ಪಂಚಕ ಆರಂಭವಾಗಿದೆ ಅಲರ್ಟ್; ನಾಳೆ, ನಾಡಿದ್ದು 3 ರಾಶಿಯವರು ಈ ಕೆಲಸಗಳನ್ನು ಮಾಡಬೇಡಿ
Kannada Astrology: ಶನಿಯ ಕುಂಭ ರಾಶಿಗೆ ಚಂದ್ರನ ಪ್ರವೇಶದಿಂದ ಅಶುಭವೆಂದು ಪರಿಗಣಿಸಲಾದ ಪಂಚಕ ಅವಧಿ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ, ಆಗಸ್ಟ್ 1 ಮತ್ತು 2 ರಂದು 3 ರಾಶಿಯವರು ಹೆಚ್ಚು ಜಾಗರೂಕರಾಗಿರಬೇಕು ಎಂದು ಜ್ಯೋತಿಷ್ಯ ಶಾಸ್ತ್ರ ಎಚ್ಚರಿಸಿದೆ.

ಪಂಚಕ ಸಮಯ
ಇಂದು ಬೆಳಗ್ಗೆ 6 ಗಂಟೆ 37 ನಿಮಿಷಕ್ಕೆ ಶನಿಯ ಕುಂಭ ರಾಶಿಗೆ ಚಂದ್ರನ ಪ್ರವೇಶವಾಗಿದೆ. ಈ ಗಳಿಗೆಯು ಪಂಚಕ ಅವಧಿಯ ಆರಂಭವಾಗಿದೆ. ಪಂಚಕ ಸಮಯವನ್ನು ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲವು ಚಟುವಟಿಕೆಗಳಿಗೆ ಅಶುಭ ಎಂದು ಪರಿಗಣಿಸಲಾಗುತ್ತದೆ. ಕೆಲವೆಡೆ ಇದನ್ನು ಚೋರ ಪಂಚಕ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ.
ಆಗಸ್ಟ್ 1 ಮತ್ತು ಆಗಸ್ಟ್ 2
ಪಂಚಕ ಅಂದ್ರೆ ಚಂದ್ರನು ಧನಿಷ್ಠ, ಶತಭಿಷ, ಪೂರ್ವಾಭಾದ್ರಪದ, ಉತ್ತರಾಭಾದ್ರಪದ ಮತ್ತು ರೇವತಿ ನಕ್ಷತ್ರಪುಂಜಗಳ ಮೂಲಕ ಸಾಗಿ ಕುಂಭ ಮತ್ತು ಮೀನ ರಾಶಿಗಳಲ್ಲಿ ಉಳಿಯುವ ಅವಧಿ. ಚಂದ್ರನು ಕುಂಭ ರಾಶಿಯಲ್ಲಿರೋದರಿಂದ ಆಗಸ್ಟ್ 1 ಮತ್ತು ಆಗಸ್ಟ್ 2ರಂದು ಕೆಲವು ರಾಶಿಚಕ್ರದವರು ಎಚ್ಚರಿಕೆಯಿಂದಿರಬೇಕಾಗುತ್ತದೆ. ಆ ರಾಶಿಗಳು ಯಾವವು ಎಂಬುದರ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ.
ಕರ್ಕಾಟಕ ರಾಶಿ
ಹಣಕಾಸು ವ್ಯವಹಾರಗಳಲ್ಲಿ ಎಚ್ಚರಿಕೆಯಿಂದಿರಬೇಕು. ಯಾವುದೇ ಹೊಸ ಒಪ್ಪಂದ ಅಥವಾ ಕೆಲಸವನ್ನು ಆರಂಭಿಸೋದು ಸೂಕ್ತವಲ್ಲ. ಈ ಸಮಯದಲ್ಲಿ ಕುಟುಂಬಸ್ಥರು, ಹಿತಶತ್ರುಗಳು ಹಾಗೂ ಮೇಲಾಧಿಕಾರಿಗಳೊಂದಿಗೆ ಸಂಯಮದಿಂದ ವರ್ತಿಸಿ. ಮಾತುಗಳ ಮೇಲೆ ಹಿಡಿತವಿರಲಿ. ಇಲ್ಲವಾದ್ರೆ ಮುಂದಿನ ದಿನಗಳಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ವೃಶ್ಚಿಕ ರಾಶಿ
ಈ ರಾಶಿಯವರು ಆರೋಗ್ಯ ಮತ್ತು ಆರ್ಥಿಕ ವಿಷಯಗಳಲ್ಲಿ ಹೆಚ್ಚಿನ ಎಚ್ಚರಿಕೆ ತೆಗೆದುಕೊಳ್ಳಬೇಕಾಗುತ್ತದೆ. ಅನಗತ್ಯ ಖರ್ಚುಗಳನ್ನು ತಪ್ಪಿಸಲು ಶಾಪಿಂಗ್ ಮಾಡಬೇಡಿ. ಕೆಲಸದ ಸ್ಥಳಗಳಲ್ಲಿ ಸಹೋದ್ಯೋಗಿಗಳೊಂದಿಗೆ ಗೌಪ್ಯವಾದ ವಿಷಯಗಳನ್ನು ಹಂಚಿಕೊಳ್ಳುವಾಗ ಎಚ್ಚರಿಕೆಯಿಂದಿರಿ. ಕುಟುಂಬ ಜೀವನದಲ್ಲಿ ಸಂವಹನ ಕಾಪಾಡಿಕೊಳ್ಳಿ.
ಮೀನ ರಾಶಿ
ಈ ಎರಡು ದಿನಗಳಲ್ಲಿ ಬುದ್ದಿವಂತಿಕೆಯಿಂದ ಹೂಡಿಕೆ ಮಾಡಬೇಕು. ಹಾಗೆಯೇ ಅತುರದಲ್ಲಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಶುಭಕಾರ್ಯ ಅಥವಾ ಸಂಭ್ರಮಾಚರಣೆಯನ್ನು ಮುಂದೂಡಿಕೆ ಮಾಡೋದು ಒಳ್ಳೆಯದು. ನಿಮ್ಮ ಅತಿಯಾದ ಕೋಪ ಆಫಿಸ್ ಅಥವಾ ಕುಟುಂಬದಲ್ಲಿನ ಸಂಬಂಧಗಳಲ್ಲಿ ಬಿರುಕು ಮೂಡಲು ಕಾರಣವಾಗಬಹುದು.

