ರೇಣುಕಾಸ್ವಾಮಿ ಪ್ರಕರಣದಲ್ಲಿ ಆರೋಪಿ ಪ್ರದೋಶ್ ಮಾಫಿ ಸಾಕ್ಷಿಯಾಗುವುದನ್ನು ತಡೆಯಲು ನಟ ದರ್ಶನ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ದರ್ಶನ್ ಹೈಕೋರ್ಟ್ ಬಳಿ ಮಾಡಿದ ಮನವಿ ಏನು ಅನ್ನೋ ವಿವರ ಈ ಸ್ಟೋರಿಯಲ್ಲಿದೆ..

ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ (darshan thoogudeepa) ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಾಲ ಕಳೆಯುತ್ತಿದ್ದಾರೆ. ಪ್ರಕರಣವು ವಿಚಾರಣೆ ಹಂತದಲ್ಲಿರುವಾಗಲೇ ಆರೋಪಿ ಪ್ರದೋಶ್ ಮಾಫಿ ಸಾಕ್ಷಿ ಹೇಳಲು ಮುಂದಾಗಿರೋದು ದರ್ಶನ್‌ಗೆ ಚಿಂತೆಯನ್ನುಂಟು ಮಾಡಿದೆ.

ಇದೀಗ ಮಾಫಿ ಸಾಕ್ಷಿ ದಾಖಲು ಮಾಡದಂತೆ ದರ್ಶನ್‌ ಹೈಕೋರ್ಟ್‌ಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಿದ್ದಾರೆ. ಪ್ರದೋಶ್ ಮೇಲೆಯೂ ಗಂಭೀರ ಆರೋಪ ಕೇಳಿ ಬಂದಿದೆ. ತನಿಖೆ ಮುಕ್ತಾಯ ಆಗುವವರೆಗೂ ಮಾಫಿ ಸಾಕ್ಷಿ ದಾಖಲು ಮಾಡದಂತೆ ದರ್ಶನ್ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ. ಸೆಷನ್ಸ್ ಕೋರ್ಟ್ ಆದೇಶವನ್ನು ಪ್ರಶ್ನಿಸಿ ದರ್ಶನ್ ಅರ್ಜಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ದರ್ಶನ್ ಅವರ ಅರ್ಜಿಯನ್ನು ಹೈಕೋರ್ಟ್‌ ನಾಳೆ ವಿಚಾರಣೆ ನಡೆಸಲಿದೆ. ಪ್ರದೋಷ್ ಮೊಬೈಲ್ ದುರ್ಬಳಕೆ ಮಾಡಿಕೊಂಡಿದ್ದಾರೆ. ಜೈಲಾಧಿಕಾರಿಗಳ ಬಳಿ ಬದಲು ಮೊಬೈಲ್ ನಂಬರ್ ಕೊಟ್ಟಿದ್ದಾರೆ. ಮಾಫಿ ಸಾಕ್ಷಿಗೆ ಒತ್ತಡ ಹೇರಲಾಗಿದೆ ಎಂದು ದರ್ಶನ್ ಆರೋಪ ಮಾಡಿದ್ದಾರೆ. ಈ ನಡುವೆ ದರ್ಶನ್ ಮತ್ತೊಮ್ಮೆ ಹೈಕೋರ್ಟ್‌ಗೆ ಹೋಗಿದ್ದಾರೆ.

ಇತ್ತೀಚೆಗೆ ದರ್ಶನ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಸೆಷನ್ಸ್ ಕೋರ್ಟ್‌ನ ವಿಚಾರಣೆ ವೇಳೆ ತಮ್ಮನ್ನು ದೈಹಿಕವಾಗಿ ತಮ್ಮನ್ನು ಹಾಜರುಪಡಿಸುವಂತೆ ಮಾಡಿದ್ದ ಮನವಿಯನ್ನು ಹೈಕೋರ್ಟ್​ ಪುರಸ್ಕರಿಸಿದೆ. ಈ ಕೋರಿಕೆಯನ್ನು ವಿಚಾರಣಾ ನ್ಯಾಯಾಲಯ ವಜಾ ಮಾಡಿತ್ತು. ಇದನ್ನು ಪ್ರಶ್ನಿಸಿ ದರ್ಶನ್​ ಅವರು, ಪತ್ನಿ ವಿಜಯಲಕ್ಷ್ಮಿ ಮೂಲಕ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರು ಈ ಅನುಮತಿಯನ್ನು ನೀಡಿದೆ.

