Published : Sep 05, 2026, 05:39 AM ISTUpdated : Sep 05, 2026, 11:40 PM IST

State News Live: ಬೆಂಗಳೂರು ಹಿರಿಯರಿಗೆ ಸೇಫ್‌ ಸಿಟಿಯೇ? ನಗರದ ಅಭಿವೃದ್ಧಿ ಅಳೆಯುವುದು ಕಟ್ಟಡಗಳಿಂದಲ್ಲ; ಹಿರಿಯರನ್ನ ನಡೆಸಿಕೊಳ್ಳುವ ರೀತಿಯಿಂದ!

ಸಾರಾಂಶ

ಬೆಂಗಳೂರು (ಸೆ.5): ಬಾಗಲಕೋಟೆ ಪ್ರವಾಸ ಕೈಗೊಂಡಿರುವ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಬರಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದರು. ಬಳಿಕ ಬಾಗಲಕೋಟೆಯಲ್ಲಿ ರೈತರ ಜಮೀನಿಗೆ ತೆರಳಿ ಬೆಳೆ ವೀಕ್ಷಣೆ ಮಾಡಿದರು. ಸಮೀಕ್ಷೆಗೆ ತೆರಳುವ ಮುನ್ನ ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ರೈತರ ಐದು ಲಕ್ಷ ರು.ವರೆಗಿನ ಸಾಲ ಮನ್ನಾ ಮಾಡುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾಡಿರುವ ಆಗ್ರಹಕ್ಕೆ ಪ್ರತಿಕ್ರಿಯೆ ನೀಡಿದರು. ಸಾಲಮನ್ನಾ ಬೇಡಿಕೆ ಸರಿಯಿದೆ. ರೈತರ ಸಾಲ ಮನ್ನಾಗೆ ನೆರವು ಕೋರಿ ದೆಹಲಿಗೆ ಸರ್ವ ಪಕ್ಷ ನಿಯೋಗ ಕರೆದೊಯ್ಯುತ್ತೇವೆ. ರಾಜ್ಯ ಬಿಜೆಪಿ ನಾಯಕರು ಕೇಂದ್ರ ಸರ್ಕಾರದಿಂದ ಸಾಲಮನ್ನಾ ಮಾಡಿಸುವ ಜವಾಬ್ದಾರಿ ಹೊರಬೇಕು. ಬರಗಾಲದ ಬಗ್ಗೆ ಪ್ರಧಾನಮಂತ್ರಿಗಳೇ ಹೇಳಿದ್ದು, ಕೇಂದ್ರ ಸರ್ಕಾರ ಸಾಲಮನ್ನಾ ಮಾಡಬೇಕು. ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್ ಹಾಗೂ ಇತರೆ ನಾಯಕರು ನಮ್ಮೊಂದಿಗೆ ದೆಹಲಿಗೆ ಬಂದು ಕೇಂದ್ರ ಸರ್ಕಾರದಿಂದ ಅನುದಾನ ಬಿಡುಗಡೆ ಹಾಗೂ ರೈತರ ಸಾಲ ಮನ್ನಾಕ್ಕೆ ಆಗ್ರಹಿಸಬೇಕು ಎಂದಿದ್ದಾರೆ. ಅದರೊಂದಿಗೆ ಇಂದಿನ ರಾಜ್ಯ ಸುದ್ದಿಗಳ ಅಪ್‌ಡೇಟ್‌ ಇಲ್ಲಿದೆ.

 

11:40 PM (IST) Sep 05

ಬೆಂಗಳೂರು ಹಿರಿಯರಿಗೆ ಸೇಫ್‌ ಸಿಟಿಯೇ? ನಗರದ ಅಭಿವೃದ್ಧಿ ಅಳೆಯುವುದು ಕಟ್ಟಡಗಳಿಂದಲ್ಲ; ಹಿರಿಯರನ್ನ ನಡೆಸಿಕೊಳ್ಳುವ ರೀತಿಯಿಂದ!

ಒಂದು ನಗರದ ಪ್ರಬುದ್ಧತೆಯನ್ನು ಅಳೆಯುವುದು ಅಲ್ಲಿನ ಕಟ್ಟಡಗಳಿಂದಲ್ಲ, ಬದಲಿಗೆ ಹಿರಿಯ ನಾಗರಿಕರನ್ನು ನಡೆಸಿಕೊಳ್ಳುವ ರೀತಿಯಿಂದ. ಬೆಂಗಳೂರಿನಂತಹ ಮಹಾನಗರಗಳಲ್ಲಿ, ಹದಗೆಟ್ಟ ರಸ್ತೆ ಮತ್ತು ಸುರಕ್ಷತೆಯ ಕೊರತೆಯಿಂದಾಗಿ ವೃದ್ಧರು ಪ್ರತಿನಿತ್ಯ ಆತಂಕದಲ್ಲಿ ಬದುಕುತ್ತಿದ್ದರೆ ಸೇಫ್ ಸಿಟಿ ಎನ್ನಬಹುದೇ?

Read Full Story

10:00 PM (IST) Sep 05

Dk Shivakumar - ಕನ್ನಡ ಕೇವಲ ಭಾಷೆಯಲ್ಲ, ನಮ್ಮ ಬದುಕಿನ ಅಸ್ಮಿತೆ; ಅಕ್ಕ ಸಮ್ಮೇಳನದಲ್ಲಿ ಡಿಕೆಶಿ ಭಾವಪೂರ್ಣ ಸಂದೇಶ!

ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆನ್‌ಲೈನ್ ಮೂಲಕ ವಿದೇಶಿ ಕನ್ನಡಿಗರನ್ನು ಉದ್ದೇಶಿಸಿ ಮಾತನಾಡಿದರು. ಕನ್ನಡ ಕೇವಲ ಭಾಷೆಯಲ್ಲ, ಅದು ನಮ್ಮ ಬದುಕಿನ ಅಸ್ಮಿತೆ ಮತ್ತು ಸಂಸ್ಕೃತಿಯ ಪ್ರತೀಕ ಎಂದು ಬಣ್ಣಿಸಿದ ಅವರು, ತಂತ್ರಜ್ಞಾನದ ಯುಗದಲ್ಲಿ ಭಾಷೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿಯನ್ನು ನೆನಪಿಸಿದರು ಮತ್ತು ಸಾಂಸ್ಕೃತಿಕ ಬೇರುಗಳನ್ನು ಮರೆಯಬಾರದೆಂದು ಭಾವಪೂರ್ಣವಾಗಿ ಕರೆ ನೀಡಿದರು.

