ಮೊದಲ ಬಾರಿಗೆ ಸಚಿವ ಸ್ಥಾನದ ಜೊತೆಗೆ ಸಭಾನಾಯಕ ಜವಾಬ್ದಾರಿ ನಿಭಾಯಿಸುವ ಸಂದರ್ಭದಲ್ಲಿ ತಪ್ಪುಗಳಾದರೆ ಪ್ರತಿಪಕ್ಷದ ಸದಸ್ಯರು ಸೇರಿದಂತೆ ಎಲ್ಲರೂ ಸಹಕರಿಸುವಂತೆ ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ(Yathindra Siddaramaiah) ಮನವಿ ಮಾಡಿದರು.
ವಿಧಾನ ಪರಿಷತ್ (ಆ.14): ಮೊದಲ ಬಾರಿಗೆ ಸಚಿವ ಸ್ಥಾನದ ಜೊತೆಗೆ ಸಭಾನಾಯಕ ಜವಾಬ್ದಾರಿ ನಿಭಾಯಿಸುವ ಸಂದರ್ಭದಲ್ಲಿ ತಪ್ಪುಗಳಾದರೆ ಪ್ರತಿಪಕ್ಷದ ಸದಸ್ಯರು ಸೇರಿದಂತೆ ಎಲ್ಲರೂ ಸಹಕರಿಸುವಂತೆ ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ(Yathindra Siddaramaiah) ಮನವಿ ಮಾಡಿದರು.
ತಪ್ಪುಗಳಾದರೆ ಪ್ರತಿಪಕ್ಷ ಸದಸ್ಯರು ಸಹಕರಿಸಿ
ಸಭಾಪತಿ ಪುಟ್ಟಣ್ಣ ಅವರು ಮಂಡಿಸಿದ ಸಂತಾಪ ಸೂಚನೆ ಅನುಮೋದಿಸಿ ಮಾತನಾಡುವ ಮುನ್ನ ಮಾತನಾಡಿದ ಯತೀಂದ್ರ ಅವರು, ಸಭಾನಾಯಕ ಸ್ಥಾನ ನೀಡಿದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ರಾಜ್ಯ ಸರ್ಕಾರಕ್ಕೆ ಧನ್ಯವಾದಗಳನ್ನು ತಿಳಿಸುತ್ತೇನೆ. ಹೆಚ್ಚು ಅನುಭವ ಇಲ್ಲದ ಕಾರಣ ಏನಾದರೂ ತಪ್ಪುಗಳಾದರೆ ಆಡಳಿತ ಹಾಗೂ ಪ್ರತಿಪಕ್ಷದ ಸದಸ್ಯರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಮೊದಲ ಬಾರಿ ಸಚಿವ, ಸಭಾನಾಯಕ!
ಇದಕ್ಕೂ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ ಯತೀಂದ್ರ, ಮೊದಲ ಬಾರಿ ಸಚಿವನಾಗಿ, ಸಭಾನಾಯಕನಾಗಿ ಆಯ್ಕೆ ಆಗಿದ್ದೇನೆ. ಸಭೆ ಎದುರಿಸಲು ತಯಾರಿ ಮಾಡಿಕೊಂಡಿದ್ದೇನೆ. ಪಕ್ಷದ ಹಿರಿಯ ನಾಯಕರ ಮಾರ್ಗದರ್ಶನ ಇದೆ. ತಂದೆಯವರ ಮಾರ್ಗದರ್ಶನ ಇದೆ ಎಂದರು.