Numerology for YouTubers: ಸಂಖ್ಯಾಶಾಸ್ತ್ರದ ಪ್ರಕಾರ, ಕೆಲವು ನಿರ್ದಿಷ್ಟ ಜನ್ಮ ದಿನಾಂಕಗಳಲ್ಲಿ ಹುಟ್ಟಿದವರು ಯಶಸ್ವಿ ಯೂಟ್ಯೂಬರ್ ಆಗುವ ಸಾಧ್ಯತೆ ಹೆಚ್ಚಿರುತ್ತೆ. ಇವರಿಗೆ ಸೋಶಿಯಲ್ ಮೀಡಿಯಾದಲ್ಲಿ ಯಶಸ್ಸು ಯಾಕೆ ಸಿಗುತ್ತೆ? ಇಲ್ಲಿದೆ ಮಾಹಿತಿ.
YouTube Career Astrology: ಈಗಿನ ಕಾಲದಲ್ಲಿ ಯೂಟ್ಯೂಬ್, ಇನ್‌ಸ್ಟಾಗ್ರಾಂನಂತಹ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳು ಕೇವಲ ಮನರಂಜನೆಗೆ ಸೀಮಿತವಾಗಿಲ್ಲ. ಲಕ್ಷಾಂತರ ಜನರಿಗೆ ಇದು ಕೆರಿಯರ್ ಮತ್ತು ಹಣ ಗಳಿಸುವ ದಾರಿಯಾಗಿದೆ. ಸಂಖ್ಯಾಶಾಸ್ತ್ರದ ಪ್ರಕಾರ, ವ್ಯಕ್ತಿಯ ಜನ್ಮ ದಿನಾಂಕವು ಅವರ ಸ್ವಭಾವ ಮತ್ತು ಭವಿಷ್ಯದ ಬಗ್ಗೆ ಹಲವು ಸುಳಿವುಗಳನ್ನು ನೀಡುತ್ತದೆ. ಕೆಲವು ಜನ್ಮ ದಿನಾಂಕಗಳಲ್ಲಿ ಹುಟ್ಟಿದವರು ಕಂಟೆಂಟ್ ಕ್ರಿಯೇಟರ್, ಯೂಟ್ಯೂಬರ್ ಅಥವಾ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಲು ಹೆಚ್ಚು ಸೂಕ್ತ ಅಂತ ಸಂಖ್ಯಾಶಾಸ್ತ್ರ ಹೇಳುತ್ತೆ. ಆ ವಿಶೇಷ ದಿನಾಂಕಗಳು ಯಾವುವು ಅಂತ ಮುಂದೆ ನೋಡೋಣ.
ಇದನ್ನೂ ಓದಿ- Vastu Tips: ಮನೆಯ ಮುಖ್ಯ ದ್ವಾರಕ್ಕೆ ನೀರು ಚಿಮುಕಿಸುವುದರಿಂದ ಇಷ್ಟೆಲ್ಲಾ ಲಾಭ ಇದ್ಯಾ?
ಮೂಲಾಂಕ 1 (1, 10, 19, 28ನೇ ತಾರೀಕು ಜನಿಸಿದವರು)
ಯಾವುದೇ ತಿಂಗಳ 1, 10, 19 ಅಥವಾ 28ನೇ ತಾರೀಕಿನಂದು ಜನಿಸಿದವರ ಮೂಲಾಂಕ 1 ಆಗಿರುತ್ತೆ. ಈ ಮೂಲಾಂಕದ ಅಧಿಪತಿ ಸೂರ್ಯ. ಇಂಥವರಲ್ಲಿ ನಾಯಕತ್ವದ ಗುಣ ಮತ್ತು ಆತ್ಮವಿಶ್ವಾಸ ತುಂಬಾನೇ ಜಾಸ್ತಿ ಇರುತ್ತೆ. ಇದೇ ಕಾರಣಕ್ಕೆ ಇವರು ಕ್ಯಾಮೆರಾ ಮುಂದೆ ಚೆನ್ನಾಗಿ ಪರ್ಫಾರ್ಮ್ ಮಾಡ್ತಾರೆ ಮತ್ತು ತಮ್ಮದೇ ಆದ ಒಂದು ಗುರುತನ್ನು ಸೃಷ್ಟಿಸಿಕೊಳ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಇವರ ಜನಪ್ರಿಯತೆ ಬೇಗನೆ ಹೆಚ್ಚಾಗಬಹುದು.