Read Full Story

09:46 PM (IST) Sep 05

ಡಾಕ್ಟರ್ ಹೆಸರಿನ ಮುಂದೆ Dr. ಇದ್ದಂತೆ ಇನ್ಮುಂದೆ ಶಿಕ್ಷಕರಿಗೆ Tr, ಸಿಎಂ ಡಿಕೆ ಶಿವಕುಮಾರ್ ಘೋಷಣೆ

ಡಾಕ್ಟರ್ ಹೆಸರಿನ ಮುಂದೆ ಅಧಿಕೃತವಾಗಿ, ಗೌರವಯುತವಾಗಿ Dr ಹಾಕುವ ಅವಕಾಶವಿದೆ. ಆದರೆ ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರ ಏನೂ ಹಾಕುವುದಿಲ್ಲ.ಇನ್ಮುಂದೆ ಶಿಕ್ಷಕರು ತಮ್ಮ ಹೆಸರಿನ ಮುಂದೆ Tr ಹಾಕಿಕೊಳ್ಳಬಹುದು.

Read Full Story

09:22 PM (IST) Sep 05

ಚಂಡಿಕಾಯಾಗಕ್ಕೂ ಮುನ್ನ ಬೂದೇಶ್ವರ ದೇಗುಲಕ್ಕೆ ಭೇಟಿ ನೀಡಿದ ಸಿಎಂ ಡಿಕೆಶಿ - ಕಾರಣ ಇದೇನಾ?

ಗಂಗಾವತಿ ಸಮೀಪದ ಬೂದಗುಂಪಾ ಗ್ರಾಮದ ಬೂದೇಶ್ವರ ದೇವಸ್ಥಾನಕ್ಕೆ ಸಿಎಂ ಡಿ.ಕೆ.ಶಿವಕುಮಾರ್ ಭೇಟಿ ನೀಡಿ ಚಂಡಿಕಾಯಾಗಕ್ಕೆ ಸಂಕಲ್ಪ ನೆರವೇರಿಸಿ ವಿಶೇಷ ಪೂಜೆ ಸಲ್ಲಿಸಿದರು. ರಾಜ್ಯದ ಉತ್ತಮ ಮಳೆ, ಬೆಳೆಗಾಗಿ ಪ್ರಾರ್ಥಿಸಿರುವುದಾಗಿ ಡಿಕೆಶಿ ಹೇಳಿದರು.

Read Full Story

08:52 PM (IST) Sep 05

2028ರ ಸಿಎಂ ಬಗ್ಗೆ ಬಂತು ಭವಿಷ್ಯವಾಣಿ - ಬೂದೇಶ್ವರ ದೇವಸ್ಥಾನದಲ್ಲಿ ಎಚ್.ಜಿ.ರಾಮುಲು ಮಾತು

ಗಂಗಾವತಿಯಲ್ಲಿ ಮಾಜಿ ಸಂಸದ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಎಚ್.ಜಿ.ರಾಮುಲು ಅವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ 2028ರಲ್ಲೂ ಮತ್ತೆ ಕರ್ನಾಟಕದ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Read Full Story

08:20 PM (IST) Sep 05

BBK 13 - ಬಿಗ್‌ ಬಾಸ್ ಆರಂಭಕ್ಕೂ ಮುನ್ನವೇ ಕಿಚ್ಚನ ಸರ್ಪ್ರೈಸ್ ಎಂಟ್ರಿ - ಹೊಸ ಮನೆ ಹೇಗಿದೆ ಗೊತ್ತಾ?

ಬಿಗ್‌ ಬಾಸ್ ಕನ್ನಡ ಸೀಸನ್ 13ರ ಅಧಿಕೃತ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಸೆಪ್ಟೆಂಬರ್ 6ರಂದು ಕಿಚ್ಚ ಸುದೀಪ್ ಸ್ಪರ್ಧಿಗಳನ್ನು ಬಿಗ್‌ ಬಾಸ್ ಮನೆಗೆ ಸ್ವಾಗತಿಸಲಿದ್ದಾರೆ. ಆದರೆ ಅದಕ್ಕೂ ಮುನ್ನವೇ ಫ್ಲೈಟ್ ಕ್ಯಾಪ್ಟನ್ ಅವತಾರದಲ್ಲಿ ಕಿಚ್ಚ ಸುದೀಪ್ ಬಿಗ್‌ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

Read Full Story

07:58 PM (IST) Sep 05

ಯಶ್ ರಾವಣನಾಗಿ ಅಬ್ಬರಿಸಿದರೆ ಬಾಕ್ಸ್ ಆಫೀಸ್‌ನಲ್ಲಿ ಏನಾಗಬಹುದು? ಆ ಲೆಕ್ಕ ಚುಕ್ತಾ ಮಾಡ್ತಾರಾ?

ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾದ ನಿರೀಕ್ಷಿತ ಫಲಿತಾಂಶ ಸಿಗದ ಬಳಿಕ ಇದೀಗ ರಾಕಿಂಗ್ ಸ್ಟಾರ್ ಯಶ್‌ ಅವರ ಮುಂದಿನ ದೊಡ್ಡ ಭರವಸೆ ‘ರಾಮಾಯಣ’ ಸಿನಿಮಾದ ಮೇಲಿದೆ. ನಿತೇಶ್ ತಿವಾರಿ ನಿರ್ದೇಶನದ ಈ ಸಿನಿಮಾದಲ್ಲಿ ಯಶ್‌ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ನಿರ್ಮಾಪಕರಾಗಿಯೂ ಭಾಗವಾಗಿದ್ದಾರೆ.

Read Full Story

07:34 PM (IST) Sep 05

ಕನ್ನಡದ ಕಂಪು ಹೊತ್ತ ಫಿಲಡೆಲ್ಫಿಯಾ ರಸ್ತೆ, ಅದ್ಧೂರಿಯಾಗಿ ಅಕ್ಕ ರಜತ ಮಹೋತ್ಸವಕ್ಕೆ ಚಾಲನೆ

ಅಮೆರಿಕದಲ್ಲಿ ಅಕ್ಕ ರಜತ ಮಹೋತ್ಸವ ವಿಶ್ವ ಕನ್ನಡ ಸಮ್ಮೇಳನಕ್ಕೆ ಭರ್ಜರಿ ಚಾಲನೆ ಸಿಕ್ಕಿದೆ. ಈ ಬಾರಿ ಹಲುವ ವಿಶೇಷತೆಗಳೊಂದಿಗೆ ಕಾರ್ಯಕ್ರಮ ಆರಂಭಗೊಂಡಿದೆ. ವೀರಗಾಸೆ ಸೇರಿದಂತೆ ಹಲವು ಕನ್ನಡದ ಕಲೆಗಗಳ ಮೂಲಕ ಅದ್ದೂರಿ ಮೆರವಣಿಗೆ ಸಾಗಿತ್ತು.

Read Full Story

07:16 PM (IST) Sep 05

Gold Jewellery - ಚಿನ್ನ ಖರೀದಿಸಲು ಈಗ ಲಕ್ಷಗಟ್ಟಲೆ ಹಣ ಬೇಕಿಲ್ಲ - ಹೀಗೆ ಪ್ಲಾನ್ ಮಾಡಿದ್ರೆ ಸಾಕು!

