Asianet Suvarna News Asianet Suvarna News

ಲೋಕಸಭಾ ಚುನಾವಣೆ 2024: ಉತ್ತರ ಕನ್ನಡ ಅಖಾಡಲ್ಲಿ ಹೊಸ ಮುಖಗಳ ತೀವ್ರ ಹಣಾಹಣಿ..!

ಈ ಹಿಂದೆ ಕಾಂಗ್ರೆಸ್‌ನ ಭದ್ರ ಕೋಟೆಯಾಗಿದ್ದ ಉತ್ತರ ಕನ್ನಡ ಕ್ಷೇತ್ರದಲ್ಲಿ ಈಚಿನ ದಶಕಗಳಲ್ಲಿ ಬಿಜೆಪಿಯದ್ದೇ ಪಾರುಪತ್ಯ ನಡೆದುಕೊಂಡು ಬಂದಿದೆ. ಈ ಹಿಂದೆ ಘಟಾನುಘಟಿಗಳಾದ ಶಿವರಾಮ ಕಾರಂತ, ಆನಂತನಾಗ್, ಆರ್.ವಿ.ದೇಶಪಾಂಡೆ, ಮಾರ್ಗರೆಟ್ ಆಳ್ವ ಮತ್ತಿತರರಿಗೇ ಸೋಲಿನ ರುಚಿ ತೋರಿಸಿದ ಕ್ಷೇತ್ರವಿದು. 

competition Between Vishweshwar Hegde Kageri  Dr Anjali Nimbalkar in Uttara Kannada grg
Author
First Published Apr 26, 2024, 1:54 PM IST | Last Updated Apr 26, 2024, 1:54 PM IST

ವಸಂತಕುಮಾ‌ರ್ ಕತಗಾಲ 

ಕಾರವಾರ(ಏ.25):  ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ಈ ಬಾರಿ ಹೊಸ ಮುಖಗಳ ನಡುವಿನ ಪೈಪೋಟಿಗೆ ಸಾಕ್ಷಿಯಾಗಲಿದೆ. ಬಿಜೆಪಿಯಿಂದ ವಿಶ್ವೇಶ್ವರ ಹೆಗಡೆ ಕಾಗೇರಿ, ಕಾಂಗ್ರೆಸ್ಸಿನಿಂದ ಡಾ.ಅಂಜಲಿ ನಿಂಬಾಳ್ವರ್‌ ನಡುವೆ ಇಲ್ಲಿ ನೇರ ಹಣಾಹಣಿ ಏರ್ಪಟ್ಟಿದೆ.

ಈ ಹಿಂದೆ ಕಾಂಗ್ರೆಸ್‌ನ ಭದ್ರ ಕೋಟೆಯಾಗಿದ್ದ ಉತ್ತರ ಕನ್ನಡ ಕ್ಷೇತ್ರದಲ್ಲಿ ಈಚಿನ ದಶಕಗಳಲ್ಲಿ ಬಿಜೆಪಿಯದ್ದೇ ಪಾರುಪತ್ಯ ನಡೆದುಕೊಂಡು ಬಂದಿದೆ. ಈ ಹಿಂದೆ ಘಟಾನುಘಟಿಗಳಾದ ಶಿವರಾಮ ಕಾರಂತ, ಆನಂತನಾಗ್, ಆರ್.ವಿ.ದೇಶಪಾಂಡೆ, ಮಾರ್ಗರೆಟ್ ಆಳ್ವ ಮತ್ತಿತರರಿಗೇ ಸೋಲಿನ ರುಚಿ ತೋರಿಸಿದ ಕ್ಷೇತ್ರವಿದು. ಕಾಂಗ್ರೆಸ್ಸಿನ ದೇವರಾಯ ನಾಯ್ಕ ನಾಲ್ಕು ಬಾರಿ, ಬಿಜೆಪಿಯ ಅನಂತಕುಮಾರ ಹೆಗಡೆ ಆರು ಬಾರಿ ಗೆದ್ದು ಬೀಗಿದ್ದಾರೆ. ಸತತ ಗೆಲುವಿನ ನಾಗಾಲೋಟದಲ್ಲಿದ್ದ ಅನಂತ ಹೆಗಡೆಗೆ ಟಿಕೆಟ್ ಕೈತಪ್ಪಿದ್ದು, ಈ ವಿಶ್ವೇಶ್ವರ ಹೆಗಡೆ ಕಾಗೇರಿ ಕಣಕ್ಕಿಳಿದಿದ್ದಾರೆ. 

