Asianet Suvarna News Asianet Suvarna News

Fuel Price : ಮತ್ತೆ ದೇಶದಲ್ಲಿ ಪೆಟ್ರೋಲ್ , ಡೀಸೆಲ್ ಬೆಲೆ ಇಳಿಕೆ : 50 ಲಕ್ಷ ಬ್ಯಾರೆಲ್‌ ಬಿಡುಗಡೆ

  • ಭಾರತದ ತೈಲ ಸಂಗ್ರಹಗಾರಗಳಿಂದ 50 ಲಕ್ಷ ಬ್ಯಾರೆಲ್‌ ತೈಲ ಬಿಡುಗಡೆ
  •  ಸಂಗ್ರಹಿಸಿಟ್ಟುಕೊಂಡಿರುವ ತೈಲವನ್ನು ಬಳಸಿಕೊಳ್ಳುವಂತೆ ಅಮೆರಿಕ ಕೋರಿತ್ತು
  • ಭಾರತ ಸರ್ಕಾರ ಕ್ರಮಕ್ಕೆ ಮುಂದಾದರೆ, ಅಮೆರಿಕ 5 ಕೋಟಿ ಬ್ಯಾರಲ್‌ ತೈಲ ಬಿಡುಗಡೆಗೆ ನಿರ್ಧರಿಸಿದೆ.
Centre decides to release crude oil from its reserves snr
Author
Bengaluru, First Published Nov 24, 2021, 8:43 AM IST

ನವದೆಹಲಿ (ನ.24): ತೈಲ ಬೆಲೆ (Fuel Price) ಇಳಿಸುವ ನಿಟ್ಟಿನಲ್ಲಿ ಉಡುಪಿ (Udupi), ಪಾದೂರು ಸೇರಿದಂತೆ ದೇಶದ ಇತರೆ ತೈಲ ಸಂಗ್ರಹಾಗಾರಗಳಿಂದ 50 ಲಕ್ಷ ಬ್ಯಾರೆಲ್‌ ತೈಲ ಬಿಡುಗಡೆಗೆ ಕೇಂದ್ರ ಸರ್ಕಾರ (Govt Of India) ನಿರ್ಧರಿಸಿದೆ. ಕಳೆದ ವಾರವಷ್ಟೇ ಜಾಗತಿಕ ಮಟ್ಟದಲ್ಲಿ ಇಂಧನ ದರ ನಿಯಂತ್ರಣಕ್ಕಾಗಿ, ಅತಿಹೆಚ್ಚು ತೈಲ ವಿನಿಯೋಗಿಸುವ ಭಾರತ (India), ಚೀನಾ ಮತ್ತು ಜಪಾನ್‌ ದೇಶಗಳು ತಾವು ಸಂಗ್ರಹಿಸಿಟ್ಟುಕೊಂಡಿರುವ ತೈಲವನ್ನು (Fuel) ಬಳಸಿ ಕೊಳ್ಳುವಂತೆ ಅಮೆರಿಕ ಕೋರಿತ್ತು. ಇದರ ಬೆನ್ನಲ್ಲೇ, ಭಾರತ  (India) ಸರ್ಕಾರ ಕ್ರಮಕ್ಕೆ ಮುಂದಾಗಿದೆ. ಅಮೆರಿಕ (America) 5 ಕೋಟಿ ಬ್ಯಾರಲ್‌ ತೈಲ ಬಿಡುಗಡೆಗೆ ನಿರ್ಧರಿಸಿದೆ.