ಚಿನ್ನಾಭರಣ ಖರೀದಿಸಲು ಒಂದೇ ಬಾರಿಗೆ ಲಕ್ಷಗಟ್ಟಲೆ ಹಣ ಖರ್ಚು ಮಾಡಬೇಕಿಲ್ಲ. ಡಿಜಿಟಲ್ ಗೋಲ್ಡ್, ಮಾಸಿಕ ಗೋಲ್ಡ್ ಸೇವಿಂಗ್ಸ್, ಹಳೆಯ ಚಿನ್ನದ ಎಕ್ಸ್‌ಚೇಂಜ್ ಮತ್ತು EMI ಮೂಲಕ ಚಿನ್ನ ಖರೀದಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ.

Read Full Story

06:54 PM (IST) Sep 05

ಸಿನಿಮಾ, ರಾಜಕೀಯ ಎರಡರಿಂದಲೂ ದೂರ - ಮೋಹಕ ತಾರೆ ರಮ್ಯಾ ಈಗ ಏನ್ ಮಾಡ್ತಿದ್ದಾರೆ ಗೊತ್ತಾ?

ಮೋಹಕ ತಾರೆ ರಮ್ಯಾ ಅಲಿಯಾಸ್ ದಿವ್ಯಾ ಸ್ಪಂದನಾ ಈಗ ಎಲ್ಲಿದ್ದಾರೆ? ನಟಿಯಿಂದ ಸಂಸದೆಯಾಗಿ, ಈಗ ನಿರ್ಮಾಪಕಿಯಾಗಿರುವ ಅವರ ಹೊಸ ಜೀವನ, ಸಿನಿಮಾ ಕಂಬ್ಯಾಕ್ ಹಾಗೂ ಮುಂದಿನ ಯೋಜನೆಗಳ ಮಾಹಿತಿ ಇಲ್ಲಿದೆ.

Read Full Story

06:24 PM (IST) Sep 05

'ನನ್ನ ಬೋಲ್ಡ್ ವಿಡಿಯೋಗಳೂ ಸಾಮಾಜಿಕ ಸೇವೆಯೇ' - ನಟಿ ಪೂನಂ ಪಾಂಡೆ ಶಾಕಿಂಗ್ ಕಾಮೆಂಟ್ಸ್ ವೈರಲ್

‘ನನ್ನ ಬೋಲ್ಡ್ ವಿಡಿಯೋಗಳೂ ದೇಶ ಸೇವೆಯೇ’ ಎಂದು ಪೂನಂ ಪಾಂಡೆ ಹೇಳಿದ್ದು, ಭಾರತದಲ್ಲಿ ವೇಶ್ಯಾವಾಟಿಕೆ ಕಾನೂನುಬದ್ಧಗೊಳಿಸಬೇಕು ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ. ನಟಿಯ ಕಾಮೆಂಟ್ಸ್ ಇದೀಗ ಭಾರೀ ಚರ್ಚೆಗೆ ಕಾರಣವಾಗಿವೆ.

Read Full Story

05:39 PM (IST) Sep 05

Cricket - 14 ವರ್ಷಗಳಿಂದ ಮುರಿಯದ ವಿಶ್ವದಾಖಲೆ! ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕದ ಜೊತೆಯಾಟ ನೀಡಿದ ಟಾಪ್‌ 5 ಜೋಡಿ ಇವೆ!

ಟೆಸ್ಟ್ ಕ್ರಿಕೆಟ್‌ನಲ್ಲಿ ಸಹಭಾಗಿತ್ವದ ಮಹತ್ವವನ್ನು ವಿವರಿಸುವ ಈ ಲೇಖನ, ಇತಿಹಾಸದ ಕೆಲವು ಶ್ರೇಷ್ಠ ಬ್ಯಾಟಿಂಗ್ ಜೋಡಿಗಳನ್ನು ಪರಿಚಯಿಸುತ್ತದೆ. ಸಚಿನ್-ದ್ರಾವಿಡ್, ಸಂಗಕ್ಕಾರ-ಜಯವರ್ಧನೆ, ಹೇಡನ್-ಪಾಂಟಿಂಗ್ ಸೇರಿದಂತೆ ವಿಶ್ವದಾಖಲೆ ನಿರ್ಮಿಸಿದ ಜೋಡಿಗಳ ಸಾಧನೆ ಮತ್ತು ಅವರ ಅಂಕಿಅಂಶಗಳ ವಿವರ ಇಲ್ಲಿದೆ.
Read Full Story

05:37 PM (IST) Sep 05

ದೇವರೇ.. ದರ್ಶನ್ ಸಂಕಷ್ಟ ದೂರವಾಗಲಿ - ಮಗನಿಗಾಗಿ ವಿಶೇಷ ಪೂಜೆ ಸಲ್ಲಿಸಿದ ತಾಯಿ ಮೀನಾ ತೂಗುದೀಪ

ದರ್ಶನ್‌ಗಾಗಿ ತಾಯಿ ಮೀನಾ ತೂಗುದೀಪ ದೇವರ ಮೊರೆ ಹೋಗಿದ್ದಾರೆ. ಮೈಸೂರಿನ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಮಗನ ಆರೋಗ್ಯ ಹಾಗೂ ಸಂಕಷ್ಟಗಳು ದೂರವಾಗಲಿ ಎಂದು ಪ್ರಾರ್ಥಿಸಿದ್ದಾರೆ.

Read Full Story

05:34 PM (IST) Sep 05

ಬೆಂಗಳೂರಿನ ರಸ್ತೆ ಗುಂಡಿ ಮುಚ್ಚಲು 3 ವರ್ಷದಲ್ಲಿ 5500 ಕೋಟಿ ಖರ್ಚು - ತೇಜಸ್ವಿ ಸೂರ್ಯ ಬಿಚ್ಚಿಟ್ರು ಸತ್ಯ

ಬೆಂಗಳೂರು ಅಭಿವೃದ್ಧಿ ಸಭೆಯಲ್ಲಿ, ಸಂಸದ ತೇಜಸ್ವಿ ಸೂರ್ಯ ಕಳೆದ 3 ವರ್ಷಗಳಲ್ಲಿ ರಸ್ತೆ ಗುಂಡಿ ಮುಚ್ಚಲು ಖರ್ಚಾದ 5,500 ಕೋಟಿ ರೂ.ಗಳ ಬಗ್ಗೆ ಶ್ವೇತಪತ್ರಕ್ಕೆ ಆಗ್ರಹಿಸಿದ್ದಾರೆ. ದುಬಾರಿ ದರ ಹಾಗೂ ಪದೇ ಪದೇ ತಾಂತ್ರಿಕ ದೋಷಗಳಿಂದ ಸ್ಥಗಿತಗೊಳ್ಳುತ್ತಿರುವ 'ನಮ್ಮ ಮೆಟ್ರೋ' ವ್ಯವಸ್ಥೆಯನ್ನೂ ಅವರು ತೀವ್ರವಾಗಿ ಟೀಕಿಸಿದ್ದಾರೆ.
Read Full Story

05:01 PM (IST) Sep 05

9ನೇ ವಯಸ್ಸಿನಲ್ಲೇ ಭರತನಾಟ್ಯದಲ್ಲಿ ಮಿಂಚಿದ್ದ ಈ ಪುಟ್ಟ ಬಾಲಕಿ ಇಂದು ಸ್ಟಾರ್ ಹೀರೋಯಿನ್!

