Asianet Suvarna News Asianet Suvarna News

9 ಬ್ಯುಸಿನೆಸ್‌ನಲ್ಲಿ ಲಾಸ್‌ ಆದ ಬಳಿಕ ಖಿನ್ನತೆಯಲ್ಲಿದ್ದ ಉದ್ಯಮಿ ಬಳಿಕ ಕಟ್ಟಿದ್ದು 1.40 ಲಕ್ಷ ಕೋಟಿಯ ಸಾಮ್ರಾಜ್ಯ!

ಒಂದು ಕಾಲದಲ್ಲಿ ಆರಂಭಿಸಿದ್ದ ಸತತ 9 ಉದ್ಯಮಗಳು ದಯನೀಯ ವೈಫಲ್ಯ ಕಂಡಿದ್ದವು. ಇದರಿಂದ ಖಿನ್ನತೆಗೆ ಒಳಗಾಗಿದ್ದ ಆ ವ್ಯಕ್ತಿ ಬಳಿಕ ಅತ್ಯಂತ ಚಿಕ್ಕದಾಗಿ ಸ್ಕ್ರ್ಯಾಪ್‌ ಮೆಟಲ್‌ ಉದ್ಯಮ ಆರಂಭಿಸಿದ್ದರು. ಇಂದು ಅವರು ಸ್ಥಾಪಿಸಿದ್ದ ಈ ಕಂಪನಿಯ ಮೌಲ್ಯವೀಗ 1.40 ಲಕ್ಷ ಕೋಟಿ ರೂಪಾಯಿ.
 

Anil Agarwal 9 failed businesses Then depression now owns Rs 140000 crore company san
Author
First Published Apr 25, 2024, 5:53 PM IST | Last Updated Apr 25, 2024, 5:53 PM IST

ನವದೆಹಲಿ (ಏ.25): ಈ ವ್ಯಕ್ತಿ ಜೀವನದ ಪ್ರಮುಖ ಘಟ್ಟ ಅಂದರೆ, 20 ರಿಂದ 30ನೇ ವಯಸ್ಸು ಇದ್ಯಲ್ಲ. ಅದರಲ್ಲಿ ಬರೋ ಕಂಡಿದ್ದು ಸೋಲುಗಳನ್ನು ಮಾತ್ರ. ಒಂದೆರಡಲ್ಲ, 9 ಬ್ಯುಸಿನೆಸ್‌ಗಳನ್ನು ನಷ್ಟದ ಕಾರಣದಿಂದಾಗಿ ಮುಚ್ಚಿದ್ದರು. ಈ ಎಲ್ಲರದ ಕಾರಣದಿಂದಾಗಿ ಖಿನ್ನತೆಗೆ ಹೋಗಿದ್ದ ವ್ಯಕ್ತಿ ಬಳಿಕ ಅತ್ಯಂತ ಸಣ್ಣದಾಗಿ ಆರಂಭ ಮಾಡಿದ್ದ ಸ್ಕ್ರ್ಯಾಪ್‌ ಮೆಟಲ್‌ ಕಂಪನಿ ಇಂದು ಎಷ್ಟು ದೊಡ್ಡದಾಗಿ ಬೆಳೆದಿದೆ ಎಂದರೆ, ಅದರ ಪ್ರಸ್ತುತ ಮೌಲ್ಯ 1.40 ಲಕ್ಷ ಕೋಟಿ. ಇದು ಬೇರೆ ಯಾರದ್ದೂ ಕಥೆಯಲ್ಲ. ಇಂದು ಮೈನಿಂಗ್‌ ಮತ್ತು ಮೆಟಲ್‌ ಸೆಕ್ಟರ್‌ನಲ್ಲಿ ದೇಶದ ಬಹುದೊಡ್ಡ ಕಂಪನಿಯಾಗಿ ಗುರುತಿಸಿಕೊಂಡಿರುವ ವೇದಾಂತ ಕಂಪನಿಯ ಸಂಸ್ಥಾಪಕ ಹಾಗೂ ಚೇರ್ಮನ್‌ ಅನಿಲ್‌ ಅಗರ್ವಾಲ್‌ ಅವರ ಸ್ಟೋರಿ. ಕಷ್ಟಗಳು ಹಾಗೂ ಅನೇಕ ಹಿನ್ನಡೆಗಳನ್ನು ಎದುರಿಸಿಯೂ ಉದ್ಯಮ ಜಗತ್ತಿನಲ್ಲಿ ಅವರು ಇಂದು ಸೂರ್ಯನ ಹಾಗೆ ಬೆಳಗುತ್ತಿದ್ದಾರೆ. ಆದರೆ, ಅವರ ಈ ಹಾದಿ ಸುಲಭವಾಗಿರಲಿಲ್ಲ.

