ಬೆಂಗಳೂರು (ಆ.1): ಜೆನ್‌ಝೀ ಹೋರಾಟ ಬೆನ್ನಲ್ಲೇ ಕೆಪಿಎಸ್ಸಿ ಹಾಗೂ ಕೆಇಎ ನಡೆಸುವ ನೇಮಕಾತಿ ಪರೀಕ್ಷೆ ಸಮರ್ಪಕತೆ ಪರಿಶೀಲನೆಗಾಗಿ ಸರ್ಕಾರ ನಿವೃತ್ತ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್ ಅಧ್ಯಕ್ಷತೆಯ ಸಮಿತಿ ರಚಿಸಿದೆ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ದ ನಡೆದ ಜೆನ್‌ಝೀ ಪ್ರತಿಭಟನೆ ಗಮನದಲ್ಲಿರಿಸಿ ರಾಜ್ಯದಲ್ಲಿ ನಡೆಯಲಿರುವ 70 ಸಾವಿರಕ್ಕೂ ಹೆಚ್ಚಿನ ಹುದ್ದೆಗಳನೇಮಕಾತಿ ಪ್ರಕ್ರಿಯೆಯಲ್ಲಿ ಯಾವುದೇ ಅಕ್ರಮ ನಡೆಯದಂತೆ ತಡೆಯಲು ಸರ್ಕಾರ ಹೆಜ್ಜೆ ಇಟ್ಟಿದೆ. ಅದರೊಂದಿಗೆ ಇಂದಿನ ರಾಜ್ಯ ಸುದ್ದಿಗಳ ಅಪ್‌ಡೇಟ್ ಇಲ್ಲಿದೆ.
11:44 PM (IST) Aug 01
ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಇನ್ಫ್ಲುಯೆನ್ಸರ್‌ಗಳು ಮತ್ತು ಸೆಲೆಬ್ರಿಟಿಗಳು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ದೊಡ್ಡ ಪ್ರಮಾಣದಲ್ಲಿ (100 ಮಿ.ಲೀ. ನಿಂದ 150 ಮಿ.ಲೀ. ವರೆಗೆ) ತುಪ್ಪ ಕುಡಿಯುವ ವಿಡಿಯೋಗಳು ಟ್ರೆಂಡ್ ಆಗುತ್ತಿವೆ.
11:00 PM (IST) Aug 01
10:00 PM (IST) Aug 01
ಸಕ್ಕರೆ ಎಲ್ಲಿದೆ ಅಂತ ಕೆಲವೇ ನಿಮಿಷಗಳಲ್ಲಿ ಪತ್ತೆಹಚ್ಚಿ, ಇರುವೆಗಳು ಗುಂಪಾಗಿ ಬರೋದನ್ನು ನೋಡಿ ಅಚ್ಚರಿಯಾಗುತ್ತೆ. ಮನುಷ್ಯರ ಗೂಗಲ್ ಮ್ಯಾಪ್ಸ್‌ನಂತೆ, ಇರುವೆಗಳು ಆಹಾರ ಹುಡುಕಲು ಬಳಸುವ 'ಫೆರೋಮೋನ್' ಗೈಡ್‌ನ ಸೀಕ್ರೆಟ್ ಇಲ್ಲಿದೆ!
09:27 PM (IST) Aug 01
ಫ್ರೆಂಡ್‌ಶಿಪ್ ಡೇ 2026ಕ್ಕೆ ನಿಮ್ಮ ಗೆಳೆಯ/ಗೆಳತಿಯನ್ನು ಭೇಟಿ ಮಾಡಲು ಸಾಧ್ಯವಾಗದಿದ್ದರೆ, ಚಿಂತೆ ಬೇಡ. Teleparty, Plato, Snapchat, Locket, ಮತ್ತು Canva ನಂತಹ ಆ್ಯಪ್‌ಗಳನ್ನು ಬಳಸಿ.
08:55 PM (IST) Aug 01
Zameer Ahmed Khan Birthday: ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಅಭಿಮಾನಿಗಳು, ಪಕ್ಷದ ಮುಖಂಡರು ಹಾಗೂ ಗಣ್ಯರ ಸಮ್ಮುಖದಲ್ಲಿ ತಮ್ಮ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡರು.
