ಆಗಲ್ರೀ: ಮೋದಿಗೆ ಚೀನಾ ಕಳ್ಸಿದ ‘ಆ’ ಒಂದು ಸಂದೇಶ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 2, Dec 2018, 6:33 PM IST
China Rejects Proposal from India to trade Local Currency
Highlights

ಭಾರತ-ಚೀನಾ ನಡುವೆ ಎಲ್ಲವೂ ಸರಿಯಿಲ್ಲವೇ?! ಚೀನಾಗೇಕೆ ಮೋದಿ ಭಾರತದ ಮೇಲಿಷ್ಟು ಮುನಿಸು?! ಸ್ಥಳೀಯ ಕರೆನ್ಸಿಯಲ್ಲಿ ದ್ವಿಪಕ್ಷೀಯ ವ್ಯಾಪಾರ ವಹಿವಾಟು ನಡೆಸಲು ನಕಾರ! ಭಾರತದ ಪ್ರಸ್ತಾವನೆಯನ್ನು ಸಾರಾಸಗಟಾಗಿ ತಿರಸ್ಕರಿಸಿದ ಚೀನಾ! ವ್ಯಾಪಾರ ಕೊರತೆ ಸರಿದೂಗಿಸಲು ಸ್ಥಳೀಯ ಕರೆನ್ಸಿ ಉತ್ತಮ ಎಂದಿದ್ದ ಭಾರತ! ಭಾರತ-ಚೀನಾ ನಡುವಿನ ವಾಣಿಜ್ಯ ಸಂಬಂಧಕ್ಕೆ ಹಿನ್ನಡೆ?

ನವದೆಹಲಿ(ಡಿ.02): ಸ್ಥಳೀಯ ಕರೆನ್ಸಿಯಲ್ಲಿ ದ್ವಿಪಕ್ಷೀಯ ವ್ಯಾಪಾರ ವಹಿವಾಟುಗಳನ್ನು ನಡೆಸಲು ಭಾರತ ನೀಡಿದ್ದ ಪ್ರಸ್ತಾವನೆಯನ್ನು ಚೀನಾ ತಿರಸ್ಕರಿಸಿದೆ. 

ಹೆಚ್ಚುತ್ತಿರುವ ಟ್ರೇಡ್ ಡೆಫಿಸಿಟ್(ವ್ಯಾಪಾರ ಕೊರತೆ)ನ್ನು ಸರಿದೂಗಿಸಲು ಭಾರತ ಸ್ಥಳೀಯ ಕರೆನ್ಸಿಯಲ್ಲೇ ದ್ವಿಪಕ್ಷೀಯ ವ್ಯಾಪಾರ ವಹಿವಾಟುಗಳನ್ನು ನಡೆಸುವ ಪ್ರಸ್ತಾವನೆ ನೀಡಿತ್ತು. 

2017-18 ನೇ ಸಾಲಿನಲ್ಲಿ ಚೀನಾಗೆ ಭಾರತದ ರಫ್ತು 13.4 ಬಿಲಿಯನ್ ನಷ್ಟಾಗಿದ್ದರೆ, ಆಮದು ಪ್ರಮಾಣ 76.4 ಬಿಲಿಯನ್ ಡಾಲರ್ ನಷ್ಟಿದೆ. ಈ ಹಿನ್ನೆಲೆಯಲ್ಲಿ ಭಾರತ ನೆರೆಯ ರಾಷ್ಟ್ರ ಚೀನಾದೊಂದಿಗಿನ ವ್ಯಾಪಾರ ವಹಿವಾಟುಗಳನ್ನು ಸ್ಥಳೀಯ ಕರೆನ್ಸಿಯಲ್ಲಿ ನಡೆಸಲು ಉದ್ದೇಶಿಸಿತ್ತು. 

ಆದರೆ ಚೀನಾ ನಮ್ಮ ಪ್ರಸ್ತಾವನೆಗೆ ಒಪ್ಪಿಗೆ ನೀಡದೇ ಇರುವುದು ಭಾರತ-ಚೀನಾ ನಡುವಿನ ವಾಣಿಜ್ಯ ಸಂಬಂಧಕ್ಕೆ ಹಿನ್ನಡೆಯಾದಂತೆ ಎಂದು ತಜ್ಞರು ಅಭಿಪ್ರಯೊಪಟ್ಟಿದ್ದಾರೆ.
 

loader