ಪಿಎಂ ಕಿಸಾನ್ ಯೋಜನೆ 17ನೇ ಕಂತಿನ ಹಣ ಯಾವಾಗ ರೈತರ ಖಾತೆ ಸೇರುತ್ತೆ? ಇಲ್ಲಿದೆ ಮಾಹಿತಿ
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 17ನೇ ಕಂತಿನ ಹಣ ಯಾವಾಗ ಖಾತೆ ಸೇರುತ್ತದೆ ಎಂದು ಅರ್ಹ ರೈತರು ಕಾಯುತ್ತಿದ್ದಾರೆ. ಹಾಗಾದ್ರೆ 17ನೇ ಕಂತಿನ ಹಣ ರೈತರ ಖಾತೆ ಸೇರೋದು ಯಾವಾಗ? ಇಲ್ಲಿದೆ ಮಾಹಿತಿ.
ನವದೆಹಲಿ (ಏ.24): ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ (ಪಿಎಂ-ಕಿಸಾನ್) 16ನೇ ಕಂತನ್ನು ಕೇಂದ್ರ ಸರ್ಕಾರ ಫೆ.28ರಂದು ಬಿಡುಗಡೆ ಮಾಡಿತ್ತು. ಎಲ್ಲ ಅರ್ಹ ರೈತರಿಗೆ ಈ ಯೋಜನೆಯ ಸಹಾಯಧನ ದೊರಕಿತ್ತು. 16ನೇ ಕಂತಿನಲ್ಲಿ ಒಟ್ಟು 21,000 ಕೋಟಿಗಿಂತಲೂ ಅಧಿಕ ಮೊತ್ತವನ್ನು ದೇಶಾದ್ಯಂತ 9 ಕೋಟಿಗಿಂತಲೂ ಅಧಿಕ ಫಲಾನುಭವಿಗಳಿಗೆ ವಿತರಿಸಲಾಗಿತ್ತು. ಈಗ ಈ ಯೋಜನೆಯ ಫಲಾನುಭವಿಗಳು 17ನೇ ಕಂತಿನ ಸಹಾಯಧನದ ನಿರೀಕ್ಷೆಯಲ್ಲಿದ್ದಾರೆ. ಹಾಗಾದ್ರೆ ಪಿಎಂ ಕಿಸಾನ್ ಸಮ್ಮಾನ್ ನಿಧಿಯ 17ನೇ ಕಂತಿನ ಹಣ ಯಾವಾಗ ಬಿಡುಗಡೆಯಾಗುತ್ತದೆ?
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ಅರ್ಹ ರೈತರಿಗೆ ನಾಲ್ಕು ತಿಂಗಳಿಗೊಮ್ಮೆ ಪ್ರತಿ ಕಂತಿನಲ್ಲೂ 2000 ರೂ. ಹಣ ಪಾವತಿಸಲಾಗುತ್ತದೆ. ಅಂದರೆ ವರ್ಷದಲ್ಲಿ ಮೂರು ಬಾರಿ ಹಣ ಪಾವತಿಸಲಾಗುತ್ತದೆ. ಫಲಾನುಭವಿ ಒಂದು ವರ್ಷದಲ್ಲಿ ಒಟ್ಟು 6000 ರೂ. ಹಣ ಪಡೆಯುತ್ತಾನೆ. ಹೀಗಾಗಿ 16ನೇ ಕಂತಿನ ಹಣವನ್ನು ಫೆಬ್ರವರಿಯಲ್ಲಿ ಬಿಡುಗಡೆ ಮಾಡಿರುವ ಕಾರಣ 17ನೇ ಕಂತು ಮೇ ತಿಂಗಳಲ್ಲಿ ಯಾವಾಗ ಬೇಕಾದರೂ ರೈತರ ಖಾತೆ ಸೇರಬಹುದು. ಆದರೆ, ಮುಂದಿನ ಕಂತಿನ ನಿಗದಿತ ದಿನಾಂಕವನ್ನು ಮಾತ್ರ ಇನ್ನೂ ನಿಗದಿಪಡಿಸಿಲ್ಲ.
ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಸಹಾಯಧನ ಪಡೆಯಲು ಇ-ಕೆವೈಸಿ ಕಡ್ಡಾಯ; ಈ ಪ್ರಕ್ರಿಯೆ ಪೂರ್ಣಗೊಳಿಸದ ರೈತರಿಗಿಲ್ಲ ಹಣ
ಪಿಎಂ ಕಿಸಾನ್ ಯೋಜನೆ ಅಂದ್ರೇನು?
ಇದು ಕೇಂದ್ರ ಸರ್ಕಾರದ ಯೋಜನೆಯಾಗಿದೆ. ಕೃಷಿ ಹಾಗೂ ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳಿಗೆ ಹಣಕಾಸಿನ ನೆರವು ನೀಡಲು ಇದನ್ನು ಪ್ರಾರಂಭಿಸಲಾಯಿತು. ಈ ಯೋಜನೆಯಡಿ ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗುತ್ತದೆ. 2019ರ ಫೆಬ್ರವರಿ 24ರಂದು ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಈ ಯೋಜನೆಯಡಿ 11 ಕೋಟಿ ರೈತರಿಗೆ ಒಟ್ಟು 2.59 ಲಕ್ಷ ಕೋಟಿ ರೂ.ಗೂ ಅಧಿಕ ಹಣವನ್ನು ನೀಡಲಾಗಿದೆ.
