ಪ್ರತಿ ವರ್ಷದ ಆರಂಭದಲ್ಲಿ ಈ ಹೊಸ ವರ್ಷದ ಆಚರಣೆಯು ಮುಖ್ಯವಾಗಿ 'ನಾನು' ಎಂಬುವುದರಿಂದ ಪ್ರಾರಂಭವಾಗುತ್ತದೆ. ನ್ಯೂ ಇಯರ್ ರೆಸೊಲ್ಯೂಷನ್ ಎಂಬ ಘೋಷಣೆಗಳಿಂದ ತುಂಬಿರುತ್ತದೆ. ಜೀವನದಲ್ಲಿ ಹೊಸ ಬದಲಾವಣೆ ತರಬೇಕೆಂಬ ನಿರ್ಧಾರಗಳ ಮೂಲಕ ಡಿವೋರ್ಸ್ ಹೆಚ್ಚಳ ಆಗುತ್ತಿದೆ.

ಡಿವೋರ್ಸ್ ಮಂಥ್

ಇದೊಂದು ಹೇಳಲೂ ಕಷ್ಟ ಎನ್ನಿಸುವ ಸಂಗತಿ.. ಆದರೆ, ಹೀಗೊಂದು ಪ್ರತೀತಿ ಇರೋದಂತೂ ನಿಜ.. ಅದೇನು ಗೊತ್ತಾ? ಪ್ರತಿ ವರ್ಷದ ಆರಂಭದ ತಿಂಗಳು ಜನವರಿಯನ್ನು 'ಡಿವೋರ್ಸ್ ಮಂಥ್' ಎನ್ನಲಾಗುತ್ತದೆ. ಇದೇನು ಜಗತ್ತು ಅಥವಾ ಭಾರತ ಘೋಷಣೆ ಮಾಡಿದ್ದಲ್ಲ. ಆದರೆ, ವರ್ಷಪೂರ್ತಿಯ ಡಿವೋರ್ಸ್ ಅಂಕಿ-ಅಂಶಗಳನ್ನು ನೋಡಿದರೆ, ಅಚ್ಚರಿ ಎಂಬಂತೆ ಈ ಜನವರಿ ತಿಂಗಳಲ್ಲೇ ಹೆಚ್ಚಿನ ವಿಚ್ಛೇದನಗಳು ಸಂಭವಿಸುತ್ತವೆ.

ಪ್ರತಿ ಹೊಸ ವರ್ಷದ ಆರಂಭದಲ್ಲಿ ಸೋಷಿಯಲ್ ಮೀಡಿಯಾಗಳಲ್ಲಿ ಈ ಹೊಸ ವರ್ಷದ ಆಚರಣೆಯು ಮುಖ್ಯವಾಗಿ 'ನಾನು' ಎಂಬುವುದರಿಂದ ಪ್ರಾರಂಭವಾಗುತ್ತದೆ. ನ್ಯೂ ಇಯರ್ ರೆಸೊಲ್ಯೂಷನ್ (New Year, New Year Resolution) ಎಂಬ ಘೋಷಣೆಗಳಿಂದ ತುಂಬಿರುತ್ತದೆ. ಜೀವನದಲ್ಲಿ ಹೊಸ ಬದಲಾವಣೆ ತರಬೇಕೆಂಬ ನಿರ್ಧಾರಗಳಪ್ರತಿ ಹೊಸ ವರ್ಷದ ಆರಂಭದಲ್ಲಿ ಸೋಷಿಯಲ್ ಮೀಡಿಯಾಗಳಲ್ಲಿ ಈ ಹೊಸ ವರ್ಷದ ಆಚರಣೆಯು ಮುಖ್ಯವಾಗಿ 'ನಾನು' ಎಂಬುವುದರಿಂದ ಪ್ರಾರಂಭವಾಗುತ್ತದೆ. ನ್ಯೂ ಇಯರ್ ರೆಸೊಲ್ಯೂಷನ್ (New Year, New Year Resolution) ಎಂಬ ಘೋಷಣೆಗಳಿಂದ ತುಂಬಿರುತ್ತದೆ. ಜೀವನದಲ್ಲಿ ಹೊಸ ಬದಲಾವಣೆ ತರಬೇಕೆಂಬ ನಿರ್ಧಾರಗಳ ನಡುವೆ, ಅನೇಕ ದಂಪತಿಗಳು ಅನಿರೀಕ್ಷಿತವಾಗಿ ಹೊಸತನ ಎಂಬಂತೆ, ವಿಚ್ಚೇದನ ಎಂಬ ದಾರಿಯನ್ನು ಆಯ್ದುಕೊಳ್ಳುತ್ತಾರೆ.