08:33 PM (IST) Aug 01
08:20 PM (IST) Aug 01
Ashwini Gowda Interview: ಬಿಗ್‌ಬಾಸ್ ಕನ್ನಡ ಸೀಸನ್ 12 ಸ್ಪರ್ಧಿ ಹಾಗೂ ನಟಿ ಅಶ್ವಿನಿ ಗೌಡ ನೀಡಿರುವ ಹೇಳಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ತಮಿಳು ನಟ..
07:36 PM (IST) Aug 01
ಈ ಸುದ್ದಿಗೋಷ್ಠಿಯಲ್ಲಿ ಮಾತನ್ನಾಡಿದ ನಟಿ ಸಾನ್ವಿ ಶ್ರೀವಾಸ್ತವ್ 'ಸೈಮಾ ಜೊತೆ ನನ್ನ ಜರ್ನಿ ಮೊದಲ ವರ್ಷದಿಂದಲೇ ಆರಂಭ ಆಗಿದೆ. ಸೆಪ್ಟೆಂಬರ್ 11 ಮತ್ತು 12 ನೇ ದಿನಾಂಕಗಳಂದು ಸೈಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ' ಎಂದಿದ್ದಾರೆ.
06:32 PM (IST) Aug 01
ಆಗಸ್ಟ್ 1, 2026, ಶನಿವಾರದಂದು 'ನ್ಯಾಷನಲ್ ಗರ್ಲ್‌ಫ್ರೆಂಡ್ ಡೇ' ಇದೆ. ನಮ್ಮ ಜೀವನದಲ್ಲಿರುವ ಪ್ರಮುಖ ಮಹಿಳೆಯರನ್ನು, ಅಂದರೆ ಸ್ನೇಹಿತೆಯರು ಅಥವಾ ಪ್ರೇಯಸಿಯನ್ನು ಸಂಭ್ರಮಿಸಲು ಇದೊಂದು ದಿನ.
06:18 PM (IST) Aug 01
06:09 PM (IST) Aug 01
"ರಕ್ಷಿತ್ ಶೆಟ್ಟಿ ಎಲ್ಲಿದ್ದಾರೆ? 'ರಿಚರ್ಡ್ ಆಂಟನಿ' ಯಾವ ಹಂತದಲ್ಲಿದೆ?" ಎಂಬ ಪ್ರಶ್ನೆಗಳು ಅಭಿಮಾನಿಗಳಲ್ಲಿ ಹೆಚ್ಚಾಗಿವೆ. ಈ ಕುತೂಹಲಕ್ಕೆ ಈಗ ನಿರ್ದೇಶಕ ಹೇಮಂತ್ ರಾವ್ ಪರೋಕ್ಷವಾಗಿ ಉತ್ತರ ನೀಡಿದ್ದಾರೆ.
06:00 PM (IST) Aug 01
ಮೈಸೂರಿನ ರಾಮಕೃಷ್ಣ ಆಶ್ರಮದಲ್ಲಿ ವಿವೇಕ ಸ್ಮಾರಕ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ ಸಾರ್ವಜನಿಕರನ್ನುದ್ದೇಶಿ ಮಾತನಾಡಿದ್ದಾರೆ. ಈ ವೇಳೆ ಮೈಸೂರು ಭಾರತದ ಸಾಂಸ್ಕೃತಿಕ ಕೇಂದ್ರವಾಗಿದೆ ಎಂದಿದ್ದಾರೆ. ಮೋದಿ ಭಾಷಣದ ವಿವರ ಇಲ್ಲಿದೆ.
