ಕಾಂಗ್ರೆಸ್‌ ಆಡಳಿತವಿರುವ ರಾಜಸ್ಥಾನದಲ್ಲಿ ವ್ಯಾಟ್‌ ಕಡಿತಗೊಳಿಸಿದ ಹಿನ್ನೆಲೆ ಪೆಟ್ರೋಲ್‌, ಡೀಸೆಲ್‌ ಬೆಲೆ ಕ್ರಮವಾಗಿ 4 ರು. ಹಾಗೂ 5 ರು. ಇಳಿಕೆ

ಜೈಪುರ (ನ.17) : ಕಾಂಗ್ರೆಸ್‌ (Congress) ಆಡಳಿತವಿರುವ ರಾಜಸ್ಥಾನದಲ್ಲಿ (Rajasthan) ವ್ಯಾಟ್‌ (vat) ಕಡಿತಗೊಳಿಸಿದ ಹಿನ್ನೆಲೆ ಪೆಟ್ರೋಲ್‌ (Petrol), ಡೀಸೆಲ್‌ (Diesel) ಬೆಲೆ ಕ್ರಮವಾಗಿ 4 ರು. ಹಾಗೂ 5 ರು. ಇಳಿಕೆಯಾಗಿದೆ. 

ಮಂಗಳವಾರ ಮುಖ್ಯಮಂತ್ರಿ ನಿವಾಸದಲ್ಲಿ ನಡೆದ ಕ್ಯಾಬಿನೆಟ್‌ ಸಭೆಯು ಪೆಟ್ರೋಲ್‌, ಡೀಸೆಲ್‌ ಮೇಲಿನ ವ್ಯಾಟ್‌ ದರವನ್ನು ಕಡಿತಗೊಳಿಸಲು ಸರ್ವಾನುಮತದಿಂದ ಒಪ್ಪಿಗೆ ನೀಡಿದೆ. ‘ಸಾಮಾನ್ಯ ಜನರ ಅನುಕೂಲಕ್ಕಾಗಿ ಕೇಂದ್ರದೊಂದಿಗೆ ರಾಜ್ಯವೂ ತೆರಿಗೆ ಕಡಿತಕ್ಕೆ ಮುಂದಾಗಿದೆ. 

ಇಂದು ಮಧ್ಯರಾತ್ರಿಯಿಂದ ಹೊಸ ದರ ಅನ್ವಯವಾಗಲಿದೆ’ ಎಂದು ಮುಖ್ಯಮಂತ್ರಿ ಅಶೋಕ ಗೆಹ್ಲೋಟ್‌ ಹೇಳಿದ್ದಾರೆ. ಇತ್ತೀಚೆಗೆ ಕೇಂದ್ರ ಸರ್ಕಾರ ಪೆಟ್ರೋಲ್‌ 5 ರು. ಹಾಗೂ ಡೀಸೆಲ್‌ 10 ರು. ಇಳಿಸಿತ್ತು.

ಎಥೆನಾಲ್ ಮಿಶ್ರಿತ ಪೆಟ್ರೋಲ್ ಖರೀದಿಗೆ ಒಪ್ಪಿಗೆ : ದೇಶದಲ್ಲಿ ತೈಲ ಬೆಲೆ(Fuel Price) ಹಾವು ಏಣಿ ಆಟವಾಡುತ್ತಿದೆ. ಇತ್ತ ಎಲೆಕ್ಟ್ರಿಕ್ ವಾಹನಗಳು(Electric Vehicle) ಜನಸಾಮಾನ್ಯರಿಗೆ ಕೈಗೆಟುಗುತ್ತಿಲ್ಲ. ಹೀಗಾಗಿ ಸಂಕಷ್ಟ ಹೆಚ್ಚಾಗಿದೆ. ಕೇಂದ್ರ ತೈಲದ ಮೇಲಿನ ಅಬಕಾರಿ ಸುಂಕ ಕಡಿತಗೊಳಿಸಿದರೂ ಪೆಟ್ರೋಲ್ ಬೆಲೆ 100 ರೂಪಾಯಿಗಿಂತ ಕಡಿಮೆಯಾಗಿಲ್ಲ. ಇದರ ನಡುವೆ ಕೇಂದ್ರ ಮಹತ್ವದ ಹೆಜ್ಜೆ ಇಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕುರಿತಾದ ಸಂಪುಟ ಸಮಿತಿ ಸಭೆ ಮುಂಬರುವ 2020-21ರ ಸಕ್ಕರೆ ಹಂಗಾಮಿಗೆ ಎಥೆನಾಲ್ ಗೆ(ethanol) ಹೆಚ್ಚಿನ ಬೆಲೆ ನೀಡಲು ಅನುಮೋದನೆ ನೀಡಿತು. 2020ರ ಡಿಸೆಂಬರ್ 1ರಿಂದ 2021ರ ನವೆಂಬರ್ 30ರವರೆಗಿನ ಇಎಸ್ ವೈ 2020-21 ಅವಧಿಗೆ ಇಬಿಪಿ ಕಾರ್ಯಕ್ರಮದಡಿ ಕಬ್ಬು ಆಧಾರಿತ ನಾನಾ ಕಚ್ಚಾ ಸಾಮಗ್ರಿಗಳಿಂದ ಪಡೆದ ಎಥೆನಾಲ್‌ ಹೆಚ್ಚಿನ ಪ್ರಾಮುಖ್ಯತೆ ನೀಡಲು ಕೇಂದ್ರ ಸಜ್ಜಾಗಿದೆ. 

