110ನೇ ವಯಸ್ಸಿನಲ್ಲೂ ಕಾರ್ ಡ್ರೈವ್ ಮಾಡೋ ಈ ಅಜ್ಜನ ಆರೋಗ್ಯದ ಗುಟ್ಟೇನಿರಬಹುದು!
80 ವರ್ಷ ದಾಟುತ್ತಿದ್ದಂತೆ ಈಗಿನ ಜನರು ಹಾಸಿಗೆ ಹಿಡಿತಾರೆ. ತಮ್ಮ ಕೆಲಸ ತಾವು ಮಾಡ್ಕೊಳ್ಳೋದು ಕಷ್ಟ ಎನ್ನುವ ಸ್ಥಿತಿಗೆ ಬರ್ತಾರೆ. ಆದ್ರೆ 110ನೇ ವಯಸ್ಸಿನಲ್ಲೂ ಫಿಟ್ ಆಗಿರುವ ಈ ಅಜ್ಜ ಫುಲ್ ಸ್ಟ್ರಾಂಗ್.
ವಯಸ್ಸು 40 ದಾಟುತ್ತಿದ್ದಂತೆ ಜನರು ನನಗೆ ವಯಸ್ಸಾಯ್ತು.. ಇನ್ನು ಕಠಿಣ ಕೆಲಸ ಮಾಡೋದು ಕಷ್ಟ ಎನ್ನುತ್ತಲೆ ಆರೋಗ್ಯ ಕಾಪಾಡಿಕೊಳ್ಳೋಕೆ ವಾಕಿಂಗ್, ಜಾಗಿಂಗ್ ಶುರು ಮಾಡ್ತಾರೆ. ನಮಗಿಂತ ನಮ್ಮ ಅಮ್ಮ – ಅಪ್ಪ ಹೆಚ್ಚು ಆರೋಗ್ಯವಾಗಿದ್ರೆ ಅವರಿಗಿಂತ ಅವರ ಅಪ್ಪ – ಅಮ್ಮ ಮತ್ತಷ್ಟು ಆರೋಗ್ಯವಾಗಿದ್ರು. ಅವರ ಆಹಾರ, ಜೀವನಶೈಲಿಯೇ ಇದಕ್ಕೆ ಕಾರಣ. ನೂರು, ನೂರಾ ಹತ್ತು ವರ್ಷವಾದ್ರೂ ಗಟ್ಟಿಮುಟ್ಟಾಗಿರುವ ಜನರು ನಮ್ಮಲ್ಲಿದ್ದಾರೆ. ಅದ್ರಲ್ಲಿ ವಿನ್ಸೆಂಟ್ ಡ್ರಾನ್ಸ್‌ಫೀಲ್ಡ್ ಕೂಡ ಒಬ್ಬರು. ಈಗ್ಲೂ ಯುವಕರನ್ನು ನಾಚಿಸುವಂತೆ ಕೆಲಸ ಮಾಡುವ ಅವರ ವಯಸ್ಸು 110 ವರ್ಷ ಅಂದ್ರೆ ನಂಬೋದು ಕಷ್ಟ. ಗಟ್ಟಿಮುಟ್ಟಾಗಿರುವ ವಿನ್ಸೆಂಟ್ ಡ್ರಾನ್ಸ್‌ಫೀಲ್ಡ್ ಯುವಕರಿಗಿಂತ ಹೆಚ್ಚು ಕೆಲಸವನ್ನು ಆರಾಮವಾಗಿ ಮಾಡ್ತಾರೆ. ಅವರು ತಮ್ಮ ಈ ಫಿಟ್ನೆಸ್ ಗೆ ಕಾರಣ ಏನು ಎಂಬುದನ್ನು ಹೇಳಿದ್ದಾರೆ.
ವಿನ್ಸೆಂಟ್ ಡ್ರಾನ್ಸ್‌ಫೀಲ್ಡ್, ಅಮೆರಿಕ (America) ದ ನ್ಯೂಜೆರ್ಸಿಯಲ್ಲಿ ವಾಸವಾಗಿದ್ದಾರೆ. ಕಳೆದ ತಿಂಗಳಷ್ಟೇ ವಿನ್ಸೆಂಟ್ ಡ್ರಾನ್ಸ್‌ಫೀಲ್ಡ್ ತಮ್ಮ 110ನೇ ಹುಟ್ಟುಹಬ್ಬ (Birthday) ವನ್ನು ಆಚರಿಸಿಕೊಂಡಿದ್ದಾರೆ. ಅವರಿಗೆ ಏಳು ಮರಿಮೊಮ್ಮಕ್ಕಳಿದ್ದಾರೆ. ಇಷ್ಟು ವಯಸ್ಸಾದ್ರೂ ವಿನ್ಸೆಂಟ್ ಡ್ರಾನ್ಸ್‌ಫೀಲ್ಡ್ ಬಿಂದಾಸ್ ಆಗಿ ಬದುಕುತ್ತಿದ್ದಾರೆ. 100 ವರ್ಷವಾದ್ರೂ ಅತ್ಯುತ್ತಮ ಜೀವನ ನಡೆಸುತ್ತಿರುವ ವ್ಯಕ್ತಿಗಳಲ್ಲಿ ವಿನ್ಸೆಂಟ್ ಡ್ರಾನ್ಸ್‌ಫೀಲ್ಡ್ ಕೂಡ ಒಬ್ಬರು.