05:48 PM (IST) Aug 01
ಭಾರತವು ಎರಡು ಬಾರಿ ಏಕದಿನ ವಿಶ್ವಕಪ್ ಗೆದ್ದಿದ್ದು, ಈ ಲೇಖನವು ಭಾರತದ ಪರ ಅತಿ ಹೆಚ್ಚು ಏಕದಿನ ವಿಶ್ವಕಪ್ ಟೂರ್ನಿಗಳಲ್ಲಿ ಭಾಗವಹಿಸಿದ ಟಾಪ್-7 ಆಟಗಾರರ ಪಟ್ಟಿಯನ್ನು ನೀಡುತ್ತದೆ. ಸಚಿನ್ ತೆಂಡೂಲ್ಕರ್ 6 ವಿಶ್ವಕಪ್‌ಗಳೊಂದಿಗೆ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
05:42 PM (IST) Aug 01
'ಟಾಕ್ಸಿಕ್' ಸಿನಿಮಾದಲ್ಲಿ ಒಟ್ಟು ಆರು ಹಾಡುಗಳಿವೆ. ಅವುಗಳಲ್ಲಿ ಒಂದು ವಿಶೇಷ ಹಾಡಿಗೆ ರವಿ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದಾರೆ. ಜೊತೆಗೆ ಚಿತ್ರದ ಹಿನ್ನೆಲೆ ಸಂಗೀತದ ಸಂಪೂರ್ಣ ಜವಾಬ್ದಾರಿಯನ್ನೂ ಅವರು ಹೊತ್ತಿದ್ದಾರೆ.
05:25 PM (IST) Aug 01
Sangeetha Sringeri Trek: ಕನ್ನಡ ಚಿತ್ರರಂಗದ ನಟಿ ಹಾಗೂ 'ಬಿಗ್ ಬಾಸ್ ಕನ್ನಡ ಸೀಸನ್ 10' ಮಾಜಿ ಸ್ಪರ್ಧಿ ಸಂಗೀತಾ ಶೃಂಗೇರಿ ಸದ್ಯ ಉತ್ತರಾಖಂಡದ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಿದ್ದಾರೆ. ಆದರೆ ಈ ಪ್ರವಾಸದ ವಿಶೇಷತೆ ಬೇರೆ.
05:24 PM (IST) Aug 01
2026ರ ಈ ಹೊಸ ರಾಮಾಯಣ ಸಿನಿಮಾದಲ್ಲಿ 'ಸೀತೆ' ಪಾತ್ರಕ್ಕೆ ನಟಿ ಸಾಯಿ ಪಲ್ಲವಿ ಆಯ್ಕೆಯನ್ನು ಹಲವರು ಶುರುವಿನಿಂದಲೂ ಪ್ರಶ್ನಿಸುತ್ತಲೇ ಬಂದಿದ್ದಾರೆ. ಟ್ರೇಲರ್ ಬಿಡುಗಡೆ ಬಳಿಕ ನಟಿ ಸಾಯಿ ಪಲ್ಲವಿ ಲುಕ್ ಹಾಗೂ ನಟನೆಗೆ ಬಹಳಷ್ಟು ಜನರು ಫಿದಾ ಆಗಿದ್ದಾರೆ. ಆದರೂ ಈಗ ಏನ್ ಆಗ್ತಿದೆ ನೋಡಿ..
05:12 PM (IST) Aug 01
04:51 PM (IST) Aug 01
Jolly Movie Review: ತಾರುಷ್ ನಟನೆಯ, ನಿರ್ದೇಶನದ ಮೇಲಿನ ಪ್ರೇಮದಲ್ಲಿ ಈ ಸಿನಿಮಾ ಮಾಡಿದ್ದಾರೆ. ಅದಕ್ಕೆ ತಕ್ಕಂತೆ ಸ್ಟೈಲಿಷ್ ಫೈಟುಗಳು, ವೇಗದ ಡಾನ್ಸುಗಳು, ಪ್ರೇಮ ಸಾರುವ ಹಾಡುಗಳನ್ನು ಇಟ್ಟಿದ್ದಾರೆ.
04:43 PM (IST) Aug 01
04:39 PM (IST) Aug 01
ಪ್ರಧಾನಿ ನರೇಂದ್ರ ಮೋದಿ ಇಂದು ಮೈಸೂರಿನ ರಾಮಕೃಷ್ಣ ಆಶ್ರಮದಲ್ಲಿ ವಿವೇಕ ಸ್ಮಾರಕ ಉದ್ಘಾಟನೆ ಮಾಡಿದ್ದಾರೆ. ಹೆಲಿಕಾಪ್ಟರ್ ಮೂಲಕ ಮೈಸೂರಿಗೆ ಆಗಮಿಸಿದ ಮೋದಿ ವಿವೇಕ ಸಾಂಸ್ಕೃತಿ ಕೇಂದ್ರ ಉದ್ಘಾಟನೆ ಮಾಡಿದ್ದಾರೆ.