ತಮ್ಮ ಸಂಪತ್ತಿನ ಶೇ. 75ರಷ್ಟನ್ನು ಯೋಗ್ಯ ಉದ್ದೇಶಗಳಿಗಾಗಿ ದಾನ ಮಾಡಲು ವಾಗ್ದಾನ ಮಾಡಿದ ಸಮಾಜ ಸೇವಕರಾಗಿರುವ ಅನಿಲ್‌ ಅಗರ್ವಾಲ್‌ ಗುರುತಿಸಿಕೊಂಡಿದ್ದಾರೆ. ಪ್ರೌಢಶಾಲೆ ಓದಿದ ಬಳಿಕ ಮುಂದಿನ ಅಭ್ಯಾಸ ಮಾಡುವ ಬದಲು ತಂದೆಯೊಂದಿಗೆ ಬ್ಯುಸಿನೆಸ್‌ನಲ್ಲಿ ಸಹಾಯ ಮಾಡಲು ಅನಿಲ್‌ ಅಗರ್ವಾಲ್‌ ನಿರ್ಧಾರ ಮಾಡಿದ್ದರು.

ಆದರೆ, 19ನೇ ವಯಸ್ಸಿನ ವೇಳೆಗೆ ಅನಿಲ್‌ ಅಗರ್ವಾಲ್‌ಗೆ ತನ್ನದೇ ಸ್ವಂತದ್ದೇನಾದರೂ ಮಾಡುವ ಹಂಗಲ ಹುಟ್ಟಿಕೊಂಡಿತು. ಪಾಟ್ನಾದಲ್ಲಿದ್ದ ತಂದೆಯ ಅಲ್ಯೂಮಿನಿಯಂ ಕಂಡಕ್ಟರ್‌ ಮ್ಯಾನ್ಯುಫ್ಯಾಕ್ಚರಿಂಗ್‌ ಬ್ಯುಸ್‌ನೆಸ್‌ನಿಂದ ಹೊರಬರುವ ನಿರ್ಧಾರ ಮಾಡಿದ ಅನಿಲ್‌ ಅಗರ್ವಾಲ್‌ ಮುಂಬೈಗೆ ಬಂದು ಅದೃಷ್ಟ ಪರೀಕ್ಷೆ ಮಾಡಲು ನಿರ್ಧಾರ ಮಾಡಿದ್ದರು. ಇನ್ನೇನು ಟೀನೇಜ್‌ ವಯಸ್ಸು, ಈ ವೇಳೆಗಾಗಲೇ ಅಂದರೆ 1970ರ ಸಮಯದಲ್ಲಿಯೇ ಸ್ಕ್ರ್ಯಾಪ್‌ ಮೆಟಲ್‌ ಬ್ಯುಸಿನೆಸ್‌ ಆರಂಭ ಮಾಡಿ ಯಶಸ್ಸು ಕಾಣಲು ಆರಂಭಿಸಿದ್ದರು. ಆದರೆ, ತಮ್ಮ ಅತ್ಯಂತ ಯಶಸ್ವಿ ಸ್ಟಾರ್ಟ್‌ಅಪ್‌ ಆರಂಭ ಮಾಡುವ ಮುನ್ನ, ಅನಿಲ್‌ ಅಗರ್ವಾಲ್‌ ಸಾಕಷ್ಟು ಅಡೆತಡೆಗಳನ್ನು ಎದುರಿಸಿದ್ದರು. 'ನಾನು ನನ್ನ 20 ಮತ್ತು 30 ರ ದಶಕಗಳನ್ನು ಕಷ್ಟಪಡೋದರಲ್ಲಿಯೇ ಕಳೆದುಬಿಟ್ಟಿದ್ದೆ. ಈ ಹಂತದಲ್ಲಿ ಇತರರನ್ನು ನೋಡುತ್ತಿದ್ದ ನಾನು , ಮುಂದೊಂದು ದಿನ ಅಲ್ಲಿಗೆ ಯಾವಾಗ ಬರುತ್ತೇನೆ ಎಂದು ಆಶ್ಚರ್ಯ ಪಡುತ್ತಿದ್ದೆ. ಯಾಕೆಂದರೆ, ವೇದಾಂತ ಆರಂಭಿಸುವ ಮುನ್ನ 9 ಬ್ಯುಸಿನೆಸ್‌ ಮಾಡಿ ಸೋಲು ಕಂಡಿದ್ದೆ. ವರ್ಷಗಳ ಕಾಲ ಖಿನ್ನತೆಯಲ್ಲಿ ಮುಳುಗಿದ್ದೆ. ಅದಾದ ಬಳಿಕವೇ ನನ್ನ ಮೊಟ್ಟಮೊದಲ ಸ್ಟಾರ್ಟ್‌ಅಪ್‌ ವ್ಯವಹಾರ ಯಶಸ್ಸು ಕಂಡಿತ್ತು' ಎಂದು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಎದುರಿನ ಸಂವಾದದಲ್ಲಿ ಅನಿಲ್‌ ಅಗರ್ವಾಲ್ ಹೇಳಿದ್ದರು.