ಸ್ಟಾರ್ ಹೀರೋಯಿನ್ ಶ್ರೀಲೀಲಾ 9ನೇ ವಯಸ್ಸಿನಲ್ಲಿ ಮಾಡಿದ್ದ ಭರತನಾಟ್ಯ ವಿಡಿಯೋ ಇದೀಗ ವೈರಲ್ ಆಗಿದೆ. ಶ್ರೀಕೃಷ್ಣನ ತುಂಟಾಟವನ್ನು ಅದ್ಭುತವಾಗಿ ಅಭಿನಯಿಸಿದ ಬಾಲ್ಯದ ವಿಡಿಯೋ ನೋಡಿ ಫ್ಯಾನ್ಸ್ ಅಚ್ಚರಿ!

Read Full Story

04:43 PM (IST) Sep 05

Siddaramaiah - ಅಚ್ಚೇ ದಿನ್ ಎಲ್ಲಿ, 15 ಲಕ್ಷ ಎಲ್ಲಿ? ಬಿಜೆಪಿಗೆ ಸವಾಲೆಸೆದು ತಮ್ಮ ರಾಜೀನಾಮೆ ಸತ್ಯ ಬಿಚ್ಚಿಟ್ಟ ಮಾಜಿ ಸಿಎಂ!

ಬೀರೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರು, ಪ್ರಧಾನಿ ಮೋದಿಯವರ 'ಅಚ್ಚೇ ದಿನ್' ಮತ್ತು 15 ಲಕ್ಷದ ಭರವಸೆಗಳನ್ನು ಪ್ರಶ್ನಿಸಿದ್ದಾರೆ. ಸ್ಥಳೀಯ ಬಿಜೆಪಿ ನಾಯಕ ಸಿ.ಟಿ. ರವಿ ಅವರನ್ನು ತರಾಟೆಗೆ ತೆಗೆದುಕೊಂಡ ಅವರು, ತಮ್ಮ ಮುಖ್ಯಮಂತ್ರಿ ಸ್ಥಾನದ ರಾಜೀನಾಮೆಯ ಹಿಂದಿನ ಸತ್ಯವನ್ನು ಬಹಿರಂಗಪಡಿಸಿದ್ದಾರೆ.
Read Full Story

04:40 PM (IST) Sep 05

ಆ ಕಾಲದಲ್ಲೇ ಸ್ವಿಮ್‌ಸೂಟ್‌ ಧರಿಸಿದ ಬೋಲ್ಡ್ ನಾಯಕಿ 'ಅಭಿನಯ ಶಾರದೆ' ಜಯಂತಿ ಬಗ್ಗೆ ನಿಮಗೆಷ್ಟು ಗೊತ್ತು?

14ನೇ ವಯಸ್ಸಿಗೇ ಚಿತ್ರರಂಗ ಪ್ರವೇಶಿಸಿ, 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಅಭಿನಯ ಶಾರದೆ ಜಯಂತಿ ಅವರ ಸುದೀರ್ಘ ಸಿನಿ ಪಯಣ, ದಿಗ್ಗಜ ನಟರೊಂದಿಗಿನ ಸಿನಿಮಾ ಅನುಭವ, ವೈಯಕ್ತಿಕ ಜೀವನದ ಏಳುಬೀಳು ಹಾಗೂ ರಾಜಕೀಯ ಪ್ರವೇಶದ ಕುತೂಹಲಕಾರಿ ಕಥೆ.

Read Full Story

04:31 PM (IST) Sep 05

Gowrishankar SRG - ಕನ್ನಡದ ಅತ್ಯುತ್ತಮ ನಟ ಪ್ರಶಸ್ತಿ, 'ಕೆರೆಬೇಟೆ' ಸಿನಿಮಾ ನಾಯಕನಿಗೆ ಫಿಲ್ಮ್‌ಫೇರ್

'ಕೆರೆಬೇಟೆ' ಚಿತ್ರದಲ್ಲಿನ ಅದ್ಭುತ ಅಭಿನಯಕ್ಕಾಗಿ ನಟ ಗೌರಿಶಂಕರ್ ಎಸ್‌ಆರ್‌ಜಿ ಅವರು 70ನೇ ಫಿಲ್ಮ್‌ಫೇರ್ ಪ್ರಶಸ್ತಿ (ದಕ್ಷಿಣ) ಸಮಾರಂಭದಲ್ಲಿ ಅತ್ಯುತ್ತಮ ನಟ (ವಿಮರ್ಶಕ) ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.

Read Full Story

04:18 PM (IST) Sep 05

ಬೆಂಗಳೂರಲ್ಲಿ ಭಯಾನಕ ಹಾರರ್ - ಮಧ್ಯರಸ್ತೆಯಲ್ಲಿ ಗಂಡನ ಎದುರಲ್ಲೇ ನಡೀತು ಲೈಂ*ಕ ದೌರ್ಜನ್ಯ

ಬೆಂಗಳೂರಲ್ಲಿ ಮತ್ತೊಂದು ಭಯಾನಕ ಕೃತ್ಯ ನಡೆದಿದೆ. ಆಟೋದಲ್ಲಿ ಹೋಗ್ತಿದ್ದ ದಂಪತಿಯ ಅಡ್ಡಗಟ್ಟಿದ ದುಷ್ಕರ್ಮಿಗಳ ಗುಂಪೊಂದು ಮಾಡಬಾರದ ಕೃತ್ಯವನ್ನ ನಡೆಸಿದೆ. ಅಷ್ಟಕ್ಕೂ ಮುಂಜಾನೆ ಆ ಫ್ಲೈಓವರ್‌ನಲ್ಲಿ ಏನಾಯ್ತು ಅನ್ನೋ ವಿವರ ಈ ಸ್ಟೋರಿಯಲ್ಲಿದೆ.

Read Full Story

04:12 PM (IST) Sep 05

ದಕ್ಷಿಣ ಭಾರತದಲ್ಲೇ ಮೊದಲು - ಬೆಂಗಳೂರು ಉದ್ಯಮಿಗಳಿಗೆ ಸೋಮಣ್ಣ ಕೊಟ್ಟ ಭರ್ಜರಿ ಕೊಡುಗೆ!

ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ ಅವರು ಬೆಂಗಳೂರಿನ ವೈಟ್‌ಫೀಲ್ಡ್‌ನಿಂದ ನವದೆಹಲಿಯ ತುಘಲಕಾಬಾದ್‌ಗೆ ಕಂಟೇನರ್ ರೈಲು ಸೇವೆಗೆ ಚಾಲನೆ ನೀಡಿದರು. ದಕ್ಷಿಣ ಭಾರತದಲ್ಲೇ ಮೊದಲಾದ ಈ ಉಪಕ್ರಮವು, ದಕ್ಷಿಣ ಮತ್ತು ಉತ್ತರ ಭಾರತದ ಮಾರುಕಟ್ಟೆಗಳಿಗೆ ಸೇತುವೆಯಾಗಲಿದ್ದು, ಕೈಗಾರಿಕೆಗಳಿಗೆ ವರದಾನವಾಗಲಿದೆ.
Read Full Story

04:04 PM (IST) Sep 05

Teachers Day Special - ಮಕ್ಕಳ ಮನಸ್ಸಷ್ಟೇ ಅಲ್ಲ, ಕ್ಯಾನ್ಸರನ್ನೇ ಗೆಲ್ಲುತ್ತಿರುವ ಈ ಶಿಕ್ಷಕಿ ಯಾರು?

ಕ್ಯಾನ್ಸರ್ ವಿರುದ್ಧ ಹೋರಾಡುತ್ತಲೇ ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬೋಧನೆ ಮುಂದುವರಿಸಿರುವ ಶಿಕ್ಷಕಿ ಎ.ಎಲ್. ನಾಗವೇಣಿ ಅವರು ಬಡ ಮಕ್ಕಳ ಶಿಕ್ಷಣಕ್ಕೂ ನೆರವಾಗುತ್ತಾ, ಶಿಕ್ಷಕ ವೃತ್ತಿಗೆ ಮಾನವೀಯತೆ ಮತ್ತು ಸೇವೆಯ ಹೊಸ ಅರ್ಥ ನೀಡಿದ್ದಾರೆ.

Read Full Story

03:54 PM (IST) Sep 05

Bengaluru - ಜಿಬಿಎ ಕಾಮಗಾರಿ ವೇಳೆ ಪೈಪ್‌ಲೈನ್‌ಗೆ ಹಾನಿ; ಏಳೆಂಟು ಅಡಿ ಎತ್ತರಕ್ಕೆ ಚಿಮ್ಮಿದ ಗ್ಯಾಸ್‌!

ಬೆಂಗಳೂರಿನ ಅನಾಹುತವೊಂದು ತಪ್ಪಿದೆ. ಜಿಬಿಎ ಕಾಮಗಾರಿ ವೇಳೆ ಗ್ಯಾಸ್‌ ಪೈಪ್‌ಲೈನ್‌ಗೆ ಹಾನಿಯಾಗಿ ಏಳೆಂಟು ಅಡಿ ಎತ್ತರಕ್ಕೆ ಗ್ಯಾಸ್ ಚಿಮ್ಮಿ ಆತಂಕ ಸೃಷ್ಟಿಸಿದ ಘಟನೆ ನಗರದ ಮಾರತಹಳ್ಳಿ ಸಮೀಪ ನಡೆದಿದೆ. ಅದೃಷ್ಟವಶಾತ್ ತಕ್ಷಣ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಸಿಬ್ಬಂದಿ ಅನಾಹುತ ತಪ್ಪಿಸಿದ್ದಾರೆ.

Read Full Story

03:47 PM (IST) Sep 05

ಹಾಡುತ್ತಾ, ಆಡುತ್ತಾ ಇಂಗ್ಲಿಷ್ ಕಲಿಕೆ - ಮುದ್ದಾಬಳ್ಳಿ ಮಕ್ಕಳ ನೆಚ್ಚಿನ ಶಿಕ್ಷಕ ಮಹ್ಮದ್ ಇಸ್ಮಾಯಿಲ್

ಕೊಪ್ಪಳದ ಮುದ್ದಾಬಳ್ಳಿಯ ಶಿಕ್ಷಕ ಮಹ್ಮದ್ ಇಸ್ಮಾಯಿಲ್ ಅವರು YouTube, ಸ್ಮಾರ್ಟ್ ಕ್ಲಾಸ್ ಮತ್ತು ಭಾಷಾ ಆಟಗಳ ಮೂಲಕ ಗ್ರಾಮೀಣ ಮಕ್ಕಳಿಗೆ ಸರಳ ಹಾಗೂ ಪರಿಣಾಮಕಾರಿಯಾಗಿ ಇಂಗ್ಲಿಷ್ ಕಲಿಸುತ್ತಿದ್ದಾರೆ.

Read Full Story

03:29 PM (IST) Sep 05

ಪಾಠ ಹೇಳುವುದಷ್ಟೇ ಅಲ್ಲ, ಶಾಲೆಯನ್ನೇ ಬದಲಿಸಿದ ಶಿಕ್ಷಕ - ಮಕ್ಕಳ ಕಲಿಕೆಗೆ ಹೊಸ ಸ್ಪರ್ಶ!

ಅಡವಿಭಾವಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಮಂಜುನಾಥ ನಾಗಯ್ಯ ಹಿರೇಮಠ ಶಿಕ್ಷಣದ ಜೊತೆಗೆ ಸಾಹಿತ್ಯ, ಕ್ರೀಡೆ, ಪರಿಸರ ಸಂರಕ್ಷಣೆ, ತಂತ್ರಜ್ಞಾನ ಆಧಾರಿತ ಬೋಧನೆ ಹಾಗೂ ಶಾಲಾಭಿವೃದ್ಧಿಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ.

Read Full Story

03:10 PM (IST) Sep 05

ಮೊಟ್ಟೆಯಿಂದ ಚಿಟ್ಟೆಯವರೆಗೆ - ಶಿಕ್ಷಣದಲ್ಲಿ ವಿನೂತನ ಪ್ರಯೋಗಕ್ಕೆ ಹೆಸರಾದ ಶಿಕ್ಷಕಿ!

ಬುದ್ನಿ ಸರ್ಕಾರಿ ಶಾಲೆಯ ಶಿಕ್ಷಕಿ ಬಸವರಾಜೇಶ್ವರಿ ಚಿಮ್ಮಲಗಿ ಅವರು AI, ಡಿಜಿಟಲ್ ತಂತ್ರಜ್ಞಾನ, ಅನುಭವಾತ್ಮಕ ಕಲಿಕೆ ಮತ್ತು ಪ್ರಕೃತಿ ಅಧ್ಯಯನದ ಮೂಲಕ ಗ್ರಾಮೀಣ ಮಕ್ಕಳಿಗೆ ವಿಜ್ಞಾನವನ್ನು ಆಸಕ್ತಿದಾಯಕವಾಗಿ ಕಲಿಸುತ್ತಿದ್ದಾರೆ.

