ಅಮೆಜಾನ್ ತನ್ನ 10ನೇ ವಾರ್ಷಿಕೋತ್ಸವದ ಅಂಗವಾಗಿ 'ಪ್ರೈಮ್ ಡೇ 2026' ಸೇಲ್ ಅನ್ನು ಜುಲೈ 4 ರಿಂದ 6 ರವರೆಗೆ ಘೋಷಿಸಿದೆ. ಈ 72 ಗಂಟೆಗಳ ಮೇಳದಲ್ಲಿ, ಪ್ರೈಮ್ ಸದಸ್ಯರಿಗೆ ಸ್ಮಾರ್ಟ್‌ಫೋನ್‌ಗಳು, ಎಲೆಕ್ಟ್ರಾನಿಕ್ಸ್, ಮತ್ತು ಗೃಹೋಪಯೋಗಿ ವಸ್ತುಗಳ ಮೇಲೆ ಭಾರಿ ರಿಯಾಯಿತಿಗಳು ಲಭ್ಯವಿರಲಿವೆ.

ಆನ್‌ಲೈನ್ ಶಾಪಿಂಗ್ ಪ್ರಿಯರಿಗೆ ಅಮೆಜಾನ್ ಸಿಹಿ ಸುದ್ದಿ ನೀಡಿದೆ. ಭಾರತದಲ್ಲಿ ತನ್ನ ಪ್ರೈಮ್ ಡೇ ಸೇಲ್‌ನ 10ನೇ ವಾರ್ಷಿಕೋತ್ಸವದ ಅಂಗವಾಗಿ 'ಅಮೆಜಾನ್ ಪ್ರೈಮ್ ಡೇ 2026' ದಿನಾಂಕಗಳನ್ನು ಘೋಷಿಸಿದೆ. ಈ ವರ್ಷ ಜುಲೈ 4 ರಿಂದ ಜುಲೈ 6 ರವರೆಗೆ ಸತತ 72 ಗಂಟೆಗಳ ಕಾಲ ಈ ಬೃಹತ್ ಮಾರಾಟ ಮೇಳ ನಡೆಯಲಿದೆ. ಕೇವಲ ಪ್ರೈಮ್ ಸದಸ್ಯರಿಗಾಗಿ ನಡೆಯುವ ಈ ಮೇಳದಲ್ಲಿ 300ಕ್ಕೂ ಹೆಚ್ಚು ಬ್ರಾಂಡ್‌ಗಳ 15,000ಕ್ಕೂ ಅಧಿಕ ಉತ್ಪನ್ನಗಳ ಮೇಲೆ ವರ್ಷದ ಅತ್ಯಂತ ಕಡಿಮೆ ಬೆಲೆಯ ಆಫರ್‌ಗಳನ್ನು ನೀಡಲಾಗುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪ್ರೈಮ್ ಮೆಂಬರ್‌ಶಿಪ್ ಮೇಲೆ ಭರ್ಜರಿ ರಿಯಾಯಿತಿ:

  • ಈ ವಿಶೇಷ ಸಂಭ್ರಮಕ್ಕಾಗಿ ಅಮೆಜಾನ್ ತನ್ನ ಮೆಂಬರ್‌ಶಿಪ್ ದರವನ್ನು ಗಣನೀಯವಾಗಿ ಇಳಿಸಿದೆ.
  • ವಾರ್ಷಿಕ ಪ್ರೈಮ್ (Annual Prime): 999 ರೂ. (500 ರೂ. ರಿಯಾಯಿತಿ).
  • ಪ್ರೈಮ್ ಲೈಟ್ (Prime Lite): 599 ರೂ. (200 ರೂ. ರಿಯಾಯಿತಿ).
  • ಶಾಪಿಂಗ್ ಎಡಿಷನ್: ಕೇವಲ 299 ರೂ.ಗೆ ಲಭ್ಯವಿರಲಿದೆ.

ಬ್ಯಾಂಕ್ ಆಫರ್‌ಗಳು ಮತ್ತು ಕ್ಯಾಶ್‌ಬ್ಯಾಕ್:

ಗ್ರಾಹಕರು ಎಸ್‌ಬಿಐ (SBI) ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಹಾಗೂ ಆಕ್ಸಿಸ್ (Axis) ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ಪಾವತಿಸಿದರೆ ಶೇ. 10 ರಷ್ಟು ತಕ್ಷಣದ ರಿಯಾಯಿತಿ (Instant Discount) ಪಡೆಯಬಹುದು. ಅಲ್ಲದೆ, ಅಮೆಜಾನ್ ಪೇ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿರುವ ಪ್ರೈಮ್ ಸದಸ್ಯರಿಗೆ ಶೇ. 5 ರಷ್ಟು ಅನ್ಲಿಮಿಟೆಡ್ ಕ್ಯಾಶ್‌ಬ್ಯಾಕ್ ಸೌಲಭ್ಯವೂ ಸಿಗಲಿದೆ.

ಸ್ಮಾರ್ಟ್‌ಫೋನ್ ಮತ್ತು ಎಲೆಕ್ಟ್ರಾನಿಕ್ಸ್ ಮೇಲೆ ಆಫರ್ ಮಳೆ:

ಈ ಬಾರಿಯ ಸೇಲ್‌ನಲ್ಲಿ ಪ್ರಮುಖ ಆಕರ್ಷಣೆ ಎಂದರೆ ಸ್ಮಾರ್ಟ್‌ಫೋನ್‌ಗಳು.

ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಅಲ್ಟ್ರಾ: ಈ ಪ್ರೀಮಿಯಂ ಫೋನ್ 84,999 ರೂ.ಗಳ ಆರಂಭಿಕ ಬೆಲೆಯಲ್ಲಿ ಲಭ್ಯವಿರಲಿದೆ. ಇದಕ್ಕೆ 15,000 ರೂ.ಗಳ ಹೆಚ್ಚುವರಿ ಡಿಸ್ಕೌಂಟ್ ಕೂಡ ಸಿಗಲಿದೆ.

ಒನ್‌ಪ್ಲಸ್ 13: ಇದು 49,999 ರೂ.ಗಳಿಂದ ಪ್ರಾರಂಭವಾಗಲಿದೆ.

ಐಫೋನ್ 17 ಸರಣಿ: ಐಫೋನ್‌ನ ಹೊಸ ಸರಣಿಯ ಮೇಲೆಯೂ ಆಕರ್ಷಕ ಆಫರ್‌ಗಳನ್ನು ಅಮೆಜಾನ್ ಘೋಷಿಸಿದೆ.

ಲ್ಯಾಪ್‌ಟಾಪ್ ಮತ್ತು ಟ್ಯಾಬ್ಲೆಟ್‌ಗಳ ಮೇಲೆ ಶೇ. 40 ರಷ್ಟು, ಆಡಿಯೋ ಮತ್ತು ವೇರಬಲ್ ಡಿವೈಸ್‌ಗಳ ಮೇಲೆ ಶೇ. 80 ರಷ್ಟು ರಿಯಾಯಿತಿ ಇರಲಿದೆ. ಗೋಪ್ರೊ ಹೀರೋ 13 ಬ್ಲ್ಯಾಕ್ ಮೇಲೆ ಶೇ. 75 ರಷ್ಟು ಡಿಸ್ಕೌಂಟ್ ನಿರೀಕ್ಷಿಸಬಹುದು.

ಗೃಹೋಪಯೋಗಿ ವಸ್ತುಗಳು ಮತ್ತು ಸ್ಮಾರ್ಟ್ ಡಿವೈಸ್‌ಗಳು:

ಸ್ಯಾಮ್‌ಸಂಗ್, ಎಲ್‌ಜಿ, ಸೋನಿ ಮತ್ತು ಟಿಸಿಎಲ್ ಕಂಪನಿಯ ಸ್ಮಾರ್ಟ್ ಟಿವಿಗಳ ಮೇಲೆ ಶೇ. 65 ರಷ್ಟು ರಿಯಾಯಿತಿ ಇದೆ. ರೆಫ್ರಿಜರೇಟರ್, ವಾಷಿಂಗ್ ಮೆಷಿನ್ ಮತ್ತು ಎಸಿಗಳ ಮೇಲೆ ಶೇ. 65 ರಷ್ಟು ರಿಯಾಯಿತಿ ನೀಡಲಾಗುತ್ತಿದ್ದು, 15,000 ರೂ.ಗಳವರೆಗೆ ಎಕ್ಸ್ಚೇಂಜ್ ಬೋನಸ್ ಕೂಡ ಪಡೆಯಬಹುದು. ಅಮೆಜಾನ್‌ನ ಎಕೋ ಡಾಟ್ ಮ್ಯಾಕ್ಸ್ 8,999 ರೂ.ಗೆ ಮತ್ತು ಫೈರ್ ಟಿವಿ ಸ್ಟಿಕ್‌ಗಳು ಶೇ. 45 ರಷ್ಟು ರಿಯಾಯಿತಿಯಲ್ಲಿ ದೊರೆಯಲಿವೆ.

ಫ್ಯಾಷನ್ ಮತ್ತು ಜೀವನಶೈಲಿ:

ಬಟ್ಟೆಗಳು, ಪಾದರಕ್ಷೆಗಳು ಮತ್ತು ಸೌಂದರ್ಯವರ್ಧಕ ಉತ್ಪನ್ನಗಳ ಮೇಲೆ ಶೇ. 50 ರಿಂದ 65 ರಷ್ಟು ರಿಯಾಯಿತಿ ಇರಲಿದೆ. ಸ್ಕೆಚರ್ಸ್, ಗ್ಯಾಪ್ ಮತ್ತು ಫಾಸಿಲ್‌ನಂತಹ ಪ್ರಮುಖ ಬ್ರಾಂಡ್‌ಗಳು ಈ ಪಟ್ಟಿಯಲ್ಲಿವೆ. ದಿನಸಿ ಮತ್ತು ಮನೆಗೆ ಬೇಕಾದ ಅಗತ್ಯ ವಸ್ತುಗಳ ಮೇಲೆ ಶೇ. 60 ರಷ್ಟು ಡಿಸ್ಕೌಂಟ್ ಜೊತೆಗೆ ಆಯ್ದ ಖರೀದಿಗಳ ಮೇಲೆ 250 ರೂ. ಕ್ಯಾಶ್‌ಬ್ಯಾಕ್ ನೀಡಲಾಗುತ್ತಿದೆ.

ಒಟ್ಟಾರೆಯಾಗಿ, ಈ ಬಾರಿಯ ಅಮೆಜಾನ್ ಪ್ರೈಮ್ ಡೇ ಸೇಲ್ ಹೊಸ ಉತ್ಪನ್ನಗಳ ಬಿಡುಗಡೆ ಹಾಗೂ ಭರ್ಜರಿ ಆಫರ್‌ಗಳ ಮೂಲಕ ಗ್ರಾಹಕರಿಗೆ ದೊಡ್ಡ ಉಳಿತಾಯದ ಅವಕಾಶವನ್ನು ಕಲ್ಪಿಸಿದೆ.