾರಂಟಿ!
ಸಾಗರೋತ್ತರ ವಹಿವಾಟು ಶುಲ್ಕ
ಕ್ರೆಡಿಟ್ ಕಾರ್ಡ್‌ಗಳನ್ನು ನೀಡುವಾಗ, ಅನೇಕ ಬ್ಯಾಂಕುಗಳು ತಮ್ಮ ಕ್ರೆಡಿಟ್ ಕಾರ್ಡ್ ಅನ್ನು ವಿದೇಶದಲ್ಲಿಯೂ ಬಳಸಬಹುದು ಎಂದು ಹೇಳುತ್ತವೆ.ಆದ್ರೆ ವಿದೇಶದಲ್ಲಿ ಕ್ರೆಡಿಟ್ ಕಾರ್ಡ್ ಅನ್ನು ಬಳಸುವುದರಿಂದ ಹೆಚ್ಚಿನ ಶುಲ್ಕವನ್ನು ವಿಧಿಸಲಾಗುತ್ತದೆ. ಅದನ್ನು ಬ್ಯಾಂಕ್ ಬಹಿರಂಗಪಡಿಸುವುದಿಲ್ಲ. ನೀವು ವಿದೇಶಕ್ಕೆ ಪ್ರಯಾಣಿಸಲು ಯೋಜಿಸುತ್ತಿದ್ದರೆ ಮತ್ತು ನಿಮ್ಮ ಕ್ರೆಡಿಟ್ ಕಾರ್ಡ್ ಮೂಲಕ ಶಾಪಿಂಗ್ ಮಾಡಲು ಮುಂದಾಗಿದ್ದರೆ ಬ್ಯಾಂಕ್ ಶುಲ್ಕದ ಬಗ್ಗೆ ತಿಳಿದಿರಿ.
ಬ್ಯಾಲೆನ್ಸ್ ವರ್ಗಾವಣೆ ಶುಲ್ಕ : ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುವವರು ಬ್ಯಾಲೆನ್ಸ್ ವರ್ಗಾವಣೆಯ ಬಗ್ಗೆ ತಿಳಿದಿರಬೇಕು. ಬ್ಯಾಲೆನ್ಸ್ ವರ್ಗಾವಣೆಯ ಮೂಲಕ, ನೀವು ಒಂದು ಕ್ರೆಡಿಟ್ ಕಾರ್ಡ್‌ನಿಂದ ಇನ್ನೊಂದರ ಬಿಲ್ (Bill) ಪಾವತಿಸಬಹುದು. ಈ ಸೌಲಭ್ಯವು ಪ್ರತಿ ಕ್ರೆಡಿಟ್ ಕಾರ್ಡ್‌ನಲ್ಲಿ ಲಭ್ಯವಿಲ್ಲದಿದ್ದರೂ, ಅನೇಕ ಕಾರ್ಡ್‌ಗಳು ಈ ಸೌಲಭ್ಯವನ್ನು ಒದಗಿಸುತ್ತವೆ. ನೀವು ಕ್ರೆಡಿಟ್ ಕಾರ್ಡ್‌ನ ಬ್ಯಾಲೆನ್ಸ್ ವರ್ಗಾವಣೆ ಸೌಲಭ್ಯವನ್ನು ಬಳಸಿದರೆ, ಬ್ಯಾಲೆನ್ಸ್ (Balance) ವರ್ಗಾವಣೆ ಶುಲ್ಕ ಪಾವತಿಸಬೇಕಾಗುತ್ತದೆ.