Published : Aug 14, 2026, 07:29 AM ISTUpdated : Aug 14, 2026, 11:23 PM IST

State News Live: breaking news - ನಾಳೆ ಸ್ವಾತಂತ್ರ್ಯ ದಿನಾಚರಣೆ.. ಬೆಂಗಳೂರಲ್ಲಿ ಶಂಕಿತ ವ್ಯಕ್ತಿ ಅರೆಸ್ಟ್..!

ಸಾರಾಂಶ

ಬೆಂಗಳೂರು (ಆ.14):ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಹಗರಣದ ಆರೋಪಿಯಾಗಿರುವ ನೂತನ ಸಚಿವ ಬಿ.ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ -ಪ್ರಮುಖ ಪ್ರತಿಪಕ್ಷ ಬಿಜೆಪಿ ಕಲ್ಯಾಣ ಕರ್ನಾಟಕದಲ್ಲಿ -ಪಾದಯಾತ್ರೆ ನಡೆಸಲು ಮುಂದಾಗಿದೆ. ಪಕ್ಷದ ವರಿಷ್ಠರು ಒಪ್ಪಿಗೆ ನೀಡಿದಲ್ಲಿ ವಿಧಾನಮಂಡಲದ ಅಧಿವೇಶನದೊಳಗಾಗಿಯೇ ಅಂದರೆ, ಮುಂದಿನ ವಾರದ ವೇಳೆಗೆ ಮಾಜಿ ಸಚಿವ ಬಿ.ಶ್ರೀರಾಮುಲು ನೇತೃತ್ವದಲ್ಲಿ ಪಾದಯಾತ್ರೆ ಆರಂಭವಾಗಲಿದೆ. ಅದರೊಂದಿಗೆ ಇಂದಿನ ರಾಜ್ಯ ಸುದ್ದಿಗಳ ಅಪ್‌ಡೇಟ್‌ ಇಲ್ಲಿದೆ.

 

11:23 PM (IST) Aug 14

breaking news - ನಾಳೆ ಸ್ವಾತಂತ್ರ್ಯ ದಿನಾಚರಣೆ.. ಬೆಂಗಳೂರಲ್ಲಿ ಶಂಕಿತ ವ್ಯಕ್ತಿ ಅರೆಸ್ಟ್..!

ಇಡೀ ದೇಶ ನಾಳೆ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಕ್ಕೆ ಸಿದ್ಧವಾಗುತ್ತಿದೆ. ವಿಧ್ವಂಸಕ ಕೃತ್ಯ ಎಸಗಲು ಹೊಂಚು ಹಾಕಿದ್ದ ಶಂಕಿತ ವ್ಯಕ್ತಿಯನ್ನ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಸೆರೆಹಿಡಿದಿದ್ದಾರೆ.

Read Full Story

11:04 PM (IST) Aug 14

Viral News - ಭಾರತದಲ್ಲಿ ದುಡಿದು ವಿದೇಶಕ್ಕೆ ಹಾರಿದ ವ್ಯಕ್ತಿ; ಮುಂದಿನ 3 ವರ್ಷಗಳಲ್ಲಿ ನಡೆದ ಪವಾಡ ಕೇಳಿದ್ರೆ ಶಾಕ್ ಆಗ್ತೀರಾ!

ಭಾರತದ 37 ವರ್ಷದ ಉದ್ಯಮಿಯೊಬ್ಬರು, 34ನೇ ವಯಸ್ಸಿನಲ್ಲಿ ₹1 ಕೋಟಿ ಆಸ್ತಿಯಿಂದ, ಮಧ್ಯಪ್ರಾಚ್ಯದಲ್ಲಿ ತೆರಿಗೆ ರಹಿತ ಉದ್ಯೋಗ ಪಡೆದು ಕೇವಲ 3 ವರ್ಷಗಳಲ್ಲಿ ತಮ್ಮ ಸಂಪತ್ತನ್ನು ₹7.5 ಕೋಟಿಗೆ ಹೆಚ್ಚಿಸಿಕೊಂಡಿದ್ದಾರೆ. ತಮ್ಮ ಈ ಯಶಸ್ಸಿನ ಪಯಣ, ಹೂಡಿಕೆಯ ವಿವರಗಳು ಮತ್ತು ಸಂಪತ್ತು ಗಳಿಕೆಯ ರಹಸ್ಯವನ್ನು ಅವರು ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾರೆ.
Read Full Story

10:23 PM (IST) Aug 14

20 ವರ್ಷ ಕಾಲ ಕೆಲಸ ಮಾಡಿದ ಮೇಲೆ ತಿಂಗಳ ಪಿಂಚಣಿ ಎಷ್ಟಾಗುತ್ತೆ? ಇಪಿಎಫ್‌ಒ ಇಪಿಎಸ್ ಸೂತ್ರದ ಮೂಲಕ ನಿಮ್ಮ ಪಿಂಚಣಿ ನೀವೇ ಲೆಕ್ಕ ಹಾಕಿ!

ಖಾಸಗಿ ವಲಯದಲ್ಲಿ 20 ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿದ ನೌಕರರಿಗೆ, ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ (EPFO) ಹೆಚ್ಚುವರಿಯಾಗಿ 2 ವರ್ಷಗಳ 'ವೇಟೇಜ್ ಬೋನಸ್' ನೀಡುತ್ತದೆ. ಈ ನಿಯಮದ ಅಡಿಯಲ್ಲಿ, 20 ವರ್ಷಗಳ ಸೇವೆಯನ್ನು 22 ವರ್ಷಗಳೆಂದು ಪರಿಗಣಿಸಿ ಪಿಂಚಣಿ ಲೆಕ್ಕ ಹಾಕಲಾಗುತ್ತದೆ, ಇದರಿಂದಾಗಿ ನಿವೃತ್ತಿಯ ನಂತರ ಸಿಗುವ ಮಾಸಿಕ ಪಿಂಚಣಿಯಲ್ಲಿ ಗಣನೀಯ ಏರಿಕೆಯಾಗುತ್ತದೆ.
Read Full Story

09:38 PM (IST) Aug 14

FDA - ಆಹಾರ ಸುರಕ್ಷತೆಗೆ ಮಹಾರಾಷ್ಟ್ರಕ್ಕೂ ಮುನ್ನವೇ ದಾರಿ ತೋರಿಸಿದ್ದು ಕರ್ನಾಟಕ; ನಾವೇ ಟ್ರೆಂಡ್‌ ಸೆಟರ್‌ ಎಂದ ಕನ್ನಡದ ಖಡಕ್‌ ಆಫೀಸರ್!