ಇದನ್ನೂ ಓದಿ- ಉದ್ದೇಶ ಒಳ್ಳೇದಾದ್ರೂ ಗಂಡ ಮನೆಯಿಂದ ಹೊರಡುತ್ತಿದ್ದಂತೆ ಹೆಂಡತಿ ಮಾಡಬಾರದ 7 ಕೆಲಸಗಳಿವು
ಮೂಲಾಂಕ 3 (3, 12, 21, 30ನೇ ತಾರೀಕು ಜನಿಸಿದವರು)
ಮೂಲಾಂಕ 3ರ ಅಧಿಪತಿ ದೇವಗುರು ಬೃಹಸ್ಪತಿ. ಈ ಗ್ರಹವನ್ನು ಬಹಳ ಶುಭವೆಂದು ಪರಿಗಣಿಸಲಾಗುತ್ತದೆ. ಈ ದಿನಾಂಕಗಳಲ್ಲಿ ಹುಟ್ಟಿದವರು ತುಂಬಾ ಕ್ರಿಯೇಟಿವ್ ಆಗಿರುತ್ತಾರೆ. ತಮ್ಮ ಯೋಚನೆಗಳಿಂದ ಬೇರೆಯವರನ್ನು ಬೇಗನೆ ಪ್ರಭಾವಿಸುತ್ತಾರೆ. ಎಜುಕೇಷನಲ್, ಮೋಟಿವೇಷನಲ್ ಮತ್ತು ಜ್ಞಾನ ಸಂಬಂಧಿತ ಕಂಟೆಂಟ್ ಮಾಡುವುದರಲ್ಲಿ ಇವರು ಎಕ್ಸ್‌ಪರ್ಟ್. ವೀಕ್ಷಕರು ಇವರ ಮಾತುಗಳನ್ನು ಗಮನವಿಟ್ಟು ಕೇಳಲು ಇಷ್ಟಪಡುತ್ತಾರೆ.
ಮೂಲಾಂಕ 5 (5, 14, 23ನೇ ತಾರೀಕು ಜನಿಸಿದವರು)
ಮೂಲಾಂಕ 5ರ ಅಧಿಪತಿ ಬುಧ ಗ್ರಹ. ಬುಧನನ್ನು ಮಾತು, ಮಾಹಿತಿ ತಂತ್ರಜ್ಞಾನ (IT) ಮತ್ತು ಬುದ್ಧಿವಂತಿಕೆಯ ಕಾರಕ ಎಂದು ಪರಿಗಣಿಸಲಾಗುತ್ತದೆ. ಈ ಮೂಲಾಂಕದವರು ಚುರುಕಾದ ತಲೆ, ಬುದ್ಧಿವಂತಿಕೆ ಮತ್ತು ಮಾತಿನ ಕಲೆ ಹೊಂದಿದವರಾಗಿರುತ್ತಾರೆ. ಹೊಸ ಟ್ರೆಂಡ್‌ಗಳನ್ನು ಬೇಗನೆ ಅರ್ಥಮಾಡಿಕೊಂಡು, ವೀಕ್ಷಕರ ಇಷ್ಟಕ್ಕೆ ತಕ್ಕಂತೆ ಕಂಟೆಂಟ್ ರೆಡಿ ಮಾಡಬಲ್ಲರು. ಯೂಟ್ಯೂಬ್, ಇನ್‌ಸ್ಟಾಗ್ರಾಂ ಮತ್ತು ಇತರ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಇವರಿಗೆ ಯಶಸ್ಸು ಸಿಗುವ ಸಾಧ್ಯತೆ ಹೆಚ್ಚಿರುತ್ತೆ.
ಇದನ್ನೂ ಓದಿ: Kitchen Vastu tips: ಅಡುಗೆಮನೆಯಲ್ಲಿ ಈ 5 ಪದಾರ್ಥ ಖಾಲಿಯಾದ್ರೆ ದಾರಿದ್ರ್ಯ ಗ್ಯಾರಂಟಿ!
ಮೂಲಾಂಕ 6 (6, 15, 24ನೇ ತಾರೀಕು ಜನಿಸಿದವರು)
ಮೂಲಾಂಕ 6ರ ಅಧಿಪತಿ ಶುಕ್ರ ಗ್ರಹ. ಇಂಥವರು ಆಕರ್ಷಕ ವ್ಯಕ್ತಿತ್ವ ಮತ್ತು ಕ್ರಿಯೇಟಿವ್ ಯೋಚನೆಗಳನ್ನು ಹೊಂದಿರುತ್ತಾರೆ. ಫ್ಯಾಷನ್, ಬ್ಯೂಟಿ, ಲೈಫ್‌ಸ್ಟೈಲ್, ಸಂಗೀತ ಮತ್ತು ಮನರಂಜನೆಗೆ ಸಂಬಂಧಿಸಿದ ಕಂಟೆಂಟ್ ಮೇಲೆ ಇವರಿಗೆ ವಿಶೇಷ ಹಿಡಿತವಿರುತ್ತದೆ. ಇದೇ ಗುಣ ಇವರನ್ನು ಯಶಸ್ವಿ ಇನ್‌ಫ್ಲುಯೆನ್ಸರ್ ಆಗಿ ಮಾಡಬಲ್ಲದು.
ಹಕ್ಕುತ್ಯಾಗ (Disclaimer)
ಈ ಲೇಖನದಲ್ಲಿರುವ ಮಾಹಿತಿಯನ್ನು ಧಾರ್ಮಿಕ ಗ್ರಂಥಗಳು, ವಿದ್ವಾಂಸರು ಮತ್ತು ಜ್ಯೋತಿಷಿಗಳಿಂದ ಸಂಗ್ರಹಿಸಲಾಗಿದೆ. ಈ ಮಾಹಿತಿಯನ್ನು ನಿಮ್ಮವರೆಗೆ ತಲುಪಿಸುವುದು ಮಾತ್ರ ನಮ್ಮ ಉದ್ದೇಶ. ಓದುಗರು ಇದನ್ನು ಕೇವಲ ಒಂದು ಮಾಹಿತಿಯನ್ನಾಗಿ ಪರಿಗಣಿಸಬೇಕು.