Read Full Story

02:35 PM (IST) Sep 05

ನಿಂತು ನೀರು ಕುಡಿಯಬಾರದು ಎಂದು ಹಿರಿಯರು ಹೇಳೋದು ಯಾಕೆ? ಧಾರ್ಮಿಕ ಶಾಸ್ತ್ರದಲ್ಲಿದೆ ಈ ನಂಬಿಕೆ

ಮನೆಯಲ್ಲಿ ಸಣ್ಣಪುಟ್ಟ ವಿಚಾರಗಳಿಗೂ ನಿಯಮಗಳಿವೆ. ನೀರನ್ನು ನಿಂತು ಕುಡಿಯಬಾರದು ಎಂದು ಮನೆಯಲ್ಲಿ ದೊಡ್ಡವರು ಆಗಾಗ ಹೇಳುತ್ತಿರುತ್ತಾರೆ. ಹಾಗಿದ್ದರೆ ಯಾಕೆ ನಿಂತು ನೀರು ಕಿಡಿಯಬಾರದಂತೆ ಗೊತ್ತಾ? ಇದರಿಂದ ಏನಾದರೂ ಸಮಸ್ಯೆ ಆಗುತ್ತಾ? ಇಲ್ಲಿದೆ ಮಾಹಿತಿ..

Read Full Story

02:21 PM (IST) Sep 05

Belagavi - ಕಾಡಿನಲ್ಲೊಂದು ಗುರುದೀಪ - ಅಕ್ಷರ ಸಂತ ನಿಂಗಪ್ಪ ಮೇಷ್ಟ್ರು, 29 ವರ್ಷಗಳಿಂದ ಸೇವೆ

ಬೆಳಗಾವಿಯ ಖಾನಾಪುರ ತಾಲೂಕಿನ ಭೀಮಗಡ ಅಭಯಾರಣ್ಯದ ಅಮಗಾಂವ ಗ್ರಾಮದಲ್ಲಿ ಶಿಕ್ಷಕ ನಿಂಗಪ್ಪ ಬಾಳೇಕುಂದ್ರಿಗಿ ಅವರು ಕಳೆದ 29 ವರ್ಷಗಳಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅನೇಕ ಸವಾಲುಗಳನ್ನು ಎದುರಿಸಿ, ಗ್ರಾಮಸ್ಥರ ಪ್ರೀತಿ ಗಳಿಸಿ, ಸರ್ಕಾರ ಮತ್ತು ಜನರ ನಡುವಿನ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿರುವ ಇವರು, ವರ್ಗಾವಣೆ ಬಯಸದೆ ಅದೇ ಶಾಲೆಯಲ್ಲಿ ನಿವೃತ್ತರಾಗುವ ಇಂಗಿತ ಹೊಂದಿದ್ದಾರೆ.
Read Full Story

02:06 PM (IST) Sep 05

Virral - ಟ್ರಕ್ ಮೇಲಿನ ಹಸುವಿನ ಚಿತ್ರ ನೋಡಿ ತಾಯಿಯ ಬಳಿಗೆ ಓಡಿದಂತೆ ಬಂದ ಕರು! ವೈರಲ್ ವಿಡಿಯೋಗೆ ನೆಟ್ಟಿಗರು ಫಿದಾ!

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋವೊಂದರಲ್ಲಿ, ತಾಯಿಯಿಂದ ಬೇರ್ಪಟ್ಟ ಕರುವೊಂದು ಟ್ರಕ್ ಮೇಲಿನ ಹಸುವಿನ ಚಿತ್ರವನ್ನು ತನ್ನ ನಿಜವಾದ ತಾಯಿ ಎಂದು ಭಾವಿಸುತ್ತದೆ. ಆ ಮುಗ್ಧ ಕರು ಚಿತ್ರದಲ್ಲಿರುವ ಹಸುವಿನ ಕೆಚ್ಚಲಿಗೆ ಮೂತಿ ತಾಗಿಸಿ ಹಾಲು ಕುಡಿಯಲು ಪ್ರಯತ್ನಿಸುವ ದೃಶ್ಯವು ನೆಟ್ಟಿಗರ ಹೃದಯವನ್ನು ಕರಗಿಸಿದೆ.
Read Full Story

01:55 PM (IST) Sep 05

ಸ್ಮಶಾನದಲ್ಲಿ ನಿಗೂಢ ಕೃತ್ಯ - ಚಿತೆಯ ಮೇಲೆ ಕುರಿ ತಲೆಬುರುಡೆ; ಮದ್ಯದ ಬಾಟಲಿಗಳು, ಬೆಚ್ಚಿಬಿದ್ದ ಗ್ರಾಮಸ್ಥರು

ಆ ಊರಿನ ವ್ಯಕ್ತಿ ಮೃತಪಟ್ಟಿದ್ದರು. ಗ್ರಾಮಸ್ಥರೆಲ್ಲ ತುಂಬಾ ನೋವಿನಿಂದ ಮೃತದೇಹವನ್ನು ಸ್ಮಶಾನಕ್ಕೆ ತಂದು ಬೆಂಕಿಯಿಟ್ಟು ಕಣ್ಣೀರು ಇಟ್ಟಿದ್ದರು. ಮಾರನೇಯ ದಿನ ಅಸ್ತಿ ತರಲು ಸ್ಮಶಾನಕ್ಕೆ ಅದೇ ಗ್ರಾಮಸ್ಥರು ದಂಗಾಗಿ ಹೋಗಿದ್ದಾರೆ. ಅಸಲಿಗೆ ಆಗಿದ್ದೇನು? ಈ ಸ್ಟೋರಿಯಲ್ಲಿದೆ ಕಂಪ್ಲೀಟ್ ಮಾಹಿತಿ.

Read Full Story

01:34 PM (IST) Sep 05

28 ಕೋಟಿ ವೆಚ್ಚದಲ್ಲಿ ರಾಜ್ಯದಲ್ಲಿ ಮೋಡ ಬಿತ್ತನೆ ಆರಂಭ, 'ಇದು ಸೂಕ್ತ ಸಮಯವಲ್ಲ' ವಾರ್ನಿಂಗ್‌ ನೀಡಿದ IMD

ಬರಗಾಲ ಎದುರಿಸಲು ಕರ್ನಾಟಕ ಸರ್ಕಾರವು ಮೋಡ ಬಿತ್ತನೆ ಯೋಜನೆಗೆ ಚಾಲನೆ ನೀಡಿದೆ. ಆದರೆ, ಪ್ರಸ್ತುತ ಸಮಯವು ಮೋಡ ಬಿತ್ತನೆಗೆ ಸೂಕ್ತವಲ್ಲ ಮತ್ತು ನಿರೀಕ್ಷಿತ ಯಶಸ್ಸು ಸಿಗುವುದು ಕಷ್ಟ ಎಂದು ಹವಾಮಾನ ಇಲಾಖೆಯ ವಿಜ್ಞಾನಿಗಳು ಎಚ್ಚರಿಸಿದ್ದಾರೆ.