ಕರ್ನಾಟಕದಲ್ಲಿ ಆಹಾರ ಸುರಕ್ಷತಾ ಇಲಾಖೆಯು ಸರ್ಕಾರಿ ಕ್ಯಾಂಟೀನ್‌ಗಳಿಂದ ಹಿಡಿದು 5-ಸ್ಟಾರ್ ಹೋಟೆಲ್‌ಗಳವರೆಗೆ ಸರಣಿ ದಾಳಿಗಳನ್ನು ನಡೆಸುತ್ತಿದೆ. ಮಹಾರಾಷ್ಟ್ರವನ್ನು ಅನುಸರಿಸುತ್ತಿಲ್ಲ, ಬದಲಾಗಿ ಕಬಾಬ್ ಬಣ್ಣ ನಿಷೇಧದಂತಹ ಕ್ರಮಗಳಿಂದ ದೇಶಕ್ಕೇ ನಾವೇ ಟ್ರೆಂಡ್‌ಸೆಟರ್ ಎಂದು ಎಫ್‌ಡಿಎ ಜಂಟಿ ಆಯುಕ್ತ ಶ್ರೀನಿವಾಸ್ ಕೆ ಹೇಳಿದ್ದಾರೆ.

Read Full Story

09:09 PM (IST) Aug 14

‘ಯೂ ಟರ್ನ್‌’ ಮೂಲಕ ಸದ್ದು ಮಾಡಿದ್ದ ಶ್ರದ್ಧಾ ಶ್ರೀನಾಥ್‌ಗೆ ಈಗ ಅವಕಾಶಗಳ ಕೊರತೆ - ಕಾರಣವೇನು?

ನಟಿಯಾಗಿ ಒಳ್ಳೆಯ ಹೆಸರು, ಮೂರು ಭಾಷೆಗಳಲ್ಲಿ ಗಮನಾರ್ಹ ಸಿನಿಮಾಗಳು, ಟಾಪ್‌ ಹೀರೋಗಳ ಜೊತೆ ತೆರೆ ಹಂಚಿಕೊಂಡ ಅನುಭವ... ಇಷ್ಟೆಲ್ಲ ಇದ್ದರೂ ಶ್ರದ್ಧಾ ಶ್ರೀನಾಥ್‌ ಅವರ ಕರಿಯರ್‌ ಮಾತ್ರ ನಿರೀಕ್ಷಿಸಿದ ವೇಗದಲ್ಲಿ ಸಾಗುತ್ತಿಲ್ಲ.

Read Full Story

08:38 PM (IST) Aug 14

ಬೆಂಗಳೂರಲ್ಲಿ ರಕ್ಕಸನಾದ ಪತಿ; ಪ್ರೀತಿಸಿ ಮದ್ವೆಯಾದ ಪತ್ನಿಯನ್ನ ಬರ್ಬರವಾಗಿ ಮುಗಿಸಿ ತಾನೂ ಪ್ರಾಣಬಿಟ್ಟ..

ಆತ ಪ್ರೀತಿಸಿ ಅವಳೇ ನನಗೆ ಬೇಕು ಎಂದು ಮದುವೆ ಆಗಿದ್ದ. ಮದುವೆ ಬಳಿಕ ಕೌಟುಂಬಿಕ ಕಲಹ. ಸಿಟ್ಟಿಗೆದ್ದ ಪತಿ ಆಕೆಯನ್ನ ಮುಗಿಸಿ ತಾನೂ ಕೂಡ ಬದುಕಿನ ಪಯಣ ಮುಗಿಸಿದ್ದಾನೆ. ಇಡೀ ಬೆಂಗಳೂರನ್ನೇ ಬೆಚ್ಚಿಬೀಳಿಸಿದ ಸ್ಟೋರಿ ಇಲ್ಲಿದೆ.

Read Full Story

08:21 PM (IST) Aug 14

ಒಂದೇ ಹುಡುಗನ ಮೇಲೆ ಇಬ್ಬರಿಗೂ ಲವ್‌ - ಏನಿದು ಜಾನ್ವಿ-ಶ್ರೀಲೀಲಾ ಹೊಸ ವಿಷ್ಯ?

ಅವಕಾಶಗಳು ಸಿಗದ ಜಾಗದಲ್ಲಿ ಸುಮ್ಮನೆ ಸಮಯ ಕಳೆಯುವುದಕ್ಕಿಂತ, ಆಫರ್‌ಗಳಿರುವ ಕಡೆ ಹೆಜ್ಜೆ ಇಡುವುದೇ ಬೆಸ್ಟ್‌ ಅಲ್ಲವೇ? ಸದ್ಯ ನಟಿ ಶ್ರೀಲೀಲಾ ಅವರ ಸಿನಿ ಜರ್ನಿ ನೋಡಿದರೆ ಇದೇ ರೀತಿ ಅನಿಸುತ್ತಿದೆ.

Read Full Story

08:16 PM (IST) Aug 14

Cricketer - ದಶಕಗಳ ಕಾಯುವಿಕೆ, ಕೈಗೆ ಸಿಗದ ಗೌರವ; ‘ಪದ್ಮಶ್ರೀ’ಪ್ರಶಸ್ತಿಗಾಗಿ ಕಣ್ಣೀರಿಟ್ಟ ಭಾರತೀಯ ಕ್ರಿಕೆಟ್ ದಿಗ್ಗಜ!

1973ರಲ್ಲಿ 'ಪದ್ಮಶ್ರೀ' ಪ್ರಶಸ್ತಿಗೆ ಆಯ್ಕೆಯಾದ ಭಾರತದ ಮಾಜಿ ಕ್ರಿಕೆಟಿಗ 53 ವರ್ಷಗಳಾದರೂ ಆ ಗೌರವ ಇನ್ನೂ ಕೈಸೇರಿಲ್ಲ. ಇಂಗ್ಲೆಂಡ್‌ನಲ್ಲಿದ್ದಾಗ ಅಧಿಕೃತ ಪತ್ರ ತಲುಪದ ಕಾರಣದಿಂದ ವಂಚಿತರಾದ ಅವರು, ತಮ್ಮ 88ನೇ ವಯಸ್ಸಿನಲ್ಲಿಯಾದರೂ ಪ್ರಶಸ್ತಿ ಸ್ವೀಕರಿಸುವ ಆಸೆ ವ್ಯಕ್ತಪಡಿಸಿದ್ದಾರೆ. ಇದೀಗ ಬಿಸಿಸಿಐ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಸರ್ಕಾರಕ್ಕೆ ಶಿಫಾರಸು ಮಾಡಲು ಮುಂದಾಗಿದೆ.