ವೈಟ್ ಲಾಸ್ ಮಾಡ್ಕೊಳ್ಳೋಕೆ ದಿನಕ್ಕೆ ಎಷ್ಟು ಲೋಟ ನೀರು ಕುಡೀಬೇಕು?
ವಿನ್ಸೆಂಟ್ ಡ್ರಾನ್ಸ್‌ಫೀಲ್ಡ್ ದಿನಚರಿ (Routine) : ವಿನ್ಸೆಂಟ್ ಡ್ರಾನ್ಸ್‌ಫೀಲ್ಡ್ ಮನೆಯಲ್ಲಿ ಒಬ್ಬರೇ ವಾಸವಾಗಿದ್ದಾರೆ. ಮನೆ ಕೆಲಸಕ್ಕೆ ಯಾರನ್ನೂ ನೇಮಿಸಿಕೊಂಡಿಲ್ಲ. ಮನೆಯ ಕ್ಲೀನಿಂಗ್ ನಿಂದ ಹಿಡುದು ಅಡುಗೆವರೆಗೆ ಎಲ್ಲವನ್ನೂ ಮಾಡುವ ಅವರು, ಕಾರು ಚಲಾಯಿಸಿಕೊಂಡು ಮಾರುಕಟ್ಟೆಗೆ ಹೋಗ್ತಾರೆ. ಮಾರುಕಟ್ಟೆಯಿಂದ ಸಾಮಾನುಗಳನ್ನು ತಾವೇ ಮೇಲೆ ಹತ್ತಿರುತ್ತಾರೆ. ಮೂರು ಅಂತಸ್ತಿನ ಮನೆಯಲ್ಲಿ ವಾಸವಾಗಿರುವ ವಿನ್ಸೆಂಟ್ ಡ್ರಾನ್ಸ್‌ಫೀಲ್ಡ್, ಆರಾಮವಾಗಿ ಓಡಾಡ್ತಾರೆ.
ವಿನ್ಸೆಂಟ್ ಡ್ರಾನ್ಸ್‌ಫೀಲ್ಡ್, 1914ರಲ್ಲಿ ಜನಿಸಿದ್ದಾರೆ. ಅವರು ಅಗ್ನಿಶಾಮಕ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಹಾಗಾಗಿ ಅಲ್ಲಿಂದಲೇ ಅವರಿಗೆ ಶಿಸ್ತಿನ ಜೀವನ ಅಭ್ಯಾಸವಾಗಿದೆ. 40 -50 ವರ್ಷ ವಯಸ್ಸಿನಲ್ಲಿ ಜನರು ಆರೋಗ್ಯಕ್ಕಾಗಿ ಓಡ್ತಿದ್ದರೆ ಅದನ್ನು ನೋಡಿ ವಿನ್ಸೆಂಟ್ ಡ್ರಾನ್ಸ್‌ಫೀಲ್ಡ್ ನಗ್ತಾರೆ. ವಿನ್ಸೆಂಟ್ ಡ್ರಾನ್ಸ್‌ಫೀಲ್ಡ್, ಆರೋಗ್ಯದ ಬಗ್ಗೆ ಎಂದೂ ಹೆಚ್ಚಿನ ಕಾಳಜಿ ವಹಿಸಿಲ್ಲ. ವಿನ್ಸೆಂಟ್ ಡ್ರಾನ್ಸ್‌ಫೀಲ್ಡ್ಗೆ ಮೊಣಕಾಲು ನೋವು ಬಿಟ್ಟರೆ ಬೇರೆ ಯಾವುದೇ ಸಮಸ್ಯೆ ಇಲ್ಲ. ಮಧುಮೇಹ, ಬಿಪಿ, ಕ್ಯಾನ್ಸರ್, ತಲೆನೋವು, ಮರೆವಿನ ಕಾಯಿಲೆ ಹೀಗೆ ವೃದ್ಧಾಪ್ಯದಲ್ಲಿ ಕಾಡುವ ಯಾವುದೇ ಖಾಯಿಲೆ, ನೋವು ಅವರ ಹತ್ತಿರ ಸುಳಿದಿಲ್ಲ.
