Asianet Suvarna News Asianet Suvarna News

BTS-2021| ಭಾರತದ ಆರ್ಥಿಕ ಶಕ್ತಿಯಿಂದ ಜಗತ್ತಿಗೆ ಲಾಭ: ಜುಡೀತ್‌ ರವೀನ್‌

*  4 ಕೋಟಿ ಜನರ ತಲುಪಿದ, 48 ದೇಶಗಳ ಪ್ರತಿನಿಧಿಗಳ ಸೆಳೆದ ಶೃಂಗ
*  2023ರಲ್ಲಿ 25ನೇ ವರ್ಷದ ರಜತೋತ್ಸವ ಶೃಂಗ ಸಭೆ ಆಯೋಜನೆ
*  ದೊಡ್ಡ ಹೂಡಿಕೆ ನಿರೀಕ್ಷೆ
 

Profit to the World From the Economic Power of India Says Judith Ravin grg
Author
Bengaluru, First Published Nov 20, 2021, 12:01 PM IST

ಬೆಂಗಳೂರು(ನ.20):  2021ರ ಸಾಲಿನಲ್ಲಿ ಭಾರತ -ಅಮೆರಿಕ(Indo-US) ವ್ಯಾಪಾರ ಸಂಬಂಧ ಹಿಂದಿನ ದಾಖಲೆಗಳನ್ನು ಮೀರುವ ಎಲ್ಲ ಸಾಧ್ಯತೆಯಿದೆ. ವ್ಯಾಪಾರದಲ್ಲಿ ಭಾರತಕ್ಕೆ ಅಮೆರಿಕಕ್ಕಿಂತ ಉತ್ತಮ ಸ್ನೇಹಿತರಿಲ್ಲ. ಭಾರತದ ಆರ್ಥಿಕ ಶಕ್ತಿಯಿಂದ ಭಾರತಕ್ಕೆ ಮಾತ್ರವಲ್ಲದೇ ಅಮೆರಿಕ, ಈ ಪ್ರದೇಶ ಮತ್ತು ಜಗತ್ತಿಗೆ ಒಳಿತು ಆಗಲಿದೆ ಎಂದು ಯುಎಸ್‌ ಕಾನ್ಸಲ್‌ ಜನರಲ್‌ ಜುಡೀತ್‌ ರವೀನ್‌(US Consulate General Judith Ravin) ಹೇಳಿದ್ದಾರೆ.

‘ಬಿಟಿಎಸ್‌-2021’(BTS-2021) ಇಂಡಿಯಾ-ಯುಎಸ್‌ ಟೆಕ್‌ ಕಾನ್‌ಕ್ಲೇವ್‌ನ ಭಾಗವಾಗಿ ಯುನೈಟೆಡ್‌ ಸ್ಟೇಟ್ಸ್‌ ಇಂಡಿಯಾ ಬ್ಯುಸಿನೆಸ್‌ ಕೌನ್ಸಿಲ್‌ನ ಸದಸ್ಯರನ್ನು(United States India Business Council) ಉದ್ದೇಶಿಸಿ ಅವರು ಮಾತನಾಡಿದರು.

ಇಂಡೋ - ಯುಎಸ್‌ ಮಧ್ಯೆ 2001ರಲ್ಲಿ 20 ಬಿಲಿಯನ್‌ ಅಮೆರಿಕನ್‌ ಡಾಲರ್‌ ವ್ಯಾಪಾರ(Business) ವಹಿವಾಟು ನಡೆದಿತ್ತು. 2019ರಲ್ಲಿ 145 ಬಿಲಿಯನ್‌ ಅಮೆರಿಕನ್‌ ಡಾಲರ್‌ಗೆ ಏರಿತ್ತು. ಕೊರೋನಾ(Coronavirus) ಸಾಂಕ್ರಾಮಿಕದ ಅವಧಿಯಲ್ಲಿ ವ್ಯಾಪಾರ ವಹಿವಾಟು ತುಸು ಇಳಿಕೆ ಕಂಡಿದ್ದರೂ ಇದೀಗ ಮತ್ತೆ ವ್ಯಾಪಾರ ವಹಿವಾಟು ಉತ್ತಮ ರೀತಿಯಲ್ಲಿ ಸಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಈ ವರ್ಷ 145 ಬಿಲಿಯನ್‌ ಅಮೆರಿಕನ್‌ ಡಾಲರ್‌ ಮೀರಿ ವ್ಯಾಪಾರ ವಹಿವಾಟು ನಡೆಯಲಿದೆ ಎಂದು ಅವರು ತಿಳಿಸಿದರು.

