ಪೇಟಿಎಂ ಆ್ಯಪ್ ನಲ್ಲಿ ಹೊಸ ಐಡಿ ಸಕ್ರಿಯಗೊಳಿಸಲು ಹೀಗೆ ಮಾಡಿ..
ಪೇಟಿಎಂ ತನ್ನ ಗ್ರಾಹಕರನ್ನು ಈಗಾಗಲೇ ತನ್ನೊಂದಿಗೆ ಸಹಭಾಗಿತ್ವ ಹೊಂದಿರುವ ಇತರ ಬ್ಯಾಂಕುಗಳಿಗೆ ವರ್ಗಾಯಿಸಿದೆ. ಹೀಗಾಗಿ ಗ್ರಾಹಕರು ಹೊಸ ಐಡಿಗಳನ್ನು ಪಡೆಯಲಿದ್ದಾರೆ. ಈ ಹೊಸ ಐಡಿಯನ್ನು ಸಕ್ರಿಯಗೊಳಿಸೋದು ಹೇಗೆ? ಇಲ್ಲಿದೆ ಮಾಹಿತಿ.
Business Desk: ಪೇಟಿಎಂ ಈಗಾಗಲೇ ತನ್ನ ಗ್ರಾಹಕರ ಖಾತೆಗಳನ್ನು ಪೇಟಿಎಂ ಪೇಮೆಂಟ್ಸ್ ಬ್ಯಾಂಕಿನಿಂದ ಇತರ ಯುಪಿಐಗಳಿಗೆ ವರ್ಗಾವಣೆ ಮಾಡಿಯಾಗಿದೆ. ಭಾರತೀಯ ರಾಷ್ಟ್ರೀಯ ಪಾವತಿಗಳ ನಿಗಮ (ಎನ್ ಪಿಸಿಐ) ಗ್ರೀನ್ ಸಿಗ್ನಲ್ ನೀಡಿದ ಬಳಿಕ ಪೇಟಿಎಂ ಈ ಕಾರ್ಯ ಮಾಡಿದೆ. ಪೇಟಿಎಂ ಮಾತೃಸಂಸ್ಥೆ ಒನ್ 97 ಕಮ್ಯೂನಿಕೇಷನ್ ಲಿಮಿಟೆಡ್ (ಒಸಿಎಲ್) ಏಪ್ರಿಲ್ 17ರಂದು ಈ ಕಾರ್ಯ ಪ್ರಾರಂಭಿಸಿತ್ತು. ಪಾವತಿ ಸೇವಾ ಪೂರೈಕೆದಾರಿಕೆಗೆ (ಪಿಎಸ್ ಪಿ) ಸಹಭಾಗಿತ್ವ ಹೊಂದಿರುವ ಬ್ಯಾಂಕುಗಳಾದ ಎಕ್ಸಿಸ್ ಬ್ಯಾಂಕ್, ಎಚ್ ಡಿಎಫ್ ಸಿ ಬ್ಯಾಂಕ್, ಎಸ್ ಬಿಐ ಹಾಗೂ ಯೆಸ್ ಬ್ಯಾಂಕುಗಳಿಗೆ ಗ್ರಾಹಕರನ್ನು ವರ್ಗಾಯಿಸಿದೆ. ಪಿಎಸ್ ಪಿ ಒಂದು ಬ್ಯಾಕ್ ಆಗಿದ್ದು, ಅದು ಯುಪಿಐ ಆ್ಯಪ್ ಬ್ಯಾಂಕಿಂಗ್ ಚಾನೆಲ್ ಜೊತೆಗೆ ಸಂಪರ್ಕ ಹೊಂದಲು ನೆರವು ನೀಡುತ್ತದೆ. ಕೇವಲ ಬ್ಯಾಂಕುಗಳು ಮಾತ್ರ ಪಿಎಸ್ ಪಿಯಾಗಿ ಕಾರ್ಯನಿರ್ವಹಿಸಬಹುದು.