ಈ ಅನುಮೋದನೆಯಿಂದಾಗಿ ಎಥೆನಾಲ್ ಪೂರೈಕೆದಾರರಿಗೆ ಬೆಲೆ ಸ್ಥಿರತೆ ಮತ್ತು ಆಕರ್ಷಕ ಬೆಲೆಗಳನ್ನು ಒದಗಿಸುವಲ್ಲಿ ಸರ್ಕಾರದ ಮುಂದುವರಿದ ನೀತಿಯನ್ನು ಸುಗಮಗೊಳಿಸುವುದಲ್ಲದೆ, ಕಬ್ಬು ಬೆಳೆಗಾರರ ಬಾಕಿ ಪಾವತಿಯನ್ನು ತಗ್ಗಿಸಲಿದೆ, ಕಚ್ಚಾ ತೈಲ ಆಮದು ಅವಲಂಬನೆ ತಗ್ಗಿಸಲಿದೆ ಮತ್ತು ವಿದೇಶಿ ವಿನಿಮಯ ಉಳಿತಾಯ ಮಾಡುವ ಪರಿಸರ ಸಂರಕ್ಷಣೆಗೆ ಅನುಕೂಲವಾಗಲಿದೆ.

ಈ ನಿರ್ಧಾರದಿಂದಾಗಿ ದೇಶದಲ್ಲಿ ಸುಧಾರಿತ ಜೈವಿಕ ಇಂಧನ ಸಂಸ್ಕರಣಾಗಾರಗಳನ್ನು ಸ್ಥಾಪಿಸಲು ಸಹಾಯ ಮಾಡುವ 2ಜಿ ಎಥೆನಾಲ್ ಬೆಲೆಯನ್ನು ನಿರ್ಧರಿಸುವ ಅಧಿಕಾರವನ್ನು ಸಾರ್ವಜನಿಕ ವಲಯದ ತೈಲ ಕಂಪನಿಗಳಿಗೆ ದೊರಕಲಿದೆ. ಯೋಜನೆಯಿಂದ ಎಲ್ಲ ಡಿಸ್ಟಿಲರಿಗಳು ಪ್ರಯೋಜನವನ್ನು ಪಡೆಯಬಹುದಾಗಿದೆ ಮತ್ತು ಇಬಿಪಿ ಕಾರ್ಯಕ್ರಮದಡಿ ಹೆಚ್ಚಿನ ಸಂಖ್ಯೆಯ ಡಿಸ್ಟಿಲರಿಗಳು ಎಥೆನಾಲ್ ಪೂರೈಕೆ ಮಾಡುತ್ತಾರೆಂದು ನಿರೀಕ್ಷಿಸಲಾಗುತ್ತಿದೆ.