BTS-2021: ಸ್ಟಾರ್ಟಪ್‌ ಉತ್ತೇಜನಕ್ಕೆ ಬಿಯಾಂಡ್‌ ಸ್ಟಾರ್ಟಪ್‌ ಗ್ರಿಡ್‌, ಸಚಿವ ಅಶ್ವತ್ಥ್‌

ಅಮೆರಿಕ ಭಾರತದ ಅತಿ ದೊಡ್ಡ ವ್ಯಾಪಾರ ಜೊತೆಗಾರ ಮತ್ತು ಅತಿ ದೊಡ್ಡ ರಫ್ತು ಮಾರುಕಟ್ಟೆಯಾಗಿದೆ(Export Market) ಭಾರತದ ವಿದೇಶಿ ಬಂಡವಾಳ ಹೂಡಿಕೆಯಲ್ಲಿ(Foreign Investment) ಅಮೆರಿಕದ ಕಂಪೆನಿಗಳ ಪಾತ್ರ ದೊಡ್ಡದಿದೆ. ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧ ಕೊವೀಡ್‌(Covid19) ಸಮಸ್ಯೆಯ ಪರಿಹಾರ, ಹವಾಮಾನ ಬದಲಾವಣೆ, ಬಾಹ್ಯಾಕಾಶ ಸಂಶೋಧನೆ ಸೇರಿದಂತೆ ವಿವಿಧ ಆಯಾಮಗಳಲ್ಲಿ ವಿಸ್ತಾರಗೊಳ್ಳುತ್ತಿದೆ ಎಂದು ಅವರು ಹೇಳಿದರು.

ಸಾಂಕ್ರಾಮಿಕ ಸಂದರ್ಭದಲ್ಲಿ ಉಭಯ ದೇಶಗಳ ಟೆಕ್‌ ಕಂಪೆನಿಗಳು ಸಾಫ್ಟ್‌ವೇರ್‌ ಅಭಿವೃದ್ಧಿ, ದತ್ತಾಂಶ ಪ್ರೇರಿತ ಗ್ರಾಹಕ ಸೇವೆ, ಯುಎಸ್‌ ಸಂಸ್ಥೆಗಳಿಗೆ ಅಗತ್ಯ ನೆರವು ನೀಡಿದೆ ಎಂದ ಅವರು, ಬೆಂಗಳೂರು ಅಮೆರಿಕದ ವಿದೇಶಿ ಬಂಡವಾಳ ಹೂಡಿಕೆಯ ದೊಡ್ಡ ಫಲಾನುಭವಿ. ಈ ನಗರದಲ್ಲಿ ಗುಣಮಟ್ಟದ ಹೂಡಿಕೆ ಆಗುತ್ತಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