ವಿನ್ಸೆಂಟ್ ಡ್ರಾನ್ಸ್‌ಫೀಲ್ಡ್ ಗುಟ್ಟು : ವಿನ್ಸೆಂಟ್ ಡ್ರಾನ್ಸ್‌ಫೀಲ್ಡ್ ತಮ್ಮ 20ನೇ ವಯಸ್ಸಿನವರೆಗೂ ಧೂಮಪಾನ ಮಾಡಿದ್ದರು ಎಂದು ಅವರ ಮೊಮ್ಮಗಳು ಹೇಳ್ತಾಳೆ. 15ನೇ ವಯಸ್ಸಿನಿಂದ 70 ವರ್ಷದವರೆಗೆ ವಿನ್ಸೆಂಟ್ ಡ್ರಾನ್ಸ್‌ಫೀಲ್ಡ್ ಕೆಲಸ ಮಾಡಿದ್ದರು. ವಿನ್ಸೆಂಟ್ ಡ್ರಾನ್ಸ್‌ಫೀಲ್ಡ್ ತಮ್ಮಿಷ್ಟದ ಕೆಲಸವನ್ನು ಮಾಡ್ತಾರೆ. ಮಿಲ್ಕ್ ಚಾಕೋಲೇಟ್, ಇಟಾಲಿಯನ್ ಫುಡ್, ಹ್ಯಾಂಬರ್ಗರ್ ಅವರಿಗೆ ಇಷ್ಟ. ಪ್ರತಿ ದಿನ ವಿನ್ಸೆಂಟ್ ಡ್ರಾನ್ಸ್‌ಫೀಲ್ಡ್ ಕಾಫಿ ಸೇವನೆ ಮಾಡ್ತಾರೆ. ಮಕ್ಕಳು – ಮೊಮ್ಮಕ್ಕಳ ಜೊತೆ ಸೇರಿ ಆಗಾಗ ಬಿಯರ್ ಕುಡಿಯುತ್ತಾರೆ. ಅವರಿಗೆ ಇಷ್ಟ ಎನ್ನಿಸಿದ ಕೆಲಸವನ್ನು ಅವರು ಮಾಡದೆ ಬಿಡೋದಿಲ್ಲ. ತನಗಿಷ್ಟದ ಕೆಲಸ ಮಾಡುವ ಕಾರಣ ಹಾಗೂ ಅದೃಷ್ಟ ಮತ್ತು ಹಾಲಿನ ಕಾರಣಕ್ಕೆ ನಾನು ಇಷ್ಟು ವರ್ಷ ಆರೋಗ್ಯವಾಗಿದ್ದೇನೆ ಎನ್ನುತ್ತಾರೆ ವಿನ್ಸೆಂಟ್ ಡ್ರಾನ್ಸ್‌ಫೀಲ್ಡ್.
ಮಹಿಳಾ ವೈದ್ಯೆಯರು ಚಿಕಿತ್ಸೆ ನೀಡಿದ ರೋಗಿ ಸಾಯುವ ಸಾಧ್ಯತೆ ಕಡಿಮೆ: ಸಂಶೋಧನಾ ವರದಿಯಿಂದ ಬಹಿರಂಗ
ವಿನ್ಸೆಂಟ್ ಡ್ರಾನ್ಸ್‌ಫೀಲ್ಡ್ ದೀರ್ಘಾಯಸ್ಸಿನ ಮಂತ್ರವೆಂದ್ರೆ ನಿಮ್ಮ ಮನಸ್ಸಿಗೆ ಏನು ಬರುತ್ತದೆಯೋ ಅದನ್ನು ಮಾಡಿ. ತಿನ್ನಬೇಕು ಎನ್ನಿಸಿದ್ದನ್ನು ತಿನ್ನಿ. ಮಾನಸಿಕವಾಗಿ ನೀವು ಆರೋಗ್ಯವಾಗಿದ್ದರೆ, ಸಂತೋಷವಾಗಿದ್ದರೆ ನೀವು ದೈಹಿಕವಾಗಿ ಆರೋಗ್ಯವಾಗಿರ್ತಿರಿ ಎನ್ನುತ್ತಾರೆ ವಿನ್ಸೆಂಟ್ ಡ್ರಾನ್ಸ್‌ಫೀಲ್ಡ್.