ಇದೇ ಕಾರಣಕ್ಕೆ, ಕಾನೂನು ವಲಯದಲ್ಲಿ ಜನವರಿಯನ್ನು ಅನೌಪಚಾರಿಕವಾಗಿ ವಿಚ್ಚೇದನ ತಿಂಗಳು (Divorce Month) ಎಂದು ಕರೆಯಲಾಗುತ್ತದೆ.

ಒಂದು ಕಡೆ ಹೊಸ ಆಸೆಗಳ ಸಂಭ್ರಮ ನಡೆಯುತ್ತಿದ್ದರೆ, ಇನ್ನೊಂದು ಕಡೆ ಫ್ಯಾಮಿಲಿ ಕೋರ್ಟ್‌ಗಳು ವಿಚ್ಛೇದನ ಅರ್ಜಿಗಳಿಂದ ತುಂಬಿಹೋಗುತ್ತಿವೆ. ಶಾಕಿಂಗ್ ಫಾಕ್ಟ್‌ ಎಂದರೆ- ಹೆಚ್ಚಿನ ಡಿವೋರ್ಸ್ ಅರ್ಜಿಗಳು ಜನವರಿ ತಿಂಗಳಲ್ಲೇ ದಾಖಲಾಗುತ್ತಿವೆ. ಪ್ರತಿವರ್ಷ ಕೂಡ ಹಾಗೇ ಆಗುವ ಮೂಲಕ ವರ್ಷದ ಮೊದಲ ತಿಂಗಳು ಜನವರಿ ಈ ಕುಖ್ಯಾತಿಗೆ ಕಾರಣವಾಗಿದೆ.

ಕೇವಲ ಕಾಕತಾಳೀಯವಲ್ಲ

ಆದರೆ, ಇದು ಕೇವಲ ಕಾಕತಾಳೀಯವಲ್ಲ ಇದರ ಹಿಂದೆ ಮಾನಸಿಕ ಹಾಗೂ ಸಾಮಾಜಿಕ ಕಾರಣಗಳ ಸರಣಿಯೇ ಇದೆ. ಪ್ರತಿ ವರ್ಷ ಜನವರಿ ಬಂದಾಗ ಸಂಕ್ರಾಂತಿ ಹಬ್ಬದ ಸಂಭ್ರಮ ಮನೆಮಾಡಿದರೂ, ಇದೇ ತಿಂಗಳ ಬಗ್ಗೆ ಶಾಕಿಂಗ್ ವರದಿಗಳು ಹೊರಬರುತ್ತಿರುವುದು ಕಾನೂನು ಹಾಗೂ ಮನೋವಿಜ್ಞಾನ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಅಂಕಿಅಂಶಗಳೇ ಸತ್ಯ ಹೇಳುತ್ತವೆ.

ಅಂಕಿಅಂಶಗಳು ಏನು ಹೇಳುತ್ತವೆ?

ವಾಷಿಂಗ್ಟನ್ ವಿಶ್ವವಿದ್ಯಾಲಯವು ದಶಕಗಳ ಕಾಲ ನಡೆಸಿದ ಸಂಶೋಧನೆಯ ಪ್ರಕಾರ, ಇತರ ತಿಂಗಳುಗಳಿಗೆ ಹೋಲಿಸಿದರೆ ಜನವರಿಯಲ್ಲಿ ವಿಚ್ಛೇದನ ಅರ್ಜಿಗಳ ಸಂಖ್ಯೆಯಲ್ಲಿ ಶೇ. 33 ರಷ್ಟು ಸಡನ್ ಭಾರಿ ಏರಿಕೆ ಕಂಡುಬರುತ್ತದೆ. ಇಂಟರ್ನೆಟ್ ಸರ್ಚ್ ಇಂಜಿನ್‌ಗಳಲ್ಲೂ 'ತ್ವರಿತ ವಿಚ್ಛೇದನ' ಅಥವಾ 'DIY ವಿಚ್ಚೇದನ' ಎಂಬ ಪದಗಳ ಹುಡುಕಾಟ ಈ ಅವಧಿಯಲ್ಲಿ ಗರಿಷ್ಠ ಮಟ್ಟ ತಲುಪುತ್ತದೆ ಎಂದು 'ರಿಚರ್ಡ್ ನೆಲ್ಸನ್ ಎಲ್‌ಎಲ್‌ಪಿ' ಸಂಸ್ಥೆ ನಡೆಸಿದ ವರದಿ ತಿಳಿಸಿದೆ.

ಜನವರಿಯಲ್ಲೇ ಯಾಕೆ ಹೀಗೆ?