2022ರ ಸೆಲೆಕ್ಟ್ ಯುಎಸ್‌ಎ ಹೂಡಿಕೆ ಶೃಂಗಸಭೆಗೆ(USA Investment Summit) ಭಾರತದ ಟೆಕ್‌ ಕಂಪೆನಿಗಳನ್ನು ಸ್ವಾಗತಿಸುತ್ತೇನೆ. ಈ ಶೃಂಗಸಭೆಯಲ್ಲಿ ಯುಎಸ್‌ ಮಾರುಕಟ್ಟೆಯನ್ನು ಪ್ರವೇಶಿಸಲು ಬಯಸುವ ಟೆಕ್‌ ಕಂಪೆನಿಗಳಿಗೆಂದೇ ಸೆಲೆಕ್ಟ್ ಯುಎಸ್‌ಎ ಟೆಕ್‌ ಎಂಬ ವಿಭಾಗವಿದ್ದು ಸಂಭವನೀಯ ಟೆಕ್‌ ಹೂಡಿಕೆದಾರರಿಗೆ ಅಗತ್ಯವಾದ ಸಂಪನ್ಮೂಲ ಒಂದೆಡೆ ಸಿಗಲಿದೆ ಎಂದು ಅಮೆರಿಕದ ಕಾನ್ಸಲ್‌ ಜನರಲ್‌ ಜುಡೀತ್‌ ರವೀನ್‌ ತಿಳಿಸಿದ್ದಾರೆ. 

ಮಹಿಳಾ ಉದ್ಯಮಿಗಳಿಗಾಗಿ ಪ್ರತ್ಯೇಕ ಆರ್ಥಿಕ ಸಂಸ್ಥೆ: ಸಿಎಂ ಬೊಮ್ಮಾಯಿ

ಬೆಂಗಳೂರು ಟೆಕ್‌ ಶೃಂಗಕ್ಕೆ ಯಶಸ್ವಿ ತೆರೆ

ಸುಮಾರು ನಾಲ್ಕು ಕೋಟಿ ಜನರನ್ನು ತಲುಪಿದ, 48 ದೇಶಗಳ ಪ್ರತಿನಿಧಿಗಳನ್ನು ಸೆಳೆದ, ತಂತ್ರಜ್ಞಾನದ ಹೊಸ ಜಗತ್ತಿಗೆ ಇಡೀ ಕರ್ನಾಟಕವನ್ನು(Karnataka) ವೇದಿಕೆ ಮಾಡುವ ಸಂಕಲ್ಪದೊಂದಿಗೆ ನವೆಂಬರ್‌ 17 ರಿಂದ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ(Bengaluru) ನಡೆದ 24ನೇ ಬೆಂಗಳೂರು ತಂತ್ರಜ್ಞಾನ ಶೃಂಗಸಭೆ(Bengaluru Tech Summit) ಯಶಸ್ವಿಯಾಗಿ ಮುಕ್ತಾಯಗೊಂಡಿತು.

ದೊಡ್ಡ ಹೂಡಿಕೆ ನಿರೀಕ್ಷೆ:

ಬಿಟಿಎಸ್‌-2021ರಲ್ಲಿ ವಿವಿಧ ಉದ್ದಿಮೆಗಳಿಂದ ಈಗಾಗಲೇ 5000 ಕೋಟಿ ರು.ಗಳ ಹೂಡಿಕೆ ರಾಜ್ಯಕ್ಕೆ ಬರುವುದು ಪ್ರಾಥಮಿಕ ಅಂದಾಜಿನ ಮೂಲಕ ಖಚಿತವಾಗಿದೆ. ಆದರೆ ವಿಧಾನ ಪರಿಷತ್‌ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿದ್ದು ಒಡಂಬಡಿಕೆಗಳಿಗೆ ಸಹಿ ಹಾಕಲು ಸಾಧ್ಯವಾಗಿಲ್ಲ. ಚುನಾವಣೆ ಮುಕ್ತಾಯದ ಬಳಿಕ ಒಪ್ಪಂದಗಳಿಗೆ ಸಹಿ ಬೀಳಲಿದ್ದು ಇನ್ನೂ ದೊಡ್ಡ ಮೊತ್ತದ ಹೂಡಿಕೆ ನಿರೀಕ್ಷಿಸಲಾಗಿದೆ ಎಂದು ಮಾಹಿತಿ ತಂತ್ರಜ್ಞಾನ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.
 

Follow Us:
Download App:
  • android
  • ios