ಕೊರೋನಾ ಹೊಡೆತದಿಂದ ಚೇತರಿಸಿಕೊಂಡ ಭಾರತ ಆರ್ಥಿಕತೆಯಲ್ಲಿ ವಿ ಶೇಪ್ ಚೇತರಿಕೆ, ಮೊದಲ ತ್ರೈಮಾಸಿಕ ಆಶಾದಾಯಕ ತ್ರೈಮಾಸಿಕ ವರದಿ ಪ್ರಕಟ, ಚೇತರಿಕೆಯ ಮಂದಹಾಸ

ನವದೆಹಲಿ(ಆ.31): ಕೊರೋನಾ ಎರಡನೇ ಅಲೆಯಿಂದ ಭಾರತದ ಜಿಡಿಪಿ, ಆರ್ಥಿಕತೆ ಪಾತಾಳಕ್ಕೆ ಕುಸಿದಿತ್ತು. ಲಾಕ್‌ಡೌನ್, ಕರ್ಫ್ಯೂ ಸೇರಿದಂತೆ ಹಲವು ನಿರ್ಬಂಧಗಳು ಭಾರತವನ್ನು ಇನ್ನಿಲ್ಲದಂತೆ ಕಾಡಿತ್ತು. ಆದರೆ ಸತತ ಹೊಡೆತದಿದಿಂದ ಚೇತರಿಸಿಕೊಂಡಿರುವ ಭಾರತ ರಾಕೆಟ್ ವೇಗದಲ್ಲಿ ಪ್ರಗತಿ ಸಾಧಿಸುತ್ತಿದೆ. ಏಪ್ರಿಲ್-ಜೂನ್ ತಿಂಗಳ ತ್ರೈಮಾಸಿಕ ವರದಿ ಬಿಡುಗಡೆಯಾಗಿದ್ದು, ಭಾರತದ ಆರ್ಥಿಕತೆ ಶೇಕಡಾ 20.1ರಷ್ಟು ಪ್ರಗತಿ ಸಾಧಿಸಿದೆ.

ಆದಾಯ ತೆರಿಗೆ ಕಾಯ್ದೆಯ ಅಡಿಯ ಹಲವು E ಫಾರ್ಮ್ ಫೈಲಿಂಗ್ ಗಡುವು ವಿಸ್ತರಿಸಿದ ಕೇಂದ್ರ ಸರ್ಕಾರ!

ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್-ಜೂನ್ ತ್ರೈಮಾಸಿಕ ವರದಿಯಲ್ಲಿ ಭಾರತದ ಆರ್ಥಿಕತೆಯು ಶೇಕಡಾ 20.1 ರಷ್ಟು ಪ್ರಗತಿ ಕಂಡಿದೆ. ಕಳೆದ ವರ್ಷದ ಇದೇ ತ್ರೈಮಾಸಿಕ ಅವಧಿಯಲ್ಲಿ ಲಾಕ್‌ಡೌನ್ ಕಾರಣದಿಂದ ಭಾರತ 24.4%ರಷ್ಟು ಕುಸಿತ ಕಂಡಿತ್ತು.

2021-22ರ ಒಂದನೇ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇಕಡಾ 20.1 ವಾರ್ಷಿಕ ಬೆಳವಣಿಗೆ ನಿರೀಕ್ಷಿತ ರೇಖೆಗಳ ಮೇಲೆ ವಿಸ್ತಾರಗೊಂಡಿದೆ. ಕಳೆದ ವರ್ಷ ಎಪ್ರಿಲ್ ಜೂನ್ ತ್ರೈಮಾಸಿಕದಲ್ಲಿ ಬೇಡಿಕೆ ಹೆಚ್ಚಿದ ಕಾರಣ ಆರ್ಥಿಕತೆ ಅತ್ಯಂತ ವೇಗವಾಗಿ ಚೇತರಿಸಿಕೊಂಡಿತು. ಇದೇ ವೇಳೆ ಅಪ್ಪಳಿಸಿದ 2ನೇ ಅಲೆ ಕೊರೋನಾದಿಂದ ಭಾರತದ ಆರ್ಥಿಕತೆ ಮೇಲೆ ಹೊಡೆತ ಬಿದ್ದಿತು ಎಂದು ಅರ್ಥಶಾಸ್ತ್ರಜ್ಞ ಮತ್ತು ಸಂಶೋಧನಾ ಮುಖ್ಯಸ್ಥ ಸಿದ್ಧಾರ್ಥ ಸನ್ಯಾಲ್ ಹೇಳಿದರು.