ಕಾನೂನು ಪರಿಣಿತರ ಪ್ರಕಾರ, ಈ "ಪ್ರತ್ಯೇಕತೆಯ ಟ್ರೆಂಡ್"ಗೆ ಕೆಲವು ಪ್ರಮುಖ ಕಾರಣಗಳು ಇಲ್ಲಿವೆ:

1. ಹಬ್ಬದ ದಿನಗಳ ಹಳೇ ಒತ್ತಡ: ದಂಪತಿಗಳ ನಡುವೆ ಸಮಸ್ಯೆಗಳಿದ್ದರೂ, ಡಿಸೆಂಬರ್ ತಿಂಗಳ ಕ್ರಿಸ್‌ಮಸ್‌ ಮತ್ತು ಹೊಸ ವರ್ಷದ ಸಂಭ್ರಮಕ್ಕೆ ಅಡ್ಡಿಯಾಗಬಾರದು ಎಂದು ಅನೇಕರು ಯೋಚಿಸಿ ಸಮಾಧಾನದಿಂದ ಇರುತ್ತಾರೆ. ಸಂಗಾತಿಯೊಂದಿಗೆ ಇದು ನಮ್ಮ ಕೊನೆಯ ಆಚರಣೆಯಾಗಲಿ ಎಂದುಕೊಂಡೇ ರಜಾದಿನಗಳನ್ನು ಕಳೆಯುವ ದಂಪತಿಗಳ ಸಂಖ್ಯೆ ದೊಡ್ಡದಿದೆ ಎನ್ನುತ್ತಾರೆ ಮನೋವೈದ್ಯ ಡಾ. ಕರೆನ್ ಫಿಲಿಪ್ಸ್.

2. ರಜಾದಿನಗಳ ಆರ್ಥಿಕ ಮತ್ತು ಕೌಟುಂಬಿಕ ಹೊರೆ: ಡಿಸೆಂಬರ್‌ ತಿಂಗಳಲ್ಲಿ ಉಂಟಾಗುವ ಅತಿಯಾದ ಖರ್ಚು, ಕುಟುಂಬದ ಸದಸ್ಯರ ಭೇಟಿಯಿಂದ ಉಂಟಾಗುವ ಮಾನಸಿಕ ಒತ್ತಡಗಳು ಇರೋ ಸಂಬಂಧಗಳಲ್ಲಿನ ಹಳೆಯ ಬಿರುಕುಗಳನ್ನು ಮತ್ತಷ್ಟು ದೊಡ್ಡದು ಮಾಡುತ್ತವೆ. ಈ ಹೊರೆ ಇಳಿಸಿಕೊಳ್ಳಲು ಜನವರಿ ಉತ್ತಮ ಸಮಯ ಎಂದು ಹಲವರಿಗೆ ಅನಿಸುತ್ತದೆ ಎಂಬ ಮಾತು ಕೇಳೀಬರುತ್ತಿದೆ.

3. ಹೊಸ ವರ್ಷ-ಹೊಸ ಆರಂಭ'ದ ನಿರ್ಣಯ: ಹೊಸ ವರ್ಷವು ಹೊಸ ಆರಂಭದ ಸಂಕೇತ. ಅತೃಪ್ತ ದಾಂಪತ್ಯ ಜೀವನ ನಡೆಸುತ್ತಿರುವವರು ತಮ್ಮ ವೈಯಕ್ತಿಕ ಯೋಗಕ್ಷೇಮ ಮತ್ತು ಸಂತೋಷಕ್ಕಾಗಿ ಈ ಭಾರವಾದ ಸಂಬಂಧದಿಂದ ಮುಕ್ತಿ ಪಡೆದು ಹೊಸ ಜೀವನ ಆರಂಭಿಸಲು ಜನವರಿಯಲ್ಲೇ ಇಂತಹ ನಿರ್ಧಾರ ಮಾಡುತ್ತಾರೆ.

4. ಕಾನೂನು ಹಾಗೂ ಆರ್ಥಿಕ ಅನುಕೂಲ: ಜನವರಿ ಹೊಸ ಆರ್ಥಿಕ ವರ್ಷದ ಆರಂಭ ಸೂಚಿಸುವುದರಿಂದ, ತೆರಿಗೆ ಪ್ರಯೋಜನಗಳು, ಆರೋಗ್ಯ ವಿಮೆ ಮತ್ತು ಆಸ್ತಿ ಹಂಚಿಕೆಯಂತಹ ಕಾನೂನು ಪ್ರಕ್ರಿಯೆಗಳಿಗೆ ಈ ಸಮಯ ಹೆಚ್ಚು ಅನುಕೂಲಕರ ಎಂಬುದು ತಜ್ಞರ ಅಭಿಪ್ರಾಯ. ಈ ಅಂಶ ಡಿವೋರ್ಸ್‌ಗೆ ವರವಾಗುತ್ತಿದೆ.