Read Full Story

07:50 PM (IST) Aug 14

Independence Day Wishes in Kannada - ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು - ಪ್ರೀತಿಪಾತ್ರರಿಗೆ ಕಳುಹಿಸಲು ಇಲ್ಲಿವೆ ಬೆಸ್ಟ್ ಮೆಸೇಜ್‌ಗಳು

ಭಾರತದ ಸ್ವಾತಂತ್ರ್ಯ ದಿನವು ದೇಶದ ಸ್ವಾತಂತ್ರ್ಯ ಹೋರಾಟ, ತ್ಯಾಗ ಮತ್ತು ಏಕತೆಯನ್ನು ಸ್ಮರಿಸುವ ವಿಶೇಷ ದಿನ. ಕುಟುಂಬ, ಸ್ನೇಹಿತರು ಹಾಗೂ ಆತ್ಮೀಯರಿಗೆ ಕಳುಹಿಸಲು ಹೃದಯಸ್ಪರ್ಶಿ ಶುಭಾಶಯಗಳು, ಪ್ರೇರಣಾದಾಯಕ ಸಂದೇಶಗಳು, ದೇಶಭಕ್ತಿ ಉಲ್ಲೇಖಗಳು ಮತ್ತು ವಾಟ್ಸ್ಆ್ಯಪ್ ಸ್ಟೇಟಸ್‌ಗಳನ್ನು ಆಯ್ಕೆ ಮಾಡಬಹುದು. ತ್ರಿವರ್ಣ ಧ್ವಜದ ಹೆಮ್ಮೆ ಹಾಗೂ ಸ್ವಾತಂತ್ರ್ಯದ ಮೌಲ್ಯವನ್ನು ನೆನಪಿಸುವ ಸಂದೇಶಗಳು ದಿನವನ್ನು ಅರ್ಥಪೂರ್ಣವಾಗಿಸುತ್ತವೆ.

Read Full Story

07:06 PM (IST) Aug 14

Yash - ಬಸ್ ಚಾಲಕನ ಮಗ ಇಂದು ಭಾರತದ ರಾಕಿ ಭಾಯ್; ಮೋದಿ-ಯಶ್ ಜೀವನಕ್ಕಿದೆ ಆ ಒಂದು ಕನೆಕ್ಷನ್!

ಬಸ್ ಚಾಲಕನ ಮಗನಾಗಿ ಬೆಳೆದು ಇಂದು 'ರಾಕಿ ಭಾಯ್' ಆದ ನಟ ಯಶ್ ಮತ್ತು ಪ್ರಧಾನಿಯಾದ ನರೇಂದ್ರ ಮೋದಿಯವರ ಜೀವನದಲ್ಲಿ ಒಂದು ರೋಚಕ ಸಾಮ್ಯತೆಯಿದೆ. ಅದೇನು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

Read Full Story

06:50 PM (IST) Aug 14

‘ರಾಕಿ ಭಾಯ್‌’ ಬಾಡಿಯ ಹಿಂದೆ ಮ್ಯಾಜಿಕ್‌ ಇಲ್ಲ - ಯಶ್‌ ಫಾಲೋ ಮಾಡುವ ಫಿಟ್‌ನೆಸ್‌ ಮಂತ್ರ ಇದು!

ರಾಕಿ ಭಾಯ್‌ ಅಂದ್ರೆ ಸ್ಟೈಲ್‌, ಆ್ಯಕ್ಷನ್‌ ಮತ್ತು ಧಮ್‌! ಆದರೆ ಯಶ್‌ ಅವರ ಮತ್ತೊಂದು ದೊಡ್ಡ ಗುರುತು ಅಂದರೆ ಅವರ ಫಿಟ್‌ ಬಾಡಿ. ‘ಕೆಜಿಎಫ್‌’ನಿಂದ ‘ಟಾಕ್ಸಿಕ್‌’ವರೆಗೆ ಯಶ್‌ ಅವರ ದೇಹದ ಫಿಟ್‌ನೆಸ್‌ ನೋಡಿ ಅಭಿಮಾನಿಗಳು..

Read Full Story

06:21 PM (IST) Aug 14

ನಮ್ಮನ್ನ ಭಿಕ್ಷೆ ಬೇಡುವ ಸ್ಥಿತಿಗೆ ತಳ್ಳಬೇಡಿ - ದಿಢೀರ್ ಸುದ್ದಿಗೋಷ್ಠಿ ನಡೆಸಿ ಪ್ರಕಾಶ್ ರಾಜ್ ಆಕ್ರೋಶ!

ಮತದಾರರ ಪಟ್ಟಿ ಪರಿಷ್ಕರಣೆ (SIR) ಹೆಸರಿನಲ್ಲಿ ಅರ್ಹರ ಹೆಸರುಗಳನ್ನು ಕೈಬಿಡುತ್ತಿರುವ ಚುನಾವಣಾ ಆಯೋಗದ ವಿರುದ್ಧ ನಟ ಪ್ರಕಾಶ್ ರಾಜ್ ವಾಗ್ದಾಳಿ ನಡೆಸಿ, ಇದನ್ನು 'ಜನರನ್ನು ಹೊರಗಿಡುವ ಷಡ್ಯಂತ್ರ' ಎಂದು ಕರೆದರು. ಮತದಾನದ ಹಕ್ಕಿಗಾಗಿ ಜನರನ್ನು ಭಿಕ್ಷೆ ಬೇಡುವ ಸ್ಥಿತಿಗೆ ತಳ್ಳಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಈ ಪ್ರಕ್ರಿಯೆಗೆ ಕನಿಷ್ಠ ಆರು ತಿಂಗಳ ಕಾಲಾವಕಾಶ ನೀಡಬೇಕೆಂದು ಒತ್ತಾಯಿಸಿದರು.

Read Full Story

06:21 PM (IST) Aug 14

ಅಯ್ಯಯ್ಯೋ.. ಕೊಡಗಿನಲ್ಲಿ ಆಘಾತಕಾರಿ ಘಟನೆ - ತಾಯಿಯ ಅಕ್ರಮ ಸಂಬಂಧಕ್ಕೆ ಮಗು ಬಲಿ

ಪ್ರಪಂಚದ ಜ್ಞಾನವನ್ನೇ ಅರಿಯದ ನಾಲ್ಕು ವರ್ಷದ ಕಂದ ಅದು. ತನ್ನ ತಾಯಿಯೊಂದಿಗೆ ಆಟವಾಡಿಕೊಂಡು ಕಾಲ ಕಳೆದುಕೊಂಡಿತ್ತು. ಆದರೆ ಅದೇ ತಾಯಿಯ ಅನೈತಿಕ ಸಂಬಂಧವೇ ಈ ಮಗುವಿನ ಜೀವಕ್ಕೆ ಎರವಾಗುತ್ತದೆ.