ಭಾರತವು ಪೂರ್ವ ಮತ್ತು ಪಶ್ಚಿಮ ಭಾಗಗಳಲ್ಲಿ ಹೊಂದಿರುವ ಭೂಗತ ಸಂಗ್ರಹಾಗಾರಗಳಲ್ಲಿ 3.8 ಕೋಟಿ ಬ್ಯಾರೆಲ್‌ಗಳಷ್ಟು ತೈಲ ಸಂಗ್ರಹಿಸಿದೆ. ಈ ಪೈಕಿ ಅಮೆರಿಕದ ಕೋರಿಕೆ ಮೇರೆಗೆ ಮುಂದಿನ 7-10 ದಿನಗಳಲ್ಲಿ 50 ಲಕ್ಷ ಬ್ಯಾರೆಲ್‌ಗಳಷ್ಟು ತೈಲ ಬಿಡುಗಡೆಗೆ ಭಾರತ ಸರ್ಕಾರ ನಿರ್ಧರಿಸಿದೆ ಎಂದು ಹೆಸರು ಹೇಳಲಿಚ್ಚಿಸದ ಅಧಿಕಾರಿಗಳು ತಿಳಿಸಿದ್ದಾರೆ.

ತೈಲ ಸಂಗ್ರಹಗಾರಗಳಲ್ಲಿರುವ ತೈಲವನ್ನು ಮಂಗಳೂರು ಸಂಸ್ಕರಣ ಮತ್ತು ಪೆಟ್ರೋಕೆಮಿಕಲ್‌ ಲಿ.(ಎಂಆರ್‌ಪಿಎಲ್‌) ಮತ್ತು ಹಿಂದೂಸ್ತಾನ್‌ ಪೆಟ್ರೋಲಿಯಂ ಕಾರ್ಪ್ ಲಿ.(ಎಚ್‌ಪಿಸಿಎಲ್‌)ಗಳಿಗೆ ಮಾರಾಟ ಮಾಡಲಾಗುತ್ತದೆ. ಈ ಕುರಿತು ಬುಧವಾರ ಅಧಿಕೃತ ಹೇಳಿಕೆ ಬಿಡುಗಡೆ ಆಗುವ ಸಾಧ್ಯತೆಯಿದೆ.

ರಾಜ್ಯಗಳಲ್ಲಿ ಪೆಟ್ರೋಲ್ ತೆರಿಗೆ ಇಳಿಕೆ :  ಪೆಟ್ರೋಲ್‌ (Petrol) ಮತ್ತು ಡೀಸೆಲ್‌ (Diesel) ಮೇಲಿನ ವ್ಯಾಟ್‌ (vat) ಕಡಿಮೆ ಮಾಡಿರುವ ಹಿನ್ನಲೆಯಲ್ಲಿ ಪ್ರಸಕ್ತ ಹಣಕಾಸು ವರ್ಷದಲ್ಲಿ ರಾಜ್ಯಗಳಿಗೆ 44 ಸಾವಿರ ಕೋಟಿ ರು. ನಷ್ಟ ವಾಗಲಿದೆ ಎಂದು ವರದಿಯೊಂದು ಹೇಳಿದೆ. 

ನ.4ರಂದು ಕೇಂದ್ರ ಸರ್ಕಾರ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ತೆರೆಗೆಯನ್ನು (Tax) ಕ್ರಮವಾಗಿ 5 ರು ಹಾಗೂ 10 ರು. ಕಡಿಮೆ ಮಾಡಿದ ನಂತರ 25 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ವ್ಯಾಟ್‌ನ್ನು ಕಡಿತ ಮಾಡಿದ್ದವು. 

ಹಾಗಾಗಿ ಈ ಹಣಕಾಸು ವರ್ಷದ (Financial year) ಉಳಿದ ಭಾಗದಲ್ಲಿ ರಾಜ್ಯಗಳಿಗೆ 44 ಸಾವಿರ ಕೋಟಿ ನಷ್ಟವಾಗಲಿದೆ. ಆದರೆ ಬಜೆಟ್‌ನಲ್ಲಿ (Budget) ನಿಗಧಿಯಾಗಿದ್ದಕ್ಕಿಂತ 60 ಸಾವಿರ ಕೋಟಿ ಹೆಚ್ಚುವರಿ ತೆರಿಗೆ ಪಾಲನ್ನು ರಾಜ್ಯಗಳಿಗೆ ನೀಡುವುದರಿಂದ ರಾಜ್ಯಗಳಿಗೆ ತೈಲ ಬೆಲೆ ಇಳಿಕೆಯ (Fuel Price) ಹೊರೆ ವಾಸ್ತವವಾಗಿ ಬಾಧಿಸುವುದಿಲ್ಲ ಎಂದು ವರದಿ ಹೇಳಿದೆ.

