ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋವೊಂದರಲ್ಲಿ, ತಾಯಿಯಿಂದ ಬೇರ್ಪಟ್ಟ ಕರುವೊಂದು ಟ್ರಕ್ ಮೇಲಿನ ಹಸುವಿನ ಚಿತ್ರವನ್ನು ತನ್ನ ನಿಜವಾದ ತಾಯಿ ಎಂದು ಭಾವಿಸುತ್ತದೆ. ಆ ಮುಗ್ಧ ಕರು ಚಿತ್ರದಲ್ಲಿರುವ ಹಸುವಿನ ಕೆಚ್ಚಲಿಗೆ ಮೂತಿ ತಾಗಿಸಿ ಹಾಲು ಕುಡಿಯಲು ಪ್ರಯತ್ನಿಸುವ ದೃಶ್ಯವು ನೆಟ್ಟಿಗರ ಹೃದಯವನ್ನು ಕರಗಿಸಿದೆ.

ಮಗುವಿಗೆ ತನ್ನ ತಾಯಿಯನ್ನು ಗುರುತಿಸಲು ಯಾವುದೇ ಛಾಯಾಚಿತ್ರ ಅಥವಾ ವಿಳಾಸದ ಅಗತ್ಯವಿರುವುದಿಲ್ಲ. ಆದರೆ ಕೆಲವೊಮ್ಮೆ, ಅತಿಯಾದ ಮುಗ್ಧತೆ ಮತ್ತು ತಾಯಿಯ ಮೇಲಿನ ಹಂಬಲವು ಬರೀ ಒಂದು ಛಾಯಾಚಿತ್ರದಲ್ಲೂ ತಾಯಿಯ ಪ್ರೀತಿಯನ್ನು ಹುಡುಕುವಂತೆ ಮಾಡುತ್ತದೆ. ತಾಯಿಯ ಮಡಿಲು ಹೇಗಿರುತ್ತದೆ ಹಾಗೂ ಅವಳ ಮುಖದಲ್ಲಿರುವ ವಾತ್ಸಲ್ಯ ಹೇಗಿರುತ್ತದೆ ಎಂಬುದನ್ನು ಬರಿ ಪದಗಳಲ್ಲಿ ವಿವರಿಸುವುದು ಅಸಾಧ್ಯ. ಮನುಷ್ಯನ ಮಗುವಾಗಲಿ ಅಥವಾ ಸಂಸಾರವಿಲ್ಲದ ಮೂಕ ಪ್ರಾಣಿಯಾಗಲಿ, ತಾಯಿಯಿಂದ ಬೇರ್ಪಟ್ಟಾಗ ಅನುಭವಿಸುವ ಭಯ ಮತ್ತು ಹಸಿವನ್ನು ನೀಗಿಸುವ ಏಕೈಕ ಶಕ್ತಿ ಎಂದರೆ ಅದು 'ಅಮ್ಮ' ಮಾತ್ರ.

ಕಣ್ಣೀರು ತರಿಸೋ ವಿಡಿಯೋ!

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಸಣ್ಣ ವಿಡಿಯೋವೊಂದು ಪ್ರತಿಯೊಬ್ಬರ ಕಣ್ಣಂಚಿನಲ್ಲಿ ನೀರು ತರಿಸುವಂತಿದೆ. ಈ ವಿಡಿಯೋದಲ್ಲಿ, ತಾಯಿಯಿಂದ ಬೇರ್ಪಟ್ಟ ಸಣ್ಣ ಕರುವೊಂದು ರಸ್ತೆಯಲ್ಲಿ ಸಾಗುತ್ತಿದ್ದ ಟ್ರಕ್ ಒಂದರ ಮೇಲೆ ಬಿಡಿಸಲಾಗಿದ್ದ ಹಸುವಿನ ದೊಡ್ಡ ಚಿತ್ರವನ್ನು ನೋಡುತ್ತದೆ.

ಚಿತ್ರದಲ್ಲೇ ಹಾಲು ಹುಡುಕಿದ ಮುಗ್ಧತೆ!

ಟ್ರಕ್‌ನ ಹಿಂಭಾಗದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದ್ದ ಹಸುವಿನ ಚಿತ್ರವನ್ನು ಕಂಡ ಆ ಕರು, ಅದನ್ನು ತನ್ನ ನಿಜವಾದ ತಾಯಿ ಎಂದೇ ತಪ್ಪಾಗಿ ಭಾವಿಸುತ್ತದೆ. ತಕ್ಷಣವೇ ಆ ಚಿತ್ರದ ಹತ್ತಿರಕ್ಕೆ ಓಡಿಹೋಗುವ ಕರು, ಅದಕ್ಕೆ ಮುಖ ಒಡ್ಡಿ ನಿಲ್ಲುತ್ತದೆ. ಅದು ನಿರ್ಜೀವ ಚಿತ್ರ ಎಂಬ ಸತ್ಯ ತಿಳಿಯದ ಆ ಮುಗ್ಧ ಕರು, ತನ್ನ ಹಸಿವನ್ನು ನೀಗಿಸಿಕೊಳ್ಳಲು ಆ ಫೋಟೋದಲ್ಲಿದ್ದ ಹಸುವಿನ ಕೆಚ್ಚಲಿನ ಭಾಗಕ್ಕೆ ಮೂಗು ಮುಟ್ಟಿಸಿ ಹಾಲು ಕುಡಿಯಲು ನಿರಂತರವಾಗಿ ಪ್ರಯತ್ನಿಸುತ್ತದೆ. ಕೆಲ ಕ್ಷಣಗಳ ಕಾಲ ಆ ಚಿತ್ರವನ್ನೇ ದಿಟ್ಟಿಸಿ ನೋಡುವ ಆ ಕರು, "ಅಮ್ಮ ಏಕೆ ನನ್ನನ್ನು ನೋಡುತ್ತಿಲ್ಲ, ಏಕೆ ಮಾತನಾಡಿಸುತ್ತಿಲ್ಲ?" ಎಂಬಂತೆ ಅಸಹಾಯಕತೆಯಿಂದ ನಿಲ್ಲುತ್ತದೆ. ಕ್ಯಾಮೆರಾದಲ್ಲಿ ಸೆರೆಯಾದ ಈ ಕರುಳು ಹಿಂಡುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಆಗುತ್ತಿದ್ದಂತೆ ಕೋಟ್ಯಂತರ ವೀಕ್ಷಕರ ಹೃದಯ ಮುಟ್ಟಿದೆ.