ಪ್ರಕರಣದ ಪ್ರಮುಖ ಸಾಕ್ಷಿಗಳ ವಿಚಾರಣೆ ವೇಳೆ ಕೋರ್ಟ್‌ಗೆ ದರ್ಶನ್​ ಅವರು ಇನ್ಮುಂದೆ ಖುದ್ದು ಹಾಜರಾಗಬಹುದಾಗಿದೆ. ಇಲ್ಲಿಯವರೆಗೆ ಅವರು ವಿಡಿಯೋ ಕಾನ್​ಫರೆನ್ಸ್​ ಮೂಲಕ ಹಾಜರಾಗುತ್ತಿದ್ದರು. ಸಾಕ್ಷಿಗಳ ಪಾಟಿ ಸವಾಲಿನ ವೇಳೆ ತಮ್ಮ ವಕೀಲರೊಂದಿಗೆ ಸಮಾಲೋಚನೆ ನಡೆಸಲು ಹಾಗೂ ಸಾಕ್ಷಿಗಳನ್ನು ಮುಖಾಮುಖಿ ವೀಕ್ಷಿಸಲು ತಮಗೆ ಖುದ್ದು ಹಾಜರಾತಿಗೆ ಅವಕಾಶ ನೀಡಬೇಕೆಂದು ದರ್ಶನ್ ಕೋರಿದ್ದರು. ಅದನ್ನು ಕೋರ್ಟ್​ ಈಗ ಮಾನ್ಯ ಮಾಡಿದೆ. ಈ ಮೂಲಕ, ಪ್ರಕರಣದ 7 ಪ್ರಮುಖ ಸಾಕ್ಷಿಗಳ ಮುಖ್ಯ ವಿಚಾರಣೆ ಮುಕ್ತಾಯಗೊಂಡ ನಂತರ, ಅವರ 'ಪಾಟಿ ಸವಾಲು' ನಡೆಸುವ ಸಮಯದಲ್ಲಿ ನಟ ದರ್ಶನ್ ಖುದ್ದು ಹಾಜರಿರಲು ಹೈಕೋರ್ಟ್ ಅನುಮತಿ ನೀಡಿದೆ.

ವಿಚಾರಣೆ ವೇಳೆ ಪೀಠವು ಸಿಆರ್‌ಪಿಸಿ ನಿಯಮಗಳನ್ನು ಉಲ್ಲೇಖಿಸಿದೆ. ಸಿಆರ್‌ಪಿಸಿ ಕಾಯ್ದೆಯ ಪ್ರಕಾರ ವಿಚಾರಣೆ ವೇಳೆ ಆರೋಪಿಯನ್ನು ಖುದ್ದು ನ್ಯಾಯಾಲಯಕ್ಕೆ ಕರೆತರಲು ಅವಕಾಶವಿದೆ. ದರ್ಶನ್ ಸದ್ಯಕ್ಕೆ ಕೇವಲ ಆರೋಪಿಯಷ್ಟೇ. ಅವರು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ, ಇದರ ಅರ್ಥ ಅವರು ನ್ಯಾಯಾಲಯದ ವಶದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ, ಆರೋಪಿಯ ರಕ್ಷಣೆ ಮಾಡುವುದು ನ್ಯಾಯಾಲಯದ ಕರ್ತವ್ಯ ಮತ್ತು ಹೊಣೆಯಾಗಿದೆ ಎಂದು ನ್ಯಾಯಮೂರ್ತಿಗಳು ತಿಳಿಸಿದ್ದಾರೆ.

ಜೈಲಲ್ಲಿ ಕಣ್ಣೀರು ಇಟ್ಟಿರುವ ಪವಿತ್ರಗೌಡ 

ಇನ್ನು, ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಸಿಲುಕಿರುವ ದರ್ಶನ್​ ಅವರ ಸ್ನೇಹಿತೆ ಪವಿತ್ರಾ ಗೌಡ (Pavitra Gowda) ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಇಂದು ಸೆಷನ್ಸ್​ ಕೋರ್ಟ್​ ನಡೆಸಿತು. ಈ ಸಂದರ್ಭದಲ್ಲಿ ಪವಿತ್ರಾ ಗೌಡ ಅವರು ಜೈಲಿನಲ್ಲಿ ಅನುಭವಿಸುತ್ತಿರುವ ಹಿಂಸೆ, ಮಾನಸಿಕ ಯಾತನೆ ಮತ್ತು ನೋವಿನ ಕುರಿತು ಅವರ ಪರ ವಕೀಲ ಎನ್​.ಬಾಲನ್ ಅವರು ಕೋರ್ಟ್​ ಗಮನಕ್ಕೆ ತಂದರು. ಇದೇ ವೇಳೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಭಾಗಿಯಾಗಿದ್ದ ಪವಿತ್ರಾ ಗೌಡ ಅವರು ಕೂಡ ನ್ಯಾಯಾಧೀಶರ ಮುಂದೆ ಕಣ್ಣೀರು ಹಾಕಿರುವ ಘಟನೆ ನಡೆದಿದೆ.