Read Full Story

06:17 PM (IST) Aug 14

AUS Vs BAN - ಸ್ಟಾರ್ಕ್, ಮೆಹದಿ ನಡುವೆ ನಿಲ್ಲದ ಜಗಳ; ಬಾಂಗ್ಲಾ ಪಂಚ್ ಗೆ ತತ್ತರಿಸಿದ ಆಸ್ಟ್ರೇಲಿಯಾ! ರಣಾಂಗಣವಾದ ಕ್ರೀಡಾಂಗಣ

ಆಸ್ಟ್ರೇಲಿಯಾ-ಬಾಂಗ್ಲಾದೇಶ ಟೆಸ್ಟ್ ಪಂದ್ಯದಲ್ಲಿ, ತಾಂಜಿದ್ ಹಸನ್ ಚೊಚ್ಚಲ ಶತಕ ಸಿಡಿಸಿ ಮಿಂಚಿದರು. ಆದರೆ, ಪಿಚ್ ಮೇಲೆ ಓಡಿದ ಮೆಹಿದಿ ಹಸನ್ ಮಿರಾಜ್‌ಗೆ ಮಿಚೆಲ್ ಸ್ಟಾರ್ಕ್ ತೀವ್ರ ಎಚ್ಚರಿಕೆ ನೀಡಿದ್ದು, ಮೈದಾನದಲ್ಲಿ ವಾಗ್ವಾದಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಅವರು ಹೇಳಿದ್ದೇನು? ಈ ಕುರಿತು ಕಂಪ್ಲೀಟ್‌ ಸ್ಟೋರಿ ಇಲ್ಲಿದೆ.

Read Full Story

05:42 PM (IST) Aug 14

‘Believer’ ಹಾಡು ಬದಲಿಸಿದ ಬದುಕು - ಹೇಮಲತಾ ಈಗ ಕನ್ನಡದ ಬಿಗ್‌ ಬಾಸ್‌ ಮನೆಗೆ ಹೋಗ್ತಾರಾ?

Hemalatha Jayanna Bigg Boss: ಸೋಷಿಯಲ್‌ ಮೀಡಿಯಾದಲ್ಲಿ ಸಿಂಗರ್‌ ಆಗಿ ಗುರುತಿಸಿಕೊಂಡಿರುವ ಹೇಮಲತಾ ಜಯಣ್ಣ ಕೂಡ ಅಗ್ನಿಪರೀಕ್ಷೆಗೆ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಸದ್ದು ಮಾಡುತ್ತಿದೆ.

Read Full Story

05:28 PM (IST) Aug 14

breaking news - ರೇಷನ್ ಕಾರ್ಡ್‌ ರದ್ದಾಗುವ ಆತಂಕದಲ್ಲಿದ್ದ ಜನರಿಗೆ ರಿಲೀಫ್ ಕೊಟ್ಟ ಸರ್ಕಾರ

ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಬಿಪಿಎಲ್ (BPL) ಕಾರ್ಡ್‌ಗಳು ರದ್ದಾಗುತ್ತವೆ ಎಂಬ ಭೀತಿಯಲ್ಲಿದ್ದ ಲಕ್ಷಾಂತರ ಕುಟುಂಬಗಳಿಗೆ ರಾಜ್ಯ ಸರ್ಕಾರ ಕೊಂಚ ನಿರಾಳತೆ ನೀಡಿದೆ. ಬಿಪಿಎಲ್ ಕಾರ್ಡ್‌ಗಳ ಪರಿಷ್ಕರಣಾ ಪ್ರಕ್ರಿಯೆಯನ್ನು ಸದ್ಯಕ್ಕೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವ ರಿಜ್ವಾನ್ ಅರ್ಷದ್ ತಿಳಿಸಿದ್ದಾರೆ.

Read Full Story

05:17 PM (IST) Aug 14

ಸಾವಿರಾರು ವಿದ್ಯಾರ್ಥಿಗಳು ಒಂದೇ ಕಡೆ ಸೇರಿದ್ದೇಕೆ? ಗಂಗಾವತಿಯಲ್ಲಿ ಶಾಸಕ ಜನಾರ್ದನ ರೆಡ್ಡಿ ಮಾಡಿದ್ದೇನು?

80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಗಂಗಾವತಿಯಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಹಮ್ಮಿಕೊಂಡಿದ್ದ ಭವ್ಯ "ಬೃಹತ್ ತಿರಂಗ ಯಾತ್ರೆ"ಗೆ ಶಾಸಕ ಜನಾರ್ದನ ರೆಡ್ಡಿ ಚಾಲನೆ ನೀಡಿದರು.

Read Full Story

05:02 PM (IST) Aug 14

26 ಮನೆಗಳ ನೆಲಸಮಕ್ಕೆ ಆದೇಶ.. ಹೊನ್ನಾವರ ಅರಣ್ಯ ಇಲಾಖೆಯ ನೋಟಿಸ್‌ಗೆ ಬೆಚ್ಚಿಬಿದ್ದ ಜನ..!

ಅರಣ್ಯವನ್ನೇ ನಂಬಿ ಬದುಕು ಕಟ್ಟಿಕೊಂಡ ಉತ್ತರ ಕನ್ನಡ ಜಿಲ್ಲೆಯ ನಿವಾಸಿಗಳಿಗೆ ಅರಣ್ಯ ಇಲಾಖೆಯ ತೊಂದರೆ ನಿನ್ನೆ ಮೊನ್ನೆಯದಲ್ಲ. ಇದೀಗ ಹೊನ್ನಾವರ ತಾಲೂಕಿನ 26 ಮನೆಗಳನ್ನ ನೆಲಸಮಗೊಳಿಸವಂತೆ ಆದೇಶ ನೀಡಲಾಗಿದೆ. ಅರಣ್ಯಾ ಇಲಾಖೆಯ ಏಕಾಏಕಿ ಈ ಕ್ರಮವು ಅಲ್ಲಿನ ನಿವಾಸಿಗಳನ್ನ ಕಂಗಾಲಾಗುವಂತೆ ಮಾಡಿದೆ..

Read Full Story

04:53 PM (IST) Aug 14

Khadi and Village Industries - ನಲುಗಿದ ಖಾದಿ ಗ್ರಾಮೋದ್ಯೋಗ, ಬೀದಿಗೆ ಬಿದ್ದ ಕಾರ್ಮಿಕರು - ₹150 ಕೋಟಿ ಪ್ರೋತ್ಸಾಹಧನ ನೀಡದೆ ಸತಾಯಿಸುತ್ತಿರುವ ಸರ್ಕಾರ!

