80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಗಂಗಾವತಿಯಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಹಮ್ಮಿಕೊಂಡಿದ್ದ ಭವ್ಯ "ಬೃಹತ್ ತಿರಂಗ ಯಾತ್ರೆ"ಗೆ ಶಾಸಕ ಜನಾರ್ದನ ರೆಡ್ಡಿ ಚಾಲನೆ ನೀಡಿದರು.

ಗಂಗಾವತಿ (ಆ.14): 80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಗಂಗಾವತಿಯಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಹಮ್ಮಿಕೊಂಡಿದ್ದ ಭವ್ಯ "ಬೃಹತ್ ತಿರಂಗ ಯಾತ್ರೆ"ಗೆ ಶಾಸಕ ಜನಾರ್ದನ ರೆಡ್ಡಿ ಚಾಲನೆ ನೀಡಿದರು. ಬಾಬು ಜಗಜೀವನ್ ರಾಮ್ ವೃತ್ತದಿಂದ ಆರಂಭವಾದ ತಿರಂಗಾ ಯಾತ್ರೆಯು ನಗರದ ಪ್ರಮುಖ ವೃತ್ತಗಳ ಮೂಲಕ ಸಂಚರಿಸಿ ಶ್ರೀ ಕೃಷ್ಣದೇವರಾಯ ವೃತ್ತಕ್ಕೆ ತಲುಪಿತು.

ಈ ವೇಳೆ ಮಾತನಾಡಿದ ಜನಾರ್ದನ ರೆಡ್ಡಿ ಅವರು, ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಸೌಹಾರ್ದ್ಯತೆ ಮತ್ತು ಯುವಕರಲ್ಲಿ ದೇಶ ಪ್ರಜ್ಞೆ ಬರ ಬೇಕೆಂಬ ಉದ್ದೇಶದಿಂದ ತಿರಂಗ ಯಾತ್ರೆಗೆ ನೀಡಿದ ಸೂಚನೆ ಹಿನ್ನಲೆಯಲ್ಲಿ ಬಿಜೆಪಿ ಯುವ ಮೋರ್ಚಾದ ಈ ಯಾತ್ರೆ ಹಮ್ಮಿಕೊಂಡಿದೆ. ಮಕ್ಕಳಲ್ಲಿ ಮತ್ತು ಯುವಕರಲ್ಲಿ ದೇಶ ಭಕ್ತಿ ಬರಬೇಕೆಂದು ತಿಳಿಸಿದರು.

ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಮೋದಿ ಅವರ ಆಪೇಕ್ಷದ ಮೇರೆಗೆ ಯುವಕರಲ್ಲಿ ದೇಶ ಭಕ್ತಿ ಮೂಡಬೇಕು ಮತ್ತು ಮನೆ ಮನೆಗಳಲ್ಲಿ ಧ್ವಜ ಹಾರಾಟ ಆಗಬೇಕು. ಮೂರು ದಿನಗಳ ಕಾಲ ಈ ಹಬ್ಬ ಆಚರಣೆಯಾಗಬೇಕೆಂದು ತಿಳಿಸಿದರು. ಲಕ್ಷ್ಮಿ ಅರುಣಾ ಜನಾರ್ದನ ರೆಡ್ಡಿ ಮಾತನಾಡಿ, ಈ ತಿರಂಗದ ಉದ್ದೇಶ ಮಕ್ಕಳಲ್ಲಿ ರಾಷ್ಟ್ರಭಕ್ತಿ ಮತ್ತು ಸೌಹಾರ್ದತೆ ಬೆಳೆಯಬೇಕೆನ್ನುವುದೇ ಈ ಕಾರ್ಯಕ್ರಮವಾಗಿದೆ ಎಂದರು.

ಸಾವಿರಾರು ಮಕ್ಕಳು ಭಾಗಿ

ಗಂಗಾವತಿಯಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಹಮ್ಮಿಕೊಂಡಿದ್ದ ಭವ್ಯ ಬೃಹತ್ ತಿರಂಗ ಯಾತ್ರೆಯಲ್ಲಿ ವಿವಿಧ ಕಾಲೇಜು ಮತ್ತು ಪ್ರೌಢ ಶಾಲೆಯ ಸಾವಿರಾರು ಮಕ್ಕಳು ಭಾಗಿಯಾಗಿದ್ದರು. ಈ ವೇಳೆ ಕೊಟ್ಟೂರು ಸ್ವಾಮೀಜಿ, ಬಿಜೆಪಿ ಜಿಲ್ಲಾ ಮಾಜಿ ಅದ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಮನೋಹರ್ ಗೌಡ ಹೇರೂರು, ನಗರ ಮಂಡಲ ಅಧ್ಯಕ್ಷರಾದ ಚಂದ್ರು ಹಿರೂರು, ಗ್ರಾಮೀಣ ಮಂಡಲ ಅಧ್ಯಕ್ಷರಾದ ಡಿಕೆ ಆಗೋಲಿ, ಯುವ ಮೋರ್ಚಾ ಅಧ್ಯಕ್ಷರಾದ ರಮೇಶ್ ಹೊಸಮಲಿ, ಮುಖಂಡರಾದ ಯಮನೂರ್ ಚೌಡ್ಕಿ, ಆನಂದಗೌಡ ಶರಣಪ್ಪ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.