ಇಂಟರ್ನೆಟ್‌ನ ಅತ್ಯಂತ ಭಾವುಕ ವೀಡಿಯೋ!

ಈ ವೀಡಿಯೊವನ್ನು ವೀಕ್ಷಿಸಿದ ನೆಟ್ಟಿಗರು ತಮ್ಮ ಭಾವನೆಗಳನ್ನು ಕಮೆಂಟ್ ಮೂಲಕ ಹಂಚಿಕೊಳ್ಳುತ್ತಿದ್ದಾರೆ. "ಮಗು ದಾರಿ ತಪ್ಪಿದಾಗ ಅಥವಾ ತಾಯಿಯಿಂದ ದೂರವಾದಾಗ, ಅದು ಮನುಷ್ಯನ ಮಗುವಾಗಿರಲಿ ಅಥವಾ ಪ್ರಾಣಿಯಾಗಿರಲಿ, ಮೊದಲು ಹುಡುಕುವುದು ತನ್ನ ತಾಯಿಯನ್ನೇ" ಎಂದು ಹಲವರು ಬರೆದುಕೊಂಡಿದ್ದಾರೆ. ಈ ಕರುವಿನ ಅತಿಯಾದ ಮುಗ್ಧತೆಯನ್ನು ಕಂಡು ಅನೇಕರು ಇದನ್ನು ಇಂಟರ್ನೆಟ್‌ನಲ್ಲಿ ಈವರೆಗೆ ಬಂದ 'ಅತ್ಯಂತ ಭಾವನಾತ್ಮಕ ವೀಡಿಯೊ' ಎಂದು ಬಣ್ಣಿಸಿದ್ದಾರೆ. ಪ್ರಾಣಿಗಳಲ್ಲಿಯೂ ಮನುಷ್ಯರಿಗಿಂತಲೂ ಆಳವಾದ ಭಾವನೆಗಳಿರುತ್ತವೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಆ ಕರುವಿಗೆ ತಾನು ನೋಡುತ್ತಿರುವುದು ಬರೀ ಬಣ್ಣದ ಚಿತ್ರವೋ ಅಥವಾ ನಿಜವಾದ ಹಸುವೋ ಎಂಬ ವ್ಯತ್ಯಾಸ ತಿಳಿಯುತ್ತಿಲ್ಲ, ಅದಕ್ಕೆ ಕಾಣಿಸುತ್ತಿರುವುದು ಬರೀ ತನ್ನ 'ತಾಯಿ' ಮಾತ್ರ.

ಯಾರೂ ತುಂಬಲಾಗದ ತಾಯಿಯ ಸ್ಥಾನ!

ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಹಂಚಿಕೊಳ್ಳಲ್ಪಡುತ್ತಿರುವ ಈ ವಿಡಿಯೋ, ಜಗತ್ತಿನಲ್ಲಿ 'ತಾಯಿ' ಎಂಬ ಸ್ಥಾನವನ್ನು ಬೇರೆ ಯಾರಿಂದಲೂ, ಯಾವುದರಿಂದಲೂ ಭರ್ತಿ ಮಾಡಲು ಸಾಧ್ಯವಿಲ್ಲ ಎಂಬುದನ್ನು ಬಲವಾಗಿ ನೆನಪಿಸುತ್ತಿದೆ. ಮಗು ಎಷ್ಟೇ ದೊಡ್ಡದಾದರೂ ಅಥವಾ ಮೂಕ ಪ್ರಾಣಿಯಾಗಿದ್ದರೂ, ತಾಯಿಯ ಮಡಿಲೇ ಅದಕ್ಕೆ ಅತ್ಯಂತ ಸುರಕ್ಷಿತವಾದ ತಾಣ. ಈ ಸಣ್ಣ ವಿಡಿಯೋ ನಮಗೆ ಕಲಿಸುವ ಪಾಠ ಒಂದೇ, ತಾಯಿ ಎಂದರೆ ಬರೀ ಸಂಬಂಧವಲ್ಲ, ಪ್ರತಿಯೊಂದು ಜೀವಿಯ ಸಂಪೂರ್ಣ ಪ್ರಪಂಚ!