ಬಿಜೆಪಿಯವರಿಗೆ ರಾಜಕೀಯ ಮಾಡಲು ಒಂದು ಹೆಣ ಬೇಕು; ಹಳದಿಪುರದಲ್ಲಿ ನಾಲಗೆ ಹರಿಬಿಟ್ಟ ಸಚಿವ ಮಾಂಕಾಳು ವೈದ್ಯ!

ಹೊರಗಿನವರು: 

ಕಾಂಗ್ರೆಸ್ಸಿನ ಅಂಜಲಿ ನಿಂಬಾಳ್ಳರ್ ಅವರಿಗೆ ಉತ್ತರ ಕನ್ನಡ ಜಿಲ್ಲೆ ಹೊಸದು. ಈ ಜಿಲ್ಲೆಯೊಂದಿಗೆ ಅವರಿಗೆ ಯಾವುದೇ ನೇರ ನಂಟಿಲ್ಲ, ಡಾ.ಅಂಜಲಿ ಅವರು ಉತ್ತರ ಕನ್ನಡ ಲೋಕಸಭೆ ಕ್ಷೇತ್ರದವರೇ ಆಗಿದ್ದರೂ ಜಿಲ್ಲೆಯ ಹೊರಗಡೆಯವರಾಗಿರುವುದ ರಿಂದ ಜಿಲ್ಲೆಯ ಜನತೆ ಹೇಗೆ ಸ್ಪೀಕರಿಸುತ್ತಾರೆ ಅನ್ನುವುದೇ ಕುತೂಹಲ, ಡಾ.ಅಂಜಲಿ ಪ್ರಚಾರಕ್ಕೆ ಹೋದಾಗೆಲ್ಲ ನಾನು ಕ್ಷೇತ್ರದವಳು ಎಂದು ಹೇಳಿಕೊಳ್ಳಬೇಕಾಗಿದೆ. 

ಇನ್ನು ಕಾಗೇರಿ ಅವರದು ಕ್ಷೇತ್ರದಲ್ಲಿ ಪರಿಚಿತ ಮುಖ. ಆದರೆ ಲೋಕಸಭೆ ಚುನಾವಣೆಗೆ ಅವರು ಧುಮುಕುತ್ತಿರುವುದು ಇದೇ ಮೊದಲು. ಸಂಸದ ಅನಂತ ಹೆಗಡೆಗೆ ಈ ಬಾರಿ ಟಿಕೆಟ್ ನಿರಾಕರಿಸುತ್ತಿದ್ದಂತೆ ಹೆಗಡೆ ರಾಜಕೀಯ ಮೌನಕ್ಕೆ ಜಾರಿದ್ದು, ಅವರ ಕೆಲ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಕಾಗೇರಿ ವಿರು ದ್ದವೇ ಅಪಪ್ರಚಾರದಲ್ಲಿ ನಿರತರಾಗಿದ್ದಾರೆ. ಅದೇ ರೀತಿ ಯಲ್ಲಾಪುರ ಕ್ಷೇತ್ರದ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್‌ತಮ್ಮ ಪುತ್ರನ ಜತೆ ಬೆಂಬಲಿಗರನ್ನು ಕಾಂಗ್ರೆಸ್ಸಿಗೆ ಕಳುಹಿಸಿದ್ದು ಅವರ ಬೆಂಬಲ ಸಿಗುವುದು ಅನುಮಾನ. ಇಂಥ ಪರಿಸ್ಥಿತಿಯನ್ನು ನಿಭಾಯಿಸಿಕೊಂಡು ಗೆಲ್ಲುವುದು ಕಾಗೇರಿ ಅವರಿಗೆ ಸವಾಲು.
ಕಾಗೇರಿ ಅವರು ಪ್ರಧಾನಿ ಮೋದಿ ಅವರ ಜನಪ್ರಿಯತೆ, ಕೇಂದ್ರ ಸರ್ಕಾರದ ಯೋಜನೆ ಗಳನ್ನೇ ಬಂಡವಾಳವನ್ನಾಗಿಟ್ಟುಕೊಂಡು ಪ್ರಚಾರ ನಡೆಸುತ್ತಿದ್ದರೆ, ಅಂಜಲಿ ಕಾಂಗ್ರೆಸ್ಸಿನ ಗ್ಯಾರಂಟಿಯನ್ನೇ ನೆಚ್ಚಿಕೊಂಡು ಪ್ರಚಾರದಲ್ಲಿ