ಹುಬ್ಬಳ್ಳಿಯ ರಾಷ್ಟ್ರಧ್ವಜ ತಯಾರಿಕಾ ಘಟಕವು ಸರ್ಕಾರದ ಧ್ವಜ ಸಂಹಿತೆ ತಿದ್ದುಪಡಿ ಮತ್ತು ₹150 ಕೋಟಿ ಪ್ರೋತ್ಸಾಹಧನ ವಿಳಂಬದಿಂದ ತೀವ್ರ ಸಂಕಷ್ಟದಲ್ಲಿದೆ. ಇದರಿಂದಾಗಿ ಖಾದಿ ಧ್ವಜಗಳ ಮಾರಾಟ ಕುಸಿದು, ಅಲ್ಲಿನ ನೇಕಾರರು ಮತ್ತು ಕಾರ್ಮಿಕರ ಬದುಕು ಬೀದಿಗೆ ಬಿದ್ದಿದೆ.
Read Full Story

04:47 PM (IST) Aug 14

ಸಂತೋಷ್‌ ಬಾಲರಾಜ್‌ ಕೊನೆಯ ಸಿನಿಮಾ ‘ಬೆಂಟ್ಲಿ’ - ಗೆಳೆಯನ ಪಾತ್ರಕ್ಕೆ ಧ್ವನಿ ನೀಡಿದ ಯೋಗೀಶ್‌

ಅದು ಪುಣ್ಯ ಸ್ಮರಣೆಯ ಶೋಕ ಮತ್ತು ಸಿನಿಮಾವೊಂದರ ಟ್ರೇಲರ್‌ ಬಿಡುಗಡೆ ಸಂಭ್ರಮ. ಈ ಎರಡಕ್ಕೂ ಒಂದೇ ವೇದಿಕೆ ಸಾಕ್ಷಿಯಾಗಿತ್ತು. ‘ನನ್ನ ಗೆಳೆಯನ ಪಾತ್ರಕ್ಕೆ ನನ್ನ ಧ್ವನಿ ಕೊಡುವ ಸಂದರ್ಭ ಬರುತ್ತದೆ ಅಂತ ನಾನು ಕನಸಿನಲ್ಲೂ ಅಂದುಕೊಂಡಿರಲಿಲ್ಲ.

Read Full Story

04:35 PM (IST) Aug 14

Exclusive - ಸುಂದರ್‌ ರಾಜ್‌ 75ಕ್ಕೆ 250 - ನೂರಾರು ಪಾತ್ರಗಳಿಗೆ ಜೀವ ನೀಡಿದ ಮಹಾ ಕಲಾವಿದ

ಸುಂದರ್‌ ರಾಜ್‌ ಮುಖ್ಯ ಪಾತ್ರದಲ್ಲಿ ನಟಿಸಿರುವ, ವೆಂಕಟ್‌ ಭಾರದ್ವಾಜ್‌ ನಿರ್ದೇಶನದ, ಹಿರಿಯ ಪೊಲೀಸ್‌ ಅಧಿಕಾರಿ ಎಸ್‌.ಕೆ. ಉಮೇಶ್‌ ಕಥೆ ಆಧರಿಸಿದ ‘ಚಾರ್ಜ್‌ಶೀಟ್‌’ ಸಿನಿಮಾ ಇಂದು ಬಿಡುಗಡೆಯಾಗುತ್ತಿದೆ. ಇದು ಸುಂದರ್‌ ರಾಜ್‌ ನಟನೆಯ 250ನೇ ಸಿನಿಮಾ.

Read Full Story

04:27 PM (IST) Aug 14

ಶಿವಮೊಗ್ಗದಲ್ಲಿ ಹೃದಯ ವಿದ್ರಾವಕ ಘಟನೆ.. ಕಡಜ ಹುಳುಗೆ 8 ವರ್ಷದ ಬಾಲಕ ಬಲಿ..

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ. 8 ವರ್ಷದ ಬಾಲಕನೊಬ್ಬ ಕಡಜ ಹುಳು ಕಚ್ಚಿ ಮೃತಪಟ್ಟಿದ್ದಾನೆ. ಇನ್ನೂ ಅವರ ತಂದೆಗೆ ಗಂಭೀರ ಗಾಯವಾಗಿದೆ. ಈ ಕುರಿತ ಸ್ಟೋರಿ ಇಲ್ಲಿದೆ..

Read Full Story

04:00 PM (IST) Aug 14

VVS ಲಕ್ಷ್ಮಣ್‌ಗೆ ಮತ್ತೊಂದು ದೊಡ್ಡ ಜವಾಬ್ದಾರಿ.. ಬಿಸಿಸಿಐನಲ್ಲಿ ಅತ್ಯುನ್ನತ ಹೊಸ ಹುದ್ದೆ ಸೃಷ್ಟಿಸಿ ಮಹತ್ವದ ಹೊಣೆ

ಬಿಸಿಸಿಐನಲ್ಲಿ ಬದಲಾವಣೆಯ ಗಾಳಿ ಬೀಸುವ ಮುನ್ಸೂಚನೆ ಸಿಕ್ಕಿದೆ. ಮುಂಬರುವ ದಿನಗಳಲ್ಲಿ ಬಿಸಿಸಿಐ ‘ಡೈರೆಕ್ಟರ್ ಆಫ್ ಕ್ರಿಕೆಟ್’ ಎಂಬ ಹೊಸ ಹುದ್ದೆಯನ್ನ ಸೃಷ್ಟಿಸಲು ಮುಂದಾಗಿದೆ. ಮೊದಲ ಬಾರಿಗೆ ವಿವಿಎಸ್ ಲಕ್ಷ್ಮಣ್ ಅವರು ಆ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಅವರ ಕಾರ್ಯವೈಖರಿಗಳು ಈ ಸ್ಟೋರಿಯಲ್ಲಿವೆ..

Read Full Story

03:36 PM (IST) Aug 14

ಬೆಂಗಳೂರಲ್ಲಿ ನೆಲೆಸಿರುವ ರಷ್ಯಾ ಮಹಿಳೆಯಿಂದ ಮನೆಕೆಲಸದಾಕೆಯ ಬರ್ತಡೇ ಆಚರಣೆ, ಜೀವನದ ಮೊದಲ ಕೇಕ್ ನೋಡಿ ಆಕೆ ಕಣ್ಣಿರು!