 ತೈಲ ಬೆಲೆ ಏರಿಕೆ ಸಮಸ್ಯೆ ಪರಿಹರಿಸಲು ಎಥೆನಾಲ್ ಮಿಶ್ರಿತ ಪೆಟ್ರೋಲ್ ಖರೀದಿಗೆ ಕೇಂದ್ರ ಅನುಮೋದನೆ! :  ದೇಶದಲ್ಲಿ ತೈಲ ಬೆಲೆ(Fuel Price) ಹಾವು ಏಣಿ ಆಟವಾಡುತ್ತಿದೆ. ಇತ್ತ ಎಲೆಕ್ಟ್ರಿಕ್ ವಾಹನಗಳು(Electric Vehicle) ಜನಸಾಮಾನ್ಯರಿಗೆ ಕೈಗೆಟುಗುತ್ತಿಲ್ಲ. ಹೀಗಾಗಿ ಸಂಕಷ್ಟ ಹೆಚ್ಚಾಗಿದೆ. ಕೇಂದ್ರ ತೈಲದ ಮೇಲಿನ ಅಬಕಾರಿ ಸುಂಕ ಕಡಿತಗೊಳಿಸಿದರೂ ಪೆಟ್ರೋಲ್ ಬೆಲೆ 100 ರೂಪಾಯಿಗಿಂತ ಕಡಿಮೆಯಾಗಿಲ್ಲ. ಇದರ ನಡುವೆ ಕೇಂದ್ರ ಮಹತ್ವದ ಹೆಜ್ಜೆ ಇಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕುರಿತಾದ ಸಂಪುಟ ಸಮಿತಿ ಸಭೆ ಮುಂಬರುವ 2020-21ರ ಸಕ್ಕರೆ ಹಂಗಾಮಿಗೆ ಎಥೆನಾಲ್ ಗೆ(ethanol) ಹೆಚ್ಚಿನ ಬೆಲೆ ನೀಡಲು ಅನುಮೋದನೆ ನೀಡಿತು. 2020ರ ಡಿಸೆಂಬರ್ 1ರಿಂದ 2021ರ ನವೆಂಬರ್ 30ರವರೆಗಿನ ಇಎಸ್ ವೈ 2020-21 ಅವಧಿಗೆ ಇಬಿಪಿ ಕಾರ್ಯಕ್ರಮದಡಿ ಕಬ್ಬು ಆಧಾರಿತ  ನಾನಾ ಕಚ್ಚಾ ಸಾಮಗ್ರಿಗಳಿಂದ ಪಡೆದ  ಎಥೆನಾಲ್‌ ಹೆಚ್ಚಿನ ಪ್ರಾಮುಖ್ಯತೆ ನೀಡಲು ಕೇಂದ್ರ ಸಜ್ಜಾಗಿದೆ. 

ಈ ಅನುಮೋದನೆಯಿಂದಾಗಿ ಎಥೆನಾಲ್ ಪೂರೈಕೆದಾರರಿಗೆ ಬೆಲೆ ಸ್ಥಿರತೆ ಮತ್ತು ಆಕರ್ಷಕ ಬೆಲೆಗಳನ್ನು ಒದಗಿಸುವಲ್ಲಿ ಸರ್ಕಾರದ ಮುಂದುವರಿದ ನೀತಿಯನ್ನು ಸುಗಮಗೊಳಿಸುವುದಲ್ಲದೆ,  ಕಬ್ಬು ಬೆಳೆಗಾರರ ಬಾಕಿ ಪಾವತಿಯನ್ನು ತಗ್ಗಿಸಲಿದೆ, ಕಚ್ಚಾ ತೈಲ ಆಮದು ಅವಲಂಬನೆ ತಗ್ಗಿಸಲಿದೆ ಮತ್ತು ವಿದೇಶಿ ವಿನಿಮಯ ಉಳಿತಾಯ ಮಾಡುವ ಪರಿಸರ ಸಂರಕ್ಷಣೆಗೆ ಅನುಕೂಲವಾಗಲಿದೆ.