ವಿಧಾನಸಭಾ ಕ್ಷೇತ್ರಗಳು: 

ಈ ಲೋಕಸಭಾ ಕ್ಷೇತ್ರವು ಉ. ಕನ್ನಡದ ಹಾಗೂ ಬೆಳಗಾವಿಯ 2 ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡಿದೆ. ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳ ಪೈಕಿ ಹಳಿಯಾಳ, ಶಿರಸಿ, ಕಾರವಾರ ಹಾಗೂ ಭಟ್ಕಳ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು, ಯಲ್ಲಾಪುರ ಹಾಗೂ ಕುಮಟಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿ ದ್ದಾರೆ. ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ಬಿಜೆಪಿ ಶಾಸಕರಿದ್ದರೆ, ಕಿತ್ತೂರಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಒಟ್ಟು 8 ಕ್ಷೇತ್ರಗಳಲ್ಲಿ 5ರಲ್ಲಿ ಕಾಂಗ್ರೆಸ್, 3ರಲ್ಲಿ ಬಿಜೆಪಿ ಶಾಸಕರಿದ್ದಾರೆ.

ಅಂಜಲಿ ನಿಂಬಾಳ್ಕರ್ ಕಾಂಗ್ರೆಸ್

ಡಾ.ಅಂಜಲಿ ನಿಂಬಾಳ್ಕರ್ ಹಿಂದೆ ಖಾನಾಪುರ ಶಾಸಕರಾಗಿದ್ದರು. ಆದರೆ 2021ರ ಚುನಾವಣೆ ಯಲ್ಲಿ ಸೋಲನುಭವಿಸಿದರು. ವೈದ್ಯರಾಗಿರುವ ಅವರು ಖಾನಾಪುರ, ಕಿತ್ತೂರು ವಿಧಾನಸಭೆ ಕ್ಷೇತ್ರದಲ್ಲಿ ಪರಿಚಿತರು. ಉತ್ತರ ಕನ್ನಡಕ್ಕೆ ಹೊಸ ಭೌಗೋಳಿಕ ಪರಿಸ್ಥಿತಿ, ಸಮಸ್ಯೆಗಳು, ವಿವಿಧ ಜನಾಂಗಗಳು, ಜಿಲ್ಲೆಯ ನಾಡಿಮಿಡಿತವನ್ನು ಅರಿ ಯುವ ಸವಾಲು ಅವರ ಗಿದೆ. ಜಿಲ್ಲೆಯಲ್ಲಿನ ಕಾಂಗ್ರೆಸ್ ಶಾಸಕರು, ಮುಖಂಡರನ್ನು ಅವಲಂ ಬಿಸಿದ್ದಾರೆ. ಮರಾತಾ ಸಮಾಜಕ್ಕೆ ಸೇರಿರುವ ಇವರು ಕ್ಷೇತ್ರದಲ್ಲಿ ಬಹು ಸಂಖ್ಯಾತರಾದ ಮರಾಠಾ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ.