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ತನ್ನ ಗ್ರಾಹಕರ ಖಾತೆಗಳಿಗೆ ಹಾಗೂ ವ್ಯಾಲೆಟ್ ಗಳಿಗೆ ಹೊಸದಾಗಿ ಕ್ರೆಡಿಟ್ ಸ್ವೀಕರಿಸೋದನ್ನು ನಿಲ್ಲಿಸಿದ ಬಳಿಕ ಗ್ರಾಹಕರ ವರ್ಗಾವಣೆ ಮಾಡಲಾಗಿದೆ. ಫೆಬ್ರವರಿ 29ರ ಬಳಿಕ ಯಾವುದೇ ಗ್ರಾಹಕರ ಖಾತೆಗಳಿಗೆ, ವ್ಯಾಲೆಟ್ಸ್ , ಫಾಸ್ಟ್ ಟ್ಯಾಗ್ ಹಾಗೂ ಇತರ ಸಾಧನಗಳಿಗೆ ಠೇವಣಿಗಳು ಅಥವಾ ಟಾಪ್ ಅಪ್ಸ್ ಸ್ವೀಕರಿಸದಂತೆ ಆರ್ ಬಿಐ ಜನವರಿ 31ರಂದು ಪಿಪಿಬಿಎಲ್ ಗೆ ಆರ್ ಬಿಐ ನಿರ್ದೇಶನ ನೀಡಿತ್ತು. ಆ ಬಳಿಕ ಈ ಗಡುವನ್ನು ಮಾರ್ಚ್ 15ರ ತನಕ ವಿಸ್ತರಿಸಲಾಗಿತ್ತು. ಮಾರ್ಚ್ 15ರ ತನಕ ಪೇಟಿಎಂ ಥರ್ಡ್ ಪಾರ್ಟಿ ಅಪ್ಲಿಕೇಷನ್ ಪ್ರೊವೈಡರ್ (TPAP) ಆಗಿ ಕಾರ್ಯನಿರ್ವಹಿಸಿತ್ತೇ ವಿನಃ ಪೇಮೆಂಟ್ ಬ್ಯಾಂಕ್ ಆ್ಯಪ್ ಆಗಿ ಅಲ್ಲ.
ಪೇಟಿಎಂ ಪೇ ಬಳಕೆದಾರರ ಗಮನಕ್ಕೆ, ಗ್ರಾಹಕರಿಗೆ ಹೊಸ ಯುಪಿಐ ಹ್ಯಾಂಡಲ್ಸ್ ನೀಡಲು ಪ್ರಾರಂಭಿಸಿದ ಸಂಸ್ಥೆ
ಪೇಟಿಎಂನ ಜೊತೆಗೆ ಸಹಭಾಗಿತ್ವ ಹೊಂದಿರುವ ಎಕ್ಸಿಸ್, ಎಚ್ ಡಿಎಫ್ ಸಿ ಬ್ಯಾಂಕ್, ಎಸ್ ಬಿಐ ಹಾಗೂ ಯೆಸ್ ಬ್ಯಾಂಕಿಗೆ ಪೇಟಿಎಂ ಗ್ರಾಹಕರನ್ನು ವರ್ಗಾಯಿಸಿದೆ. ಅವರಿಗೆ ಹೊಸ ಯುಪಿಐ ಐಡಿಯನ್ನು ನೀಡಿದೆ. ಈ ಹಿಂದಿನ ಪೇಟಿಎಂ ಗ್ರಾಹಕರ "@paytm"ಹೊಂದಿರುವ ಯುಪಿಐ ಐಡಿ ಈ ಹೊಸ ಐಡಿಗಳನ್ನು ಹೊಂದಲಿದೆ. ಹೊಸ ಯುಪಿಐ ಹ್ಯಾಂಡಲ್ಸ್ ಈ ಕೆಳಗಿನಂತಿವೆ.
ಎಸ್ ಬಿಐ ಯುಪಿಐ ಹ್ಯಾಂಡಲ್ : @ptsbi
ಎಚ್ ಡಿಎಫ್ ಸಿ ಬ್ಯಾಂಕ್ ಯುಪಿಐ ಹ್ಯಾಂಡಲ್ : @pthdfc
ಆಕ್ಸಿಸ್ ಬ್ಯಾಂಕ್ ಯುಪಿಐ ಹ್ಯಾಂಡಲ್: @ptaxis
ಯೆಸ್ ಬ್ಯಾಂಕ್ ಯುಪಿಐ ಹ್ಯಾಂಡಲ್ : @ptyes
ಹೊಸ ಐಡಿ ಸಕ್ರಿಯಗೊಳಿಸೋದು ಹೇಗೆ?