04:38 PM (IST) Aug 01
Shrimathi Sindhoora Movie Review: ಇಂದು (ಪ್ರಿಯಾ ಹೆಗ್ಡೆ) ಹಳ್ಳಿಯ ಮುಗ್ಧ ಹುಡುಗಿ. ದೈವೇಚ್ಛೆಯಂತೆ ದಿವಾನ್ ಎಂಬ ಪ್ರತಿಷ್ಠಿತ ಕುಟುಂಬದ ಏಕೈಕ ಕುಡಿ ಭರತ್ (ವಿಜಯ ರಾಘವೇಂದ್ರ) ಜೊತೆ ಅವಳ ಮದುವೆ ಆಗುತ್ತದೆ.
04:27 PM (IST) Aug 01
Tadviruddha Movie Review: ಈ ಸಿನಿಮಾದ ಮೊದಲ ಫ್ರೇಮ್‌ನಿಂದ ಕಟ್ಟಕಡೆಯ ಫ್ರೇಮ್‌ವರೆಗೂ ಅಚ್ಚುಕಟ್ಟುತನ, ಕಸುಬುದಾರಿಕೆ ಕಾಣಿಸುತ್ತದೆ. ಕತೆ ಮತ್ತು ಚಿತ್ರಕತೆ ಎರಡನ್ನೂ ಬಹಳ ಜತನದಿಂದ ಕಟ್ಟಿಕೊಡಲಾಗಿದೆ.
04:12 PM (IST) Aug 01
Sarkari Nyaya Bele Angadi Review: ಮಹಿಳೆಯೊಬ್ಬಳು ಸರ್ಕಾರಿ ನ್ಯಾಯ ಬೆಲೆ ಅಂಗಡಿ ನಡಿಸೋದು ಎಷ್ಟು ಕಷ್ಟ ಎಂದು ಹೇಳುವ ಮೂಲಕ ಮಹಿಳಾ ಸಬಲೀಕರಣದ ಬಗ್ಗೆಯೂ ಈ ಸಿನಿಮಾ ಮಾತನಾಡುತ್ತದೆ.
04:04 PM (IST) Aug 01
ರಾಜೀನಾಮೆ ನೀಡಿ, ಕಂಪನಿಯಲ್ಲಿ ಕೊನೆಯ ದಿನದಂದು ಕೆಲಸ ಮುಗಿಸಿದ ಉದ್ಯೋಗಿಯೊಬ್ಬರಿಗೆ, ಅವರ ಬಾಸ್ ಮತ್ತೆ ಕೆಲಸ ನೀಡಿದ ವಿಚಿತ್ರ ಘಟನೆ ನಡೆದಿದೆ. ಅಧಿಕೃತವಾಗಿ ಉದ್ಯೋಗ ಮುಗಿದ ನಂತರವೂ ಮುಂದಿನ 10 ದಿನಗಳ ಕಾಲ ಕೆಲಸ ಮಾಡುವಂತೆ ಮ್ಯಾನೇಜರ್ ಕೇಳಿಕೊಂಡಿದ್ದಾರೆ. ಆದರೆ ಮುಂದೆ ಆಗಿದ್ದೆ ಬೇರೆ.
03:53 PM (IST) Aug 01
03:49 PM (IST) Aug 01
ನೀರಿನ ಆತಂಕ ಹೆಚ್ಚಾಗುತ್ತಿದ್ದಂತೆ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಪರಿಣಾಮ ಕೆಲ ಜಲಾಶಗಳು ಭರ್ತಿಯಾಗುತ್ತಿದೆ. ಆಗಸ್ಟ್ 1 ರಂದೇ ತುಂಗಾ ಜಲಾಶಯ ಭರ್ತಿಯಾಗಿದ್ದು ನೀರು ಬಿಡುಗಡೆ ಮಾಡಲಾಗಿದೆ.