ಕಾರವಾರ: ಎಂಇಎಸ್ ಪರ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ಹೇಳಿಕೆ, ಮುಗಿಬಿದ್ದ ಬಿಜೆಪಿ

ವಿಶ್ವೇಶ್ವರ ಹೆಗಡೆ ಬಿಜೆಪಿ

ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಒಟ್ಟು ಆರು ಬಾರಿ ಶಾಸಕರಾಗಿದ್ದರು. (ಮೂರು ಸಲ ಅಂಕೋಲಾ ಹಾಗೂ ಮೂರು ಸಲ ಶಿರಸಿ ಕ್ಷೇತ್ರ) ಆದರೆ 2023ರ ಚುನಾವಣೆಯಲ್ಲಿ ಸೋಲನುಭವಿಸಿದರು. ಶಿಕ್ಷಣ ಸಚಿವರಾಗಿ, ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿ ದ್ದಾರೆ. ವಿಧಾನಸಭೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಸರಳತೆ ಹಾಗೂ ಸಜ್ಜನಿಕೆ ಇವರನ್ನು ಜನರಿಗೆ ಹತ್ತಿರವಾಗಿಸಿದೆ. ಉತ್ತರ ಕನ್ನಡ ಲೋಕಸಭೆ ಕ್ಷೇತ್ರದಲ್ಲಿ ಚಿರಪರಿಚಿತರು. ಹವ್ಯಕ ಬ್ರಾಹ್ಮಣರಾದ ಇವರು ಬಹುಸಖ್ಯಾತರಾದ ಬ್ರಾಹ್ಮಣ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ.

ಜಾತಿ-ಮತ ಲೆಕ್ಕಾಚಾರ: ಕ್ಷೇತ್ರದಲ್ಲಿ ನಾಮಧಾರಿ(ಈಡಿಗ) ಮತದಾರರು ಸುಮಾರು

ಒಟ್ಟು 2 ಲಕ್ಷದಷ್ಟು ಇದ್ದಾರೆ. ಬ್ರಾಹ್ಮಣ-1.80 ಲಕ್ಷ
ಒಕ್ಕಲಿಗರು(ಹಾಲಕ್ಕಿ, ಕರೆಒಕ್ಕಲಿಗ)- 1.10 ಲಕ್ಷ,
ಮರಾಠ-2.20 ಲಕ್ಷ, ಅಲ್ಪಸಂಖ್ಯಾತರು(ಮುಸ್ಲಿಂ,
ಕ್ರಿಶ್ಚಿಯನ್)- 3 ಲಕ್ಷ, ಮೀನುಗಾರ- 80 ಸಾವಿರ,
ದಲಿತ/ ಎಸ್‌ಸಿ, ಎಸ್‌ಟಿ, ಬುಡಕಟ್ಟು- 2 ಲಕ್ಷ,
ಲಿಂಗಾಯತ- 1 ಲಕ್ಷ ಇದ್ದಾರೆ.

ಕ್ಷೇತ್ರದ ಮತದಾರರ ವಿವರ

ಪುರುಷರು 8.15.599
ಮಹಿಳೆಯರು 8,07242
ಇತರರು 16
ಒಟ್ಟು 16.22.857

2021ರ ಉಪಚುನಾವಣೆ ಫಲಿತಾಂಶ: 

ಅನಂತಕುಮಾರ ಹೆಗಡೆ(ಬಿಜೆಪಿ) 7,86,042, ಆನಂದ್‌ ಅಸ್ನೋಟಿಕರ್‌(ಜೆಡಿಎಸ್‌) 3,06,393

Latest Videos
Follow Us:
Download App:
  • android
  • ios