2024ರಲ್ಲಿ ಹರಿಹರದಲ್ಲಿ 2ಜಿ ಎಥೆನಾಲ್‌ ಸ್ಥಾವರ

ಸರ್ಕಾರವು ಎಥೆನಾಲ್ ಮಿಶ್ರಿತ ಪೆಟ್ರೋಲ್ (ಇಬಿಪಿ) ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುತ್ತಿದೆ, ಅದರಲ್ಲಿ ತೈಲ ಮಾರುಕಟ್ಟೆ ಕಂಪನಿಗಳು(ಒಎಂಸಿ)ಗಳು ಪೆಟ್ರೋಲ್ ಜೊತೆ ಶೇ.10ರವರೆಗೆ ಎಥೆನಾಲ್ ಮಿಶ್ರಣ ಮಾಡಿ ಮಾರಾಟ ಮಾಡುತ್ತವೆ.. ಪರಿಸರ ಸ್ನೇಹಿ ಇಂಧನ ಮತ್ತು ಪರ್ಯಾಯ ಇಂಧನಗಳ ಬಳಕೆಯನ್ನು ಉತ್ತೇಜಿಸಲು ಈ ಕಾರ್ಯಕ್ರಮವನ್ನು 2019ರ ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಕೇಂದ್ರಾಡಳಿತ ಪ್ರದೇಶಗಳಾದ ಅಂಡಮಾನ್ ನಿಕೋಬಾರ್ ಮತ್ತು ಲಕ್ಷದೀಪ್ ದ್ವೀಪಗಳನ್ನು ಹೊರತುಪಡಿಸಿ ದೇಶಾದ್ಯಂತ ವಿಸ್ತರಣೆ ಮಾಡಲಾಗಿದೆ. ಈ ಮಧ್ಯಪ್ರವೇಶದಿಂದಾಗಿ ಇಂಧನ ಅಗತ್ಯತೆಗಳಿಗೆ ಆಮದು ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ಕೃಷಿ ಕ್ಷೇತ್ರಕ್ಕೆ ಉತ್ತೇಜನ ನೀಡಲು ಪ್ರಯತ್ನಿಸುತ್ತದೆ.

ಈ ಕೆಳಗಿನವುಗಳಿಗೆ ಅನುಮೋದನೆ ನೀಡಲಾಗಿದೆ.
(i) ಸಿ ಭಾರೀ ಕಾಕಂಬಿ ಮಾರ್ಗದಿಂದ ಪಡೆಯಲಾದ ಎಥೆನಾಲ್ ಬೆಲೆ ಪ್ರತಿ ಲೀಟರ್ ಗೆ 45.69 ರೂ.ಗಳಿಂದ 46.66 ರೂ.ಗೆ ಹೆಚ್ಚಿಸಲಾಗಿದೆ.
(ii) ಬಿ ಭಾರೀ ಕಾಕಂಬಿಯಿಂದ ಮಾರ್ಗದಿಂದ ಪಡೆಯಲಾದ ಎಥೆನಾಲ್ ಬೆಲೆ ಪ್ರತಿ ಲೀಟರ್ ಗೆ 57.61 ರೂ.ಗಳಿಂದ 59.08 ರೂ.ಗೆ ಹೆಚ್ಚಿಸಲಾಗಿದೆ.
(iii) ಕಬ್ಬಿನ ರಸ, ಸಕ್ಕರೆ, ಸಕ್ಕರೆ ಪಾಕದಿಂದ ಪಡೆದ ಎಥೆನಾಲ್ ಬೆಲೆ ಪ್ರತಿ ಲೀಟರ್ ಗೆ 62.65 ರೂ.ಗಳಿಂದ 63.45 ರೂ.ಗೆ ಹೆಚ್ಚಳ ಮಾಡಲಾಗಿದೆ.
(iv) ಹೆಚ್ಚುವರಿಯಾಗಿ ಜಿಎಸ್ ಟಿ ಮತ್ತು ಸಾರಿಗೆ ವೆಚ್ಚ ಕೂಡ ಪಾವತಿಸಬೇಕು
(v) ದೇಶದಲ್ಲಿ ಸುಧಾರಿತ ಜೈವಿಕ ಇಂಧನ ಸಂಸ್ಕರಣಾಗಾರಗಳನ್ನು ಸ್ಥಾಪಿಸಲು ಇದು ಸಹಾಯ ಮಾಡುವುದರಿಂದ 2ಜಿ ಎಥೆನಾಲ್ ಬೆಲೆಯನ್ನು ನಿರ್ಧರಿಸುವ ಸ್ವತಂತ್ರ ಅಧಿಕಾರವನ್ನು ಸಾರ್ವಜನಿಕ ವಲಯದ ತೈಲ ಕಂಪನಿಗಳಿಗೆ ನೀಡಲು ಸರ್ಕಾರ ತೀರ್ಮಾನಿಸಿದೆ. ಸದ್ಯ ತೈಲ ಮಾರುಕಟ್ಟೆ ಕಂಪನಿಗಳೇ (ಒಎಂಸಿಗಳೇ) ಆಹಾರ ಧಾನ್ಯ ಆಧಾರಿತ ಎಥೆನಾಲ್ ಬೆಲಗಳನ್ನು ನಿರ್ಧರಿಸುತ್ತಿರುವುದರಿಂದ ಇದು ಪ್ರಮುಖವಾಗಿದೆ.