ಈ ನಿರ್ಧಾರದಿಂದಾಗಿ ದೇಶದಲ್ಲಿ ಸುಧಾರಿತ ಜೈವಿಕ ಇಂಧನ ಸಂಸ್ಕರಣಾಗಾರಗಳನ್ನು ಸ್ಥಾಪಿಸಲು ಸಹಾಯ ಮಾಡುವ 2ಜಿ ಎಥೆನಾಲ್ ಬೆಲೆಯನ್ನು ನಿರ್ಧರಿಸುವ  ಅಧಿಕಾರವನ್ನು  ಸಾರ್ವಜನಿಕ ವಲಯದ ತೈಲ ಕಂಪನಿಗಳಿಗೆ ದೊರಕಲಿದೆ. ಯೋಜನೆಯಿಂದ ಎಲ್ಲ ಡಿಸ್ಟಿಲರಿಗಳು ಪ್ರಯೋಜನವನ್ನು ಪಡೆಯಬಹುದಾಗಿದೆ ಮತ್ತು ಇಬಿಪಿ ಕಾರ್ಯಕ್ರಮದಡಿ ಹೆಚ್ಚಿನ ಸಂಖ್ಯೆಯ ಡಿಸ್ಟಿಲರಿಗಳು ಎಥೆನಾಲ್ ಪೂರೈಕೆ ಮಾಡುತ್ತಾರೆಂದು ನಿರೀಕ್ಷಿಸಲಾಗುತ್ತಿದೆ.

2024ರಲ್ಲಿ ಹರಿಹರದಲ್ಲಿ 2ಜಿ ಎಥೆನಾಲ್‌ ಸ್ಥಾವರ

ಸರ್ಕಾರವು ಎಥೆನಾಲ್ ಮಿಶ್ರಿತ ಪೆಟ್ರೋಲ್ (ಇಬಿಪಿ) ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುತ್ತಿದೆ, ಅದರಲ್ಲಿ ತೈಲ ಮಾರುಕಟ್ಟೆ ಕಂಪನಿಗಳು(ಒಎಂಸಿ)ಗಳು ಪೆಟ್ರೋಲ್ ಜೊತೆ ಶೇ.10ರವರೆಗೆ ಎಥೆನಾಲ್ ಮಿಶ್ರಣ ಮಾಡಿ ಮಾರಾಟ ಮಾಡುತ್ತವೆ.. ಪರಿಸರ ಸ್ನೇಹಿ ಇಂಧನ ಮತ್ತು ಪರ್ಯಾಯ ಇಂಧನಗಳ ಬಳಕೆಯನ್ನು ಉತ್ತೇಜಿಸಲು ಈ ಕಾರ್ಯಕ್ರಮವನ್ನು 2019ರ ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಕೇಂದ್ರಾಡಳಿತ ಪ್ರದೇಶಗಳಾದ ಅಂಡಮಾನ್ ನಿಕೋಬಾರ್ ಮತ್ತು ಲಕ್ಷದೀಪ್ ದ್ವೀಪಗಳನ್ನು ಹೊರತುಪಡಿಸಿ ದೇಶಾದ್ಯಂತ ವಿಸ್ತರಣೆ ಮಾಡಲಾಗಿದೆ. ಈ ಮಧ್ಯಪ್ರವೇಶದಿಂದಾಗಿ ಇಂಧನ ಅಗತ್ಯತೆಗಳಿಗೆ ಆಮದು ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ಕೃಷಿ ಕ್ಷೇತ್ರಕ್ಕೆ ಉತ್ತೇಜನ ನೀಡಲು ಪ್ರಯತ್ನಿಸುತ್ತದೆ.

Follow Us:
Download App:
  • android
  • ios