ಆರ್‌ಬಿಐ ಮಹತ್ವದ ನಿರ್ಧಾರ: ಬ್ಯಾಂಕ್‌ ಗ್ರಾಹಕರಿಗೆ ಕಹಿ ಸುದ್ದಿ!

ಒಂದನೇ ತ್ರೈಮಾಸಿಕ ನಿವ್ವಳ ದೇಶಿಯ ಉತ್ಪನ್ನ(GDP) ಬೆಳವಣಿಗೆ ಅಂದಾಜಿನ ಪ್ರಕಾರ ಶೇಕಡಾ 20 ರಷ್ಟಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಶೇಕಡಾ 21.4 ರಷ್ಟು ಎಂದು ಅಂದಾಜಿಸಿದೆ. ಮೊದಲ ಕೊರೋನಾ ಅಲೆ ಹಾಗೂ ಲಾಕ್‌ಡೌನ್ ಬಳಿಕ ಉತ್ಪಾದನೆ, ಗಣಿಗಾರಿಕೆ, ನಿರ್ಮಾಣ ಕ್ಷೇತ್ರಗಳು ಚೇತರಿಸಿಕೊಂಡಿತು. ಕೃಷಿ ಕ್ಷೇತ್ರ ಕೂಡ ಪುಟಿದೇಳುವ ಸೂಚನೆ ನೀಡಿತ್ತು. ಆದರೆ ಕೃಷಿ ಚಟುವಟಿಕೆ ಹಾಗೂ ಬೆಳೆಗಳ ಸಮಯದಲ್ಲೇ 2ನೇ ಅಲೆ ಹೊಡತೆ ನೀಡಿತು. 

ಉತ್ಪಾದನಾ ವಲಯ ಶೇಕಡಾ 49.6 ರಷ್ಟು ಬೆಳವಣಿಗೆ ಕಂಡಿದೆ. ನಿರ್ಮಾಣ ಕ್ಷೇತ್ರದ ಬೆಳವಣಿಗೆ ಶೇಕಡಾ 68.3 ರಷ್ಟಿದೆ. ಕಳೆದ ವರ್ಷದ ತ್ರೈಮಾಸಿಕದಲ್ಲಿ ಕೃಷಿ ವಲಯದ ಬೆಳವಣಿಗೆ ಶೇಕಡಾ 3.5 ರಷ್ಟಿತ್ತು. ಗಣಿಗಾರಿಕೆ ವಲಯವು ಕಳೆದ ಆರ್ಥಿಕ ವರ್ಷದ ಇದೇ ತ್ರೈಮಾಸಿಕದಲ್ಲಿ 17.2% ರಷ್ಟು ಬೆಳವಣಿಗೆಯಾಗಿದ್ದಾರೆ. ಈ ಬಾರಿ 18.6% ರಷ್ಟು ಬೆಳವಣಿಗೆಯಾಗಿದೆ.

ಎರಡನೇ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆ V ಶೇಪ್ ಚೇತರಿಕೆ ಕಾಣಲಿದೆ ಎಂದು ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ. ಆರ್ಥಿಕ ವರ್ಷದ ಜಿಡಿಪಿ ಶೇಕಡಾ 9.5 ರಷ್ಟು ಚೇತರಿಕೆಯಾಗಲಿದೆ ಎಂದು ಆರ್‌ಬಿಐ ಭವಿಷ್ಯ ನುಡಿದಿದೆ. ಇನ್ನು ಆರ್‌ಬಿಐ ನೀಡಿದ ಮತ್ತರೆಡು ಮುನ್ಸೂಚನೆ ಎಂದರೆ 2ನೇ ಹಾಗೂ 3ನೇ ತ್ರೈಮಾಸಿಕದಲ್ಲಿ ಭಾರತದ ಬೆಳವಣಿಗೆ ಶೇಕಡಾ 7.3 ಹಾಗೂ ಶೇಕಡಾ 6.3 ರಷ್ಟು ಎಂದಿದೆ.