ಪೇಟಿಎಂ ಬಳಕೆದಾರರಿಗೆ ಈಗಾಗಲೇ "important UPI alerts" ಸಂದೇಶ ಬರಲು ಪ್ರಾರಂಭವಾಗಿದೆ. ಈ ಮೂಲಕ ನಾಲ್ಕು ಬ್ಯಾಂಕುಗಳಲ್ಲಿ ಒಂದು ಬ್ಯಾಂಕಿನ ಯುಪಿಐ ಹ್ಯಾಂಡಲ್ಸ್ ಆಯ್ಕೆ ಮಾಡುವಂತೆ ತಿಳಿಸಲಾಗಿದೆ. ಒಮ್ಮೆಗೆ ಬಳಕೆದಾರರು ಯುಪಿಐ ಅಪ್ಡೇಟ್ ಮೇಲೆ ಕ್ಲಿಕ್ ಮಾಡಿದ್ರೆ ಪೇಟಿಎಂ ಆ್ಯಪ್ ನಲ್ಲಿ ಹೊಸ ಯುಪಿಐ ಐಡಿ ಸಕ್ರಿಯಗೊಳಿಸಲು ನಿರ್ದೇಶನಗಳನ್ನು ಪಡೆಯಲಿದ್ದಾರೆ, ಇದನ್ನು ಅನುಸರಿಸಿದ್ರೆ ಹೊಸ ಐಡಿಯನ್ನು ಸಕ್ರಿಗೊಳಿಸಬಹುದು.
Paytm layoffs: ಶೇ.20ರಷ್ಟು ನೌಕರರಿಗೆ ಗೇಟ್‌ಪಾಸ್ ನೀಡಲಿದೆ ಕಂಪನಿ?
ಪಿಪಿಬಿಎಲ್ ವಿರುದ್ಧ ಆರ್ ಬಿಐ ಕ್ರಮ ಕೈಗೊಂಡಿದ್ದು ಏಕೆ?
ಪಿಪಿಬಿಎಲ್ ವಿರುದ್ಧ ಆರ್ ಬಿಐ 2024ರ ಫೆಬ್ರವರಿಯಲ್ಲಿ ಕಠಿಣ ಕ್ರಮ ಕೈಗೊಂಡಿತ್ತು. ಪೇಟಿಎಂ ಪೇಮೆಂಟ್ಸ್ ಬ್ಯಾಂಕಿನಲ್ಲಿ ಸಾವಿರಾರು ಬಳಕೆದಾರರ ಸರಿಯಾದ ಗುರುತೇ ಇಲ್ಲದೇ ಅವರ ಹೆಸರಿನಲ್ಲಿ ಖಾತೆಗಳನ್ನು ತೆರೆಯಲಾಗಿದೆ. ಇನ್ನು 1000ಕ್ಕೂ ಹೆಚ್ಚು ಖಾತೆಗಳಿಗೆ 1 ಪಾನ್ ಕಾರ್ಡ್ ಸಂಖ್ಯೆ ಬಳಸಿರುವುದು ಕೂಡಾ ಕಂಡುಬಂದಿದೆ. ಜೊತೆಗೆ ಗ್ರಾಹಕರ ಕೆವೈಸಿ (ನಿಮ್ಮ ಗ್ರಾಹಕರನ್ನು ಅರಿಯಿರಿ) ಪರಿಶೀಲನೆಯನ್ನು ಸೂಕ್ತವಾಗಿ ನಡೆಸದೇ ಇರುವುದು ಬೆಳಕಿಗೆ ಬಂದಿದೆ. ಕೆಲವು ಖಾತೆಗಳಲ್ಲಿ ನಡೆದ ದೊಡ್ಡಮಟ್ಟದ ಹಣಕಾಸಿನ ವ್ಯವಹಾರಗಳ ಬಗ್ಗೆ ಗ್ರೂಪ್‌ನ ಒಳಗೆ ಮತ್ತು ಸಹಯೋಗಿ ಪಾಲುದಾರರ ಜೊತೆ ಮಾಹಿತಿ ಹಂಚಿಕೊಂಡಿಲ್ಲ. ಈ ವ್ಯವಹಾರ ಅಕ್ರಮ ಹಣ ವರ್ಗಾವಣೆಗೆ ಬಳಕೆಯಾಗಿರುವ ಸಾಧ್ಯತೆ ಇರುವ ಕಾರಣ ಆರ್ ಬಿಐ ಕ್ರಮ ಕೈಗೊಂಡಿದೆ.