03:35 PM (IST) Aug 01
03:30 PM (IST) Aug 01
ಕಲಬುರಗಿ ಜಿಲ್ಲೆಯ ಹೊಳಕುಂದಾ ಗ್ರಾಮದಲ್ಲಿ ರಸ್ತೆ ಕಾಮಗಾರಿ ನಡೆಸುವಾಗ, ರಾಷ್ಟ್ರಕೂಟರ ಕಾಲದ್ದೆಂದು ನಂಬಲಾದ ಅಪರೂಪದ ಸೂರ್ಯನಾರಾಯಣ ದೇವರ ಶಿಲಾ ಮೂರ್ತಿಯೊಂದು ಪತ್ತೆಯಾಗಿದೆ.
03:15 PM (IST) Aug 01
ಉಡುಪಿ ನಗರಸಭೆಯ ಮಾಜಿ ಉಪಾಧ್ಯಕ್ಷೆ ಹಾಗೂ ಹಿಂದೂ ಮುಖಂಡ ಮಂಜುನಾಥ್ ಕೊಳ ಅವರ ಪತ್ನಿ ಲಕ್ಷ್ಮೀ ಮಂಜುನಾಥ್ ಕೊಳ ಅವರು ನಗರದ ಲಯನ್ಸ್ ಸರ್ಕಲ್ ಬಳಿ ನಡೆದ ರಸ್ತೆ ಅಪಘಾತದಲ್ಲಿ ದುರಂತವಾಗಿ ಮೃತಪಟ್ಟಿದ್ದಾರೆ.
03:05 PM (IST) Aug 01
03:00 PM (IST) Aug 01
ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ತುಂಗಾ ಮತ್ತು ಭದ್ರಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಇದರಿಂದಾಗಿ ಕಳಸ-ಕಾರ್ಕಳ ಹೆದ್ದಾರಿ ಬಂದ್ ಆಗಿದ್ದು, ಶೃಂಗೇರಿಯ ದೇಗುಲದ ರಸ್ತೆ ಜಲಾವೃತಗೊಂಡಿದೆ.
02:45 PM (IST) Aug 01
ಯಾವುದಾದರೊಂದು ವಿಷಯದ ಬಗ್ಗೆ ನೇರವಾಗಿ ಮಾತನಾಡಿ ಸುದ್ದಿಯಲ್ಲಿರುವ ಕಂಗನಾ, ಇತ್ತೀಚೆಗೆ ‘ಜೆನ್ ಜಿ’ ಪ್ರತಿಭಟನಾಕಾರರ ವಿರುದ್ಧ ಯುದ್ಧ ಸಾರಿದ್ದಾರೆ. ಟ್ರೋಲರ್‌ಗಳು ಕಂಗನಾರ ಹಳೆಯ ಸಿನಿಮಾಗಳ ದೃಶ್ಯಗಳನ್ನು ಬಳಸಿ ಕಾಲೆಳೆದಿದ್ದಕ್ಕೆ ಇದೀಗ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ, ನೋಡಿ..
01:33 PM (IST) Aug 01
12:14 PM (IST) Aug 01
ಕೇರಳದ ವೈನಾಡು ಮತ್ತು ಕೊಡಗಿನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕಬಿನಿ ಮತ್ತು ಹಾರಂಗಿ ಜಲಾಶಯಗಳು ಭರ್ತಿಯಾಗುವ ಹಂತ ತಲುಪಿವೆ. ಇದರಿಂದ ಕಾವೇರಿ ಜಲಾನಯನ ಪ್ರದೇಶದ ರೈತರಲ್ಲಿ ಸಂತಸ ಮೂಡಿದೆ.