ಪರಿಹಾರವೇನು? ತಜ್ಞರ ಸಲಹೆ:

ಜೀವನದಲ್ಲಿ ಯಾವುದೇ ಸಮಸ್ಯೆಗೆ ವಿಚ್ಛೇದನವೇ ಅಂತಿಮ ಪರಿಹಾರವಲ್ಲ ಎಂದು ಕಾನೂನು ಮತ್ತು ಕುಟುಂಬ ಸಮಾಲೋಚಕರು (Counsellors) ಅಭಿಪ್ರಾಯಪಡುತ್ತಾರೆ. ಹೆಚ್ಚಿನ ಸಮಯಗಳಲ್ಲಿ, ಜೋಡಿಗಳು ಪರಸ್ಪರ ಮಾತುಕತೆಗಳಿಂದ ಸಂಸಾರದ ಸಂಬಂಧಗಳನ್ನು ಸರಿಪಡಿಸಿಕೊಳ್ಳಬಹುದು

ಮಾತುಕತೆ: ಗಂಡ-ಹೆಂಡತಿಯ ನಡುವೆ ಜಗಳ ಸಾಮಾನ್ಯ.. ಆದರೆ ಹೆಚ್ಚಿನ ಸಾರಿ ಮಾತುಕತೆಯಿಂದಲೇ ಅದನ್ನು ಬಗೆಹರಿಸಿಕೊಳ್ಳಬಹುದು.

ಸಮಾಲೋಚನೆ (Counseling): ವಿಚ್ಚೇದನದ ನಿರ್ಧಾರ ತೆಗೆದುಕೊಳ್ಳುವ ಮೊದಲು ವೃತ್ತಿಪರ ಸಮಾಲೋಚನೆ ಪಡೆಯುವುದು ಉತ್ತಮ.

ಕುಟುಂಬದ ಬೆಂಬಲ: ದಂಪತಿಗಳು ದೂರವಾಗಲು ಬಯಸಿದಾಗ, ಕುಟುಂಬದ ಹಿರಿಯರು ದಂಪತಿಗಳನ್ನು ದೂರ ಮಾಡುವ ಬದಲು, ಅವರನ್ನು ಒಂದುಗೂಡಿಸಲು ಪ್ರಯತ್ನಿಸಬೇಕು. ಬಹಳಷ್ಟು ಬಾರಇ ಇದು ಖಂಡಿತ ಪ್ರಯೋಜನ ನೀಡುತ್ತದೆ.

ಹೊರಗಿನವರ ಹಸ್ತಕ್ಷೇಪ ಬೇಡ: ದಂಪತಿಗಳ ನಡುವೆ ಬೆಂಕಿ ಹಚ್ಚುವ ಮೂರನೇ ವ್ಯಕ್ತಿಗಳಿಂದ ದೂರವಿರುವುದು ಸಂಬಂಧಕ್ಕೆ ಒಳ್ಳೆಯದು. ಒಮ್ಮೆ ಮನಸ್ತಾಪ ಇದ್ದರೆ ಅದನ್ನೂ ಆದಷ್ಟೂ ಹೊರಗಡೆ ಹೇಳಿಕೊಳ್ಳದೇ ತಮ್ಮತಮ್ಮಲ್ಲೇ ಬಗೆಹರಿಸಿಕೊಳ್ಳುವುದು ಉತ್ತಮ.

ಒಟ್ಟಿನಲ್ಲಿ, ಜನವರಿ ತಿಂಗಳಿಗೆ 'ಡಿವೋರ್ಸ್ ಮಂಥ್' ಎಂಬ ಕೆಟ್ಟ ಹಣೆಪಟ್ಟಿ ಇರುವುದಂತೂ ನಿಜ. ಅದನ್ನು ಕಳೆದುಕೊಂಡು ಈ ಜನವರಿ ತಿಂಗಳು ಬೇರೆ ತಿಂಗಳಿಗೆ ವರ್ಗಾಯಿಸವುದರ ಬದಲು, ಡಿವೋರ್ಸ್‌ಗ: ಸಂಖ್ಯೆಯಲ್ಲಿಯೇ ಇಳಿತ ಕಾಣಲಿ ಎಂದು ಜಗತ್ತು ಹಾರೈಸುತ್ತಿದೆ. ಆದರೆ, ಇದು ಸಾಧ್ಯವೇ? ಏಕೆಂದರೆ, ವರ್ಷಗಳು ಕಳೆದಂತೆ ಈ ವಿಚ್ಛೇದನಗಳ ಸಂಖ್ಯೆಯಲ್ಲೂ ಗಮನಾರ್ಹವಾಗಿ ಏರುಗತಿಯೇ ಕಾಣಿಸುತ್ತಿದೆ ಎಂಬುದು ಶಾಕಿಂಗ್ ಸಂಗತಿಯಾದರೂ ಸತ್ಯ.