ಬೆಂಗಳೂರಿನಲ್ಲಿ ವಾಸಿಸುವ ರಷ್ಯಾ ಮೂಲದ ಯಾನಾ, ತಮ್ಮ ಮನೆಗೆಲಸದವರಾದ ಸವಿತಾ ಅವರ 40ನೇ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಿದ್ದಾರೆ. ತಮ್ಮ ಜೀವನದಲ್ಲಿ ಮೊದಲ ಬಾರಿಗೆ ಕೇಕ್ ಕಂಡ ಸವಿತಾ ಭಾವುಕರಾದ ಈ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಯಾನಾ ಅವರ ಮಾನವೀಯತೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
Read Full Story

03:02 PM (IST) Aug 14

'ನಾನೇನೇ ದುಡಿದರೂ, ಹೆಸರು ಸಂಪಾದನೆ ಮಾಡಿದ್ರು.. ಎಲ್ಲವೂ ಕನ್ನಡಿಗರ ಭಿಕ್ಷೆ..' ಹೀಗ್ಯಾಕಂದ್ರು ಅಕುಲ್‌ ಬಾಲಾಜಿ

ಜನಪ್ರಿಯ ನಿರೂಪಕ ಅಕುಲ್ ಬಾಲಾಜಿ, ಯೂಟ್ಯೂಬ್ ಸಂದರ್ಶನವೊಂದರಲ್ಲಿ ತಮ್ಮ ಯಶಸ್ಸಿನ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ಆಂಧ್ರದಿಂದ ಬಂದ ತಮ್ಮನ್ನು ಕನ್ನಡಿಗರು ಬೆಳೆಸಿದ್ದು, ತಾನು ಗಳಿಸಿದ್ದೆಲ್ಲವೂ ಕನ್ನಡಿಗರು ನೀಡಿದ ಭಿಕ್ಷೆ ಎಂದು ಭಾವುಕರಾಗಿ ಹೇಳಿಕೊಂಡಿದ್ದಾರೆ.
Read Full Story

01:43 PM (IST) Aug 14

ರಿಷಬ್ ಶೆಟ್ಟಿಗೆ ಮತ್ತೊಂದು ಗೌರವ; 'ಲೀಡರ್‌ಶಿಪ್ ಇನ್ ಸಿನಿಮಾ' ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಗರಿ!

ಸಂಸ್ಕೃತಿ, ಪರಂಪರೆ ಮತ್ತು ನಮ್ಮ ಮಣ್ಣಿನ ಕಥೆಗಳನ್ನು ಜಗತ್ತಿಗೆ ಪರಿಚಯಿಸುತ್ತಾ, ರಿಷಬ್ ಶೆಟ್ಟಿ ಅವರು ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ. ಈ ಎರಡೂ ಪ್ರಶಸ್ತಿಗಳು ಅವರ ಚಿತ್ರಯಾನದಲ್ಲಿ ಮತ್ತೊಂದು ಹೆಮ್ಮೆಯ ಮೈಲಿಗಲ್ಲಾಗಿದೆ.

Read Full Story

01:09 PM (IST) Aug 14

ತಂದೆಯನ್ನು ಕಳೆದುಕೊಂಡ ಬೆಂಗಳೂರು ಉದ್ಯೋಗಿಗೆ ಧೈರ್ಯ ತುಂಬಿದ ಸಂಸ್ಥೆ - 4 ವಾರ ರಜೆ, ಚಿಕಿತ್ಸಾ ವೆಚ್ಚ ಭರಿಸಿ ಮಾನವೀಯತೆ!

ತಂದೆಯನ್ನು ಕಳೆದುಕೊಂಡ ಉದ್ಯೋಗಿಗೆ ಕೊಯಮತ್ತೂರಿನ ಖಾಸಗಿ ಸಂಸ್ಥೆಯೊಂದು ಚಿಕಿತ್ಸಾ ವೆಚ್ಚ ಭರಿಸಿ, 4 ವಾರಗಳ ಸುದೀರ್ಘ ರಜೆ ನೀಡಿದೆ. ಸಂಸ್ಥೆಯ ಅಧ್ಯಕ್ಷರು ವೈಯಕ್ತಿಕವಾಗಿ ಸಾಂತ್ವನ ಹೇಳಿದ್ದು, ಈ ಮಾನವೀಯ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Read Full Story

12:54 PM (IST) Aug 14

ಮಂಗಳೂರಿನಲ್ಲಿ BSNL ಹೊಸ ಅಲೆ - ಮೀನುಗಾರರಿಂದ ವ್ಯಾಪಕ ಬೇಡಿಕೆ? 1 ರೂಪಾಯಿಗೆ ಸಿಮ್

ಬಿಎಸ್‌ಎನ್‌ಎಲ್‌ ಇತ್ತೀಚೆಗೆ ಪರಿಚಯಿಸಿರುವ ಸ್ಯಾಟಲೈಟ್‌ ಫೋನ್‌ಗೆ ಮಂಗಳೂರಿನಲ್ಲಿ, ವಿಶೇಷವಾಗಿ ಮೀನುಗಾರರಿಂದ, ವ್ಯಾಪಕ ಬೇಡಿಕೆ ವ್ಯಕ್ತವಾಗಿದೆ. ಇದರೊಂದಿಗೆ, ಭಾರತ್‌ ನೆಟ್‌ ಯೋಜನೆಯಡಿ ಗ್ರಾಮೀಣ ಪ್ರದೇಶಗಳಿಗೆ ಬ್ರಾಡ್‌ಬ್ಯಾಂಡ್‌ ವಿಸ್ತರಣೆ ಮತ್ತು ಸ್ವಾತಂತ್ರ್ಯೋತ್ಸವದ ಅಂಗವಾಗಿ ಆಕರ್ಷಕ ಸಿಮ್ ಹಾಗೂ ಎಫ್‌ಟಿಟಿಎಚ್‌ ಕೊಡುಗೆಗಳನ್ನು ಸಂಸ್ಥೆ ಘೋಷಿಸಿದೆ.
Read Full Story

12:47 PM (IST) Aug 14

Belagavi - ಚಿಕ್ಕೋಡಿಯಲ್ಲಿ ಶವ ತೆಗೆಯಲು ಕೋಳಿ ಬಲಿ ನೀಡಲು ಮುಂದಾದ್ರಾ ಅಧಿಕಾರಿಗಳು?

ಚಿಕ್ಕೋಡಿ ತಾಲೂಕಿನ ಖಡಕಲಾಟ ಗ್ರಾಮದಲ್ಲಿ, ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಕೊಲೆಯಾದ ವ್ಯಕ್ತಿಯ ಶವವನ್ನು ಹೊರತೆಗೆಯುವ ಮೊದಲು ಅಧಿಕಾರಿಗಳು ಕೋಳಿ ಬಲಿ ನೀಡಲು ಮುಂದಾಗಿದ್ದಾರೆ. ಮಾಧ್ಯಮಗಳ ಕ್ಯಾಮರಾ ಕಣ್ಣಿಗೆ ಬಿದ್ದಾಗ ಈ ಪ್ರಯತ್ನವನ್ನು ಕೈಬಿಡಲಾಗಿದ್ದು, ಈ ಘಟನೆಯು ಸರ್ಕಾರಿ ಕಾರ್ಯಾಚರಣೆಯಲ್ಲಿನ ಮೂಢನಂಬಿಕೆಯ ಬಗ್ಗೆ ಚರ್ಚೆ ಹುಟ್ಟುಹಾಕಿದೆ.
Read Full Story

12:25 PM (IST) Aug 14

ಶಾಸಕ ಸುರೇಶ್ ಗೌಡ ಪುತ್ರಿಯಿಂದ ಪಿಎಸ್‌ಐಗೆ ಕಪಾಳಮೋಕ್ಷ, ಮಗಳ ತಪ್ಪಿಗೆ ಕ್ಷಮೆಗೆ ಮುಂದಾದ ಅಪ್ಪ!