ಫಲಾನುಭವಿಗಳ ಪಟ್ಟಿಯಲ್ಲಿ ಹೆಸರು ಹುಡುಕೋದು ಹೇಗೆ?
ಹಂತ 1: ಪಿಎಂ ಕಿಸಾನ್ ವೆಬ್‌ಸೈಟ್ https://pmkisan.gov.in/ ಭೇಟಿ ನೀಡಿ
ಹಂತ 2: ಅಲ್ಲಿ ಫಲಾನುಭವಿಗಳ ಪಟ್ಟಿ (Beneficiary list) ಟ್ಯಾಬ್ ಕ್ಲಿಕ್ ಮಾಡಿ. ವೆಬ್‌ಸೈಟ್‌ನ ಬಲಭಾಗದಲ್ಲಿ ಇದು ಇರುತ್ತದೆ.
ಹಂತ 3: ರಾಜ್ಯ, ಜಿಲ್ಲೆ, ಉಪ-ಜಿಲ್ಲೆ, ಬ್ಲಾಕ್ ಮತ್ತು ಹಳ್ಳಿಯಂತಹ ಡ್ರಾಪ್-ಡೌನ್ ವಿವರಗಳನ್ನು ಆಯ್ಕೆಮಾಡಿ.
ಹಂತ 4: ಗೆಟ್ ರಿಪೋರ್ಟ್ ಎನ್ನುವ ಟ್ಯಾಬ್ ಕ್ಲಿಕ್ ಮಾಡಿ, ಫಲಾನುಭವಿಗಳ ಪಟ್ಟಿಯ ವಿವರಗಳು ಪ್ರಕಟವಾಗುತ್ತದೆ.
ರೈತರ ನಿರೀಕ್ಷೆ ಹುಸಿ; ಪಿಎಂ ಕಿಸಾನ್ ವಾರ್ಷಿಕ ಮೊತ್ತ 6 ಸಾವಿರಕ್ಕಿಂತ ಹೆಚ್ಚು ಮಾಡಲ್ಲ,ಕೇಂದ್ರ ಸ್ಪಷ್ಟನೆ
ಖಾತೆಗೆ ಹಣ ಕ್ರೆಡಿಟ್ ಆಗಿದೆಯಾ ಪರಿಶೀಲಿಸೋದು ಹೇಗೆ?
ಹಂತ 1: ಪಿಎಂ ಕಿಸಾನ್ ವೆಬ್‌ಸೈಟ್ https://pmkisan.gov.in/ ಭೇಟಿ ನೀಡಿ
ಹಂತ 2: ಅಲ್ಲಿ ಫಲಾನುಭವಿಗಳ ಪಟ್ಟಿ (Beneficiary list) ಟ್ಯಾಬ್ ಕ್ಲಿಕ್ ಮಾಡಿ. ವೆಬ್‌ಸೈಟ್‌ನ ಬಲಭಾಗದಲ್ಲಿ ಇದು ಇರುತ್ತದೆ.
ಹಂತ 3: ರಾಜ್ಯ, ಜಿಲ್ಲೆ, ಉಪ-ಜಿಲ್ಲೆ, ಬ್ಲಾಕ್ ಮತ್ತು ಹಳ್ಳಿಯಂತಹ ಡ್ರಾಪ್-ಡೌನ್ ವಿವರಗಳನ್ನು ಆಯ್ಕೆಮಾಡಿ
ಹಂತ 4: ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆಯಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿ. ಇದರ ಮೂಲಕ ನೀವು ನಿಮ್ಮ ಖಾತೆಗೆ ಹಣ ಕ್ರೆಡಿಟ್ ಆಗಿದೆಯೋ ಇಲ್ಲವೋ ಎಂಬುದನ್ನು ನೋಡಬಹುದು.
ಆನ್ ಲೈನ್ ನಲ್ಲಿ ಇ-ಕೆವೈಸಿ ಅಪ್ಡೇಟ್ ಮಾಡೋದು ಹೇಗೆ?
ಹಂತ 1: ಪಿಎಂ ಕಿಸಾನ್ ಯೋಜನೆ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ.
ಹಂತ 2: ಪೇಜಿನ ಬಲಬದಿಯಲ್ಲಿ ಕಾಣಿಸುವ ಇ-ಕೆವೈಸಿ ಆಯ್ಕೆ ಮಾಡಿ.
ಹಂತ 3: ಕ್ಯಾಪ್ಚ ಕೋಡ್ ಹಾಗೂ ಆಧಾರ್ ಕಾರ್ಡ್ ಸಂಖ್ಯೆ ನಮೂದಿಸಿದ ಬಳಿಕ ಸರ್ಚ್ ಮೇಲೆ ಕ್ಲಿಕ್ ಮಾಡಿ.
ಹಂತ 4: ನಿಮ್ಮ ಆಧಾರ್ ಸಂಖ್ಯೆ ಜೊತೆಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ನಮೂದಿಸಿ.
ಹಂತ 5: ‘Get OTP’ಆಯ್ಕೆ ಮಾಡಿ. ನಿಮ್ಮ ಮೊಬೈಲ್ ಗೆ ಬರುವ ಒಟಿಪಿಯನ್ನು ನೀಡಿರುವ ಸ್ಥಳದಲ್ಲಿ ನಮೂದಿಸಿ.