11:54 AM (IST) Aug 01
ಮಹಾರಾಷ್ಟ್ರದ ಜಲಾನಯನ ಪ್ರದೇಶಗಳಲ್ಲಿನ ವ್ಯಾಪಕ ಮಳೆಯಿಂದಾಗಿ, ಉಜನಿ ಮತ್ತು ವೀರ್ ಜಲಾಶಯಗಳಿಂದ ಭೀಮಾ ನದಿಗೆ 1,43,000 ಕ್ಯೂಸೆಕ್ ನೀರನ್ನು ಹರಿಬಿಡಲಾಗಿದೆ. ಇದರಿಂದ ವಿಜಯಪುರದ ನದಿ ಪಾತ್ರದಲ್ಲಿ ಪ್ರವಾಹದ ಭೀತಿ ಉಂಟಾಗಿದ್ದು, ಜಿಲ್ಲಾಡಳಿತವು ನದಿ ತೀರದ ಜನರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.
11:53 AM (IST) Aug 01
11:37 AM (IST) Aug 01
ಬೆಂಗಳೂರಿನಲ್ಲಿ, ಮನೆಯಲ್ಲಿನ ದುಷ್ಟ ಶಕ್ತಿ ನಿವಾರಣೆಗೆ ವಿಶೇಷ ಪೂಜೆ ಮಾಡುವುದಾಗಿ ನಂಬಿಸಿದ ನಕಲಿ ಬಾಬಾ ಮತ್ತು ಆತನ ಸಹಚರರು ಮಹಿಳೆಯೊಬ್ಬರಿಂದ ₹2.5 ಕೋಟಿ ಪಡೆದು ವಂಚಿಸಿದ್ದಾರೆ. ಹಣ ಪಡೆದ ನಂತರ ಆರೋಪಿಗಳು ತಲೆಮರೆಸಿಕೊಂಡಿದ್ದು, ಸಂತ್ರಸ್ತೆ ದೂರಿನ ಮೇರೆಗೆ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
11:18 AM (IST) Aug 01
ರಾಜ್ಯದಲ್ಲಿ ಆಗಸ್ಟ್ 2ರಂದು ಪೊಲೀಸ್ ಕಾನ್ಸ್‌ಸ್ಟೇಬಲ್ ಪರೀಕ್ಷೆ ನಡೆಯಲಿದೆ. ಪರೀಕ್ಷೆ ಕುರಿತ ಗೊಂದಲಗಳಿಗೆ ಗೃಹ ಸಚಿವ ಪ್ರಿಯಾಂಕ ಖರ್ಗೆ ಸ್ಪಷ್ಟನೆ ನೀಡಿದ್ದಾರೆ. ಪ್ರಮುಖವಾಗಿ ಹಿಜಾಬ್ ಹಾಕಿ ಪರೀಕ್ಷೆ ಬರೆಯಲು ಅವಕಾಶವಿಲ್ಲ ಎಂದಿದ್ದಾರೆ.
11:05 AM (IST) Aug 01
ಉದ್ಯಮಿ ಮತ್ತು ಆರ್‌ಸಿಬಿ ಒಡತಿ ಅನನ್ಯ ಬಿರ್ಲಾ ಅವರು ಅಸ್ಸಾಂ ಪ್ರವಾಹ ಪೀಡಿತ ಪ್ರದೇಶಗಳಿಗೆ ಸ್ವತಃ ಭೇಟಿ ನೀಡಿ, ಸಂತ್ರಸ್ತರ ಕಷ್ಟಗಳನ್ನು ಆಲಿಸಿದ್ದಾರೆ. ಅವರು ಆಹಾರ ಮತ್ತು ಅಗತ್ಯ ವಸ್ತುಗಳನ್ನು ವಿತರಿಸಿ, ತಮ್ಮ ಮಾನವೀಯ ನಡೆಯ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದು, ಈ ಅನುಭವವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
11:01 AM (IST) Aug 01
ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ ರಾತ್ರಿ ವೇಳೆ ಕದ್ದುಮುಚ್ಚಿ ನೀರು ಹರಿಸಲಾಗುತ್ತಿದೆ ಎಂಬ ಶಂಕೆಯ ಮೇರೆಗೆ, ಶ್ರೀರಂಗಪಟ್ಟಣದ ಯುವಕನೊಬ್ಬ ಸತ್ಯಾಸತ್ಯತೆ ಪರೀಕ್ಷಿಸಲು ಮುಂದಾಗಿದ್ದಾನೆ.