ತುಮಕೂರು ಶಾಸಕ ಬಿ. ಸುರೇಶ್‌ಗೌಡರ ಪುತ್ರಿ ಐಶ್ವರ್ಯ, ದೇವಸ್ಥಾನದಲ್ಲಿ ದರ್ಶನ ವಿಳಂಬವಾದ ಕಾರಣಕ್ಕೆ ಮಹಿಳಾ ಪಿಎಸ್‌ಐ ಜೊತೆ ವಾಗ್ವಾದ ನಡೆಸಿ ಕಪಾಳಮೋಕ್ಷ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ಶಾಸಕರು ಪ್ರತಿಕ್ರಿಯಿಸಿದ್ದು, ಮಗಳದ್ದು ತಪ್ಪಿದ್ದರೆ ಕ್ಷಮೆ ಕೇಳುವುದಾಗಿ ತಿಳಿಸಿದ್ದಾರೆ.
Read Full Story

12:19 PM (IST) Aug 14

36 ವರ್ಷಗಳ ಹಿಂದೆ ಇದೇ ದಿನ 17ರ ಪೋರನೊಬ್ಬ ಇತಿಹಾಸ ಬರೆದಿದ್ದ! ಸಚಿನ್ ತೆಂಡೂಲ್ಕರ್ ಮೊದಲ ಶತಕದ ರೋಚಕ ಕಥೆ

1990ರ ಆಗಸ್ಟ್ 14ರಂದು, 17 ವರ್ಷದ ಸಚಿನ್ ತೆಂಡೂಲ್ಕರ್ ಇಂಗ್ಲೆಂಡ್ ವಿರುದ್ಧ ತಮ್ಮ ಮೊದಲ ಅಂತಾರಾಷ್ಟ್ರೀಯ ಶತಕ (119*) ಬಾರಿಸಿ, ಸೋಲಿನಂಚಿನಲ್ಲಿದ್ದ ಭಾರತ ತಂಡವನ್ನು ಪಾರುಮಾಡಿದರು. ಈ ಶತಕವು ಅವರ 100 ಅಂತಾರಾಷ್ಟ್ರೀಯ ಶತಕಗಳ ದಾಖಲೆಯ ಪ್ರಯಾಣಕ್ಕೆ ಮುನ್ನುಡಿ ಬರೆಯಿತು, ನಂತರ ಅವರು ಏಕದಿನದಲ್ಲೂ ತಮ್ಮ ಚೊಚ್ಚಲ ಶತಕವನ್ನು ಸಿಡಿಸಿದರು.
Read Full Story

12:12 PM (IST) Aug 14

ನಾಗಸಂದ್ರ ಮೆಟ್ರೋ ಸಮೀಪದ ಐಕಿಯಾ ಭೂ ಒಪ್ಪಂದದಲ್ಲಿ ಎಡವಿದ BMRCL - 104 ಕೋಟಿ ರೂಪಾಯಿ ನಷ್ಟ ಎಂದ ಸಿಎಜಿ!

ಸಿಎಜಿ ವರದಿಯ ಪ್ರಕಾರ, ನಾಗಸಂದ್ರ ಬಳಿಯ ಭೂಮಿಯನ್ನು ಐಕಿಯಾಗೆ ಲೀಸ್ ನೀಡಿದ ಒಪ್ಪಂದದಲ್ಲಿ ಬಿಎಂಆರ್‌ಸಿಎಲ್‌ಗೆ ಸುಮಾರು 104 ಕೋಟಿ ರೂ. ನಷ್ಟವಾಗಿದೆ. ಅಲ್ಲದೆ, ಮೆಟ್ರೋ ನಿಲ್ದಾಣಗಳಲ್ಲಿನ ವಾಣಿಜ್ಯ ಸ್ಥಳಗಳನ್ನು ಬಾಡಿಗೆಗೆ ನೀಡದ ಕಾರಣದಿಂದಲೂ ಭಾರೀ ನಷ್ಟವಾಗಿದೆ ಎಂದಿದೆ.

Read Full Story

11:27 AM (IST) Aug 14

ಆಗಸ್ಟ್ 15 - ನಾಳೆ ವಿಧಾನಸೌಧದಲ್ಲಿ ಫ್ರೀಡಂ ಹಬ್ಬ, ಪ್ರವೇಶ ಸಿಗಬೇಕು ಅಂದ್ರೆ ನೀವು ಈ ವಿಷಯ ತಿಳ್ಕೊಳ್ಳಿ!

ಆಗಸ್ಟ್ 15 ನಾಳೆ ಸ್ವಾತಂತ್ರ್ಯ ದಿನಾಚರಣೆ. ವಿಧಾನಸೌಧ ಎದುರು ನಡೆಯಲಿರುವ ವರ್ಣರಂಜಿತ ಫ್ರೀಡಂ ಹಬ್ಬ ನಡೆಯಲಿದೆ. ಕಾರ್ಯಕ್ರಮದ ಸಮಯ, ಮಾರ್ಗ, ರಿಜಿಸ್ಟ್ರೇಷನ್ ಕುರಿತು ಮಾಹಿತಿ ಇಲ್ಲಿದೆ.

Read Full Story

10:30 AM (IST) Aug 14

ನಿಮಗೆ ತಾಕತ್ ಇದ್ದರೆ ಆರೆಸ್ಸೆಸ್ ಬ್ಯಾನ್ ಮಾಡಿ - ಪ್ರಿಯಾಂಕ್ ಖರ್ಗೆಗೆ ವಿಜಯೇಂದ್ರ ನೇರ ಸವಾಲು!

ರಾಜ್ಯ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಸ್ಥಾನ ನೀಡದಿರುವುದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ರಾಜ್ಯದ ಮಹಿಳೆಯರಿಗೆ ಮಾಡಿದ ಅವಮಾನ. ಆರೆಸ್ಸೆಸ್ ಬ್ಯಾನ್ ಮಾಡುವ ತಾಕತ್ತಿದ್ದರೆ ಮಾಡಿ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಸವಾಲು ಹಾಕಿದ್ದಾರೆ.

