ಭಾರತದ ಜೊತೆ ಪುನಃ ವ್ಯಾಪಾರ ಶುರು: ಪ್ರಧಾನಿಗೆ ಪಾಕ್ ಉದ್ಯಮಿಗಳ ಸಲಹೆ
ಭಾರತದ ಜತೆ ಮರಳಿ ವ್ಯವಹಾರ ಶುರು ಮಾಡಬೇಕು. ಆಗ ಪಾಕಿಸ್ತಾನದ ಆರ್ಥಿಕತೆಗೆ ಶಕ್ತಿ ದೊರೆಯುತ್ತದೆ. ಉಭಯ ದೇಶಗಳ ನಡುವೆ ವೈಮನಸ್ಯ ಬದಿಗೊತ್ತಿ ಮತ್ತೆ ವ್ಯಾಪಾರ ವ್ಯವಹಾರಗಳು ಶುರುವಾಗಬೇಕು. ಇದಕ್ಕೆ ಪಾಕ್ ಪ್ರಧಾನಿ ಶೆಹಬಾಜ್ ಮುಂದಾಗಬೇಕು ಎಂದು ಆಗ್ರಹಿಸಿದ ಉದ್ಯಮಿಗಳು
ಇಸ್ಲಾಮಾಬಾದ್(ಏ.25): ಭಾರತದೊಂದಿಗ ಸ್ಥಗಿತಗೊಂಡಿರುವ ವ್ಯಾಪಾರ ವಹಿವಾಟನ್ನು ಪುನಾರಂಭ ಮಾಡುವಂತೆ ಪಾಕಿಸ್ತಾನ ಉದ್ಯಮಿಗಳು, ಪ್ರಧಾನಿ ಶೆಹಬಾಜ್ ಷರೀಫ್‌ಗೆ ಮನವಿ ಮಾಡಿದ್ದಾರೆ. ಇಂಥ ಪ್ರಯತ್ನ ಕುಸಿದು ಬಿದ್ದಿರುವ ದೇಶದ ಆರ್ಥಿಕತೆಗೆ ಮತ್ತೆ ಜೀವ ತುಂಬಲಿದೆ ಎಂದು ಉದ್ಯಮಿಗಳು ಸಲಹೆ ನೀಡಿದ್ದಾರೆ.
ಪಾಕಿಸ್ತಾನದ ಆರ್ಥಿಕ ರಾಜಧಾನಿ ಕರಾಚಿಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಉದ್ಯಮಿಗಳು ಈ ಬೇಡಿಕೆ ಇರಿಸಿದ್ದಾರೆ. ಭಾರತದ ಜತೆ ಮರಳಿ ವ್ಯವಹಾರ ಶುರು ಮಾಡಬೇಕು. ಆಗ ಪಾಕಿಸ್ತಾನದ ಆರ್ಥಿಕತೆಗೆ ಶಕ್ತಿ ದೊರೆಯುತ್ತದೆ. ಉಭಯ ದೇಶಗಳ ನಡುವೆ ವೈಮನಸ್ಯ ಬದಿಗೊತ್ತಿ ಮತ್ತೆ ವ್ಯಾಪಾರ ವ್ಯವಹಾರಗಳು ಶುರುವಾಗಬೇಕು. ಇದಕ್ಕೆ ಪಾಕ್ ಪ್ರಧಾನಿ ಶೆಹಬಾಜ್ ಮುಂದಾಗಬೇಕು ಎಂದು ಉದ್ಯಮಿಗಳು ಆಗ್ರಹಿಸಿದ್ದಾರೆ.
ಈಕೆ ಪಾಕಿಸ್ತಾನಿ, ಆದ್ರೆ ದಿಲ್ ಹೈ ಹಿಂದೂಸ್ತಾನಿ; ಪಾಕ್ ಹುಡುಗಿಗೆ ಭಾರತೀಯ ದಾನಿಯ ಹೃದಯ ಕಸಿ
ಪಂಜಾಬ್ ಪ್ರಾಂತ್ಯದ ಸ್ಪೀಕರ್ ಮಾತನಾಡಿ,‘ನಮ್ಮ ನೆರೆಯ ದೇಶದ ಜೊತೆ ವೈರುಧ್ಯ ಸಲ್ಲ. ಭಾರತ ಪಾಕಿಸ್ತಾನ ಹಲವು ವಿಷಯಗಳನ್ನು ಸಾಮ್ಯತೆ ಹೊಂದುತ್ತದೆ. ಮತ್ತೆ ಭಾರತದ ಜೊತೆ ವ್ಯವಹಾರ ಶುರು ಮಾಡಬೇಕು’ ಎಂದು ಆಗ್ರಹಿಸಿದರು.