Read Full Story

12:51 PM (IST) Sep 05

ಸರ್ಕಾರಿ ಶಾಲೆಯ 40 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಡಬಲ್ ಗುಡ್‌ನ್ಯೂಸ್ ಕೊಟ್ಟ ಸಚಿವ ಮಧುಬಂಗಾರಪ್ಪ

ಶಿಕ್ಷಕರ ದಿನಾಚರಣೆಯಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಹಲವು ಸಿಹಿಸುದ್ದಿಗಳನ್ನು ನೀಡಿದ್ದಾರೆ. ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್, ಪಿಯು ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ಹಾಗೂ 52 ಸಾವಿರ ಅತಿಥಿ ಶಿಕ್ಷಕರ ನೇಮಕಾತಿ ಸೇರಿದಂತೆ ಹಲವು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ.
Read Full Story

12:33 PM (IST) Sep 05

Social Welfare Dept - ಅಲ್ಲೇ ಊಟ, ಅಲ್ಲೇ ನಿದ್ರೆ, ಅಲ್ಲೇ ಪಾಠ! ಸಮಾಜ ಕಲ್ಯಾಣ ಇಲಾಖೆಯ ಬೇಜವಾಬ್ದಾರಿಗೆ ನೂರಾರು ಮಕ್ಕಳು ಬಲಿ!

ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯು ಕಳೆದ ಐದು ವರ್ಷಗಳಿಂದ ಸೂಕ್ತ ಕಟ್ಟಡವಿಲ್ಲದೆ, ಸಣ್ಣ ಬಾಡಿಗೆ ಮನೆಯಲ್ಲಿ ನಡೆಯುತ್ತಿದೆ. ಇಲ್ಲಿನ 172 ವಿದ್ಯಾರ್ಥಿಗಳು ಒಂದೇ ಜಾಗದಲ್ಲಿ ಊಟ, ನಿದ್ರೆ, ಪಾಠ ಕಲಿಯುತ್ತಿದ್ದು, ಶೌಚಾಲಯದಂತಹ ಮೂಲಭೂತ ಸೌಕರ್ಯಗಳಿಲ್ಲದೆ ನರಕಯಾತನೆ ಅನುಭವಿಸುತ್ತಿದ್ದಾರೆ.

Read Full Story

12:01 PM (IST) Sep 05

KPSC ಹಗರಣದ ಆರೋಪಿ‌ ಜೊತೆ ಗದಗ DYSP ಮುರ್ತುಜಾ ಖಾದ್ರಿ ಸೇರಿ 9 ಅಧಿಕಾರಿಗಳ ಫೋಟೋ ವೈರಲ್!

ಕೆಪಿಎಸ್ ಸಿ ಹಗರಣದ ಪ್ರಮುಖ ಆರೋಪಿ ಬಸವರಾಜ್ ಕನ್ನಾಳೆ ಜೊತೆ 9 ಡಿವೈಎಸ್ ಪಿಗಳು ಫೋಟೋ ತೆಗೆಸಿಕೊಂಡಿರುವುದು ಹೊಸ ಚರ್ಚೆಗೆ ಕಾರಣವಾಗಿದೆ. ಮೈಸೂರು ಪೊಲೀಸ್ ಅಕಾಡಮಿಯಲ್ಲಿ ತೆಗೆದ ಈ ಫೋಟೋ, ಇತ್ತೀಚೆಗೆ ಸಿಐಡಿ ವಶದಲ್ಲಿರುವ ಕನ್ನಾಳೆಯ ಪ್ರಭಾವ ಪೊಲೀಸ್ ಇಲಾಖೆಯಲ್ಲೂ ಇದೆಯೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ. (ವರದಿ: ಗಿರೀಶ್ ಕಮ್ಮಾರ, ಏಷ್ಯಾನೆಟ್ ಸುವರ್ಣ ನ್ಯೂಸ್, ಗದಗ)

Read Full Story

11:53 AM (IST) Sep 05

TVK - ತಮಿಳುನಾಡಿನಲ್ಲಿ ಕಾಂಗ್ರೆಸ್‌ಗೆ ಕಾದಿದೆಯಾ ದೊಡ್ಡ ಆಘಾತ? ಸಿಎಂ ವಿಜಯ್ ಅವರ 'ಆ ಮಾತು' ಕೇಳಿ ಬೆಚ್ಚಿಬಿದ್ದ ಮೈತ್ರಿ ನಾಯಕರು!

ತಮಿಳುನಾಡಿನ ಆಡಳಿತಾರೂಢ ಮೈತ್ರಿಕೂಟದಲ್ಲಿ 2029ರ ಪ್ರಧಾನಿ ಅಭ್ಯರ್ಥಿ ಯಾರೆಂಬ ವಿಚಾರದಲ್ಲಿ ತೀವ್ರ ಭಿನ್ನಾಭಿಪ್ರಾಯ ಭುಗಿಲೆದ್ದಿದೆ. ಮುಖ್ಯಮಂತ್ರಿ ವಿಜಯ್ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಟಿವಿಕೆ ನಾಯಕರು ಬಿಂಬಿಸುತ್ತಿದ್ದರೆ, ಕಾಂಗ್ರೆಸ್ ಪಕ್ಷವು ರಾಹುಲ್ ಗಾಂಧಿಯವರೇ ತಮ್ಮ ನಾಯಕ ಎಂದು ಖಡಕ್ಕಾಗಿ ಹೇಳಿದೆ. ಈ ವಾಕ್ಸಮರವು ಮೈತ್ರಿ ಸರ್ಕಾರದ ಸ್ಥಿರತೆಯ ಬಗ್ಗೆಯೇ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
Read Full Story

11:41 AM (IST) Sep 05

ಶಿವಮೊಗ್ಗ - ಅರಣ್ಯಾಧಿಕಾರಿಗಳ ದಾಳಿ, ರಿಪ್ಪನ್‌ಪೇಟೆಯಲ್ಲಿ 21 ಕೆ.ಜಿ. ಜಿಂಕೆ ಮಾಂಸ ಸೀಜ್‌; ಆರೋಪಿಗಳು ಎಸ್ಕೇಪ್

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆಯಲ್ಲಿ ಅರಣ್ಯ ಸಂಚಾರಿ ದಳವು ಕಾರ್ಯಾಚರಣೆ ನಡೆಸಿ, ಎರ್ಟಿಗಾ ಕಾರಿನಲ್ಲಿದ್ದ 21 ಕೆ.ಜಿ. ಜಿಂಕೆ ಮಾಂಸವನ್ನು ವಶಪಡಿಸಿಕೊಂಡಿದೆ. ಈ ದಾಳಿಯ ವೇಳೆ, ಗುರುರಾಜ ಹಾಗೂ ಗಣೇಶ್ ಎಂಬ ಇಬ್ಬರು ಆರೋಪಿಗಳು ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.
Read Full Story

11:24 AM (IST) Sep 05

ಬಡ ಬೈಕರ್‌ನ ಬಿಟ್ಟು ಸರ್ಕಾರಿ ಕಾರ್‌ಗಳನ್ನ ಟ್ರಾಫಿಕ್‌ ಪೊಲೀಸರು ಹಿಡಿಯೋದು ಯಾವಾಗ? 3 ವರ್ಷದಲ್ಲಿ 82 ಸಾವಿರ ಕೇಸ್‌, 19 ಕೋಟಿ ಪೆಂಡಿಂಗ್‌!

ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕದ ಸರ್ಕಾರಿ ಮತ್ತು ಪೊಲೀಸ್ ವಾಹನಗಳು 82,000ಕ್ಕೂ ಹೆಚ್ಚು ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದು, ಬರೋಬ್ಬರಿ 19.56 ಕೋಟಿ ರೂ. ದಂಡ ಬಾಕಿ ಉಳಿಸಿಕೊಂಡಿವೆ. ಒಟ್ಟು ದಂಡದಲ್ಲಿ ಕೇವಲ ₹47.72 ಲಕ್ಷ ಮಾತ್ರ ವಸೂಲಾಗಿದೆ.

Read Full Story

11:06 AM (IST) Sep 05

Dharwad - ಕೋನರೆಡ್ಡಿ ಎಸ್ಕಾರ್ಟ್ ವಿವಾದ; ಗೃಹ ಇಲಾಖೆ ಸೈಲೆಂಟ್, ಕಾರ್ಯಕರ್ತ ವೈಲೆಂಟ್! ಪೈಸೆ ಪೈಸೆಯೂ ವಸೂಲಿ ಮಾಡಿ ಎಂದು ಲೋಕಾಯುಕ್ತಕ್ಕೆ ದೂರು!

ನವಲಗುಂದ ಶಾಸಕ ಎನ್.ಹೆಚ್. ಕೋನರಡ್ಡಿ ಅವರು ಕಾನೂನುಬಾಹಿರವಾಗಿ ಪೊಲೀಸ್ 'ಎಸ್ಕಾರ್ಟ್' ವಾಹನ ಬಳಸಿಕೊಂಡಿದ್ದಾರೆಂಬ ಆರೋಪದ ಮೇಲೆ ಲೋಕಾಯುಕ್ತ ಹಾಗೂ ಮಾನವ ಹಕ್ಕುಗಳ ಆಯೋಗಕ್ಕೆ ದೂರು ದಾಖಲಾಗಿದೆ. ಸಾಮಾಜಿಕ ಕಾರ್ಯಕರ್ತ ಮಾಬುಸಾಬ್ ಯರಗುಪ್ಪಿ ಅವರು ಈ ದೂರು ಸಲ್ಲಿಸಿದ್ದು, ಶಾಸಕರಿಂದಲೇ ವಾಹನದ ಸಂಪೂರ್ಣ ವೆಚ್ಚವನ್ನು ವಸೂಲಿ ಮಾಡುವಂತೆ ಆಗ್ರಹಿಸಿದ್ದಾರೆ.

Read Full Story

11:00 AM (IST) Sep 05

Second Bengaluru - ಮುಂಬೈ-ಪುಣೆ ಮಾದರಿಯಲ್ಲಿ ತಲೆ ಎತ್ತಲಿದೆ 2ನೇ ಬೆಂಗಳೂರು; ರೇಸ್‌ನಲ್ಲಿ ನಿಮ್ಮೂರು ಇದೆಯಾ ನೋಡಿ!

ಬೆಂಗಳೂರಿನ ಮೇಲಿನ ಒತ್ತಡ ತಗ್ಗಿಸಲು ನೀತಿ ಆಯೋಗವು 'ಎರಡನೇ ಬೆಂಗಳೂರು' ನಿರ್ಮಾಣಕ್ಕೆ ಸಲಹೆ ನೀಡಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈ ಪ್ರಸ್ತಾವನೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಮೈಸೂರು-ಮಂಡ್ಯ, ಹುಬ್ಬಳ್ಳಿ-ಧಾರವಾಡ ಸೇರಿದಂತೆ ಹಲವು ಅವಳಿ ನಗರಗಳನ್ನು ಈ ಯೋಜನೆಗೆ ಪರಿಗಣಿಸಲಾಗುತ್ತಿದೆ.
Read Full Story

10:40 AM (IST) Sep 05

ಅಡಕೆ ರೈತರ ಬದುಕು ಅತಂತ್ರ - ಗುಟ್ಕಾ ನಿಷೇಧದ ಪ್ರಸ್ತಾಪ ಕೈಬಿಡಿ ಎಂದು ಸಿ.ಟಿ.ರವಿ ಆಗ್ರಹ!

ಗುಟ್ಕಾ ನಿಷೇಧದ ಕುರಿತ ಸರ್ಕಾರದ ಹೇಳಿಕೆಯಿಂದ ಅಡಕೆ ಬೆಲೆ ಕುಸಿದಿರುವುದನ್ನು ಖಂಡಿಸಿ ಶಾಸಕ ಸಿ.ಟಿ. ರವಿ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು. ಈ ಪ್ರಸ್ತಾಪವನ್ನು ತಕ್ಷಣವೇ ಕೈಬಿಡಬೇಕೆಂದು ಆಗ್ರಹಿಸಿದರು. ಜೊತೆಗೆ, ಚಿಕ್ಕಮಗಳೂರು ಮತ್ತು ಕಡೂರು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುವುದು ಹಾಗೂ ಸ್ಥಗಿತಗೊಂಡಿರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಯಿತು.
Read Full Story

10:37 AM (IST) Sep 05

'ಮೋದಿ ಮಾತಾಡಿದ್ರೆ ಕಾನೂನು ಬೇರೆಯಾಗಲ್ಲ' ನಿಂಗಮ್ಮನ ಇಡ್ಲಿ ಬಂಡಿ ತೆರವು ಸಮರ್ಥಿಸಿದ ಪ್ರಿಯಾಂಕ್‌ ಖರ್ಗೆ

ಪ್ರಧಾನಿ ಮೋದಿಯವರಿಂದ 'ಮನ್ ಕೀ ಬಾತ್'ನಲ್ಲಿ ಶ್ಲಾಘನೆಗೆ ಒಳಗಾಗಿದ್ದ ಬೆಂಗಳೂರಿನ ಫುಟ್‌ಪಾತ್ ಇಡ್ಲಿ ವ್ಯಾಪಾರಿ ನಿಂಗಮ್ಮ ಅವರಿಗೆ ಜಿಬಿಎ ಅಧಿಕಾರಿಗಳು ಅಂಗಡಿ ತೆರವುಗೊಳಿಸಲು ಸೂಚಿಸಿದ್ದಾರೆ. ಕಾನೂನು ಎಲ್ಲರಿಗೂ ಒಂದೇ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

Read Full Story

More Trending News