Read Full Story

10:24 AM (IST) Aug 14

IVF ಪ್ರಕ್ರಿಯೆಗೆ ಇನ್ನೊಬ್ಬ ವ್ಯಕ್ತಿಯ ವೀರ್ಯ ಪತ್ನಿ ಪಡೆದುಕೊಳ್ಳಬಹುದೇ? ಹೈಕೋರ್ಟ್‌ಗೆ ನಿಯಮ ತಿಳಿಸಿದ ಕೇಂದ್ರ ಸರ್ಕಾರ

ಬೆಂಗಳೂರಿನ ಮಹಿಳೆಯೊಬ್ಬರು ಪತಿಯ ಅನುಮತಿಯಿಲ್ಲದೆ ಆತನ ಫ್ರೋಜನ್ ಸ್ಪರ್ಮ್ ಬಳಸಿ ಗರ್ಭಧರಿಸಲು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೆ, ಪತಿಯ ಲಿಖಿತ ಸಮ್ಮತಿಯಿಲ್ಲದೆ ಐವಿಎಫ್ ಪ್ರಕ್ರಿಯೆ ನಡೆಸುವಂತಿಲ್ಲ ಎಂದು ಕೇಂದ್ರ ಸರ್ಕಾರ ಮತ್ತು ART ಕಾಯ್ದೆ ಸ್ಪಷ್ಟಪಡಿಸಿದೆ.

Read Full Story

10:00 AM (IST) Aug 14

ಕಂಬಿ ಹಿಂದೆ ದಾಸ ವಾಸವಾಗಿ ಒಂದು ವರ್ಷ; 'ಗಾಯ ಮಾಸಿಲ್ಲ, ನೋವು ತಡೆಯಲಾಗ್ತಿಲ್ಲ' ಎಂದು ವಿಜಯಲಕ್ಷ್ಮಿ ಭಾವುಕ ಪೋಸ್ಟ್!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿ ಒಂದು ವರ್ಷವಾದ ಹಿನ್ನೆಲೆಯಲ್ಲಿ, ಅವರ ಪತ್ನಿ ವಿಜಯಲಕ್ಷ್ಮಿ ಇನ್‌ಸ್ಟಾಗ್ರಾಮ್‌ನಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ಒಂದು ವರ್ಷವಾದರೂ ಗಾಯ ಮಾಸಿಲ್ಲ, ನೋವು ಅಸಹನೀಯವಾಗಿದೆ ಎಂದು ಬರೆದುಕೊಂಡಿದ್ದಾರೆ.

Read Full Story

07:56 AM (IST) Aug 14

ವಾಲ್ಮೀಕಿ ನಿಗಮ ಹಗರಣ - ಬಿ ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಬೃಹತ್ ಪಾದಯಾತ್ರೆಗೆ ಸಜ್ಜು!

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಹಿನ್ನೆಲೆಯಲ್ಲಿ ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪಾದಯಾತ್ರೆಗೆ ಸಜ್ಜಾಗಿದೆ. ಮಾಜಿ ಸಚಿವ ಬಿ.ಶ್ರೀರಾಮುಲು ನೇತೃತ್ವದಲ್ಲಿ ರಾಯಚೂರಿನಿಂದ ಬಳ್ಳಾರಿಯವರೆಗೆ ಈ ಯಾತ್ರೆ ನಡೆಯಲಿದ್ದು, ಸರ್ಕಾರದ ಮೇಲೆ ಒತ್ತಡ ಹೇರುವುದು ಇದರ ಪ್ರಮುಖ ಉದ್ದೇಶವಾಗಿದೆ.
Read Full Story

07:35 AM (IST) Aug 14

ಸಭಾಪತಿ ಸ್ಥಾನಕ್ಕೆ ಇಂದು ಬಿಗ್ ಫೈಟ್! ಸಂಖ್ಯಾಬಲ ಇಲ್ಲದಿದ್ರೂ ಬಿಜೆಪಿ-ಜೆಡಿಎಸ್ ಸ್ಪರ್ಧಿಸಿದ್ದು ಏಕೆ ಗೊತ್ತಾ?

ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಸಲೀಂ ಅಹ್ಮದ್ ನಾಮಪತ್ರ ಸಲ್ಲಿಸಿದ್ದು, ಸಂಖ್ಯಾಬಲ ಇಲ್ಲದಿದ್ದರೂ ಬಿಜೆಪಿ-ಜೆಡಿಎಸ್ ಮೈತ್ರಿಕೂಟವು ಪಿ.ಎಚ್. ಪೂಜಾರ್ ಅವರನ್ನು ಕಣಕ್ಕಿಳಿಸಿ ಕುತೂಹಲ ಮೂಡಿಸಿದೆ.

 

Read Full Story

07:34 AM (IST) Aug 14

ಬಂಟ್ವಾಳ: ಬಾಲಕನ ಸಮಯ ಪ್ರಜ್ಞೆಯಿಂದ ಉಳಿಯಿತು ದಾಸೋಹ ಸಿಬ್ಬಂದಿ ಜೀವ! ಸಿಎಂ ಮೆಚ್ಚುಗೆ

ಬಂಟ್ವಾಳದ ನರಿಕೊಂಬು ಶಾಲೆಯ 5ನೇ ತರಗತಿ ವಿದ್ಯಾರ್ಥಿ ಮನ್ವಿತ್, ಅಕ್ಷರ ದಾಸೋಹ ಸಿಬ್ಬಂದಿಯ ಕೈಬೆರಳು ಕಾಯಿ ತುರಿಯುವ ಯಂತ್ರಕ್ಕೆ ಸಿಲುಕಿದಾಗ ತಕ್ಷಣ ಸ್ವಿಚ್ ಆಫ್ ಮಾಡಿ ದೊಡ್ಡ ಅನಾಹುತ ತಪ್ಪಿಸಿದ್ದಾನೆ. ಈ ಬಾಲಕನ ಸಮಯಪ್ರಜ್ಞೆ ಮತ್ತು ಧೈರ್ಯಕ್ಕೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮೆಚ್ಚುಗೆ.

 

Read Full Story

07:34 AM (IST) Aug 14

ಸಿದ್ದರಾಮಯ್ಯ ಪುತ್ರ ಯತೀಂದ್ರ ಮೊದಲ ಬಾರಿ ಸಚಿವ ಸ್ಥಾನ ಬೆನ್ನಲ್ಲೇ ಈಗ ವಿಧಾನಪರಿಷತ್‌ ಸಭಾನಾಯಕ!

ಮೊದಲ ಬಾರಿಗೆ ಸಚಿವ ಸ್ಥಾನದ ಜೊತೆಗೆ ಸಭಾನಾಯಕ ಜವಾಬ್ದಾರಿ ನಿಭಾಯಿಸುವ ಸಂದರ್ಭದಲ್ಲಿ ತಪ್ಪುಗಳಾದರೆ ಪ್ರತಿಪಕ್ಷದ ಸದಸ್ಯರು ಸೇರಿದಂತೆ ಎಲ್ಲರೂ ಸಹಕರಿಸುವಂತೆ ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ(Yathindra Siddaramaiah) ಮನವಿ ಮಾಡಿದರು.

 

Read Full Story

More Trending News