ಸಂಸ್ಕೃತಿ, ಪರಂಪರೆ ಮತ್ತು ನಮ್ಮ ಮಣ್ಣಿನ ಕಥೆಗಳನ್ನು ಜಗತ್ತಿಗೆ ಪರಿಚಯಿಸುತ್ತಾ, ರಿಷಬ್ ಶೆಟ್ಟಿ ಅವರು ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ. ಈ ಎರಡೂ ಪ್ರಶಸ್ತಿಗಳು ಅವರ ಚಿತ್ರಯಾನದಲ್ಲಿ ಮತ್ತೊಂದು ಹೆಮ್ಮೆಯ ಮೈಲಿಗಲ್ಲಾಗಿದೆ.

NAB IFFM Awards Night 2026-ಲೀಡರ್‌ಶಿಪ್ ಇನ್ ಸಿನಿಮಾ ಪ್ರಶಸ್ತಿ: ಕಾಂತಾರ: ಎ ಲೆಜೆಂಡ್ – ಚಾಪ್ಟರ್ 1 ಚಿತ್ರಕ್ಕೆ ನಟ-ನಿರ್ದೇಶಕ ರಿಷಬ್ ಶೆಟ್ಟಿಯವರಿಗೆ 'ಲೀಡರ್‌ಶಿಪ್ ಇನ್ ಸಿನಿಮಾ' ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಭಾರತೀಯ ಚಿತ್ರರಂಗಕ್ಕೆ ಅವರು ನೀಡುತ್ತಿರುವ ಕೊಡುಗೆ ಹಾಗೂ ನಮ್ಮ ನೆಲದ ಕಥೆಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುತ್ತಿರುವ ಅವರ ಪ್ರಯತ್ನಕ್ಕೆ ಈ ಗೌರವ ಸಂದಿದೆ. ಈಗಾಗಲೇ ಹಲವಾರು ಪ್ರಶಸ್ತಿ-ಪುರಸ್ಕಾರಗಳನ್ನು ಪಡೆದಿರುವ ಕನ್ನಡಿದ ನಿರ್ದೇಶಕ ರಿಷಬ್ ಶೆಟ್ಟಿಯವರಿಗೆ ಇದೀಗ ಮತ್ತೊಂದು ಪ್ರಶಸ್ತಿ ಸಿಕ್ಕಿದೆ, ಕನ್ನಡಿಗರ ಖುಷಿಗೆ ಮತ್ತೊಂದು ಸೇರ್ಪಡೆ ಆಗಿದೆ.

ಇದೇ ಸಂದರ್ಭದಲ್ಲಿ ಕಾಂತಾರ: ಎ ಲೆಜೆಂಡ್– ಚಾಪ್ಟರ್ 1 ಚಿತ್ರಕ್ಕಾಗಿ ರಿಷಬ್ ಶೆಟ್ಟಿ ಅವರು ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನೂ ಪಡೆದಿದ್ದಾರೆ. ತಮ್ಮ ವಿಭಿನ್ನ ಕಥೆ ಹೇಳುವ ಶೈಲಿ ಮತ್ತು ನಿರ್ದೇಶನದ ಮೂಲಕ ಕನ್ನಡದ ಕಥೆಗಳನ್ನು ವಿಶ್ವದ ಪ್ರೇಕ್ಷಕರಿಗೆ ತಲುಪಿಸುತ್ತಿರುವ ಅವರ ಪ್ರಯತ್ನಕ್ಕೆ ಈ ಪ್ರಶಸ್ತಿ ಮತ್ತೊಂದು ಹೆಮ್ಮೆಯ ಗುರುತಾಗಿದೆ.

ಸಂಸ್ಕೃತಿ, ಪರಂಪರೆ ಮತ್ತು ನಮ್ಮ ಮಣ್ಣಿನ ಕಥೆಗಳನ್ನು ಜಗತ್ತಿಗೆ ಪರಿಚಯಿಸುತ್ತಾ, ರಿಷಬ್ ಶೆಟ್ಟಿ ಅವರು ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ. ಈ ಎರಡೂ ಪ್ರಶಸ್ತಿಗಳು ಅವರ ಚಿತ್ರಯಾನದಲ್ಲಿ ಮತ್ತೊಂದು ಹೆಮ್ಮೆಯ ಮೈಲಿಗಲ್ಲಾಗಿದ್ದು, ಭಾರತೀಯ ಸಿನಿಮಾಗೆ ಅವರು ನೀಡುತ್ತಿರುವ ಕೊಡುಗೆಯನ್ನು ಸಂಭ್ರಮಿಸುವ ವಿಶೇಷ ಕ್ಷಣವಾಗಿದೆ.