ಪಿಎಂ ಕಿಸಾನ್ ಯೋಜನೆ 17ನೇ ಕಂತಿನ ಹಣ ಯಾವಾಗ ರೈತರ ಖಾತೆ ಸೇರುತ್ತೆ? ಇಲ್ಲಿದೆ ಮಾಹಿತಿ

ಅವರು ಆರಂಭ ಮಾಡಿದ ವೇದಾಂತ ಕಂಪನಿಯ ಇಂದಿನ ಮಾರುಕಟ್ಟೆ ಮೌಲ್ಯ 1.4 ಲಕ್ಷ ಕೋಟಿ ರೂಪಾಯಿ. ಈ ದಿನದ ವೇಳೆಗೆ ಅನಿಲ್‌ ಅಗರ್ವಾಲ್‌ ಅವರ ಕಂಪನಿಯ ನಿವ್ವಳ ಮೌಲ್ಯ 16700 ಕೋಟಿ ರೂಪಾಯಿ. 2003 ರಲ್ಲಿ, ಲಂಡನ್ ಸ್ಟಾಕ್ ಎಕ್ಸ್ಚೇಂಜ್ನಲ್ಲಿ ಕಂಪನಿಯನ್ನು ಲಿಸ್ಟ್‌ ಮಾಡಿದ ಮೊದಲ ಭಾರತೀಯ ಎಂಬ ಇತಿಹಾಸವನ್ನು ನಿರ್ಮಿಸಿದರು. ನಿರಂತರ, ಕಠಿಣ ಪರಿಶ್ರಮ ಮತ್ತು ದೃಢನಿಶ್ಚಯದಿಂದ ಅಡೆತಡೆಗಳ ನಡುವೆಯೂ ನಮ್ಮ ಗುರಿಗಳನ್ನು ಪಾಲಿಸುವುದು ಎಷ್ಟು ಮುಖ್ಯ ಎಂಬುದನ್ನು ಅನಿಲ್ ಅಗರ್ವಾಲ್‌ ತಮ್ಮ ಜೀವನದ ಮೂಲಕವೇ ತೋರಿಸಿಕೊಟ್ಟಿದ್ದಾರೆ.

ಕಂಕುಳ ಕೂದಲು‌ ಮಾರಿ‌ ಲಕ್ಷ ಗಳಿಸ್ತಿದ್ದಾಳೆ.. ಖರೀದಿಸೋದು ಯಾರು?

Latest Videos
Follow Us:
Download App:
  • android
  • ios